Nagara Panchami: ನಾಗರ ಪಂಚಮಿ ದಿನ ಚೇಳುಗಳಿಗೆ ಪೂಜೆ! ಯಾದಗಿರಿಯಲ್ಲಿ ವಿಭಿನ್ನ ಜಾತ್ರೆ

ನಾಗರ ಪಂಚಮಿ ದಿನವು ಈ ಬೆಟ್ಟದಲ್ಲಿ ಹೇರಳವಾಗಿ ಚೇಳುಗಳು ಕಾಣಿಸಿಕೊಳ್ಳುತ್ತವೆ. ಕಲ್ಲಿನ ಕೆಳಭಾಗದಲ್ಲಿರುವ ಚೇಳುಗಳನ್ನು ಜನರು ಹುಡುಕಿ ನಂತರ ಚೇಳುಗಳನ್ನು ತೆಗೆದುಕೊಂಡು ಮೈ ಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತಾರೆ.

ಚೇಳುಗಳ ಜಾತ್ರೆ

ಚೇಳುಗಳ ಜಾತ್ರೆ

  • Share this:
ಯಾದಗಿರಿ: ರಾಜ್ಯದೆಲ್ಲೆಡೆ ಶ್ರಾವಣ ಮಾಸದ (Shravana Masa) ಮೊದಲನೇ ಹಬ್ಬ ನಾಗರ ಪಂಚಮಿ (Nagara Panchami) ಹಬ್ಬ ಆಚರಣೆ ಮಾಡಿ ಮಹಿಳೆಯರು ಸಂಭ್ರಮ ಪಡುತ್ತಾರೆ. ಪಂಚಮಿ ದಿನ ಮಹಿಳೆಯರು ನಾಗರ ಮೂರ್ತಿಗಳಿಗೆ ಇಲ್ಲವೇ, ಹುತ್ತಗಳಿಗೆ ಹಾಲೆರೆದು ಪೂಜಿಸುತ್ತಾರೆ. ಆದರೆ, ಕಂದಕೂರು ಗ್ರಾಮದಲ್ಲಿ ನಾಗರ ಪಂಚಮಿ  ಹಬ್ಬದ ದಿನ ನಾಗಪ್ಪನಿಗೆ ಪೂಜೆ ಸಲ್ಲಿಸದೇ ಚೇಳುಗಳಿಗೆ ಪೂಜೆ ಸಲ್ಲಿಸಿ ಮೈ ಮೇಲೆ ಚೇಳುಗಳನ್ನು (Scorpions) ಹಾಕಿಕೊಂಡು ಸಂಭ್ರಮ ಪಡುತ್ತಾರೆ.

ಕಂದಕೂರುನಲ್ಲಿ ವಿಶೇಷ ಚೇಳುಗಳ ಜಾತ್ರೆ!

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನಾಗರ ಪಂಚಮಿ ದಿನ ಚೇಳುಗಳು ಜಾತ್ರೆ ಮಾಡಿಕೊಂಡು ಬರಲಾಗುತ್ತಿದೆ. ರಾಜ್ಯದೆಲ್ಲಡೇ ನಾಗರ ಪಂಚಮಿ ದಿನ ನಾಗರ ಮೂರ್ತಿಗಳಿಗೆ ಹಾಲೆರೆಯುತ್ತಾರೆ. ಆದರೆ, ಕಂದಕೂರು ಗ್ರಾಮದಲ್ಲಿ  ನಾಗರ ಪಂಚಮಿ ಹಬ್ಬದ ದಿನ ಇಂದು ಸಡಗರ ಸಂಭ್ರಮದಿಂದ ಚೇಳುಗಳ ಜಾತ್ರೆ ಆಚರಣೆ ಮಾಡಲಾಗಿದೆ.

ಚೇಳುಗಳನ್ನು ಮೈ ಮೇಲೆ ಹಾಕಿಕೊಂಡು ಸಂಭ್ರಮ

ಕಂದಕೂರು ಗ್ರಾಮದಲ್ಲಿರುವ ಬೆಟ್ಟದ ಮೇಲೆ ಕೊಂಡಾಮಾಯಿ ದೇಗುಲವಿದ್ದು ದೇಗುಲದಲ್ಲಿ ಚೇಳಿನ ದೇವರ ಮೂರ್ತಿವಿದ್ದು ಕಂದಕೂರು ಸೇರಿದಂತೆ ಸುತ್ತಲಿನ ಭಕ್ತರು ಚೇಳುಗಳನ್ನು ಆರಾಧಿಸುತ್ತಾರೆ. ನಾಗರ ಪಂಚಮಿ ದಿನವು ಬೆಟ್ಟದಲ್ಲಿ ಹೇರಳವಾಗಿ ಚೇಳುಗಳು ಕಾಣಿಸಿಕೊಳ್ಳುತ್ತವೆ. ಕಲ್ಲಿನ ಕೆಳಭಾಗದಲ್ಲಿರುವ ಚೇಳುಗಳನ್ನು ಜನರು ಹುಡುಕಿ ನಂತರ ಚೇಳುಗಳನ್ನು ತೆಗೆದುಕೊಂಡು ಮೈ ಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತಾರೆ.

ಇದನ್ನೂ ಓದಿ: Monkeypox: ಕರ್ನಾಟಕದಲ್ಲಿ 3 ಶಂಕಿತ ಕೇಸ್, ಆದ್ರೂ ಆತಂಕ ಬೇಡ ಅಂತಿದ್ದಾರೆ ಸುಧಾಕರ್​

ಚೇಳುಗಳ ಜಾತ್ರೆ ಆಚರಣೆ

ಗುಡ್ಡದ ಮೇಲಿರುವ ವಿಷ ಜಂತು ಚೇಳುಗಳನ್ನು ಮಕ್ಕಳು, ಯುವಕರು ,ಮಹಿಳೆಯರು ಹಾಗೂ ಪುರುಷರು ಕಲ್ಲಿನ ಕೆಳಭಾಗದಲ್ಲಿರುವ ಚೇಳುಗಳನ್ನು ಕೈಯಲ್ಲಿ ಹಿಡಿದುಕೊಂಡು ಅವುಗಳ ಜೊತೆ ಖುಷಿ ಪಡುತ್ತಾರೆ.
ಪ್ರತಿ ವರ್ಷ ನಾಗರ ಪಂಚಮಿ ಹಬ್ಬದ ದಿನವು ಕಂದಕೂರು ಗ್ರಾಮದಲ್ಲಿ ನಾಗಪ್ಪನ ಮೂರ್ತಿಗಳಿಗೆ ಪೂಜಿಸಿ ಆರಾಧಿಸದೇ ಬೆಟ್ಟದ ಮೇಲೆ ತೆರಳಿ ಕೊಂಡಾಮಾಯಿ ದೇವರಿಗೆ ಹಾಗೂ ಚೇಳಿನ ಮೂರ್ತಿಗೆ ಪೂಜೆ ಸಲ್ಲಿಸಿ ಚೇಳುಗಳ ಜಾತ್ರೆ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಹೇರಳವಾಗಿ ಪತ್ತೆಯಾಗುವ ಚೇಳುಗಳು !

ಚೇಳು ಕಚ್ಚಿಸಿಕೊಂಡವರಿಗೆ ಮಾತ್ರ ಚೇಳು ಎಷ್ಟು ಅಪಾಯಕಾರಿ ಎಂಬುದು ಗೊತ್ತು ಆದರೆ, ಇಲ್ಲಿ ಮಕ್ಕಳು ಹಾಗೂ ಪ್ರತಿಯೊಬ್ಬರೂ ಯಾವುದೇ ಭಯವಿಲ್ಲದೇ ದೇವರ ಭಕ್ತಿಯಿಂದ ಚೇಳುಗಳನ್ನು ಹಿಡಿದುಕೊಂಡು ಕೈ,ಮುಖ, ಮೈ ಮೇಲೆ ಹಾಕಿಕೊಂಡು ಸಂತೋಷ ಪಡುತ್ತಾರೆ.
ಪಂಚಮಿ ದಿನ ಮಾತ್ರ ಚೇಳುಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತವೆ. ಈ ದಿನ ಚೇಳುಗಳನ್ನು ಹಿಡಿದುಕೊಂಡರೇ ದೇವರ ಶಕ್ತಿಯಿಂದ ಯಾವುದೇ ತೊಂದರೆಯಾಗುವದಿಲ್ಲವೆಂಬುದು ಭಕ್ತರ ನಂಬಿಕೆಯಾಗಿದೆ.
ಭಕ್ತರು ಸಾಕ್ಷಾತ್ ದೇವರೆಂದು ಮೈ ಮೇಲೆ ಚೇಳುಗಳನ್ನು ಹಾಕಿಕೊಂಡು ಭಕ್ತಿ ಮೆರೆಯುತ್ತಾರೆ.

ಇದನ್ನೂ ಓದಿ: HDK Warning: 'ಇನ್ನೆಷ್ಟು ಹೆಣ ಬೀಳಿಸಲು ರಾಜ್ಯಕ್ಕೆ ಬರ್ತಿದ್ದಾರೆ ಅಮಿತ್​ ಶಾ?'​

ಈ ಬಗ್ಗೆ ಭಕ್ತೆ ವರಲಕ್ಷ್ಮಿ  ಅವರು ಮಾತನಾಡಿ ,ಕಂದಕೂರು ಗ್ರಾಮದಲ್ಲಿ ಚೇಳುಗಳ ಜಾತ್ರೆ ಮಾಡಲಾಗುತ್ತದೆ. ನಾಗರ ಪಂಚಮಿ ಹಬ್ಬದ ದಿನ ಇಲ್ಲಿ ಚೇಳುಗಳನ್ನೆ ದೇವರೆಂದು ತಿಳಿದು ಪೂಜಿಸಿ ನಂತರ ನಿಜವಾದ ಚೇಳುಗಳನ್ನು ಬೆಟ್ಟದಲ್ಲಿ ಹೂಡಿಕಿ ಮೈ ಮೇಲೆ ಹಾಕಿಕೊಂಡು ಸಂಭ್ರಮ ಪಡುತ್ತೆವೆ.ದೇವರ ಶಕ್ತಿಯಿಂದ ಎನು ಆಗುವದಿಲ್ಲವೆಂದರು. ರಾಜ್ಯ ಹಾಗೂ ಹೊರ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸಿ ಚೇಳುಗಳ ಜಾತ್ರೆಯಲ್ಲಿ ಭಾಗವಹಿಸಿ ಖುಷಿಗೊಂಡರು.
Published by:Pavana HS
First published: