Student Murder: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯ ಬರ್ಬರ ಹತ್ಯೆ!

ಬೆಂಗಳೂರಿನಲ್ಲಿ ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಆರ್ಬಾಝ್ ಇತರ ಸ್ಟೂಡೆಂಟ್ಸ್ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇದು ಅತಿರೇಕಕ್ಕೆ ಹೋಗಿ ವಿದ್ಯಾರ್ಥಿಯನ್ನು ಕೊಲೆಗೈಯ್ಯಲಾಗಿದೆ.

ಕೆರೆಗೆ ಉರುಳಿದ  ವಿದ್ಯಾರ್ಥಿಗಳ ಕಾರು

ಕೆರೆಗೆ ಉರುಳಿದ ವಿದ್ಯಾರ್ಥಿಗಳ ಕಾರು

  • Share this:
ಮಕ್ಕಳು ಚೆನ್ನಾಗಿ ಓದಲಿ ಅಂತಾ ಪೋಷಕರು ಶಾಲೆ-ಕಾಲೇಜಿಗೆ (School) ಕಳಿಸ್ತಾರೆ. ಆದರೆ ಓದಿ ಉದ್ಧಾರ ಆಗಬೇಕಾದ ಮಕ್ಕಳು (Children) ಓದೋದನ್ನು (Study) ಬಿಟ್ಟು ಬೇರೆ ಚಟುವಟಿಕೆಯಲ್ಲೇ ನಿರತರಾಗ್ತಾರೆ. ಗಲಾಟೆ, ಕಿರಿಕ್ ಅಂತಾ ಹೋಗ್ತಾರೆ. ಹೀಗೆ ಕಾಲೇಜಿನಲ್ಲಿ (Collage) ಕಿರಿಕ್ ಮಾಡಿಕೊಂಡ ವಿದ್ಯಾರ್ಥಿಯೊಬ್ಬನ (Student) ಹತ್ಯೆಯಾಗೋಗಿದೆ. ಬೆಂಗಳೂರಿನಲ್ಲಿ ವಿದ್ಯಾರ್ಥಿಯನ್ನು ಕೊಲೆಗೈಯ್ಯಲಾಗಿದೆ (Murder). ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ (Cultural Activity) ನಡೆದ ಕಿರಿಕ್​​ನಿಂದಾಗಿ ವಿದ್ಯಾರ್ಥಿಯ ಮರ್ಡರ್ ಆಗೋಗಿದೆ. ನಗರದ ಹೆಚ್ ಬಿಆರ್ ಲೇಔಟ್​​ನ ಪ್ರಾವಿನ್ಸ್ ಕಾಲೇಜು ಬಳಿ ಘಟನೆ ನಡೆದಿದ್ದು, ಆರ್ಬಾಝ್ ಕೊಲೆಯಾದ ವಿದ್ಯಾರ್ಥಿಯಾಗಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ವಿದ್ಯಾರ್ಥಿ ಆರ್ಬಾಝ್ ಪಿಯುಸಿ ಓದುತ್ತಿದ್ದ. ಇದರ ನಡುವೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಆರ್ಬಾಝ್ ಇತರ ಸ್ಟೂಡೆಂಟ್ಸ್​ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇದು ಅತಿರೇಕಕ್ಕೆ ಹೋಗಿ ವಿದ್ಯಾರ್ಥಿಯನ್ನು ಕೊಲೆಗೈಯ್ಯಲಾಗಿದೆ.

PUC student murder in Bangalore College near attack
ಕೊಲೆಯಾದ ವಿದ್ಯಾರ್ಥಿ ಆರ್ಬಾಝ್


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಿರಿಕ್

ಬರ್ಬರವಾಗಿ ಕೊಲೆಯಾದ ಆರ್ಬಾಝ್ ಹೆಚ್ ಬಿಆರ್ ಲೇಔಟ್​​ನ ಪ್ರಾವಿನ್ಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ನಿನ್ನೆ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಕೆಲವು ವಿದ್ಯಾರ್ಥಿಗಳ ಜೊತೆ ಆರ್ಬಾಝ್ ಜಗಳ ಮಾಡಿಕೊಂಡಿದ್ದ.

ಇದನ್ನೂ ಓದಿ: ಬೆಂಗಳೂರಿನ ಫೈವ್​ಸ್ಟಾರ್​ ಹೋಟೆಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ, ಆರೋಪಿ ಪರಾರಿ!

ಕಾಲೇಜಿನಿಂದ ಹೊರ ಕರೆದು ಹತ್ಯೆ!

ನಿನ್ನೆ ವಿದ್ಯಾರ್ಥಿಗಳ ನಡುವೆ ನಡೆದ ಜಗಳ ನಂತರ ಸೇಡಿಗೆ ತಿರುಗಿತ್ತು. ಗಲಾಟೆ ಮಾಡಿದ ಬಳಿಕ ಎಲ್ಲರೂ ಆರ್ಬಾಝ್​ನನ್ನು ಹೊಡೆಯಬೇಕೆಂದು ಕಾದುಕುಳಿತಿದ್ದರು. ಅದರಂತೆ ಇಂದು ಮಧ್ಯಾಹ್ನ ಆರ್ಬಾಝ್ ನಮಾಜ್ ಮುಗಿಸಿ ಕಾಲೇಜಿಗೆ ಬಂದಿದ್ದ. ಇದೇ ವೇಳೆ ನೋಡಿಕೊಂಡಿದ್ದ ಆರೋಪಿಗಳು ಆರ್ಬಾಝ್​ನ್ನು ಕಾಲೇಜಿನಿಂದ ಹೊರ ಕರೆದು ಹತ್ಯೆಗೈದಿದ್ದಾರೆ.

PUC student murder in Bangalore College near attack
ವಿದ್ಯಾರ್ಥಿ ಆರ್ಬಾಝ್ ಹತ್ಯೆ


ಚಾಕುವಿನಿಂದ ಚುಚ್ಚಿ ಹತ್ಯೆ

ಚಾಕುವಿನಿಂದ ಇರಿದು ಪಿಯು ವಿದ್ಯಾರ್ಥಿ ಆರ್ಬಾಝ್​ನ್ನು ಆರೋಪಿಗಳು ಹತ್ಯೆ ಮಾಡಿದ್ದಾರೆ. ತಕ್ಷಣ ಆರ್ಬಾಝ್​ನ್ನು ಕೆಜಿ ಹಳ್ಳಿಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ಬಗ್ಗೆ ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆಬೀಸಿದ್ದಾರೆ.

ಇದನ್ನೂ ಓದಿ: ಮುಖದ ಮೇಲಿನ ಕಲೆಗಳಿಗೆ ನೊಂದು ಯುವತಿ ಆತ್ಮಹತ್ಯೆಗೆ ಶರಣು

ವಿದ್ಯಾರ್ಥಿಗಳ ಮೋಜಿಗೆ ಕೆರೆಗೆ ಉರುಳಿದ ಕಾರು!

ಆನೇಕಲ್ ಬಳಿ ಕಾಲೇಜು ವಿದ್ಯಾರ್ಥಿಗಳ ಮೋಜು ಮಸ್ತಿಗೆ ಕಾರೊಂದು ಕೆರೆಗೆ ಉರುಳಿಬಿದ್ದಿದೆ. ಕ್ರೈಸ್ಟ್ ಕಾಲೇಜಿನ 7 ಮಂದಿ ವಿದ್ಯಾರ್ಥಿಗಳು ಎಸ್​ಸಿಯುವಿ ಕಾರನ್ನು ಅತಿವೇಗವಾಗಿ ಕೆರೆ ಕಟ್ಟೆ ಮೇಲೆ ಚಲಾಯಿಸಿಕೊಂಡು ಬಂದಿದ್ದಾರೆ. ಆಗ ಕಾರು ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದಿದೆ. ಆನೇಕಲ್​​ನ ಚಿನ್ನಯ್ಯನಪಾಳ್ಯದ ಭುಜಂಗ ದಾಸಯ್ಯನ ಕೆರೆಯಲ್ಲಿ ಘಟನೆ ಸಂಭವಿಸಿದೆ.

ಕೆರೆಗೆ ಉರುಳಿದ ಕಾರು


ಇಬ್ಬರು ನಾಪತ್ತೆ, 5 ಮಂದಿ ಬಚಾವ್

ಕಾರಿನಲ್ಲಿದ್ದ 7 ಮಂದಿಯಲ್ಲಿ 5 ಮಂದಿ ಬಚಾವ್​ ಆಗಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಎಲ್ಲರೂ ಹುಲ್ಲಹಳ್ಳಿಯ ಕ್ರೈಸ್ಟ್ ಕಾಲೇಜ್​ನ ಡಿಗ್ರಿ ವಿದ್ಯಾರ್ಥಿಗಳಾಗಿದ್ದಾರೆ. ನಾಪತ್ತೆಯಾದ ವಿದ್ಯಾರ್ಥಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಉಳಿದಿಬ್ಬರಿಗಾಗಿ ಕಾರ್ಯಾಚರಣೆ ನಡೆಸ್ತಿದ್ದಾರೆ.

ಪಾನಮತ್ತರಾಗಿ ಕಾರು ಚಾಲನೆ ಶಂಕೆ

ಡಿಗ್ರಿ ವಿದ್ಯಾರ್ಥಿಗಳು ಪಾನಮತ್ತರಾಗಿ ಕಾರು ಚಲಾಯಿಸಿಕೊಂಡು ಬಂದು ಕೆರೆಗೆ ಬಿದ್ದಿದ್ದಾರೆ ಎನ್ನುವ ಶಂಕೆ ಕೂಡ ವ್ಯಕ್ತವಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರೆಗೆ ಬಿದ್ದ ಕಾರು ಸಂಪೂರ್ಣ ಜಖಂ ಆಗಿದೆ. ಮುಳುಗಿದ್ದ ಕಾರನ್ನು ಜೆಸಿಬಿ ಸಹಾಯದಿಂದ ಮೇಲೆತ್ತಲಾಗಿದೆ. ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Published by:Thara Kemmara
First published: