ಹುಡುಗಿಗಾಗಿ ವಿದ್ಯಾರ್ಥಿಗಳ ಹೊಡೆದಾಟ; ಪ್ರೀತಿಗಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!

ಮೃತ ವಿದ್ಯಾರ್ಥಿ ದಯಾಸಾಗರ್​ ರಕ್ಷಿತಾ ಎಂಬ ಹುಡುಗಿಗೆ ಮೆಸೇಜ್​ ಮಾಡ್ತಿದ್ದ. ಈ ವಿಷಯ ಗೊತ್ತಾಗಿ ರಕ್ಷಿತ್ ಗುಂಪು ಕಟ್ಟಿಕೊಂಡು ಬಂದು ಹಲವು ಬಾರಿ ದಯಾಸಾಗರ್​ಗೆ ವಾರ್ನ್​ ಮಾಡಿದ್ದ. ಇಂದು ಬೆಳಗ್ಗೆ ಕಾಲೇಜಿಗೆ ಬಂದ ಇಬ್ಬರ ನಡುವೆ ಇದೇ ವಿಚಾರವಾಗಿ ಜಗಳ ನಡೆದು ದಯಾಸಾಗರ್​ ಕೊಲೆಯಾಗಿದ್ದಾನೆ.

ಕೊಲೆಯಾದ ದಯಾಸಾಗರ್​ (ಎಡ)
ಆರೋಪಿ ರಕ್ಷಿತ್​(ಬಲ)

ಕೊಲೆಯಾದ ದಯಾಸಾಗರ್​ (ಎಡ) ಆರೋಪಿ ರಕ್ಷಿತ್​(ಬಲ)

  • News18
  • Last Updated :
  • Share this:
-ಗಂಗಾಧರ್

ಬೆಂಗಳೂರು,(ಜ.30): ಹುಡುಗಿ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ 8 ನೇ ಮೈಲಿಯ ಸೌಂದರ್ಯ ಪಿಯು ಕಾಲೇಜಿನಲ್ಲಿ ನಡೆದಿದೆ.

ದಯಾಸಾಗರ್​(18) ಕೊಲೆಯಾದ ವಿದ್ಯಾರ್ಥಿ. ರಕ್ಷಿತ್​ ಕೊಲೆ ಮಾಡಿದ ಆರೋಪಿ. ದಯಾಸಾಗರ್​ ಮತ್ತು ರಕ್ಷಿತ್​ ಇಬ್ಬರೂ ಸೌಂದರ್ಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ಎಂದಿನಂತೆಯೇ ಇಂದು ಕಾಲೇಜಿಗೆ ಬಂದ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಇವರ ಜಗಳಕ್ಕೆ ಕಾರಣ ಒಂದು ಹುಡುಗಿ. ಹುಡುಗಿ ಪ್ರೀತಿ ವಿಚಾರವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ತಾರಕಕ್ಕೇರಿದ ಈ ಜಗಳದಲ್ಲಿ ರಕ್ಷಿತ್ ತನ್ನ ಬ್ಯಾಗ್​ನಲ್ಲಿದ್ದ ಚಾಕುವಿನಿಂದ ದಯಾಸಾಗರ್​ನನ್ನು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಎಂಟು ವರ್ಷದ ಪ್ರೀತಿಗೆ ಇತಿಶ್ರೀ ಹಾಡಲು ಹೋದ ಪ್ರೇಯಸಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಪ್ರಿಯಕರ

ಮೃತ ದಯಾಸಾಗರ್ ಬಗಲುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥನಗರ ನಿವಾಸಿಯಾಗಿದ್ದ. ದಯಾಸಾಗರ್ ತಂದೆ ಸೌಂದರ್ಯ ಕಾಲೇಜಿನಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ 8 ಗಂಟೆಗೆ ದಯಾಸಾಗರ್ ಮನೆ ಬಿಟ್ಟಿದ್ದ. ತಂದೆ ಕೂಡಾ 8:30 ಕ್ಕೆ ಕಾಲೇಜಿಗೆ ಬಂದಿದ್ದರು. ತರಗತಿ ಆರಂಭವಾಗುವ ಅರ್ಧ ಗಂಟೆಗೂ ಮುನ್ನ ಕಾಲೇಜಿನ ನಾಲ್ಕನೇ ಮಹಡಿಯ ಶೌಚಾಲಯದಲ್ಲಿ ಗಲಾಟೆ ನಡೆದಿದೆ. ಸುದ್ದಿ ಕೇಳಿ ದಯಾಸಾಗರ್ ತಂದೆ ಸ್ಥಳಕ್ಕೆ ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಮಗ ದಯಾಸಾಗರ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಕೂಡಲೇ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಿತಾದರೂ ಮಾರ್ಗಮಧ್ಯೆದಲ್ಲಿಯೇ ದಯಾಸಾಗರ್​​ ಸಾವನ್ನಪ್ಪಿದ್ದಾನೆ.

ಮೃತ ವಿದ್ಯಾರ್ಥಿ ದಯಾಸಾಗರ್​ ರಕ್ಷಿತಾ ಎಂಬ ಹುಡುಗಿಗೆ ಮೆಸೇಜ್​ ಮಾಡ್ತಿದ್ದ. ಈ ವಿಷಯ ಗೊತ್ತಾಗಿ ರಕ್ಷಿತ್ ಗುಂಪು ಕಟ್ಟಿಕೊಂಡು ಬಂದು ಹಲವು ಬಾರಿ ದಯಾಸಾಗರ್​ಗೆ ವಾರ್ನ್​ ಮಾಡಿದ್ದ. ಇಂದು ಬೆಳಗ್ಗೆ ಕಾಲೇಜಿಗೆ ಬಂದ ಇಬ್ಬರ ನಡುವೆ ಇದೇ ವಿಚಾರವಾಗಿ ಜಗಳ ನಡೆದು ದಯಾಸಾಗರ್​ ಕೊಲೆಯಾಗಿದ್ದಾನೆ.

ಇದನ್ನೂ ಓದಿ:ಲವ್, ಸೆಕ್ಸ್, ದೋಖಾ | ಪ್ರೀತಿಸಿದ ಹುಡುಗಿಯ ಗಂಡನ ಹೆಸರಲ್ಲಿ ಪಾಗಲ್ ಪ್ರೇಮಿಯೊಬ್ಬ ಮಾಡಿದ್ದೇನು ಗೊತ್ತಾ?

ಪ್ರಕರಣ ಸಂಬಂಧ ಡಿಸಿಪಿ ಚೇತನ್ ಸಿಂಗ್ ರಾಥೋಡ್​ ಸ್ಪಷ್ಟನೆ ನೀಡಿದ್ದಾರೆ. ಯುವತಿಯ ಪ್ರೀತಿ ವಿಚಾರಕ್ಕೆ ಕೊಲೆ ನಡೆದಿದೆ. ದಯಾಸಾರ್​​ನನ್ನು ರಕ್ಷಿತ್ ಕೊಲೆ ಮಾಡಿದ್ದಾನೆ. ಅವರಿಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಪ್ರೀತಿ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗುತ್ತಿತ್ತು. ರಕ್ಷಿತ್ ಎಂಬಾತ ಚಾಕುವಿನಿಂದ ಕತ್ತಿಗೆ ಇರಿದಿದ್ದಾನೆ. ದಯಾಸಾಗರ್​ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ರಕ್ಷಿತ್ ಸೇರಿ ಮತ್ತೊಬ್ಬನನ್ನು ವಶಕ್ಕೆ ಪಡೆದಿದ್ದೇವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆಳಗ್ಗೆ 9 ಗಂಟೆಗೆ ಬಗಲಗುಂಟೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ಸಂಬಂಧ ರಕ್ಷಿತ್​ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

First published: