SSLC ಪರೀಕ್ಷೆಗೆ ಮುಂಚೆಯೇ PUC ಪ್ರವೇಶಾತಿ ಆರಂಭ; ಬಳ್ಳಾರಿಯಲ್ಲಿ ತಲೆ ಎತ್ತಿವೆ ಗೋಲ್‌ಮಾಲ್ ಕಾಲೇಜುಗಳು

ಇದು ನಿಜಕ್ಕೂ ಗಂಭೀರ ವಿಚಾರವಾಗಿದ್ದು, ಈವರೆಗೆ ಬಳ್ಳಾರಿ ಜಿಲ್ಲಾಧಿಕಾರಿ, ಡಿಡಿಪಿಐ ಗಮನಕ್ಕೆ ಬಂದಿಲ್ವಾ? ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎಂಬ ಮಾತುಗಳು ಇದೀಗ ಸಾಮಾಜಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.

ಎಸ್‌ಎಸ್‌ಎಲ್‌ ಪರೀಕ್ಷೆಗೆ ಮುಂಚೆಯೇ ಪಿಯುಸಿ ಪ್ರವೇಶಾತಿ ಆರಂಭಿಸಿರುವ ಬಳ್ಳಾರಿಯ ಚೈತನ್ಯ ಕಾಲೇಜು.

ಎಸ್‌ಎಸ್‌ಎಲ್‌ ಪರೀಕ್ಷೆಗೆ ಮುಂಚೆಯೇ ಪಿಯುಸಿ ಪ್ರವೇಶಾತಿ ಆರಂಭಿಸಿರುವ ಬಳ್ಳಾರಿಯ ಚೈತನ್ಯ ಕಾಲೇಜು.

  • Share this:
ಬಳ್ಳಾರಿ; ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇನ್ನೂ ಆರಂಭವೇ ಆಗಿಲ್ಲ. ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಿ ಇನ್ನೂ ಒಂದು ವಾರವೂ ಕಳೆದಿಲ್ಲ. ಈ ನಡುವೆ ಕೊರೋನಾದಂತಹ ಕಠಿಣ ಸಂದರ್ಭದಲ್ಲಿ ಪರೀಕ್ಷೆ ಮತ್ತು ಶಾಲಾ ಕಾಲೇಜು ನಡೆಸುವುದು ಸರಿಯಲ್ಲ ಎಂದು ಶಿಕ್ಷಣ ತಜ್ಞರು ಎಚ್ವರಿಕೆ ನೀಡುತ್ತಿದ್ದಾರೆ. ಆದರೆ, ಇಂತ ವಾದ-ವಿವಾದಗಳ ಬೆನ್ನಿಗೆ ಬಳ್ಳಾರಿಯ ಎರಡು ಗೋಲ್‌ಮಾಲ್ ಶಿಕ್ಷಣ ಸಂಸ್ಥೆಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಂಚೆಯೇ ಸದ್ದಿಲ್ಲದೆ ಪ್ರಥಮ ವರ್ಷದ ಪಿಯುಸಿ ಗೆ ಪ್ರವೇಶ ಆರಂಭಿಸಿವೆ.

ಬಳ್ಳಾರಿಯಲ್ಲಿರುವ ಶ್ರೀ ಚೈತನ್ಯ ಎಜುಕೇಷನ್ ಇನ್ಸಿಟಿಟ್ಯೂಟ್ ಮತ್ತು ನಾರಾಯಣ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೇ ಪ್ರಥಮ ಪಿಯುಸಿ ಗೆ ಪ್ರವೇಶ ಆರಂಭಿಸಲಾಗಿದೆ. ನೂರಾರು ವಿದ್ಯಾರ್ಥಿಗಳು ಪ್ರವೇಶಾತಿಗೆ ಹಣವನ್ನೂ ಪಾವತಿಸಿ ರಶೀದಿಯನ್ನೂ ಪಡೆದಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಕನಿಷ್ಠ 70,000 ಹಣವನ್ನು ಪಡೆಯಲಾಗಿದೆ. ಈ ಕುರಿತ ಎಲ್ಲಾ ದಾಖಲೆಗಳೂ ನ್ಯೂಸ್‌18ಗೆ ಲಭ್ಯವಾಗಿದೆ.

bellary
ವಿದ್ಯಾರ್ಥಿಗಳಿಗೆ ನೀಡಲಾಗಿರುವ ರಶೀದಿ.


ಅಸಲಿಗೆ 1983 ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ (Karnataka Education Act) ಪರೀಕ್ಷೆ ನಡೆಯದೆ ಮತ್ತೊಂದು ತರಗತಿಗೆ ಪ್ರವೇಶಾತಿ ಆರಂಭಿಸುವುದು ಸ್ಪಷ್ಟ ಕಾನೂನು ಉಲ್ಲಂಘನೆ. ಹಾಗೆ ನೋಡಿದರೆ ಈ ವರ್ಷ ಇನ್ನೂ ಎಸ್ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯೇ ನಡೆದಿಲ್ಲ.ಆದರೆ, ಈ ಎರಡೂ ಕಾಲೇಜಿನಲ್ಲಿ ಅದಕ್ಕೂ ಮೊದಲೇ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ.

f11d20fa-c0e6-4f3c-8647-24850919eec6
ಪಿಯುಸಿ ಪ್ರವೇಶಾತಿ ಅರ್ಜಿ.


ಇದು ನಿಜಕ್ಕೂ ಗಂಭೀರ ವಿಚಾರವಾಗಿದ್ದು, ಈವರೆಗೆ ಬಳ್ಳಾರಿ ಜಿಲ್ಲಾಧಿಕಾರಿ, ಡಿಡಿಪಿಐ ಗಮನಕ್ಕೆ ಬಂದಿಲ್ವಾ? ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಕುರಿತು ಯಾವ ಕ್ರಮ ತೆಗೆದುಕೊಳ್ಳುತ್ತಾರೆ? ಎಂಬ ಮಾತುಗಳು ಇದೀಗ ಸಾಮಾಜಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.



ಅಲ್ಲದೆ, ಈ ಕುರಿತು ಟ್ವೀಟ್‌ ಮಾಡುವ ಮೂಲಕ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಸವಾಲೆಸೆದಿರುವ ರಾಜ್ಯ ಕಾಂಗ್ರೆಸ್‌, "ಸುರೇಶ್‌ ಕುಮಾರ್‌ ಅವರೇ,
ಎಲ್ಲಾ ವಿಷಯಗಳಲ್ಲೂ ಬಹಳ ನಾಟಕೀಯವಾಗಿ ವರ್ತಿಸುವ ತಾವು ಅನುಮತಿ ಇಲ್ಲದೇ ಪದವಿ ಪೂರ್ವ ಕಾಲೇಜು ನಡೆಯುತ್ತಿರುವ ಬಗ್ಗೆ, ಎಸ್ಎಸ್ಎಲ್‌ಸಿ ಪರೀಕ್ಷೆಗಳೇ ನಡೆಯದೆ ಪ್ರಥಮ ಪಿಯುಸಿಗೆ ದಾಖಲಾತಿ ನಡೆಸುತ್ತಿರುವ ಬಗ್ಗೆ ಯಾವ ಕ್ರಮ ಜರುಗಿಸುವಿರಿ?
ಅಕ್ರಮ ನಡೆಸುತ್ತಿರುವ ಕಾಲೇಜುಗಳ ಪರವಾನಗಿ ರದ್ದುಪಡಿಸಿ ನಿಮ್ಮ ಬದ್ಧತೆ ತೋರಿಸಿ" ಎಂದು ಸವಾಲೆಸೆದಿದೆ.

ಆದರೆ, ಸ್ಪಷ್ಟವಾಗಿ ಕಾನೂನು ಉಲ್ಲಂಘಿಸಿರುವ ಈ ಎರಡೂ ಕಾಲೇಜಿನ ವಿರುದ್ಧ ಶಿಕ್ಷಣ ಸಚಿವರು ಮತ್ತು ಇಲಾಖೆ ಯಾವ ಕ್ರಮ ತೆಗೆದುಕೊಳ್ಳುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಮಳೆ ಅಲರ್ಟ್; ಸಂಜೆ ವೇಳೆಗೆ ಮನೆ ಸೇರಿಕೊಳ್ಳುವುದು ಉತ್ತಮ

 
First published: