PUC Admission 2020: ಇಂದಿನಿಂದ ಕರ್ನಾಟಕದಲ್ಲಿ ಪ್ರಥಮ ಪಿಯುಸಿಗೆ ಅಡ್ಮಿಷನ್​ ಆರಂಭ

ಪ್ರಥಮ ಪಿಯುಸಿಗೆ ಅಡ್ಮಿಷನ್ ವೇಳೆ ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಒಂದುವೇಳೆ ಪದವಿಪೂರ್ವ ಕಾಲೇಜುಗಳು ಇಚ್ಛಿಸಿದರೆ ಕಡಿಮೆ ಶುಲ್ಕ ಪಡೆಯಬಹುದು. ತರಗತಿಗಳ ಆರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ನಿರ್ಧಾರ ಮಾಡಲಾಗಿದೆ.

news18-kannada
Updated:August 13, 2020, 9:41 AM IST
PUC Admission 2020: ಇಂದಿನಿಂದ ಕರ್ನಾಟಕದಲ್ಲಿ ಪ್ರಥಮ ಪಿಯುಸಿಗೆ ಅಡ್ಮಿಷನ್​ ಆರಂಭ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಆ. 13): ಕರ್ನಾಟಕದಲ್ಲಿ ಈಗಾಗಲೇ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ಅಡ್ಮಿಷನ್ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳ ಪಿಯುಸಿ ಅಡ್ಮಿಷನ್ ಇಂದಿನಿಂದ ಆರಂಭವಾಗಲಿದೆ.

ಯಾವ ಕಾಲೇಜುಗಳಲ್ಲಿ ಆನ್​ಲೈನ್ ಸೌಕರ್ಯ ಇರುತ್ತದೋ ಆ ಎಲ್ಲ ಕಡೆ ಆನ್​ಐನ್ ಮೂಲಕವೇ ಪ್ರವೇಶಾತಿ ಪ್ರಕ್ರಿಯೆ ನಡೆಸಲು ಸೂಚನೆ ನೀಡಲಾಗಿದೆ. ಆನ್​ಲೈನ್ ಅಡ್ಮಿಷನ್​ನ ಆಯ್ಕೆ ಇಲ್ಲದಿರುವ ಕಾಲೇಜುಗಳಲ್ಲಿ ಎಂದಿನಂತೆ ನೇರ ನೇಮಕಾತಿ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ: ಹಾಡಹಗಲೇ ಚಿನ್ನದ ಅಂಗಡಿಯಲ್ಲಿ ದರೋಡೆ; ಕುಕೃತ್ಯಕ್ಕೆ ಬೆಚ್ಚಿ ಬಿದ್ದ ಶೃಂಗೇರಿ

ಹಾಗೇ, ಪ್ರಥಮ ಪಿಯುಸಿಗೆ ಅಡ್ಮಿಷನ್ ವೇಳೆ ಕೊರೋನಾ ನೆಪದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವಂತಿಲ್ಲ. ಒಂದುವೇಳೆ ಪದವಿಪೂರ್ವ ಕಾಲೇಜುಗಳು ಇಚ್ಛಿಸಿದರೆ ಕಡಿಮೆ ಶುಲ್ಕ ಪಡೆಯಬಹುದು. ತರಗತಿಗಳ ಆರಂಭ ಮತ್ತು ಶೈಕ್ಷಣಿಕ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲು ನಿರ್ಧಾರ ಮಾಡಲಾಗಿದೆ. ಇದರ ಜೊತೆಗೆ ಶಿಕ್ಷಕರ ವಿವರಗಳನ್ನೂ ಪೋಷಕರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.

ಕರ್ನಾಟಕದಲ್ಲಿ ಈ ವರ್ಷ ಸುಮಾರು 8.40 ಲಕ್ಷ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದಾರೆ. ಕಳೆದ ತಿಂಗಳು ದ್ವಿತೀಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಜೂನ್ 25ರಿಂದ ಜುಲೈ 3ರವರೆಗೆ ಕರ್ನಾಟಕದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲಾಗಿತ್ತು. ಆಗಸ್ಟ್​ 10ರಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿತ್ತು. ಈ ವರ್ಷ ಶೇ. 71.80ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿ ಆರು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷದ ಫಲಿತಾಂಶ ಕಡಿಮೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಶೇ.73.70ರಷ್ಟು ಫಲಿತಾಂಶ ಬಂದಿತ್ತು. ಆದರೆ, ಈ ವರ್ಷ ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಹೆದರಿ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗೆ ಆಗಮಿಸಿರಲಿಲ್ಲ. ಅಲ್ಲದೆ, ಕೆಲವು ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಚಿಕಿತ್ಸೆಗೆ ಒಳಗಾಗಿದ್ದಾರೆ. ಪರಿಣಾಮ ಈ ವರ್ಷದ ಫಲಿತಾಂಶ ಶೇ.71.80ರಷ್ಟು ಬಂದಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 5,82,316 ವಿದ್ಯಾರ್ಥಿಗಳು ಪಾಸ್‌ ಆಗಿದ್ದರೆ, 2,28,734 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
Published by: Sushma Chakre
First published: August 13, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading