HOME » NEWS » State » PUBLIC TAKE A DIG OUT AT CT RAVI FOR RETWEETING KERALA GOVERNMENT BEEF TWEET GNR

ಕೇರಳ ಸರ್ಕಾರದ ‘ಬೀಫ್’ ಟ್ವೀಟ್​​​ ರೀಟ್ವೀಟ್ ಮಾಡಿ ಸಚಿವ ಸಿ.ಟಿ ರವಿ ಎಡವಟ್ಟು: ನೆಟ್ಟಿಗರಿಂದ ತೀವ್ರ ತರಾಟೆ

ಸಚಿವರ ಎಡವಟ್ಟಿನ ಬೀಫ್ ಖಾದ್ಯದ ಟ್ವೀಟ್​ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಎಚ್ಚೆತ್ತು ಪ್ರತಿಕ್ರಿಯೆ ನೀಡಿದ ಸಿ. ಟಿ ರವಿ “ನಾನು ಬೀಫ್‌ ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸುತ್ತೀರಿ. ಇದು ನನ್ನ ನಂಬಿಕೆಗೆ ವಿರುದ್ಧ ಎಂದು ಸ್ಪಷ್ಟೀಕರಣ ನೀಡಿದ್ದರು.


Updated:January 17, 2020, 8:56 AM IST
ಕೇರಳ ಸರ್ಕಾರದ ‘ಬೀಫ್’ ಟ್ವೀಟ್​​​ ರೀಟ್ವೀಟ್ ಮಾಡಿ ಸಚಿವ ಸಿ.ಟಿ ರವಿ ಎಡವಟ್ಟು: ನೆಟ್ಟಿಗರಿಂದ ತೀವ್ರ ತರಾಟೆ
ಸಚಿವ ಸಿ.ಟಿ. ರವಿ
  • Share this:
ಬೆಂಗಳೂರು(ಜ.17): ಬೀಫ್ ಖಾದ್ಯವೊಂದರ ಕುರಿತು ಕೇರಳ ಪ್ರವಾಸೋದ್ಯಮ ಇಲಾಖೆ ಮಾಡಿರುವ ಟ್ವೀಟ್​​ ಈಗ ಭಾರೀ ವಿವಾದಕ್ಕೀಡಾಗಿದೆ. ಒಂದು ದಿನದ ಹಿಂದೆ ಅಂದರೆ ಬುಧವಾರ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಜನಪ್ರಿಯ ಬೀಫ್ ಫ್ರೈ ಖಾದ್ಯದ ಫೋಟೋವೊಂದು ಟ್ವೀಟ್​​ ಮಾಡಿತ್ತು. ಅದರ ಜತೆಗೆ ರೆಸಿಪಿ ಲಿಂಕ್​​​ ಕೂಡ ನೀಡಿತ್ತು. ಆದರೀಗ ಕೇರಳ ಸರ್ಕಾರದ ಬೀಫ್​​​ ಟ್ವೀಟ್​​ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಟ್ವೀಟ್​​ನಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಹಲವರು ನೆಟ್ಟಿಗರು ಹೇಳಿಕೊಂಡಿದ್ದಾರೆ.

ಪರಿಮಳವಾದ ಸಾಂಬರು ಪದಾರ್ಥ ಮತ್ತು ತೆಂಗಿನಕಾಯಿ ತುಂಡು ಜತೆಗೆ ಕರಿಬೇವು ಸೊಪ್ಪು ಬಳಸಿ ರೋಸ್ಟ್ ಮಾಡಲ್ಪಟ್ಟ ಬೀಫ್​​​ನ ತುಂಡುಗಳು. ಇದುವೇ ಬೀಫ್​​​, ಅತ್ಯಂತ ಕ್ಲಾಸಿಕ್ ಖಾದ್ಯದ ರೆಸಿಪಿ'' ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ತನ್ನ ಟ್ವೀಟ್​​ನಲ್ಲಿ ಬರೆದುಕೊಂಡಿತ್ತು. ಅದರ ಕೊನೆಗೆ ರೆಸಿಪಿಯಿರುವ ವೆಬ್​​ಸೈಟ್ ಲಿಂಕ್ ಕೂಡ ಪೋಸ್ಟ್​​ ಮಾಡಿತ್ತು.




ಮಕರ ಸಂಕ್ರಾಂತಿ ಆಚರಿಸುತ್ತಿರುವ ದಿನವೇ ಕೇರಳ ಸರ್ಕಾರ ಈ ರೀತಿ ಟ್ವೀಟ್​ ಮಾಡಿದೆ. ಇಂದಿನ ಟ್ವೀಟ್​​ ನಮಗೆ ಭಾರೀ ನೋವುಂಟು ಮಾಡಿದೆ. ಇಂದಲ್ಲದೇ ಸರ್ಕಾರ ಬೇರೆ ದಿನ ಇಂತಹ ಟ್ವೀಟ್​​ ಮಾಡಬಹುದಿತ್ತು ಎಂದು ಕೆಲವು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗೋಮಾತೆಯನ್ನು ಪೂಜಿಸುವ ದಿನ ಇದಾಗಿದೆ. ಬೀಫ್ ಬಗ್ಗೆ ಮಕರ ಸಂಕ್ರಾಂತಿಯಂದೇ ಪೋಸ್ಟ್​ ಮಾಡಿದ್ದೀರಿ. ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಿರೀ ಇದು ಸರಿಯಲ್ಲ ಎಂದು ಮತ್ತಲವರು ಕಿಡಿಕಾರಿದ್ಧಾರೆ. 

ಕೇರಳ ಸರ್ಕಾರದ ಟ್ವೀಟ್​ ರೀಟ್ವೀಟ್​​ ಮಾಡಿದ ಸಚಿವ ಸಿ.ಟಿ ರವಿಗೆ ತರಾಟೆ

ಇನ್ನು ಕೇರಳ ಸರ್ಕಾರ ಬೀಫ್ ಖಾದ್ಯದ ಫೋಟೋ ಕುರಿತು ಮಾಡಿದ್ದ ಟ್ವೀಟ್​ ಅನ್ನು ರೀಟ್ವೀಟ್​ ಮಾಡಿದ್ದ ಸಚಿವ ಸಿ ಟಿ ರವಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ತನ್ನ ಖಾತೆಯಿಂದ ಕೇರಳ ಪ್ರವಾಸೋದ್ಯಮ ಇಲಾಖೆ ಹಾಕಿದ್ದ ಟ್ವೀಟ್‌ ರೀಟ್ವೀಟ್​​ ಮಾಡಿ ಹಂಚಿಕೊಂಡಿದ್ದ ಸಚಿವ ಸಿ ಟಿ ರವಿ ಹೀಗೆ ಬರೆದುಕೊಂಡಿದ್ದರು. ಕರ್ನಾಟಕಕ್ಕೆ ಸ್ವಾಗತ" ಎಂದು ‘ಒನ್ ಸ್ಟೇಟ್ ಮೆನೀ ವರ್ಡ್ಸ್’ ಎಂಬ ಹ್ಯಾಶ್ ಟ್ಯಾಗ್ ನೀಡಿದ್ದರು. ಇದನ್ನು ಅಪಾರ್ಥ ಮಾಡಿಕೊಂಡ ನೆಟ್ಟಿಗರು ಸಿ.ಟಿ ರವಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದರು.



ಸಚಿವರ ಎಡವಟ್ಟಿನ ಬೀಫ್ ಖಾದ್ಯದ ಟ್ವೀಟ್​ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ಎಚ್ಚೆತ್ತು ಪ್ರತಿಕ್ರಿಯೆ ನೀಡಿದ ಸಿ. ಟಿ ರವಿ “ನಾನು ಬೀಫ್‌ ಬೆಂಬಲಿಸುತ್ತೇನೆ ಎಂದು ನೀವು ಹೇಗೆ ಯೋಚಿಸುತ್ತೀರಿ. ಇದು ನನ್ನ ನಂಬಿಕೆಗೆ ವಿರುದ್ಧ. ಕೇರಳ ಸರ್ಕಾರದ ವಿರುದ್ಧ ವ್ಯಂಗ್ಯವಾಡಿ ಪ್ರತಿಭಟಿಸುವ ಟ್ವೀಟ್​ ಮಾಡಿದ್ದೇನೆ ಎಂದು ಸ್ಪಷ್ಟೀಕರಣ ನೀಡಿದ್ದರು.

ಇದನ್ನೂ ಓದಿ: ತಡರಾತ್ರಿ ರಶ್ಮಿಕಾ ಮಂದಣ್ಣಗೆ ಐಟಿ ಅಧಿಕಾರಿಗಳ ಪ್ರಶ್ನೆ; ಎರಡನೇ ದಿನವೂ ಮುಂದುವರಿಯಲಿದ ಐಟಿ ಶೋಧ
First published: January 17, 2020, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories