ಯಾದಗಿರಿಯಲ್ಲಿ ರಸ್ತೆ ಕುಸಿದು ಒಂದು ವಾರ ಕಳೆದರೂ ಕಾಮಗಾರಿ ಆರಂಭಿಸದ ಅಧಿಕಾರಿಗಳು: ಸ್ಥಳೀಯರ ಆಕ್ರೋಶ

ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಶೀಘ್ರವಾಗಿ ಕಾಮಗಾರಿ ಆರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು ಶಾಸಕ ವೆಂಕಟರೆಡ್ಡಿ ಮುದ್ನಾಳ.

ಯಾದಗಿರಿ ದೃಶ್ಯ

ಯಾದಗಿರಿ ದೃಶ್ಯ

  • Share this:
ಯಾದಗಿರಿ(ಆ.13): ಜಿಲ್ಲಾಕೇಂದ್ರಕ್ಕೆ ಸಂಪರ್ಕ ಕೊಂಡಿಯಾಗಿರುವ ವಡಗೇರಾ ಕ್ರಾಸ್​​ನಿಂದ ಬರುವ ರಸ್ತೆ ಮಾರ್ಗದ ರೈಲ್ವೆ ಮೇಲ್ಸೆತುವೆಯ ಭಾಗದಲ್ಲಿ ರಸ್ತೆಯೂ ಭಾರೀ ಮಳೆಗೆ ಕುಸಿದು ಒಂದು ವಾರ ಕಳೆದಿದೆ. ಹೀಗಿದ್ದರೂ ಇನ್ನೂ ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ಯಾವುದೇ ದುರಸ್ತಿ ಕಾಮಗಾರಿ ಆರಂಭ  ಮಾಡದೆ ಅಧಿಕಾರಿಗಳು ಕೈಚೆಲ್ಲಿ ಸುಮ್ಮನೆ ಕೂತಿದ್ದಾರೆ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.

ಶಹಾಪುರ,ವಡಗೇರಾ, ಸುರಪುರ ಹಾಗೂ ಮೊದಲಾದ ಭಾಗದಿಂದ ಸಾರ್ವಜನಿಕರು ವಡಗೇರಾ ಕ್ರಾಸ್ ರಸ್ತೆ ಮಾರ್ಗದ ಮೂಲಕ‌ ಯಾದಗಿರಿ ‌ಜಿಲ್ಲಾಕೇಂದ್ರಕ್ಕೆ ಬರುತ್ತಾರೆ. ಅದೆ ರೀತಿ ಆ್ಯಂಬುಲೆನ್ಸ್​ಗಳು ಕೂಡ ರೈಲ್ವೇ ಮೆಲ್ಸೆತುವೆ ಮೂಲಕ ಜಿಲ್ಲಾಕೇಂದ್ರಕ್ಕೆ ಬರುತ್ತಿದ್ದವು. ಆದರೆ, ರೈಲ್ವೆ ಮೇಲ್ಸೆತುವೆಯ ರಸ್ತೆಯು ಕಳೆದ ಒಂದುವಾರದ ಹಿಂದೆ ಕುಸಿದು ಬಿದ್ದಿತ್ತು. ಇದರಿಂದ ಈ ಮಾರ್ಗದ ರಸ್ತೆ ಮಾರ್ಗ ಮುಂಜಾಗ್ರತೆಗಾಗಿ ಬಂದ್ ಮಾಡಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ.

ಈ ಮಾರ್ಗದ ಬದಲು ಪರ್ಯಾಯ ಮಾರ್ಗವಾದ ಗುರುಸಣಗಿ ಕ್ರಾಸ್​​ನ ಡಾನ್ ಬಾಸ್ಕೋ ಶಾಲೆಯ  ರಸ್ತೆ ಮಾರ್ಗದ ರಸ್ತೆ  ಮೂಲಕ ಭಾರೀ ವಾಹನಗಳು ಸೇರಿ ಎಲ್ಲಾ ರೀತಿಯ ವಾಹನಗಳು ಸಂಚಾರ ಮಾಡುತ್ತಿವೆ.ಇದರಿಂದ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿದೆ. ನಿತ್ಯವು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದೆ. ಇದರಿಂದ ಜನರು ಪರದಾಡುವಂತಾಗಿದೆ.

ಪಿಡಬ್ಲ್ಯೂಡಿ ಅಧಿಕಾರಿಗಳು ಭೇಟಿ ನೀಡಿ ಸರಕಾರಕ್ಕೆ 1 ಕೋಟಿ ರೂ ವೆಚ್ಚದ ರಸ್ತೆ ನಿರ್ಮಾಣಕ್ಕೆ ಈಗ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಈ ವಿಷಯದಲ್ಲಿ ವಿಳಂಬ ತೊರುತ್ತಿದ್ದಾರೆಂದು ಸಾರ್ವಜನಿಕರು ಅಕ್ರೋಶಗೊಂಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಶೀಘ್ರವಾಗಿ ಕಾಮಗಾರಿ ಆರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ: ದಕ್ಷಿಣ ಕನ್ನಡದಿಂದ ಕೇರಳಕ್ಕೆ ವಾಹನ ಸಂಚಾರ ಬಂದ್​​ - ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆಗೆ ಮುಂದಾದ ಬಿಜೆಪಿ

ರಸ್ತೆ ಕುಸಿದ ರೈಲ್ವೆ ಮೇಲ್ಸೆತುವೆ ‌ಮೂಲಕ ಅನಿವಾರ್ಯವಾಗಿ ಜನರು ನಡೆದುಕೊಂಡು ‌ಜಿಲ್ಲಾಕೇಂದ್ರಕ್ಕೆ ಬರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ವಿಳಂಬ ಮಾಡದೇ ಶೀಘ್ರವಾಗಿ ರಸ್ತೆ ಕಾಮಗಾರಿ ಆರಂಭ ಮಾಡುವ ಕೆಲಸ ಮಾಡಬೇಕಿದೆ.
Published by:Ganesh Nachikethu
First published: