ಕಾರವಾರ ಮೇಲ್ಸೇತುವೆ ಕಾಮಗಾರಿ ವಿಳಂಬ; ಐಆರ್​​ಬಿ ಕಂಪನಿ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಛೀಮಾರಿ

ಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಮೇಲ್ಸೇತುವೆ ಕಾಮಗಾರಿ ಮುಕ್ತವಾಗಿ ನಡೆಸುತ್ತಿರುವುದಿರಂದ ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರುತ್ತಿದೆ

news18-kannada
Updated:February 21, 2020, 7:53 AM IST
ಕಾರವಾರ ಮೇಲ್ಸೇತುವೆ ಕಾಮಗಾರಿ ವಿಳಂಬ; ಐಆರ್​​ಬಿ ಕಂಪನಿ ನಿರ್ಲಕ್ಷ್ಯಕ್ಕೆ ಬೇಸತ್ತ ಜನರಿಂದ ಛೀಮಾರಿ
ಮೇಲ್ಸೇತುವೆ ಕಾಮಗಾರಿ
  • Share this:
ಕಾರವಾರ (ಫೆ.21) : ಕಾರವಾರದಲ್ಲಿ ಚತುಷ್ಪತ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದ ಐಆರ್​​ಬಿ ಕಂಪನಿಯ ನಿರ್ಲಕ್ಷ್ಯ ದೋರಣೆಯು ಇತ್ತೀಚೆಗೆ ಮಿತಿಮೀರುತ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆಯೆಂದರೆ ಕಾರವಾರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ. ಇದರಲ್ಲಿ ಐಆರ್​​ಬಿ ಕಂಪನಿ ತೋರುತ್ತಿರುವ ನಿರ್ಲಕ್ಷದಿಂದ ಜನ ರೋಸಿ ಹೋಗಿದ್ದಾರೆ.

ಎಲ್ಲಿ ನಿರ್ಲಕ್ಷ್ಯ...?

ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹೃದಯ ಭಾಗದಿಂದ ಹಾದು ಹೋದ ರಾಷ್ಟ್ರೀಯ ಹೆದಾರಿ 66 ಚತುಷ್ಪತ ಕಾಮಗಾರಿಯ ಭಾಗವಾಗಿ ನಡೆಯುವ ಮೇಲ್ಸೇತುವೆ ಕಾಮಗಾರಿ. ಸುಮಾರು ಒಂದು ಕಿ.ಮೀ ನಷ್ಟು ಉದ್ದವಾಗಿ ಇಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಕಳೆದ ಒಂದು ವರ್ಷದಿಂದ ಆರಂಭವಾದ ಮೇಲ್ಸೇತುವೆ ಕಾಮಗಾರಿಯಲ್ಲಿ ಗುತ್ತಿಗೆ ಪಡೆದ ಐಆರ್​ಬಿ ಕಂಪನಿ ನಿರ್ಲಕ್ಷ್ಯದ ಕೆಲಸ ಕೈಗೊಂಡಿದ್ದೆ ಹೆಚ್ಚು.

ಮೇಲ್ಸೇತುವೆ ಎಡ ಮತ್ತು ಬಲ ಬದಿಯಿಂದ ಸರ್ವಿಸ್ ರಸ್ತೆ ಬಿಡಲಾಗಿದೆ. ಆದರೆ, ಮೇಲ್ಸೇತುವೆ ಕಾಮಗಾರಿ ನಡೆಸುತ್ತಿರುವ ಸಿಬ್ಬಂದಿ ಸುರಕ್ಷತಾ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಕಾರ್ಮಿಕರು ಮೇಲಿಂದ ಕೆಳಗೆ ಕಬ್ಬಿಣದ ಸಲಾಕೆಯನ್ನ ಎಸೆಯುವದರಿಂದ ಹಿಡಿದು ಕಣ್ತಪ್ಪಿ ಕಬ್ಬಿಣದ ಸಲಾಕೆ ಬೀಳುವುದರವರೆಗೂ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ.

ಎಷ್ಟೆ ಹೇಳಿದ್ರು ಕ್ರಮ ಕೈಗೊಳ್ಳದ ಕಂಪನಿ

ಇನ್ನೂ ಇತ್ತಿಚಿಗೆ ಮೇಲ್ಗಡೆ ಸೇತುವೆ ಮೇಲೆ ಕೆಲಸ ಕಾರ್ಯದಲ್ಲಿ ತೊಡಗಿಕೊಂಡ ಕಾರ್ಮಿಕರು ಒಮ್ಮೆಲೆ ಕಬ್ಬಿಣದ ಸಲಾಕೆಯನ್ನ ಕೆಳಗಡೆ ಎಸೆಯುವುದರಿಂದ ಕೆಳ ರಸ್ತೆಯಲ್ಲಿ ಸಂಚರಿಸುವ ಒಂದೆರಡು ಕಾರು ಜಕ್ಕಂ ಆಗಿವೆ. ಜೊತೆಗೆ ಬೈಕ್ ಸವಾರರರಿಗೂ ಕೂಡಾ ಸಣ್ಣಪುಟ್ಟ ಗಾಯಗಳಾದ ಘಟನೆ ನಡೆದು ಹೋಗಿವೆ.

ಇದನ್ನೂ ಓದಿ :  ಕಾರವಾರ: ಪ್ರಕೃತಿಯ ಮುನಿಸಿಗೆ ಬರಿದಾಯ್ತು ಮೀನುಗಾರರ ಬದುಕುಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಮೇಲ್ಸೇತುವೆ ಕಾಮಗಾರಿ ಮುಕ್ತವಾಗಿ ನಡೆಸುತ್ತಿರುವುದಿರಂದ ವಾಹನ ಸವಾರರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಕಂಪನಿ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗುತ್ತೆವೆ  ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ.

ಜಿಲ್ಲಾಧಿಕಾರಿ ಗಳ ಆದೇಶಕ್ಕೆ ಕ್ರಮವಾಗುವುದೆ?

ಒಟ್ಟಾರೆ ಮೇಲ್ಸೇತುವೆ ಕಾಮಗಾರಿಯಲ್ಲಿ ಸಂಪೂರ್ಣ ನಿರ್ಲಕ್ಷ ತೋರುತ್ತಿರುವ ಐಆರ್​​ಬಿ ಕಂಪನಿ ವಿರುದ್ದ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.. ಕೂಡಲೆ ಸುರಕ್ಷಿತ ಕ್ರಮಕ್ಕೆ ಮುಂದಾಗದೆ ಇದ್ದರೇ ಜಿಲ್ಲಾಡಳಿತ ಕಂಪನಿ ವಿರುದ್ದ ಸೂಕ್ತ ಕ್ರಮಕ್ಕೆ ಮುಂದಾಗಬೇಕಾಗಿದೆ.

(ವರದಿ : ದರ್ಶನ್ ನಾಯ್ಕ)
First published:February 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ