3ನೇ ಸುತ್ತಿನ ಚುನಾವಣೆ: ಕರ್ನಾಟಕದ 14 ಸೇರಿ 117 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ನಾಳೆ ಮತದಾನ

ಲೋಕಸಭೆಯ 3ನೇ ಹಂತದ ಚುನಾವಣೆಯಲ್ಲಿ ಒಟ್ಟು 15 ರಾಜ್ಯಗಳ 117 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನವಾಗುತ್ತಿದೆ. ಒಡಿಶಾ ವಿಧಾನಸಭೆಯ 42 ಕ್ಷೇತ್ರಗಳಿಗೂ ಚುನಾವಣೆಯಾಗುತ್ತಿದೆ.

Vijayasarthy SN | news18
Updated:April 22, 2019, 8:14 AM IST
3ನೇ ಸುತ್ತಿನ ಚುನಾವಣೆ: ಕರ್ನಾಟಕದ 14 ಸೇರಿ 117 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ: ನಾಳೆ ಮತದಾನ
ಸಾಂದರ್ಭಿಕ ಚಿತ್ರ
  • News18
  • Last Updated: April 22, 2019, 8:14 AM IST
  • Share this:
ಬೆಂಗಳೂರು(ಏ. 22): ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಒಂದು ದಿನ ಬಾಕಿ ಇದೆ. ನಿನ್ನೆ ದೇಶಾದ್ಯಂತ 117 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಇದರಲ್ಲಿ ಕರ್ನಾಟಕದ ಅಂತಿಮ 14 ಕ್ಷೇತ್ರಗಳೂ ಒಳಗೊಂಡಿವೆ. ಮಂಗಳವಾರದಂದು ಈ ಎಲ್ಲಾ ಕ್ಷೇತ್ರಗಳಿಗೆ ಮತದಾನವಾಗಲಿದೆ. ಇಂದು ಎಲ್ಲಾ ಅಭ್ಯರ್ಥಿಗಳಿಗೆ ಮನೆ ಮನೆ ಪ್ರಚಾರ ಮಾಡಲಿದ್ದಾರೆ.

ಒಟ್ಟು 13 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 117 ಕ್ಷೇತ್ರಗಳಿಗೆ ಮಂಗಳವಾರ ಮತದಾನವಾಗುತ್ತಿದೆ. ಏಪ್ರಿಲ್ 18ರಂದು ಚುನಾವಣೆ ನಡೆಯಬೇಕಿದ್ದ ತ್ರಿಪುರಾ ಈಸ್ಟ್ ಕ್ಷೇತ್ರದಲ್ಲಿ ಮತದಾನ ಮುಂದೂಡಿಕೆಯಾಗಿತ್ತು. ಅದು ಏಪ್ರಿಲ್ 23ರಂದು ನಡೆಯಲಿದೆ. ಹಾಗೆಯೇ ಕರ್ನಾಟಕದ ಜೊತೆಗೆ ಅಸ್ಸಾಮ್, ಬಿಹಾರ, ಗೋವಾ, ಗುಜರಾತ್, ಕೇರಳ, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಛತ್ತೀಸ್​ಗಡ, ಜಮ್ಮು-ಕಾಶ್ಮೀರ, ತ್ರಿಪುರಾ ದಮನ್ ಅಂಡ್ ಡಿಯು ಮತ್ತು ದಾದ್ರಾ ನಾಗರ್ ಹವೇಲಿಯಲ್ಲಿ ಮತದಾನವಾಗಲಿದೆ. ಒಡಿಶಾದ 6 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 42 ವಿಧಾನಸಭಾ ಕ್ಷೇತ್ರಗಳಿಗೂ ಅವತ್ತೇ ಮತದಾನವಾಗಲಿದೆ. ಗುಜರಾತ್​(26), ಕೇರಳ(20), ಕರ್ನಾಟಕ(14), ಮಹಾರಾಷ್ಟ್ರ(14) ಹಾಗೂ ಉತ್ತರ ಪ್ರದೇಶ(10) ಮೂರನೇ ಹಂತದಲ್ಲಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾಗುತ್ತಿರುವ ರಾಜ್ಯಗಳಾಗಿವೆ.

ಇದನ್ನೂ ಓದಿ: ಭಯೋತ್ಪಾದನೆಯ ನೆನಪೇ ಮಾಸಿದ್ದ ಲಂಕಾದಲ್ಲಿ 10 ವರ್ಷಗಳ ನಂತರ ಶುರುವಾಗಿದೆಯಾ ಹೊಸ ಉಗ್ರ ಅಧ್ಯಾಯ?

ಕರ್ನಾಟಕದಲ್ಲಿ ಅಂತಿಮ ಹಂತದ ಮತದಾನ ಇದಾಗಿದೆ. ಏಪ್ರಿಲ್ 18ರಂದು ದಕ್ಷಿಣ ಕರ್ನಾಟಕದ ಜನರು ಮತ ಚಲಾಯಿಸಿದರೆ, ಏಪ್ರಿಲ್ 23ರಂದು ಉತ್ತರ ಭಾಗದವರು ತಮ್ಮ ಪ್ರತಿನಿಧಿಗಳನ್ನ ಆರಿಸಲಿದ್ದಾರೆ. ಈ 14 ಕ್ಷೇತ್ರಗಳಲ್ಲಿ ಒಟ್ಟು 237 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.43 ಕೋಟಿ ಮತದಾರರು ವೋಟಿಂಗ್ ಮಾಡಲಿದ್ದಾರೆ.

ಭಾನುವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ರಾಜ್ಯದ ಅಂತಿಮ ಹಂತದ ಚುನಾವಣೆಗೆ ಸಜ್ಜಾಗಿರುವ ವಿವರ ನೀಡಿದರು. ಚುನಾವಣೆ ನಿರ್ವಹಣೆಗೆ 2.03 ಲಕ್ಷ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತದೆ. 2,174 ಸೂಕ್ಷ್ಮ ಅಬ್ಸರ್ವರ್ಸ್​ಗಳನ್ನಿ ನಿಯೋಜಿಸಲಾಗುತ್ತದೆ. 1,478 ಬೂತ್​ಗಳಲ್ಲಿ ವಿಡಿಯೋಗ್ರಾಫರ್​ಗಳನ್ನು ಹಾಗೂ 1,479 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Sri Lanka Blasts: ಬಾಂಬ್​ ಸ್ಫೋಟದಲ್ಲಿ ಕೂದಲೆಳೆ ಅಂತರದಿಂದ ಪಾರಾದ ನಟಿ ..!

ಲೋಕಸಭಾ ಕ್ಷೇತ್ರದ ಗಡಿಭಾಗದಿಂದ ಆಚೆಗಿನ 5 ಕಿಮೀ ದೂರದವರೆಗಿನ ಸ್ಥಳಗಳಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಮತದಾರರಿಗೆ ಯಾವುದೇ ಸಮಸ್ಯೆ ಇದ್ದರೂ 1950 ಈ ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡುವಂತೆ ಚುನಾವಣಾಧಿಕಾರಿ ಕೋರಿದರು.3ನೇ ಹಂತದಲ್ಲಿ ಚುನಾವಣೆಯಾಗುತ್ತಿರುವ ರಾಜ್ಯಗಳು ಮತ್ತು ಲೋಕಸಭಾ ಕ್ಷೇತ್ರಗಳು:
ಗುಜರಾತ್: 26
ಕೇರಳ: 20
ಕರ್ನಾಟಕ: 14
ಮಹಾರಾಷ್ಟ್ರ: 14
ಉತ್ತರ ಪ್ರದೇಶ: 10
ಛತ್ತೀಸ್​ಗಡ: 7
ಒಡಿಶಾ: 6
ಪಶ್ಚಿಮ ಬಂಗಾಳ: 5
ಬಿಹಾರ: 5
ಅಸ್ಸಾಮ್: 4
ಗೋವಾ: 2
ಜಮ್ಮು-ಕಾಶ್ಮೀರ: 1
ತ್ರಿಪುರಾ: 1
ದಾಮನ್ ಅಂಡ್ ಡಿಯು: 1
ದಾದ್ರ ನಗರ್ ಹವೇಲಿ: 1

ಕರ್ನಾಟಕದ 14 ಕ್ಷೇತ್ರಗಳು:
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ.

ಇದನ್ನೂ ಓದಿ: ಕೆಲ ಹಿಂಸಾಚಾರ, ಇವಿಎಂ ದೋಷಗಳೊಂದಿಗೆ 2ನೇ ಹಂತದ ಚುನಾವಣೆ ಮುಕ್ತಾಯ; ಶೇ. 66ರಷ್ಟು ಮತದಾನ

ಈ 14 ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ 3ರಲ್ಲಿ ಸ್ಪರ್ಧಿಸುತ್ತಿದೆ. ವಿಜಯಪುರ, ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿದ್ಧಾರೆ. ಇನ್ನುಳಿದ 11 ಕ್ಷೇತ್ರಗಳಲ್ಲಿ ಮಿತ್ರ ಪಕ್ಷ ಕಾಂಗ್ರೆಸ್​ನ ಅಭ್ಯರ್ಥಿಗಳಿದ್ಧಾರೆ. ಬಿಜೆಪಿ ಇಷ್ಟೂ ಕ್ಷೇತ್ರಗಳಲ್ಲಿ ಕಣದಲ್ಲಿದೆ. ಹಾಸನ, ತುಮಕೂರು ಮತ್ತು ಮಂಡ್ಯದಂತೆ ಶಿವಮೊಗ್ಗ ಕ್ಷೇತ್ರ ಕೂಡ ಜೆಡಿಎಸ್ ಪಾಲಿಗೆ ಪ್ರತಿಷ್ಠೆಯ ಪಣವಾಗಿದೆ. ಯಡಿಯೂರಪ್ಪ ಅವರ ಮಗ ಬಿ.ವೈ. ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಸ್ಪರ್ಧಿಸಿರುವ ಶಿವಮೊಗ್ಗದಲ್ಲಿ ಮೂರೂ ಪಕ್ಷಗಳ ರಾಷ್ಟ್ರಮಟ್ಟದ ಘಟಾನುಘಟಿಗಳು ಚುನಾವಣಾ ಪ್ರಚಾರ ಮಾಡಿದ್ದಾರೆ. ನೆರೆಯ ಆಂಧ್ರದ ಚಂದ್ರಬಾಬು ನಾಯ್ಡು ಕೂಡ ಇಲ್ಲಿಗೆ ಬಂದು ಪ್ರಚಾರ ಮಾಡಿ ಹೋಗಿದ್ದಾರೆ.

ಇನ್ನು, ರಾಷ್ಟ್ರಮಟ್ಟದಲ್ಲಿ ಜಮ್ಮು-ಕಾಶ್ಮೀರದ ಅನಂತನಾಗ್ ಕ್ಷೇತ್ರ ಕೂಡ ಗಮನ ಸೆಳೆಯುತ್ತಿದೆ. ಉಗ್ರರ ನೆಲೆ ಇದೆ ಎನ್ನಲಾದ ಈ ಕ್ಷೇತ್ರದಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗುತ್ತದೆಂಬ ಕುತೂಹಲ ಇದೆ. ಕೇರಳದ ಎಲ್ಲಾ 20 ಲೋಕಸಭಾ ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನವಾಗುತ್ತಿದೆ.
First published: April 21, 2019, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading