• Home
  • »
  • News
  • »
  • state
  • »
  • Bus Bandh: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಬಸ್ ಬಂದ್; ರೋಗಿಗಳ ಗೋಳು ಕೇಳೋರು ಯಾರು?

Bus Bandh: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ, ಬಸ್ ಬಂದ್; ರೋಗಿಗಳ ಗೋಳು ಕೇಳೋರು ಯಾರು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರ ಸರ್ಕಾರಿ ಬಸ್​ಗಳು ಮಹಾರಾಷ್ಟ್ರ ಗಡಿಯವರೆಗೆ ಮಾತ್ರ ಜನರನ್ನು ತಂದು ಬಿಡುತ್ತಿವೆ. ಜನರು ಕಾಗವಾಡ ಚೆಕ್‌ ಪೋಸ್ಟ್ ಮೂಲಕ ರಾಜ್ಯ ಪ್ರವೇಶ ಮಾಡುತ್ತಿದ್ದಾರೆ.

  • Share this:

Karnataka-Maharashtra Border Issue: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಜಯಪುರ (Vijayapura)‌ ಜಿಲ್ಲೆಯ ರೋಗಿಗಳಿಗೆ ಸಂಕಷ್ಟ ತಂದೊಡ್ಡಿದೆ. ವಿಜಯಪುರದ ಜನರು ಮಹಾರಾಷ್ಟ್ರದ ಮೀರಜ್, ಸಾಂಗ್ಲಿ ಜಿಲ್ಲೆಗೆ ದಿನನಿತ್ಯ 700 ರಿಂದ 800 ಮಂದಿ ಚಿಕಿತ್ಸೆಗಾಗಿ ತೆರಳುತ್ತಿದ್ದರು. ಆದರೆ ಗಡಿ ವಿವಾದದಿಂದಾಗಿ ಬಸ್ ಸಂಪರ್ಕ (Bus Service) ಇಲ್ಲದೇ ರೋಗಿಗಳು ಹೈರಾಣಾಗಿದ್ದಾರೆ. ಇದೀಗ ವಿಜಯಪುರದಿಂದ ಕಾಗವಾಡಕ್ಕೆ (Kagawada) ಹೋಗಿ, ಅಲ್ಲಿಂದ ಮೀರಜ್​​ಗೆ (Meeraj) ಹೋಗಬೇಕಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು (Private Bus Owners) ಹೆಚ್ಚಿನ ಹಣ ಪಡೆಯುತ್ತಿದ್ದಾರೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಬಸ್ ಬಂದ್ ಆಗಿದ್ದಕ್ಕೆ ಜನರು ನಡೆದುಕೊಂಡೆ ರಾಜ್ಯ ಪ್ರವೇಶ ಮಾಡುತ್ತಿದ್ದಾರೆ.


ಮಹಾರಾಷ್ಟ್ರ ಸರ್ಕಾರಿ ಬಸ್​ಗಳು ಮಹಾರಾಷ್ಟ್ರ ಗಡಿಯವರೆಗೆ ಮಾತ್ರ ಜನರನ್ನು ತಂದು ಬಿಡುತ್ತಿವೆ. ಜನರು ಕಾಗವಾಡ ಚೆಕ್‌ ಪೋಸ್ಟ್ ಮೂಲಕ ರಾಜ್ಯ ಪ್ರವೇಶ ಮಾಡುತ್ತಿದ್ದಾರೆ. ಸಮಸ್ಯೆ ಎದುರಿಸುತ್ತಿರೋ ಜನರು ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ದ ಜನ ಆಕ್ರೋಶ ಹೊರ ಹಾಕುತ್ತಿದ್ದಾರೆ.


MNS​​ ಕಾರ್ಯಕರ್ತರ ಪುಂಡಾಟ


ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ತಾರಕಕ್ಕೇರ್ತಿದೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು KSRTC ಬಸ್ (KSRTC Bus) ಮೇಲೆ  ಮಸಿ ಬಳಿದಿದ್ದಾರೆ. ಸಿಂಧದುರ್ಗ ಜಿಲ್ಲೆಯ ಕುಡಾಲ ಬಸ್ ನಿಲ್ದಾಣದಲ್ಲಿ ಎಂಎನ್​​ಎಸ್ ಕಾರ್ಯಕರ್ತರು ಉದ್ಧಟತನ ಮೆರೆದಿದ್ದಾರೆ. ಇಂದು ಬೆಳಗಾವಿ ಹಾಗೂ ಮಹಾರಾಷ್ಟ್ರ ನಡುವೆ ಬಸ್ ಸಂಪರ್ಕವನ್ನೇ ಬಂದ್ ಮಾಡಲಾಗಿದೆ.


ಕರ್ನಾಟಕ ಬ್ಯಾಂಕ್​ಗೆ ಕಪ್ಪು ಮಸಿ


ಮಹಾರಾಷ್ಟ್ರದ ನಾಸಿಕ್​ನಲ್ಲಿರೋ ಕರ್ನಾಟಕ ಬ್ಯಾಂಕ್​ಗೆ (Karnataka Bank) ಸೌರಾಜ್ಯ ಸಂಘಟನೆ ಕಾರ್ಯಕರ್ತರು ಕಪ್ಪು ಮಸಿ ಬಳಿದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಕರ್ನಾಟಕ‌ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.


ಮಹಾರಾಷ್ಟ್ರದಲ್ಲಿ ಅಹಿತರಕ ಘಟನೆಗಳು ನಡೆದರೂ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ (NCP Chief Sharad Pawar) ಸುಮ್ಮನಿದ್ದಾರೆ. ಆದ್ರೆ ಕರ್ನಾಟಕದಲ್ಲಿ ಅಹಿತಕರ ಘಟನೆ ತಡೆಯುವಂತೆ ವಾರ್ನಿಂಗ್ ಮಾಡ್ತಾರೆ.


ಇದನ್ನೂ ಓದಿ:  Janardhana Reddy: ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್! 4 ಕೇಸ್​ ಕ್ಲೋಸ್​ ಮಾಡಿದ ಕೋರ್ಟ್​


ಕರ್ನಾಟಕ ಬ್ಯಾಂಕ್​ಗೆ ಕಪ್ಪು ಮಸಿ


ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ. 8 ರಿಂದ 12 ಕರವೇ ಕಾರ್ಯಕರ್ತರ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದೂರಿನಲ್ಲಿ ಅಪರಿಚಿತ ಕರವೇ ಕಾರ್ಯಕರ್ತರು ಎಂದು ಉಲ್ಲೇಖಿಸಲಾಗಿದೆ. ನಿನ್ನೆ ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಕಲ್ಲು ತೂರಿ, ಮಹಾರಾಷ್ಟ್ರದ ವಾಹನಗಳನ್ನ ಜಖಂಗೊಳಿಸಿದ್ದಕ್ಕೆ  ಕ್ರಮ ಕೈಗೊಳ್ಳಲಾಗಿದೆ.


‘ಮಹಾ’ ರಾಜಕಾರಣಿಗಳಿಗೆ ವಾರ್ನಿಂಗ್!


ಬೆಳಗಾವಿ ಗಡಿ ಗಲಾಟೆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಜೊತೆ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ (Minister Govind Karjol) ಚರ್ಚೆ ನಡೆಸಿದ್ರು. ಬೆಂಗಳೂರಿನ RT ನಗರದ ಸಿಎಂ ನಿವಾಸದಲ್ಲಿ ಚರ್ಚೆ ನಡೆಸಿದ ಬಳಿಕ ಮಾತಾಡಿದ ಕಾರಜೋಳ, ಕರ್ನಾಟಕದ ಒಂಚಿಂಚೂ ಜಾಗವನ್ನ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡಲ್ಲ. ಸುಮ್ಮನೆ ಬೆಳಗಾವಿ ಗಡಿಯಲ್ಲಿ ಕಿಡಿಗೇಡಿಗಳಿಂದ ಸೌಹಾರ್ದತೆ ಹಾಳಾಗುತ್ತಿದೆ ಎಂದರು. ಇನ್ನು ಗಡಿ ವಿವಾದ ಸಂಬಂಧ ಸರ್ವಪಕ್ಷ ಸಭೆ ಕರೆಯೋ ಅಗತ್ಯವಿಲ್ಲ ಅಂತಾ ವಿಪಕ್ಷಗಳಿಗೆ ಟಾಂಗ್ ಕೊಟ್ಟರು.


ಇದನ್ನೂ ಓದಿ:  Mangaluru: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ; ಯುವತಿ ಜೊತೆ ಓಡಾಟ, ಅನ್ಯಕೋಮಿನ ಯುವಕನಿಗೆ ಥಳಿತ


‘ಪ್ರಚೋದನೆ ಬಿಡಿ.. ಸೌಹಾರ್ದತೆ ಕಾಪಾಡಿ’


ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.‌ರವಿ (BJP General Secretary C T Ravi) ಪ್ರತಿಕ್ರಿಯಿಸಿದ್ದಾರೆ. ಮಹಾರಾಷ್ಟ್ರದ ವಾಹನಗಲಿಗಾಗಲೀ, ಕರ್ನಾಟಕದ ವಾಹನಗಳಿಗಾಗಲೀ ಮಸಿ ಬಳಿದು ಪ್ರಚೋದನೆ ಮಾಡೋ ಕೆಲಸ ಆಗುತ್ತೆ. ಸೌಹಾರ್ದತೆ ಕಾಪಾಡಿಕೊಳ್ಳೋದು ಎರಡೂ ರಾಜ್ಯಗಳ ಜವಾಬ್ದಾರಿ ಎಂದಿದ್ದಾರೆ.

Published by:Mahmadrafik K
First published: