ಚಿಕ್ಕಮಗಳೂರು: ಮಗನ ಪಬ್ ಜೀ ಹುಚ್ಚಿಗೆ ಸ್ವತಃ ಅಮ್ಮನೇ ಬಲಿಯಾಧ ದಾರುಣ ದುರ್ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಹಾಗಲಖಾನ್ ಎಸ್ಟೇಟ್ನಲ್ಲಿ ನಡೆದಿದೆ. ಪಬ್ ಜಿ ಆಡುತ್ತಿದ್ದ (Pubg Game) ಮಗನ ಜೊತೆ ಅಪ್ಪ ಜಗಳವಾಡುತ್ತಿದ್ದ. ಪಬ್ ಜಿ ಆಡುವುದಕ್ಕಾಗಿ ಅಪ್ಪನ ಜೊತೆ ಜಗಳಕ್ಕಿಳಿದಿದ್ದ ಮಗನನ್ನು ಸಾಯಿಸುತ್ತೇನೆಂದು ಮಗನಿಗೆ ತೋಟದ ಕೋವಿ ಹಿಡಿದು ಅಪ್ಪ ಹೆದರಿಸುತ್ತಿದ್ದ. ಅಲ್ಲದೇ ಕುಡಿದ ಮತ್ತಿನಲ್ಲಿದ್ದ ಅಪ್ಪ ಗುಂಡು ಹಾರಿಸಿದ್ದಾನೆ. ಈ ವೇಳೆ ಮಗನಿಗೆ ಗುಂಡು (Father Fires Son) ಹೊಡೆಯುತ್ತಾರೆಂದು ತಾಯಿ ಎದುರು ಬಂದಿದ್ದಾಳೆ. ಅಪ್ಪ ಮಗನಿಗೆ ಹಾರಿಸಿದ ಗುಂಡು ತಾಯಿಗೆ ತಾಗಿದೆ.
ಹಿರಿಯ ಮಗ ಅಮ್ಮನನ್ನ ತಕ್ಷಣ ಆಸ್ಪತ್ರೆಗೆ ಕರೆತಂದರೂ ತಾಯಿ ಸಾವನ್ನಪ್ಪಿದ್ದಾರೆ. ಗುಂಡಿನಿಂದ ದುರ್ದೈವಿ ತಾಯಿ ಮೈಮುನಾ (40) ಮೃತಪಟ್ಟಿದ್ದಾಳೆ. ಪತಿ ಇಮ್ತಿಯಾಸ್ನನ್ನು ಬಂಧಿಸಲಾಗಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಮಂಟಪದಿಂದ ಪ್ರಿಯಕರನ ಜೊತೆ ವಧು ಎಸ್ಕೇಪ್
ರಾತ್ರಿ ಅರತಕ್ಷತೆಯಲ್ಲಿ ಭಾಗಿಯಾಗಿದ್ದ ವಧು ರಾತ್ರೋ ರಾತ್ರಿ ಎಸ್ಕೇಪ್ ಆದ ಘಟನೆ ವಿದುರಾಶ್ವತ್ಥ ಗ್ರಾಮದ ಚನ್ನರಾಯಪ್ಪ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಚಿಕ್ಕಬಳ್ಳಾಫುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯ ವಧು ವೆನ್ನಲ ಮತ್ತು ಗೌರಿಬಿದನೂರಿನ ಕರೇಕಲ್ಲಹಳ್ಳಿಯ ವರ ಸುರೇಶ್ ಜೊತೆ ಮದುವೆ ನಿಶ್ಚಯವಾಗಿತ್ತು. ಇಂದು ಬೆಳಿಗ್ಗೆ 9.30ಕ್ಕೆ ಮಾಂಗಲ್ಯ ಧಾರಣೆ ನಡೆಯಬೇಕಿತ್ತು.
ಇದನ್ನೂ ಓದಿ: Wormy chocolate: 89 ರೂ ಬೆಲೆಯ ಚಾಕ್ಲೇಟ್ ನಲ್ಲಿ ಹುಳು; 50 ಲಕ್ಷ ರೂ ಪರಿಹಾರ ಕೇಳಿದ ಬೆಂಗಳೂರಿನ ವ್ಯಕ್ತಿ
ಆದರೆ ಪ್ರಿಯಕರ ಪ್ರವೀಣ್ ಜೊತೆ ವಧು ವೆನ್ನಲ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗಿದೆ. ಪ್ರಿಯಕರ ಪ್ರವೀಣ್ ಗುಡಿಬಂಡೆ ತಾಲೂಕಿನ ಅಪ್ಪಿರೆಡ್ಡಿಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದ್ದು, ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಕೊಲೆ-ದರೋಡೆ
ರಾಜ್ಯ ರಾಜಧಾನಿ ಬೆಂಗಳೂರೇ ಬೆಚ್ಚಿ ಬೀಳುವಂತಹ ಅಪರಾಧ ಪ್ರಕರಣವೊಂದು ಳಕಿಗೆ ಬಂದಿದೆ. ವೃದ್ಧರೊಬ್ಬರ ಕೈಕಾಲು ಕಟ್ಟಿಹಾಕಿ ಕುತ್ತಿಗೆ ಹಿಸುಕಿ ಸ್ವತಃ ವೃದ್ಧರೋರ್ವರನ್ನು ಸಾಯಿಸಿದ್ದಲ್ಲದೇ, ಇಡೀ ಮನೆಯನ್ನು ದೋಚಿದ ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ತೀವ್ರ ಗತಿಯಲ್ಲಿ ನಡೆಸುತ್ತಿದ್ದಾರೆ. ಚಾಮರಾಜಪೇಟೆಯ 4ನೇ ಕ್ರಾಸ್ ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಜುಗುರಾಜ್ ಜೈನ್ ಎಂಬ 77 ವರ್ಷದ ವೃದ್ಧರ ಬರ್ಭರ ಕೊಲೆ ನಿನ್ನೆ ರಾತ್ರಿ (ಮೇ 24) ನಡೆದಿತ್ತು. ಈ ಪ್ರಕರಣ ಇಡೀ ಬೆಂಗಳೂರಲ್ಲೇ ತಲ್ಲಣಗೊಳಿಸಿತ್ತು. ಇದೀಗ ವೃದ್ಧರ ಭೀಕರ ಕೊಲೆ, ದರೋಡೆಯ ಆಳ ಅಗಲದ ಹುಡುಕಾಟ ನಡೆಸಿದ ಬೆಂಗಳೂರು ಪೊಲೀಸರು ಪ್ರಕರಣದ ಮಾಹಿತಿ ತೆರೆದಿಟ್ಟಿದ್ದಾರೆ.
ಕೊಲೆ ನಡೆದದ್ದು ಗೊತ್ತಾಗಿದ್ದೇ ಮಾರನೇ ದಿನ!
ನಿನ್ನೆ ರಾತ್ರಿ ಕೊಲೆಯಾದ ವೃದ್ದ ಜುಗುರಾಜ್ ತಮ್ಮ ಮನೆಯಲ್ಲಿ ಒಬ್ಬರೇ ಇದ್ದರು. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅವರನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳವು ಮಾಡಲಾಗಿತ್ತು. ಮಾರನೇ ದಿನ ಮುಂಜಾನೆ ವೃದ್ಧರ ಮೊಮ್ಮಗ ಅಪಾರ್ಟ್ಮೆಂಟ್ ಗೆ ಬಂದಾಗ ಕೊಲೆ ನಡೆಸಿ ದರೋಡೆ ಮಾಡಿದ ವಿಷಯ ಗೊತ್ತಾಗಿದೆ
ಇದನ್ನೂ ಓದಿ: Bengaluru: ದಿಢೀರ್ ಸೇತುವೆ ಕುಸಿದು 30 ಅಡಿ ರಾಜಕಾಲುವೆಗೆ ಬಿದ್ರು 7 ಕಾರ್ಮಿಕರು
ಸದ್ಯ ತನಿಖೆ ಮಾಡ್ತಾ ಇದ್ದೀವಿ, ವಿಶೇಷ ತಂಡ ರಚನೆ ಆಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ