• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rajya Sabha: ರಾಜ್ಯಸಭೆಗೆ ನಾಲ್ವರು ಸಾಧಕರ ನಾಮನಿರ್ದೇಶನ; ವೀರೇಂದ್ರ ಹೆಗ್ಗಡೆ, ಇಳಯರಾಜ, ಪಿಟಿ ಉಷಾ, ವಿಜಯೇಂದ್ರ ಪ್ರಸಾದ್‌ಗೆ ಮೋದಿ ಶುಭಾಶಯ

Rajya Sabha: ರಾಜ್ಯಸಭೆಗೆ ನಾಲ್ವರು ಸಾಧಕರ ನಾಮನಿರ್ದೇಶನ; ವೀರೇಂದ್ರ ಹೆಗ್ಗಡೆ, ಇಳಯರಾಜ, ಪಿಟಿ ಉಷಾ, ವಿಜಯೇಂದ್ರ ಪ್ರಸಾದ್‌ಗೆ ಮೋದಿ ಶುಭಾಶಯ

ನಾಲ್ವರು ಸಾಧಕರಿಗೆ ಗೌರವ

ನಾಲ್ವರು ಸಾಧಕರಿಗೆ ಗೌರವ

ರಾಜ್ಯಸಭೆಗೆ ನಾಲ್ವರು ಸಾಧಕರನ್ನು ನಾಮನಿರ್ದೇಶನ ಮಾಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, ಮಾಜಿ ಅಥ್ಲೀಟ್ ಪಿಟಿ ಉಷಾ, ಸಿನಿಮಾ ಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ: ರಾಜ್ಯಸಭೆ ಚುನಾವಣೆ (Rajya Sabha Election) ಕೆಲ ದಿನಗಳ ಹಿಂದಷ್ಟೇ ಮುಗಿದಿದ್ದು, ಕೇಂದ್ರದ ಆಡಳಿತಾರೂಢ ಪಕ್ಷ ಬಿಜೆಪಿ (BJP) ಭರ್ಜರಿ ಜಯ ಸಾಧಿಸಿತ್ತು. ಇದೀಗ ರಾಜ್ಯಸಭೆಗೆ ನಾಲ್ವರು ಸಾಧಕರನ್ನು (Achievers) ಕೇಂದ್ರ ಸರ್ಕಾರ (Central Government) ನಾಮನಿರ್ದೇಶನ (Nomination) ಮಾಡಿದೆ. ಕರ್ನಾಟಕವನ್ನು (Karnataka) ಪ್ರತಿನಿಧಿಸುವ, ಶ್ರೀಕ್ಷೇತ್ರ ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Dr. Veerendra Heggade), ತಮಿಳುನಾಡು (Tamil Nadu) ಮೂಲದ ಖ್ಯಾತ ಸಂಗೀತ ನಿರ್ದೇಶಕ (Famous Music Director) ಇಳಯರಾಜ (Iliyaraj), ಕೇರಳದ (Kerala) ಮಾಜಿ ಅಥ್ಲೀಟ್‌ ಪಿಟಿ ಉಷಾ (PT Usha), ಆಂಧ್ರಪ್ರದೇಶ (Andhra Pradesh) ಪ್ರತಿನಿಧಿಸುವ, ಖ್ಯಾತ ನಿರ್ದೇಶಕ (Director) ರಾಜಮೌಳಿ (Rajamouli) ಅವರ ತಂದೆ, ಸಿನಿಮಾ ಕಥೆಗಾರರೂ ಆಗಿರುವ ವಿ. ವಿಜಯೇಂದ್ರ ಪ್ರಸಾದ್‌ (V. Vijayendra Prasad) ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.


ರಾಜ್ಯಸಭೆಗೆ ನಾಲ್ವರು ಸಾಧಕರ ನಾಮ ನಿರ್ದೇಶನ


ರಾಜ್ಯಸಭೆ ಸದಸ್ಯರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಕೇಂದ್ರ ಸರಕಾರ ನಾಮನಿರ್ದೇಶನ ಮಾಡಿದೆ. ಇವರ ಜೊತೆ ಖ್ಯಾತ ಅಥ್ಲೀಟ್ ಪಿ.ಟಿ. ಉಷಾ ಹಾಗೂ ಸಂಗೀತ ನಿರ್ದೇಶಕ ಇಳಯರಾಜ ಮತ್ತು ಸಿನಿಮಾ ಕೆ.ವಿ. ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.



ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರು


ಈಗ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ನಾಲ್ವರು ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಾಗಿದ್ದಾರೆ. ಅವರ ಕೊಡುಗೆಗಳಿಗಾಗಿ ರಾಷ್ಟ್ರೀಯ ಮತ್ತು ಜಾಗತಿಕ ಮನ್ನಣೆಯನ್ನು ಪಡೆದಿದ್ದಾರೆ. ವೀರೇಂದ್ರ ಹೆಗ್ಗಡೆ ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ, ಸಮಾಜಸೇವೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೆ, ಇಳೆಯರಾಜ ಭಾರತೀಯ ಸಿನಿಮಾ ಸಂಗೀತದಲ್ಲಿ ಚಿರಪರಿಚಿತರು. ಇನ್ನು ಪಿಟಿ ಉಷಾ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡದ್ದರೆ, ವಿಜಯೇಂದ್ರ ಪ್ರಸಾದ್ ಸಿನಿಮಾ ಕಥೆಗಾರರಾಗಿ ಹೆಸರು ಮಾಡಿದ್ದಾರೆ. ಇನ್ನು ನಾಲ್ಕು ನಾಮನಿರ್ದೇಶಿತ ಪ್ರತಿನಿಧಿಗಳಲ್ಲಿ ನಾಲ್ವರು ದಕ್ಷಿಣ ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಾರೆ.


ಇದನ್ನೂ ಓದಿ: Hyderabad ಇನ್ನು 'ಭಾಗ್ಯನಗರ'ವಾಗುತ್ತಾ? ಹೊಸ ಹೆಸರಿನಿಂದ ಕರೆದ ಪ್ರಧಾನಿ ನರೇಂದ್ರ ಮೋದಿ!


ಪ್ರಧಾನಿ ನರೇಂದ್ರ ಮೋದಿ ಶುಭಾಶಯ


ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಪಿ.ಟಿ.ಉಷಾ, ವಿ. ವಿಜಯೇಂದ್ರ ಪ್ರಸಾದ್, ವೀರೇಂದ್ರ ಹೆಗ್ಗಡೆ ಮತ್ತು ಇಳಯರಾಜ ಅವರನ್ನು ಅಭಿನಂದಿಸಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ನರೇಂದ್ರ ಮೋದಿ ಟ್ವೀಟ್‌ ಮಾಡಿ ನಾಲ್ವರು ಸಾಧಕರಿಗೆ ಶುಭ ಕೋರಿದ್ದಾರೆ. "ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಮತ್ತು ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿಯಲ್ಲಿ ಅವರು ಮಾಡುತ್ತಿರುವ ಮಹತ್ತರವಾದ ಕಾರ್ಯವನ್ನು ವೀಕ್ಷಿಸಲು ನನಗೆ ಅವಕಾಶವಿದೆ. ಅವರು ಖಂಡಿತವಾಗಿಯೂ ಸಂಸತ್ತಿನ ಕಲಾಪಗಳನ್ನು ಪುಷ್ಟೀಕರಿಸುತ್ತಾರೆ' ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.


ಇದನ್ನೂ ಓದಿ: Nupur Sharma: ಪ್ರಧಾನಿ ಮೋದಿ ಅರಬ್ ಎಮಿರೇಟ್ಸ್ ಭೇಟಿಯಿಂದ ನೂಪುರ್ ಶರ್ಮಾ ವಿವಾದ ತಣ್ಣಗಾಯಿತೇ?


ಪಿಟಿ ಉಷಾ ಸಾಧನೆಗೆ ಮೋದಿ ಬಹುಪರಾಕ್


"ಪಿಟಿ ಉಷಾ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ. ಕ್ರೀಡೆಯಲ್ಲಿ ಅವರ ಸಾಧನೆಗಳ ಬಗ್ಗೆ ವ್ಯಾಪಕವಾಗಿ ಎಲ್ಲರಿಗೂ ತಿಳಿಸಿದೆ. ಕಳೆದ ಕೆಲವು ವರ್ಷಗಳಿಂದ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸವು ಶ್ಲಾಘನೀಯವಾಗಿದೆ. ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿದ್ದಕ್ಕಾಗಿ ಅಭಿನಂದನೆಗಳು' ಎಂದು ಮೋದಿ ಅವರು ಪಿಟಿ ಉಷಾ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ.

Published by:Annappa Achari
First published: