ಭಾಗ-1 | ಈ ಮನೋವೈಜ್ಞಾನಿಕ ಸಂಗತಿಗಳು ನಿಮ್ಮ ಮನೋಶಕ್ತಿಯಲ್ಲಿ ಬದಲಾವಣೆಗಳನ್ನು ತರಬಲ್ಲದು

ತಕ್ಷಣದಲ್ಲಿ ಕಲಿತ ನಾಲ್ಕೈದು ಅಂಕಿಗಳು ಮಾತ್ರ ಮಿದುಳಿನ ಗ್ರಹಿಕೆ ಅಥವಾ ನೆನಪಿಗೆ ಎಟಕುವುದು. ಈ ಕಾರಣಗಳನ್ನು ಮನಸ್ಸಿನಲ್ಲಿ ಗಟ್ಟಿಯಾಗಿ ಒಳಸಿಕೊಂಡಲ್ಲಿ ಮರೆತು ಹೋಯಿತು ಎನ್ನುವ ಚಿಂತೆ ಕಾಡಿಸುವುದಿಲ್ಲ.

news18-kannada
Updated:April 26, 2020, 7:30 AM IST
ಭಾಗ-1 | ಈ ಮನೋವೈಜ್ಞಾನಿಕ ಸಂಗತಿಗಳು ನಿಮ್ಮ ಮನೋಶಕ್ತಿಯಲ್ಲಿ ಬದಲಾವಣೆಗಳನ್ನು ತರಬಲ್ಲದು
ಡಾ. ಅ.ಶ್ರೀಧರ.
  • Share this:
ನಿಮಗಿದು ತಿಳಿದಿರಲಿ- ಮನುಷ್ಯನ ನೆನಪಿನ ಶಕ್ತಿಯು ಮಿದುಳಿನ ಸಕಾರಾತ್ಮಕ ಕ್ರಿಯೆಗಳಲ್ಲಿ ಒಂದು. ನಾವು ನೋಡುವ, ಗಮನಿಸುವ, ಕೇಳಿಸಿಕೊಳ್ಳುವ ವಿಷಯಗಳೆಲ್ಲವು ಅತಿ ವೇಗದಲ್ಲಿ ಮಿದುಳಿನಾವರಣವನ್ನು ಹೊಕ್ಕು ಅದರ ಕೊಟ್ಯಾನುಕೋಟಿ ಸೂಕ್ಷ್ಮ ಕೋಶಗಳಲ್ಲಿ ಅಡವಿಕೊಳ್ಳುವುದು. ಬಹಳಷ್ಟು ವಿಷಯಗಳು ಹೊರಬಾರದೇ ಇರುವ ಸಾಧ್ಯತೆಗಳೇ ಹೆಚ್ಚು. ಆದರೂ ಅದೆಷ್ಟೋ ವರ್ಷಗಳ ಹಿಂದೆ ನೆರವೇರಿದ ಸಂಗತಿ ದಿಢೀರನೆ ಹೊರಬಂದು ನಮ್ಮ ವ್ಯಕ್ತಿತ್ವ ಶಕ್ತಿಯನ್ನು ಹೆಚ್ಚಿಸಲೂಬಹುದು ಕುಗ್ಗಿಸಲೂ ಬಹುದು.

ಹಾಗೆಯೇ ಮಿದುಳನ್ನು ಪ್ರವೇಶಿಸಿದ ಸಂಗತಿಗಳನ್ನು ನಂತರದಲ್ಲಿ ಹೊರ ತರುವ ಪ್ರಯತ್ನವನ್ನು ಮಾಡಿದರೇ ಕೇವಲ ನಾಲ್ಕೈದು ಸಂಗತಿಗಳಷ್ಟೇ ಹೊರಬರುವುದು ಎನ್ನುತ್ತವೆ ಸಂಶೋಧನೆಗಳು. ಆದರೂ ಅವುಗಳನ್ನು ಕ್ರಮಬದ್ಧವಾಗಿ ಮಾಡಿದ ಪ್ರಯತ್ನಗಳು ಲಾಭಧಾಯಕವೇ ಆಗಿರುತ್ತದೆ. ಆದುದರಿಂದಲೇ ಹಲವಾರು ಪಾಸ್​ವರ್ಡ್​ಗಳನ್ನು ಪದೇ ಪದೇ ನೆನಪಿಸಿಕೊಂಡರು ಬಾರದೇ ಇರುವುದು. ಹಾಗೆಯೇ ತಕ್ಷಣದಲ್ಲಿ ಕಲಿತ ನಾಲ್ಕೈದು ಅಂಕಿಗಳು ಮಾತ್ರ ಮಿದುಳಿನ ಗ್ರಹಿಕೆ ಅಥವಾ ನೆನಪಿಗೆ ಎಟಕುವುದು. ಈ ಕಾರಣಗಳನ್ನು ಮನಸ್ಸಿನಲ್ಲಿ ಗಟ್ಟಿಯಾಗಿ ಒಳಸಿಕೊಂಡಲ್ಲಿ ಮರೆತು ಹೋಯಿತು ಎನ್ನುವ ಚಿಂತೆ ಕಾಡಿಸುವುದಿಲ್ಲ.

ಇದನ್ನು ಓದಿ: ಕೇಶದೊಳಗೆ ಅಡಗಿರಬಲ್ಲದೆ ಕ್ಲೇಶದ ರಹಸ್ಯ?

ಲೇಖಕರು- ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ:
First published: April 26, 2020, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading