ದೇವಾಲಯದ ಆವರಣದಲ್ಲಿ ಸೈಕೋ ಯುವಕನಿಂದ ಮಹಿಳೆಗೆ ಚೂರಿ ಇರಿದು ಕೊಲೆ


Updated:September 2, 2018, 5:56 PM IST
ದೇವಾಲಯದ ಆವರಣದಲ್ಲಿ ಸೈಕೋ ಯುವಕನಿಂದ ಮಹಿಳೆಗೆ ಚೂರಿ ಇರಿದು ಕೊಲೆ

Updated: September 2, 2018, 5:56 PM IST
ಅಭಿಷೇಕ್. ಡಿ. ಆರ್, ನ್ಯೂಸ್ 18 ಕನ್ನಡ

ನೆಲಮಂಗಲ(ಸೆ. 02): ಆಕೆಗೆ ಮದುವೆಯಾಗಿ 15 ವರ್ಷ, 15 ವರ್ಷದ ದಾಂಪತ್ಯ ಜೀವನಕ್ಕೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳಾಗಿ ಗಂಡನ ಜೊತೆ ಸುಖವಾಗಿ ಜೀವನ ನಡೆಸುತ್ತಿದ್ದಳು. ಆ ಮಹಿಳೆ ಗಂಡ ಮಕ್ಕಳೊಂದಿಗೆ ಅನ್ಯೋನ್ಯವಾಗಿರುವುದನ್ನು ಸಹಿಸಲಾಗದ ಆ ಭಗವಂತ ಶ್ರಾವಣ ಶನಿವಾರದ ನಿಮಿತ್ತ ಗಂಡನ ಜೊತೆ ದೇವಾಲಯ್ಕೆ ಬಮದಿದ್ದ ಆಕೆಯನ್ನು ಪಾಗಲ್ ಯುವಕನ ಅವತಾರದಲ್ಲಿ ಬಂದು ಆಕೆಯನ್ನು ದೇವಾಲಯದ ಅಂಗಳದಲ್ಲಿ ಬಲಿ ಪಡೆದುಕೊಂಡಿದ್ದಾನೆ.

ಈ ಮಹಿಳೆ ಹೆಸರು ಮುನಿರತ್ನ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ನಿವಾಸಿ. ಈಕೆಗೆ ಮದುವೆಯಾಗಿ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದೆ. ಇಂದು ಶ್ರಾವಣ ಮಾಸದ ಮೂರನೆ ಶನಿವಾರವಾದ ಕಾರಣ ಗಂಡನ ಜೊತೆ ಶಿವಗಂಗೆಯ ಮುತ್ತೇಶ್ವರ ದೇವಾಲಯಕ್ಕೆ ಬಂದಿದ್ದರು. ಈ ವೇಳೆ ಈಕೆಗ ಗಂಡ ಲಕ್ಷ್ಮಣ್ ಮುಡಿ ತೀರ್ಥ ಹಾಕಿಸಿಕೊಳ್ಳಲು ದೇವಾಲಯದ ಒಳಗಡೆ ತೆರಳಿದ್ದಾಗ, ಶಶಿಕುಮಾರ್ ಎಂಬ ಸೈಕೊ ಯುವಕ ಬಂದು, ಈಕೆಯ ದೇಹದ ವಿವಿಧ ಭಾಗಗಳಿಗೆ ಎಂಟು ಭಾರಿ ಇರಿದು ಹಲ್ಲೆ ನಡೆಸಿದ್ದಾನೆ. ಕೂಡಲೆ ಮುನಿರತ್ನಾಳನ್ನು ದಾಬಸ್ಪೇಟ್ ಆಸ್ಪತ್ರೆಗೆ ಸಾಗಿಸದರಾರದು ಅಷ್ಟರಲ್ಲಾಗಲೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿ ಸಾವನ್ನಪ್ಪಿದ್ದಾಳೆ.

ಇನ್ನು ಕೊಲೆಗೈದ ಅರೋಪಿ ಶಶಿಕುಮಾರ್, ಶಿವಗಂಗೆ ಪಕ್ಕದ ಗ್ರಾಮದ ಕಂಬಾಳು ಗ್ರಾಮದ ನಿವಾಸಿಯಾಗಿದ್ದು ಆಟೋ ಓಡಿಸಿಕೊಂಡಿದ್ದ. ಕೊಲೆಯಾದ ಮುನಿರತ್ನಳನ್ನು ತ್ಯಾಮಗೊಂಡ್ಲು ಗ್ರಾಮದ ಲಕ್ಷ್ಮಣ್ ಎಂಬುವರಿಗೆ ಕೊಟ್ಟು ವಿವಾಹ ಮಾಡಿದ್ದರು, ಕೆಲ ವರ್ಷಗಳಿಂದ ಈಕೆ ತನ್ನ ಹುಟ್ಟುರಾದ ಶಿವಗಂಗೆಗೆ ಬಂದು ತನ್ನ ತವರು ಮನೆ ಪಕ್ಕದ ಮನೆಯೊಮದನ್ನು, ಲೀಸ್ಗೆ ಪಡೆದು ಜೀವಿಸುತ್ತಿದ್ದಳು. ಈ ವೇಳೆ ಅರೋಪಿ ಶಶಿಕುಮಾರ ಆಟೋದಲ್ಲಿ ಈಕೆ ಒಂದೆರಡು ಭಾರಿ ಸಂಚರಿಸಿದ್ದಳು ಎಂಬುದನ್ನು ಬಿಟ್ಟರೆ ಬೇರ್ಯಾವುದೆ ಪರಿಚಯ ಇಲ್ಲ. ಆದರು ಶಶಿ ಈಕೆಯನ್ನು ಯಾವುದದರ ದ್ವೇಷದ ಹಿನ್ನೇಲೆಯಲ್ಲಿ ಕೊಲೆಗೈನೊ, ಇಲ್ಲವೆ ತನ್ನ ಸೈಕೋ ಮನಸ್ಥಿತಿಯಿಂದ ಈ ರೀತಿ ಚಾಕುವಿನಿಂದ ಇರಿದನೊ ಎಂಬುದು ಪ್ರಶ್ನೇಯಾಗಿ ಉಳಿದಿದೆ.

ಸದ್ಯ ಈ ಸಂಬಂಧ ದಾಬಸ್ ಪೇಟೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುನಿರತ್ನ ಜೀವನದಲ್ಲಿ ಈ ಪಾಗಲ್ ಸೈಕೋ ಶಶಿ, ಯಮನ ರೂಪದಲ್ಲಿ ಬಂದು ಆಕೆಯ ಪ್ರಾಣ ಪಕ್ಷಿಯನ್ನು ಹಾರಿಸಿಕೊಂಡು ಹೋಗಿದ್ದು, ಕೊಲೆಗೈದ ಪಾಪಕ್ಕೆ ಅರೋಪಿ ಶಶಿ ಜೈಲು ಪಾಲಾಗುವಂತಾಗಿದ್ದರೆ, ಇತ್ತ ಏನು ಅರಿಯದ ಈಕೆಯ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ