ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣ (PSI Recruitment Scam) ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಈ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ್ (RD Patil) ವಿಡಿಯೋ ಮಾಡಿ ಪ್ರಕರಣದ ತನಿಖಾಧಿಕಾರಿಗಳ ಮೇಲೆಯೇ ಆರೋಪ ಮಾಡಿದ್ದ. ‘ಪಿಎಸ್ಐ ಹಗರಣ ಪ್ರಕರಣವನ್ನು ಮುಚ್ಚಿ ಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು (CID Officers) ನನ್ನ ಬಳಿ ಮೂರು ಕೋಟಿ ರೂಪಾಯಿ ಕೇಳಿದ್ದರು. ಆದರೆ ನಾನು ಅವರಿಗೆ 76 ಲಕ್ಷ ರೂಪಾಯಿ ಕೊಟ್ಟಿದ್ದೇನೆ’ ಎಂದು ವಿಡಿಯೋ ಮಾಡಿ ಗಂಭೀರ ಆರೋಪ ಮಾಡಿದ್ದ. ಇದೀಗ ಆ ಆರೋಪಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿಲ್ಲ!
ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಹಣ ನೀಡಿರುವ ಬಗ್ಗೆ ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಈ ಆರೋಪದ ಸಾಕ್ಷ್ಯ ಕಲೆ ಹಾಕಲು ಆರ್ ಡಿ ಪಾಟೀಲ್‌ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನೆಲ್ಲಾ ಜಾಲಾಡಿದ್ದು, ಈ ವೇಳೆ ಆತನ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿಲ್ಲ ಎಂದು ಬ್ಯಾಂಕ್ ಸ್ಟೇಟ್ಮೆಂಟ್‌ನಲ್ಲಿ ತಿಳಿದು ಬಂದಿದೆ. ತನ್ನ ಹಾಗೂ ಅಳಿಯನ ಅಕೌಂಟ್‌ನಿಂದ 76 ಲಕ್ಷ ಡ್ರಾ ಮಾಡಿ ಕೊಟ್ಟಿದ್ದಾಗಿ ಆರ್ ಡಿ ಪಾಟೀಲ್ ವಿಡಿಯೋ ಮೂಲಕ ಗಂಭೀರ ಆರೋಪ ಮಾಡಿದ್ದ. ಇದೀಗ ಆತನ ಆರೋಪಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಅಸಲಿಗೆ ಆರ್ ಡಿ ಪಾಟೀಲ್ ಅಕೌಂಟ್‌ನಿಂದ ಹಣ ಡ್ರಾ ಆಗಿಲ್ಲ ಎಂದು ರಿಪೋರ್ಟ್ ತಿಳಿಸಿದೆ.
ಇದನ್ನೂ ಓದಿ:Police Medal: ಅತ್ಯುತ್ತಮ ಸೇವೆ ನೀಡಿದ ಕರ್ನಾಟಕದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ
ಅಳಿಯನ ಬ್ಯಾಂಕ್ ಖಾತೆಯಿಂದಲೂ ಹಣ ಡ್ರಾ ಆಗಿಲ್ಲ!
ತನ್ನ ಹಾಗೂ ಅಳಿಯನ ಅಕೌಂಟ್‌ನಿಂದ 76 ಲಕ್ಷ ಡ್ರಾ ಮಾಡಿ ಕೊಟ್ಟಿದ್ದಾಗಿ ಆರ್ ಡಿ ಪಾಟೀಲ್ ವಿಡಿಯೋ ಮೂಲಕ ಆರೋಪ ಮಾಡಿದ್ದ. ಅದರನ್ವಯ ಆರ್‌ಡಿ ಪಾಟೀಲ್ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಹಣ ಡ್ರಾ ಆಗಿರುವ ಬಗ್ಗೆ ಯಾವುದೇ ರಿಪೋರ್ಟ್ ಇರಲಿಲ್ಲ. ಆ ಬಳಿಕ ಆತನ ಅಳಿಯ ಶ್ರೀಕಾಂತ್ ಪಾಟೀಲ್‌ನ ಬ್ಯಾಂಕ್ ಖಾತೆಗಳನ್ನೂ ಕೂಡ ಸಿಐಡಿ ಅಧಿಕಾರಿಗಳು ಪರಿಶೀಲಿಸಿದ್ದು, ಈ ವೇಳೆ ಆತನ ಬ್ಯಾಂಕ್ ಅಕೌಂಟ್‌ನಿಂದಲೂ ಹಣ ಡ್ರಾ ಆಗಿಲ್ಲೆಎಂದು ತಿಳಿದು ಬಂದಿದೆ. ಜುಲೈ 1, 2022 ರಿಂದ ಡಿಸೆಂಬರ್ 31, 2022 ರವರೆಗೆ ಆರ್‌ಡಿ ಪಾಟೀಲ್ ಮತ್ತು ಶ್ರೀಕಾಂತ್ ಪಾಟೀಲ್‌ಗೆ ಸೇರಿದ ಒಟ್ಟು ನಾಲ್ಕು ಬ್ಯಾಂಕ್ ಅಕೌಂಟ್‌ಗಳಿಂದ ಯಾವುದೇ ಹಣ ಡ್ರಾ ಆಗಿಲ್ಲ ಅನ್ನೋದು ತಿಳಿದು ಬಂದಿದೆ.
ಪಿಎಸ್‌ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್ ವಿಡಿಯೋ ಮೂಲಕ ಪ್ರಕರಣದ ತನಿಖಾಧಿಕಾರಿ ಶಂಕರ್ ಗೌಡ ಪಾಟೀಲ್ ಮೇಲೆ ಗಂಭೀರ ಆರೋಪ ಮಾಡಿದ್ದ. ಪಿಎಸ್ಐ ಹಗರಣ ಪ್ರಕರಣವನ್ನು ಮುಚ್ಚಿ ಹಾಕಲು ಸಿಐಡಿ ಪೊಲೀಸ್ ಅಧಿಕಾರಿಗಳು ನನ್ನ ಬಳಿ ಮೂರು ಕೋಟಿ ರೂಪಾಯಿ ಕೇಳಿದ್ದರು. ಆದರೆ ನಾನು ಅವರಿಗೆ ನನ್ನ ಮತ್ತು ಅಳಿಯನ ಬ್ಯಾಂಕ್ ಖಾತೆಯಿಂದ 76 ಲಕ್ಷ ರೂಪಾಯಿ ಕೊಟ್ಟಿದ್ದೇನೆ ಎಂದು ಆರೋಪ ಮಾಡಿದ್ದ. ಹೀಗಾಗಿ ಹಣ ಡ್ರಾ ಮಾಡಿರುವ ಕುರಿತು ಆರೋಪಿ ಆರ್‌ಡಿ ಪಾಟೀಲ್ ಬಳಿ ಬ್ಯಾಂಕ್ ಟ್ರಾನ್ಸಾಕ್ಷನ್‌ನ ಮಾಹಿತಿ ಕೇಳಿದ್ದ ಸಿಐಡಿ ಅಧಿಕಾರಿಗಳು ಬ್ಯಾಂಕ್ ಸ್ಟೇಟ್‌ಮೆಂಟ್ ಮಾಹಿತಿ ಪಡೆದಿದ್ದರು. ಇದೀಗ ಆರ್‌ಡಿ ಪಾಟೀಲ್ ಮತ್ತು ಅಳಿಯನ ಬ್ಯಾಂಕ್ ಖಾತೆಯಿಂದ ಯಾವುದೇ ರೀತಿಯಲ್ಲಿ ಹಣ ಡ್ರಾ ಆಗಿಲ್ಲ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ