ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣದ ತನಿಖೆ ದಿನೇ ದಿನೇ ಚುರುಕುಗೊಳ್ತಿದೆ. ಒಂದ್ ಕಡೆ ಬಂಧಿತ ಆರೋಪಿಗಳು (Accused) ನೀಡಿದ ಮಹತ್ವದ ಹೇಳಿಕೆ ಮೇಲೆ ಸಿಐಡಿ ಅಧಿಕಾರಿಗಳು (CID Officer) ಮಾಹಿತಿ ಹಾಕಿ ಮತ್ತಷ್ಟು ಮಂದಿ ಬಂಧನಕ್ಕೆ ಬಲೇ ಬೀಸಿದ್ರೆ, ಮತ್ತೊಂದೆಡೆ ನೇಮಕಾತಿ ವಿಭಾಗದ ಸಿಬ್ಬಂದಿಯಿಂದಲೇ ಹಗರಣ ನಡೆದಿರುವುದು ಬೆಳಕಿಗೆ ಬಂದಿದ್ದು, ನೇಮಕಾತಿ ವಿಭಾಗದಲ್ಲಿ ಕೆಲಸ ನಿರ್ವಹಸುತ್ತಿದ್ದ 12 ಮಂದಿಯನ್ನ ಬೇರೆಡೆ ವರ್ಗಾವಣೆ (Transfer) ಮಾಡಲಾಗಿದ್ದು, ನೇಮಕಾತಿ ವಿಭಾಗವನ್ನ ಕ್ಲೀನ್ ಮಾಡಲು ಇಲಾಖೆ (Department) ಮುಂದಾಗಿದೆ.
CID ಅಧಿಕಾರಿಗಳಿಂದ ತನಿಖೆ ಚುರುಕು
ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮ ಕುರಿತಂತೆ ತನಿಖೆ ನಡೆಸ್ತಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಹೀಗಾಗ್ಲೇ ಬಂಧಿತ ಆರೋಪಿಗಳಿಂದ ಮಹಜರ್ ಪ್ರಕ್ರಿಯೆ ಮುಗಿಸಿರುವ ಸಿಐಡಿ ಇನ್ವೆಸ್ಟಿಗೇಷನ್ ಟೀಂ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ ನಲ್ಲಿ ಬಂಧಿತರಾಗಿರುವ 16 ಆರೋಪಿಗಳ ಮೊಬೈಲ್ ಗಳನ್ನ ವಶಕ್ಕೆ ಪಡೆದು ಸೈಬರ್ ಲ್ಯಾಬ್ ಟೆಸ್ಟ್ ಗೆ ರವಾನೆ ಮಾಡಿದ್ದಾರೆ.
ಆರೋಪಿಗಳ ಮೊಬೈಲ್ ವಶಕ್ಕೆ
ಅವ್ರ ಪೈಕಿ ಯಾರ್ಯಾರು ಯಾವ ಮೊಬೈಲ್ ಗಳನ್ನ ಯೂಸ್ ಮಾಡ್ತಿದ್ರು. ಯಾರಿಂದ ಮೊಬೈಲ್ ಫೋನ್ ಗಳನ್ನ ವಶಪಡಿಸಿಕೊಂಡಿದ್ದಾರೆ ಅನ್ನೋದಾದ್ರೆ. ರಘುವೀರ್- ಒನ್ ಪ್ಲಸ್ ಚೇತನ್ - ಎಂ ಐ ನೋಟ್ ಪ್ರೋ ವೆಂಕಟೇಶ ಗೌಡ- ರೆಡ್ ಮಿ ಕೆ 20 ಪ್ರೊ ಮಮತೇಶ್ ಗೌಡ- ವಿವೋ ವಿ ಎಸ್ ಐ ಮತ್ತು ನೋಕಿಯಾ. ಮಧು - ಸ್ಯಾಮ್ ಸಂಗ್ಪ್ರವೀಣ್ ಕುಮಾರ್- ಸ್ಯಾಮ್ಮಸಂಗ್ A70 ಸೂರ್ಯ ನಾರಾಯಣ್: ಒಪ್ಪೊ ಎಫ್ 15 ನಾಗರಾಜ್, : ಒಪ್ಪೊ ಎ 920, ರಘುವೀರ್- ಒನ್ ಪ್ಲಸ್, ಚೇತನ್ - ಎಂ ಐ ನೋಟ್ ಪ್ರೋ, ವೆಂಕಟೇಶ ಗೌಡ- ರೆಡ್ ಮಿ ಕೆ 20 ಪ್ರೊ, ಮಮತೇಶ್ ಗೌಡ- ವಿವೋ ವಿ ಎಸ್ ಐ ಮತ್ತು ನೋಕಿಯಾ, ಮಧು - ಸ್ಯಾಮ್ ಸಂಗ್, ಪ್ರವೀಣ್ ಕುಮಾರ್- ಸ್ಯಾಮ್ಮಸಂಗ್ A70, ಸೂರ್ಯ ನಾರಾಯಣ್-ಒಪ್ಪೊ ಎಫ್ 15, ನಾಗರಾಜ್, : ಒಪ್ಪೊ ಎ 920ಸೇರಿದಂತೆ ಇತರೆ ಆರೋಪಿಗಳ ಮೊಬೈಲ್ ಗಳನ್ನ ಸಹ ವಶಕ್ಕೆ ಪಡೆದಿರೊ ಸಿಐಡಿ, ಅರೋಪಿಗಳ ಮೊಬೈಲ್ ನ ಎಲ್ಲಾ ದಾಖಲೆಗಳನ್ನು ರಿಟ್ರೀವ್ ಮಾಡಲು ಮುಂದಾಗಿದೆ.
Karnataka Politics: ಬಿಜೆಪಿ ಮುಖ್ಯಮಂತ್ರಿ ಸ್ಥಾನ 'ಪೇಮೆಂಟ್ ಸೀಟಾ?'- ಸಿದ್ದರಾಮಯ್ಯ ಪ್ರಶ್ನೆ
ಅಕ್ರಮದಲ್ಲಿ ಹೆಚ್ಚು ಸಿಬ್ಬಂದಿಗಳೇ ಭಾಗಿ
ಅದ್ರಲ್ಲಿ ವಾಟ್ಸಪ್ ಹಾಗೂ ಬೇರೆ ಬೇರೆ ಆಪ್ ಗಳನ್ನು ಬಳಸಿ ಸಂಪರ್ಕ ಮಾಡಿರೋ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದು, ಮೊಬೈಲ್ ಗಳಲ್ಲಿ ಯಾವೆಲ್ಲಾ ಆಪ್ ಗಳು ಇದ್ದವು. ಯಾವೆಲ್ಲಾ ದಾಖಲಾತಿಗಳು ಡಿಲೀಟ್ ಮಾಡಿದ್ದಾರೆ ಅನ್ನೊದ್ರ ಜೊತೆಗೆ ಕಾಲ್ ರೆಕಾರ್ಡ್ ಹಾಗೂ ಡಿಜಿಟಲ್ ಮಾಹಿತಿಗಳನ್ನು ಕಲೆ ಹಾಕಲಾಗ್ತಿದೆ. ಮತ್ತೊಂದೆಡೆ ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳ ಪೈಕಿ ನೇಮಕಾತಿ ವಿಭಾಗದಲ್ಲಿಸೇವೆ ಸಲ್ಲಿಸ್ತಿರೊ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಹೆಚ್ಚು ಶಾಮೀಲಾಗಿರುವ ಹಿನ್ನೆಲೆ ಇಡೀ ನೇಮಕಾತಿ ವಿಭಾಗವನ್ನ ಕ್ಲೀನ್ ಮಾಡಲು ಗೃಹ ಇಲಾಖೆ ಮುಂದಾಗಿದೆ.
ಹೊಸಬರ ನೇಮಕದ ಬಳಿಕ ವರ್ಗಾವಣೆ
ಇಲಾಖೆ ಹೆಸ್ರಿಗೆ ಕಪ್ಪು ಚುಕ್ಕೆ ತಂದವ್ರು ಯಾರು ಇರ್ಬಾರ್ದು ಅನ್ನೋ ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಮೊದಲ ಬಾರಿಗೆ ನೇಮಕಾತಿ ವಿಭಾಗದಲ್ಲಿ ಸೇವರ ಸಲ್ಲಿಸ್ತಿದ್ದ 17 ಜನರ ಪೈಕಿ 12 ಸಿಬ್ಬಂದಿಯನ್ನ ನೇಮಕಾತಿ ವಿಭಾಗದ ಎಡಿಜಿಪಿ ಹಿತೇಂದ್ರ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಉಳಿದಂತೆ ಇರುವ ಐವರನ್ನು ಹೊಸಬರು ನೇಮಕವಾದ ಬಳಿಕ ವರ್ಗಾವಣೆ ಮಾಡುವ ಸಾಧ್ಯತೆ ಇದೆ.
ಅಭ್ಯರ್ಥಿಗಳ ಡೀಲ್ ಕುದುರಿಸಿ ಕರೆ
ನೇಮಕಾತಿ ವಿಭಾಗದ ಕೆಳ ಹಂತದ ಸಿಬ್ಬಂದಿಯಿಂದಲೇ ಅಕ್ರಮ ನಡೆದಿದ್ದು, ಹೀಗಾಗಿ ಅಧಿಕಾರಿಗಳ ಪಿಎಗಳು, ಗುಮಾಸ್ತರು, ಕಸ ಗುಡಿಸುವ ಸಿಬ್ಬಂದಿಯನ್ನು ಬಿಡದೇ ವರ್ಗಾವಣೆ ಮಾಡಲು ಮುಂದಾಗಿದ್ದು, ಅವ್ರೇ ಅಭ್ಯರ್ಥಿಗಳ ಡೀಲ್ ಕುದುರಿಸಿ ಕರೆ ತರ್ತಿದ್ರು ಅನ್ನೊದು ಸಿಐಡಿ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: DK Shivakumar: "ಯತ್ನಾಳ್ ಏನು ಮೆಂಟಲ್ಲಾ? ಅವರನ್ನು ಮೊದಲು ವಿಚಾರಣೆ ಮಾಡಿ" - ಸರ್ಕಾರಕ್ಕೆ ಡಿಕೆಶಿ ಆಗ್ರಹ
ಹೀಗಾಗಿ ನೇಮಕಾತಿ ವಿಭಾಗದ ಪ್ರತಿಯೊಬ್ಬ ಸಿಬ್ಬಂದಿಯ ಮಾಹಿತಿ ಪಡೆದಿರುವ ಸಿಐಡಿ ಟೀಂ ಹಾಲ್ ಟಿಕೆಟ್ ವಿತರಣೆ, ಸೀಟ್ ಸೆಟ್ಟಿಂಗ್, ಓಎಂಆರ್ ಶೀಟ್ ಪಡೆದವ್ರು ಯಾರು ಎಂಬೆಲ್ಲಾ ಮಾಹಿತಿ ಕಲೆ ಹಾಕ್ತಿದ್ದಾರೆ. ಯಾರೇ ಬೆಂಗಳೂರು ಬಿಟ್ಟು ಹೋರ ಬೇಕಾದ್ರೂ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿ ಹೋಗಬೇಕೆಂದು ಸೂಚಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ