PSI Recruitment Scam: ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾಧ ಅಲ್ವಾ? ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ

ಪಿಎಸ್ಐ ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾ ಮಾಡಬೇಕು ನಂತರ ಮಾತನಾಡಬೇಕು. ಸದನಕ್ಕೆ ಗೃಹ ಸಚಿವರು, ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ

  • Share this:
ಗೃಹ ಸಚಿವ ಆರಗ ಜ್ಞಾನೆಂದ್ರ (Home Minister Aaraga Jnanenda) ಸದನದಲ್ಲಿ ಪಿಎಸ್ಐ  ನೇಮಕಾತಿ ಅಕ್ರಮ (PSI Recruitment Scam) ನಡೆದಿಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದು ಸುಳ್ಳು ಉತ್ತರ ಕೊಟ್ಟಿದ್ದಾರೆ. ಸುಳ್ಳು ಹೇಳಿದ ಮೇಲೆ ಸಚಿವರಾಗಿ ಹೇಗೆ ಮುಂದುವರಿಯುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition Leader Siddaramaiah) ಪ್ರಶ್ನೆ ಮಾಡಿದ್ದಾರೆ. ಯಾವ ನೈತಿಕತೆ (Moral) ಇದೆ ಅವರಿಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು? ಬಿಜೆಪಿ (BJP) ಕೂಡ ಅವರನ್ನು ಸಚಿವರನ್ನಾಗಿ ‌ಮುಂದುವರಿಸಬಾರದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.  ನಮ್ಮ ಕಾಲದಲ್ಲಿ ಅಕ್ರಮ ನಡೆದಿದ್ರೆ ಅವಾಗ ಯಾಕೆ ಸುಮ್ಮನಿದ್ರು? ಕಡ್ಲೆ ಪುರಿ ತಿಂತಾ ಇದ್ರಾ? ದಾಖಲೆ ಇದ್ರೆ ಬಿಡುಗಡೆ ಮಾಡಿ ಮಾತನಾಡಲಿ ಎಂದು ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು.

ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾದ ಅಲ್ವಾ? ಕಾನೂನು ಒದಿಕೊಂಡಿದ್ದಾರೆನ್ರಿ ಅವರು ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್ ಕಾಲದಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ದಾಖಲೆ ಬಿಡುಗಡೆ ಮಾಡ್ತೇನೆ ಎಂಬ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದರು. ಯಾಕೆ, ವಿರೋಧ ಪಕ್ಷದಲ್ಲಿದ್ದಾಗ ಎನ್ ಮಾಡ್ತಿದ್ದೆ ನೀನು? ಕಡ್ಲೆಪುರಿ ತಿಂತಾ ಇದ್ದಿಯಾ? ದಾಖಲೆ‌ ಇದ್ದರೆ ಹೇಳಬೀಕಿತ್ತಲ್ಲವಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  BBMP: ವಾಹನ ಸವಾರರಿಗೆ ಬಿಬಿಎಂಪಿಯಿಂದ ಶಾಕಿಂಗ್ ನ್ಯೂಸ್: ಮಿಸ್ ಮಾಡದೇ ಈ ನ್ಯೂಸ್ ಓದಿ

ಅಕ್ರಮ ನಡೆಸಿದ್ರೆ ತನಿಖೆ ಮಾಡಿಸಿ

ನಮ್ಮ ಕಾಲದ ನೇಮಕಾತಿ ಬಗ್ಗೆ ತನಿಖೆ ಮಾಡಿಸಿ, ಯಾಕೆ ಸುಮ್ಮನಿದ್ರಿ? ಆವಾಗ ಯಾಕೆ ಮಾತಾಡಿಲ್ಲ? ನನ್ನನ್ನು ಸಿಎಂ ಸ್ಥಾನದಲ್ಲಿ ‌ಉಳಿಸೋಕೆ ಹಾಗಾದ್ರೆ ಮಾತಾಡಿರಲಿಲ್ವಾ ಎಂದು ವ್ಯಂಗ್ಯ ಮಾಡಿದರು.

ಪಿಎಸ್ಐ ಪ್ರಕರಣದಲ್ಲಿ ನೈತಿಕತೆ ಇದ್ದರೆ ಗೃಹ ಸಚಿವರನ್ನು ವಜಾ ಮಾಡಬೇಕು ನಂತರ ಮಾತನಾಡಬೇಕು. ಸದನಕ್ಕೆ ಗೃಹ ಸಚಿವರು, ಸಿಎಂ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮೋತ್ಸವಕ್ಕೆ ಈಶ್ವರಪ್ಪ ಪ್ರತಿಕ್ರಿಯೆ

ತುಂಗಾ ನದಿ ಭರ್ತಿಯಾದ ಹಿನ್ನೆಲೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಂಬ ಸಮೇತರಾಗಿ ಬಾಗಿನ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ, ಸಿದ್ದರಾಮೋತ್ಸವ ಆಯೋಜನೆಯ ಕುರಿತು ಪ್ರತಿಕ್ರಿಯಿಸಿದರು.  ಇವರ ಕಾಂಗ್ರೆಸ್ ಮನೆಯೇ ಛಿದ್ರವಾಗಿದೆ. ಸಿದ್ದರಾಮೋತ್ಸವಕ್ಕೂ, ಕಾಂಗ್ರೆಸ್ ಗೂ ಸಂಬಂಧ ಇಲ್ಲ ಅಂತ ಸತೀಶ್ ಜಾರಕಿಹೊಳಿ ಹೇಳ್ತಾರೆ. ಇತ್ತ ಸಿದ್ದರಾಮಯ್ಯ ಜನರು ಮಾಡ್ತಾ ಇದ್ದಾರೆ ಅನ್ನುತ್ತಾ ಹಿಂದಿನಿಂದ ತಾವೇ ಮಾಡಿಸ್ತಿದ್ದಾರೆ ಎಂದು ಹೇಳಿದರು.

ಇಂತಹ ದುಸ್ಥಿತಿ ಯಾವ ಪಕ್ಷಕ್ಕೂ ಬೇಡ

ತಾನು ಸಿಎಂ ಆಕಾಂಕ್ಷಿಯಲ್ಲ ಅಂತಾ ಒಂದೆಡೆ ಹೇಳುವ ಸಿದ್ದರಾಮಯ್ಯ, ತಮ್ಮ ಅಭಿಮಾನಿಗಳನ್ನು ಚಿವುಟಿ ಹೇಳಿಕೆ ಕೊಡಿಸ್ತಾರೆ. ಮುಂದಿನ ಮುಖ್ಯಮಂತ್ರಿ ಡಿಕೆಶಿ, ಸಿದ್ದರಾಮಯ್ಯ ಅಂತ ಅವರವರೇ ಘೋಷಣೆ ಕೂಗುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಬಂದಿರುವ ಇಂತಹ ದುಸ್ಥಿತಿ ಬೇರೆ ಯಾವ ಪಕ್ಷಕ್ಕೂ ಬಂದಿಲ್ಲ ಎಂದು ವ್ಯಂಗ್ಯ ಮಾಡಿದರು.

ಪಿಎಸ್ಎ ಪರೀಕ್ಷೆ ಹಗರಣ ವಿಚಾರಕ್ಕೆ ಪ್ರತಿಕ್ರಿಯಸಿದ ಈಶ್ವರಪ್ಪ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅದೆಷ್ಟೋ ಪ್ರಶ್ನೆ ಪತ್ರಿಕೆ ಬಯಲಾಯ್ತು. ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿದ್ರಾ?. ಒಂದಾದ್ರೂ ಪ್ರಕರಣ ತನಿಖೆ ಮಾಡಿ ಅಧಿಕಾರಿಗಳ ಮೇಲೆ ಕ್ರಮಕೈಗೊಂಡ್ರಾ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:  Gauri Lankesh ಹತ್ಯೆ ಪ್ರಕರಣದ ಕೋರ್ಟ್ ವಿಚಾರಣೆಯಲ್ಲಿ ಮಹತ್ವದ ವಿಷಯ ಬಯಲು!

ಸುಮ್ಮನೇ ಹಾರಾಡ್ತಿದ್ದಾರೆ

ನಮ್ಮ ಸರ್ಕಾರದ ಅವಧಿಯಲ್ಲಿ ಐಪಿಎಸ್ ಅಧಿಕಾರಿಗಳ ಬಂಧನವಾಗಿದೆ. ಪೊಲೀಸ್ ಅಧಿಕಾರಿಗಳು ತಮ್ಮ ಕೈ ಕೆಳಗಿರುವವರ ಮತ್ತು ಇತರೇ ಅಧಿಕಾರಿಗಳಿಗೆ ಮಾದರಿಯಾಗಿರಬೇಕು.ನಮ್ಮ ಸರ್ಕಾರ ಪೊಲೀಸ್ ಅಧಿಕಾರಿಗಳಿಗೂ ಬಂಧಿಸಿದೆ. ಆದರೆ, ಕಾಂಗ್ರೆಸ್ ನವರು ತಮ್ಮ ಅಸ್ತಿತ್ವ ತೋರಿಸಲು ಸುಮ್ನೆ ಹಾರಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Published by:Mahmadrafik K
First published: