PSI Recruitment Scam: ಮಂಜುನಾಥ್ ಮೇಳಕುಂದಿ ಶರಣಾಗಿದ್ದರ ಹಿಂದಿದೆ ರೋಚಕ ಕಥೆ; ಮತ್ತೋರ್ವ ಕಿಂಗ್ ಪಿನ್ ಕಾಶಿನಾಥ್ ಸರೆಂಡರ್

ಪೊಲೀಸರು ಮಂಜುನಾಥ್ ನಿವಾಸದ ಬಳಿಯಲ್ಲಿಯೇ ಆತನಿಗಾಗಿ ಕಾಯುತ್ತಿದ್ದರು. ಕುಟುಂಬಸ್ಥರು ಹೇಳಿದ ಬಳಿಕ ತಮ್ಮ ವಕೀಲರ ಸಲಹೆ ಪಡೆದ ಮಂಜುನಾಥ್ ನೇರವಾಗಿ ಕಚೇರಿಗೆ ಬಂದು ಶರಣಾಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾನುವಾರ ಕಲಬುರಗಿಯ (Kalaburagi) ಸಿಐಡಿ ಕಚೇರಿಗೆ (CID Office) ಬಂದು ಪಿಎಸ್ಐ ಅಕ್ರಮ ನೇಮಕಾತಿ (PSI Recruitment Scam) ಪ್ರಕರಣದ ಕಿಂಗ್ ಪಿನ್, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಿ (Manjunath Melakundi) ಶರಣಾಗದ್ದನು. ಇಂದು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ, ಪರೀಕ್ಷಾ ಕೇಂದ್ರದ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿದ್ದ ಕಾಶಿನಾಥ್ ಇಂದು ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಮಂಜುನಾಥ್ ಮೇಳಕುಂದಿ ಸಿಐಡಿಗೆ ಸೆರೆಂಡರ್ ಆಗಿದ್ದೆ ರೋಚಕ ಕಥೆ.  ಮಂಜುನಾಥ್ ಗಾಗಿ ಸಿಐಡಿ ಅಧಿಕಾರಗಳು ಹಲವಡೆ ಹುಡುಕಾಟ ನಡೆಸಿದ್ದರು. ಮಂಜುನಾಥ್ ಸಿಗದ ಕಾರಣ ಆತನ ಮನೆಯವರ ಸಂಪರ್ಕ ಮಾಡಿದ್ದ ಸಿಐಡಿ ಅಧಿಕಾರಿಗಳು ಸೂಪರ್ ಪ್ಲಾನ್ ಮಾಡಿದ್ದರು. ಈ ಸೂಪರ್ ಪ್ಲಾನ್ ಬೆನ್ನಲ್ಲೇ ನಿಗೂಢ ಸ್ಥಳದಲ್ಲಿದ್ದ ಮಂಜುನಾಥ್ ಸ್ವತಃ ತಾನೇ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಸಿಐಡಿ ಅಧಿಕಾರಿಗಳ ಸೂಪರ್ ಪ್ಲಾನ್ ಏನು?

ಮೇ 8ರಂದು ಮಂಜುನಾಥ್ ಚಿಕ್ಕಪ್ಪನ ಮಗಳ ಮದುವೆ ಕಲಬುರಗಿಯ ಕೋಟನೂರ್ ಬಳಿಯಿರುವ ಕಲ್ಯಾಣ ಮಂಟಪದಲ್ಲಿ‌ ಫಿಕ್ಸ್ ಆಗಿರುವ ಮಾಹಿತಿ ಸಿಐಡಿ ಪೊಲೀಸರಿಗೆ ಲಭ್ಯವಾಗಿತ್ತು. ಮಂಜುನಾಥ್ ನನ್ನ ಕರೆಯಸದೆ ಇದ್ರೆ ಮದುವೆ ದಿನ ನಿಮ್ಮನ್ನು ಕರೆದುಕೊಂಡು ಹೋಗಬೇಕಾಗುತ್ತೆ ಅಂತಾ ಎಚ್ಚರಿಸಿದ್ದರು.

ಸಿಐಡಿ ಅಧಿಕಾರಿಗಳ ಎಚ್ಚರಿಕೆ ಬೆನ್ನಲ್ಲೇ ಮಗನಿಗೆ ಶರಣಾಗೋದಕ್ಕೆ ಹೇಳಲು ಕುಟುಂಬಸ್ಥರು ಹೇಳಿದ್ದರು ಎನ್ನಲಾಗಿದೆ. ಮದುವೆ ಸಂಧರ್ಭದಲ್ಲಿ ಪೊಲೀಸರು ಬಂದರೆ ಸಂಬಂಧಿಕರ‌ ಮುಂದೆ ಮಾನ ಮರ್ಯಾದೆ ಹೋಗುತ್ತದೆ. ಹಾಗಾಗಿ ಮದುವೆಗೂ ಮೊದಲೇ ಬಂದು ಶರಣಾಗುವಂತೆ ಕುಟುಂಬಸ್ಥರು ಸೂಚಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  PSI Recruitment Scam: ಆಟೋದಲ್ಲಿ ಬಂದು ಶರಣಾದ ಕಿಂಗ್ ಪಿನ್; ಕೆಮ್ಮಿದ್ರೆ ಉತ್ತರ ರಿಸೀವ್ ಎಂದರ್ಥ

ಪೊಲೀಸರು ಮಂಜುನಾಥ್ ನಿವಾಸದ ಬಳಿಯಲ್ಲಿಯೇ ಆತನಿಗಾಗಿ ಕಾಯುತ್ತಿದ್ದರು. ಕುಟುಂಬಸ್ಥರು ಹೇಳಿದ ಬಳಿಕ ತಮ್ಮ ವಕೀಲರ ಸಲಹೆ ಪಡೆದ ಮಂಜುನಾಥ್ ನೇರವಾಗಿ ಕಚೇರಿಗೆ ಬಂದು ಶರಣಾಗಿದ್ದಾನೆ.

ಮಂಜುನಾಥ್ ತಂದೆಯ ವಿಚಾರಣೆ

ಮಂಜುನಾಥ್ ತಂದೆ ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಕಳೆದ ಎರಡ್ಮೂರು ದಿನ ನಿವೃತ್ತ ಎಎಸ್ಐ ತಂದೆಯನ್ನ ಕರೆಯಸಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ನನ್ನ ಮಗ ಅಕ್ರಮ ಎಸಗಿರೋದರ ಬಗ್ಗೆ ನನಗೆ ಮಾಹಿತಿ ಇಲ್ಲ. ನನ್ನ ಮಗ ತಪ್ಪು ಮಾಡಿದ್ರೆ ಶಿಕ್ಷ ಅನುಭವಸಲಿ ಎಂದು ಮಂಜುನಾಥ್ ತಂದೆ ಹೇಳಿಕೆ ನೀಡಿದ್ದರು. ಕೊನೆಗೆ ಕರ್ನಾಟಕ ಪೊಲೀಸ್ ಬಗ್ಗೆ ಒಳ್ಳೆ ಮಾತು ಹೇಳಿ ಸಿಐಡಿ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆದಿದ್ದರು. ಸೆಲ್ಯೂಟ್ ಹೊಡೆದು ಜೈ ಕರ್ನಾಟಕ ಪೊಲೀಸ್ ಅಂತಾ ಹೇಳಿದ್ರು.

ಕಿಂಗ್ ಪಿನ್ ಹೈಟೆಕ್ ಜೀವನ ಶೈಲಿ ಬಯಲು

ಅಕ್ರಮ ಹಣದಿಂದಲೇ ಕಲಬುರಗಿಯ ಪ್ರತಿಷ್ಟಿತ ಜೈ ನಗರ ಇಂಜಿನಿಯರ್ ಕಾಲೋನಿಯಲ್ಲಿ ಹೈಟೆಕ್‌ ಮನೆಯನ್ನು ಮಂಜುನಾಥ್ ಮೇಳಕುಂದ ನಿರ್ಮಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಹೈಟೆಕ್ ನಿರ್ಮಾಣ ಆಗುತ್ತಿದೆ. ಸಿಐಡಿ ಪ್ರಕರಣ ಆಗದಿದ್ರೆ ಚೀನಾಗೆ ಹೋಗಿ ಇಂಟಿರಿಯರ್ ಹೈಟೆಕ್ ಫರ್ನಿಚರ್ ತರುವದಕ್ಕೆ ಮಂಜುನಾತ್ ಪ್ಲ್ಯಾನ್ ‌ಮಾಡಿದ್ದ ಎನ್ನಲಾಗಿದೆ.

ಮುಖ್ಯೋಪಾಧ್ಯಾಯ ಕಾಶಿನಾಥ್‌ ಶರಣಾಗತಿ

ಕಳೆದ 22 ದಿನಗಳಿಂದ ನಾಪತ್ತೆಯಾಗಿದ್ದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಇಂದು ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಇದನ್ನೂ ಓದಿ:  PSI Recruitment Scam: ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ: ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಹೀಗೆ?

ಸತ್ತವರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ

ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಗಳು ಎನ್ನಲಾದ ಸೋದರರಾದ ರುದ್ರಗೌಡ ಮತ್ತು ಮಹಾಂತೇಶ ಗೌಡ  ಇಬ್ಬರು ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರು  ಈ ಸಿಮ್ ಕಾರ್ಡ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ನೀಡುತ್ತಿದ್ದಾರೆ. ಇದೇ ನಂಬರ್ ನಿಂದಲೇ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದು ಎಂಬ ಮಾಹಿತಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Published by:Mahmadrafik K
First published: