ಕಲಬುರಗಿ (ಮೇ 9): ಪಿಎಸ್ಐ ನೇಮಕಾತಿ ಪ್ರಕರಣಕ್ಕೆ (PSI Recruitment Scam) ಸಂಬಂಧಿಸಿದಂತೆ ತನಿಖೆ ನಡೆಸುತ್ತಿರೋ ಸಿಬಿಐ ತಂಡಕ್ಕೆ ಶಾಕ್ ಆಗಿದೆ. ಅಕ್ರಮವಾಗಿ ಪರೀಕ್ಷೆಯಲ್ಲಿ (Exam) ಪಾಸ್ ಆಗಿದ್ದ ಅಭ್ಯರ್ಥಿಗಳು ಫೋಟೋಶೂಟ್ ಮಾಡಿಸಿಕೊಂಡಿರೋದು ತನಿಖೆಯಿಂದ (Investigation) ಹೊರಬಂದಿದೆ. ಪರೀಕ್ಷೆಯಲ್ಲಿ ಯಶಸ್ಸು ಕಂಡ ನಂತರ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿಬ್ಬಂದಿಗಳು ಫೋಟೋಶೂಟ್ (Photoshoot) ಮಾಡಿಸಿದ್ದರು. ಈಗ ಈ ಫೋಟೋಶೂಟ್ ಅಕ್ರಮ ಭೇದಿಸಲು ಅಧಿಕಾರಿಗಳಿಗೆ ಸಹಾಯವಾಗಿದೆ. ಪಿಎಸ್ಐ ಪರೀಕ್ಷೆ ಬಳಿಕ ಎಲ್ಲ ಸಿಬ್ಬಂದಿಗೆ 4 ಸಾವಿರ ಹೆಚ್ಚಿನ ಭತ್ಯೆಯನ್ನು ಶಾಲೆಯ ಒಡತಿ ದಿವ್ಯಾ ಹಾಗರಗಿ (Divya Hagaragi) ನೀಡಿದ್ದರು.
ಎಲ್ಲರನ್ನೂ ಒಟ್ಟಿಗೆ ಕೂಡಿಸಿ ಫೋಟೋಶೂಟ್
ಆ ಭತ್ಯೆ ನೀಡುವ ಸಂದರ್ಭದಲ್ಲಿ ನೆನಪಿನ ಸ್ಮರಣಾರ್ಥ ಇದೊಂದು ಐತಿಹಾಸಿಕ ದಿನವೆಂದು ಎಲ್ಲರಿಗೂ ಒಟ್ಟಿಗೆ ಕೂಡಿಸಿ ಫೋಟೋಶೂಟ್ ಮಾಡಿಕೊಂಡಿದ್ದರು. ಫೋಟೋಶೂಟ್ನಲ್ಲಿ ಬಹುತೇಕರು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿರುವ ಪರಿಣಾಮ ಇದೀಗ ಸಿಐಡಿ ಬಲೆಗೆ ಬಿದ್ದಿದ್ದಾರೆ. ಈಗ ಅಕ್ರಮದ ನೇಮಕಾತಿ ಪ್ರಕರಣ ಭೇದಿಸಲು ಈ ಫೋಟೋಶೂಟ್ ಸಹಾಯಕವಾಗಿದೆ. ಫೋಟೋಶೂಟ್ನಲ್ಲಿ ಶಾಲಾ ಸಿಬ್ಬಂದಿಗಳ ಜೊತೆಗೆ ಪೊಲೀಸ್ ಅಧಿಕಾರಿಗಳು ಸಹ ಕ್ಯಾಮೆರಾಗೆ ಪೋಸ್ ನೀಡಿದ್ದು, ಡಿವೈಎಸ್ಪಿ ಹೊಸಮನಿ, ಸಿಪಿಐ ಆನಂದ ಮೇತ್ರೆ, ದಿಲೀಪ್ ಸಾಗರ ಸೇರಿದಂತೆ ಹಲವರು ಭಾಗಿಯಾಗಿದ್ದು ಕಾಣಬಹುದು.
ಇದನ್ನೂ ಓದಿ: ಮೊದಲು ನೀವು ಗ್ರಾಮಗಳಿಗೆ ಭೇಟಿ ನೀಡಿ: ಜಿಲ್ಲಾ ಪಂಚಾಯತ್ CEOಗಳಿಗೆ CM Bommai ಎಚ್ಚರಿಕೆ
ದಿವ್ಯಾ ಹಾಗರಗಿ ಇಂದು ಜೈಲಿಗೆ ಸ್ಥಳಾಂತರ
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನ ಇಂದು ಜೈಲಿಗೆ ಸ್ಥಳಾಂತರಿಸಲಾಗುತ್ತದೆ. ಸಿಐಡಿ ಕಸ್ಟಡಿಯ ಕಾಲವಕಾಶ ಮುಕ್ತಾಯವಾದ ಹಿನ್ನೆಲೆ ದಿವ್ಯಾ ಹಾಗರಗಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನಂತರ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗುತ್ತದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ, 18 ದಿನಗಳ ನಂತರ ಮಹಾರಾಷ್ಟ್ರದ ಪುಣೆಯಲ್ಲಿ ಬಂಧನಕ್ಕೊಳಗಾಗಿದ್ದಳು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹೆಚ್ಚಿನ ವಿಚಾರಣೆಗಾಗಿ 11 ದಿನ ಸಿಐಡಿ ಕಸ್ಟಡಿಗೆ ಪಡೆದಿತ್ತು. ಅಗತ್ಯ ವಿಚಾರಣೆ ನಡೆಸಿದ ಸಿಐಡಿ ತಂಡ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆ ಎಂದು ಜೈಲಿಗೆ ಕಳಿಸಲಿದ್ದಾರೆ.
ದಿವ್ಯಾ ಹಾಗರಗಿಯ ವಿಚಾರಣೆ ಮುಕ್ತಾಯ
ದಿವ್ಯಾ ಹಾಗರಗಿಯ ಬಹುತೇಕ ವಿಚಾರಣೆ ಮುಕ್ತಾಯವಾದ ಹಿನ್ನೆಲೆ ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗುತ್ತಿದೆ. 11 ದಿನ ಸುದಿರ್ಘ ವಿಚಾರಣೆ ನಡೆಸಿದ ಸಿಐಡಿ ತಂಡ ಅನೇಕ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ನಿನ್ನೆಯಷ್ಟೇ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆ, ಹಳೆ ಜೇವರ್ಗಿ ರಸ್ತೆಯಲ್ಲಿರುವ ಮನೆ ಸ್ಥಳ ಮಹಜರ್ ಮಾಡಿದ್ದಾರೆ. ಶಾಲೆಯಲ್ಲಿ ಜೆರಾಕ್ಸ್ ಮಶೀನ್ ಸೇರಿದಂತೆ ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಕಳೆದ 20 ದಿನಗಳಿಂದ ವನವಾಸ
ಸೆಂಟ್ರಲ್ ಜೈಲಿನಲ್ಲಿ ಪತಿ-ಪತ್ನಿ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತನಾದ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಕಳೆದ 20 ದಿನಗಳಿಂದ ವನವಾಸ ಅನುಭವಿಸುತ್ತಿದ್ದಾನೆ. ಇದೀಗ ದಿವ್ಯಾ ಸಹ ಅದೆ ಜೈಲಿಗೆ ಹೊರಟಿದ್ದು ಜೈಲಿನಲ್ಲಿ ಪತಿ ಪತ್ನಿಯ ಸಮಾಗಮವಾಗಲಿದೆ. ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಹಾಗರಗಿ ದಂಪತಿಗಳ ಕೋಟಿಗಟ್ಟಲೆ ಆಸ್ತಿ ಇದ್ದರು ದುರಾಸೆಗೆ ಬಿದ್ದು ಜೈಲಿನಲ್ಲಿ ನರಕಯಾತನೆ ಅನುಭವಿಸಬೇಕಾದ ದುಸ್ಥಿತಿ ಎದುರಾಗಿದೆ.
ಇದನ್ನೂ ಓದಿ: HD Kumaraswamy: "ಇದು ರಾಮ ಸೇನೆಯೋ, ರಾವಣ ಸೇನೆಯೋ? ಮುತಾಲಿಕ್ನಂತವ್ರನ್ನು ಒದ್ದು ಒಳಗೆ ಹಾಕ್ಬೇಕು" ಎಂದ ಎಚ್ಡಿಕೆ
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ.
ಇಂದು ಸಿಐಡಿ ಡಿಜಿ ಸಂಧು ಜೊತೆ ತನಿಖಾಧಿಕಾರಿಗಳ ಸಭೆ ನಡೆಸಿದ್ರು. ಇದುವರೆಗೆ ನಡೆದ ಪ್ರಕರಣದ ತನಿಖೆಯ ಬಗ್ಗೆ ಡಿಜಿ ಸಂಧು ಮಾಹಿತಿ ಪಡೆದಿದ್ದಾರೆ. ಎಂಟು Dyspಗಳ ನೇತೃತ್ವದಲ್ಲಿ ರಚಿಸಿರೋ SIT ತಂಡದ ಕಾರ್ಯಾಚರಣೆ ಬಗ್ಗೆ ಸಲಹೆ ನೀಡಲಾಯ್ತು, ಡಿವೈಎಸ್ ಪಿ ಯಶವಂತ್ ರಿಗೆ ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಲು ಟಾಸ್ಕ್ ನೀಡಿದ್ರು. ಬೆಂಗಳೂರು ಮತ್ತು ಕಲಬುರ್ಗಿ ಬಿಟ್ಟು ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಅಕ್ರಮ ನಡೆದಿರೋ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ನಿಗಾವಹಿಸಲು ಸೂಚನೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ