• Home
  • »
  • News
  • »
  • state
  • »
  • PSI Recruitment Scam: ವಿಚಾರಣೆಗೆ ಹಾಜರಾಗಲು ಪ್ರಿಯಾಂಕ್ ಖರ್ಗೆ ಹಿಂದೇಟು, ಇದು ಆಪ್ತರನ್ನು ರಕ್ಷಿಸೋ ತಂತ್ರ ಎಂದ್ರು ಗೃಹ ಸಚಿವರು

PSI Recruitment Scam: ವಿಚಾರಣೆಗೆ ಹಾಜರಾಗಲು ಪ್ರಿಯಾಂಕ್ ಖರ್ಗೆ ಹಿಂದೇಟು, ಇದು ಆಪ್ತರನ್ನು ರಕ್ಷಿಸೋ ತಂತ್ರ ಎಂದ್ರು ಗೃಹ ಸಚಿವರು

 ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಶಾಸಕ ಪ್ರಿಯಾಂಕಾ ಖರ್ಗೆ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು  ನೀಡದೆ ಇರುವ ನಿರ್ಧಾರದ ಹಿಂದೆ, ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಇರಾದೆ ಇದೆ ಎಂಬ ಸಂಶಯ ಮೂಡುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.

  • Share this:

ಬೆಂಗಳೂರು (ಏ.25): PSI ನೇಮಕಾತಿ ಅಕ್ರಮಕ್ಕೆ  (PSI Recruitment Scam) ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕ್​ ಖರ್ಗೆಗೆ (Priyank Kharge) ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ರು, ಆದ್ರೆ ಪ್ರಿಯಾಂಕ್​ ಖರ್ಗೆ ವಿಚಾರಣೆಗೆ ಹಾಜರಾಗಿಲ್ಲ, ಈ ವಿಚಾರಕ್ಕೆ ಪ್ರತಿಕ್ರಿಯಿಸಿದ  ಗೃಹ ಸಚಿವ ಆರಗ ಜ್ಞಾನೇಂದ್ರ, (Araga jnanendra) ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಬಳಿ ಇರಬಹುದಾದ, PSI ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಗಳನ್ನು, ಹಾಗೂ ಮಾಹಿತಿಗಳನ್ನು, ಹಂಚಿ ಕೊಳ್ಳಬೇಕು ಎಂದು ಸಿಐಡಿ ಅಧಿಕಾರಿಗಳು ನೋಟಿಸ್ (CID Notice) ನೀಡಿದ್ದರು. ಮಾನ್ಯ ಶಾಸಕರು, ತಮ್ಮ ಬಳಿ ಅಕ್ರಮ ನೇಮಕಾತಿಗೆ  ಸಂಬಂಧಿಸಿದಂತೆ ಬಹಳಷ್ಟು ಸಾಕ್ಷ್ಯಾಧಾರ ಗಳಿವೆ ಹಾಗೂ ಅಕ್ರಮದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಹೆಸರುಗಳು ಗೊತ್ತು, ಎಂದು ಮಾಧ್ಯಮದವರ ಮುಂದೆ ಬಿಂಬಿಸಿಕೊಂಡಿದ್ದರು. ಈಗ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ ಎಂದು ಕಿಡಿಕಾರಿದ್ರು.


ಪಲಾಯನವಾದ ನೀತಿ ಅನುಸರಿಸಿದ್ದಾರೆ


ಶಾಸಕ ಪ್ರಿಯಾಂಕ್​ ಖರ್ಗೆ ತಮ್ಮ ಹೊಣೆಗಾರಿಕೆಯನ್ನು ಮರೆತು, ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರ ಗಳಿಲ್ಲ, ಕೇವಲ ಸಾಮಾಜಿಕ ಜಾಲತಾಣ ದಲ್ಲಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದೆ, ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್​ ಖರ್ಗೆ ಅವರು ಸಿಐಡಿ ಅಧಿಕಾರಿಗಳ ಮುಂದೆ  ಹಾಜರಾಗಿ ತನಿಖೆಗೆ ಸಹಕರಿಸುವುವದರ ಬದಲು ಪಲಾಯನವಾದ ನೀತಿ ಅನುಸರಿಸಿದ್ದಾರೆ ಎಂದು ಕಿಡಿಕಾರಿದ್ರು. ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸಿಐಡಿ ತನಿಖೆಗೆ ನಾನೇ ಸ್ವತಃ ಆಸಕ್ತಿ ತೋರಿಸಿದ್ದೆ, ಮುಖ್ಯಮಂತ್ರಿಗಳ ಜತೆ ಸಮಾಲೋಚಿಸಿ ತನಿಖೆಗೆ ಆದೇಶ ನೀಡಿದ್ದೆ ಎಂದ್ರು


ಇದು ಆರೋಪಿಗಳನ್ನು ರಕ್ಷಿಸುವ ತಂತ್ರ


ಬಡ ಕುಟುಂಬದಿಂದ ಬಂದಂಥಾ  ಸಾವಿರಾರು  ಪ್ರಾಮಾಣಿಕ ಹಾಗೂ ಪ್ರತಿಭಾವಂತ ಆಕಾಂಕ್ಷಿಗಳು ಮೂಲೆ ಗುಂಪಾದರೆ ಸಮಾಜಕ್ಕೆ ಆಗುವ ನಷ್ಟದ ಅಂದಾಜನ್ನು ಪ್ರಿಯಾಂಕ್​ ಖರ್ಗೆ ಅವರು ಅರಿಯಬೇಕಿತ್ತು. ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸಾಕ್ಷ್ಯಾಧಾರಗಳನ್ನು  ನೀಡದೆ ಇರುವ ನಿರ್ಧಾರದ ಹಿಂದೆ ಬಂಧನಕ್ಕೆ ಒಳಗಾಗಿರುವ ತಮ್ಮ ಆಪ್ತರನ್ನು ರಕ್ಷಿಸುವ ಇರಾದೆ ಇದೆ ಎಂಬ ಸಂಶಯ ಮೂಡುತ್ತದೆ.


ಇದನ್ನೂ ಓದಿ: Corona Virus: ಇನ್ಮುಂದೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ- ಸಚಿವ ಸುಧಾಕರ್


ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಅಕ್ರಮದಲ್ಲಿ ಒಳಗಾಗಿದವರು ಎಷ್ಟೇ ದೊಡ್ಡವರಾದರೂ ರಕ್ಷಿಸುವ ಪ್ರಶ್ನೆಯಿಲ್ಲ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.


ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ


ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ನೋಟಿಸ್ ನೀಡಿದ ಸಿಐಡಿ ಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಮಾಹಿತಿ ನೀಡಿದವರಿಗೆ‌ ನೋಟಿಸ್ ನೀಡುತ್ತೀರಾ? ದಾಖಲೆ ಬಹಿರಂಗ ಪಡಿಸಿದವರನ್ನು ಹೆದರಿಸುತ್ತೀರಾ? ನಿಮ್ಮ ಈ ಆಟ ‌ನಡೆಯಲ್ಲ ಎಂದು ಸರ್ಕಾರದ ವಿರುದ್ಧ ಸಿಟ್ಟಾದರು. ವಿಚಾರಣೆಗೆ ಹಾಜರಾಗದಂತೆ ಪ್ರಿಯಾಂಕ್ ಖರ್ಗೆಗೆ ಪಕ್ಷದಿಂದ ಸೂಚನೆ ನೀಡಿದ್ದೇವೆ ಎಂದ ಡಿಕೆಶಿ, ಬರಲಿ ನೋಡೋಣ ಏನಾಗುತ್ತದೆ ಅಂತ..? ನಿನ್ನೆ ನೋಟಿಸ್ ನೀಡಿದ್ದ ಬಗ್ಗೆ ಪಕ್ಷದ ನಾಯಕರ ಜೊತೆಗೆ ಚರ್ಚೆ ಮಾಡಿಯೇ ವಿಚಾರಣೆಗೆ ಹಾಜರಾಗಬೇಡಿ ಅಂತ ಸೂಚಿಸಿದ್ದೇನೆ ಎಂದು ತಿಳಿಸಿದರು.


ಇದನ್ನೂ ಓದಿ: Mysore: ಮುಡಾದಲ್ಲಿ ನಡೆದಿದೆ ಬ್ರಹ್ಮಾಂಡ ಭ್ರಷ್ಟಾಚಾರ! ನೂರಾರು ನಿವೇಶನಗಳ ದಾಖಲೆಯೇ ಮಂಗ ಮಾಯ!


ಈ ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಗೃಹ ಸಚಿವರ ಜೊತೆಗೆ ನಿಂತು ಪೋಟೋ ತೆಗೆದುಕೊಳ್ಳುತ್ತಾರೆ. ಹಲವು ಸಚಿವರ ಜೊತೆಗೆ ಅವರು ನಿಂತಿದ್ದಾರೆ. ಹಾರ ತುರಾಯಿ ಹಾಕಿಸಿಕೊಂಡು ಪೋಟೋ ‌ಕೂಡ ತೆಗೆಸಿಕೊಳ್ತಾರೆ. ಆರೋಪಿ ಭ್ರಷ್ಟಾಚಾರದ ಅಂಗಡಿ ಓಪನ್ ಮಾಡಿಕೊಂಡಿದ್ದಾರೆ. ಅಂಗಡಿ ಓಪನ್ ಆಗಿದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೇರಿದಂತೆ ಎಲ್ಲರೂ ಅಂಗಡಿಗೆ ಹೋಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Published by:ಪಾವನ ಎಚ್ ಎಸ್
First published: