PSI Recruitment Scam: ಮತ್ತೆ 3 ದಿನ ಸಿಐಡಿ ವಶಕ್ಕೆ ಅಮೃತ್ ಪೌಲ್

ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಅವರನ್ನು ಇಂದು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿತು.

ಅಮೃತ್​ ಪೌಲ್​

ಅಮೃತ್​ ಪೌಲ್​

  • Share this:

ಬೆಂಗಳೂರು (ಜು.13)ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (PSI Recruitment Scam) ಉತ್ತರ ಪತ್ರಿಕೆ ತಿದ್ದಲು ಬೀಗದ ಕೀ ಕೊಟ್ಟು ಸಿಕ್ಕಿಬಿದ್ದಿದ್ದ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ (Amrit Paull) ಅವರನ್ನು ಇಂದು (ಬುಧವಾರ) 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲ ಸಿಐಡಿ (CID) ವಶಕ್ಕೆ ನೀಡಿ ಆದೇಶಿಸಿತು. ಆರೋಪಿ ಶಾಂತಕುಮಾರ (Shantakumar) ಹಾಗೂ ಎಡಿಜಿಪಿ ಮಧ್ಯೆ 1.36 ಕೋಟಿ ಹಣ ವರ್ಗಾವಣೆ ಆಗಿದೆ. ಮೊಬೈಲ್ ಡಾಟಾ (Mobile Data) ಅಳಿಸಿ ಹಾಕಲಾಗಿದೆ. ಇನ್ನೂ ಐದು ದಿನ ವಶಕ್ಕೆ ನೀಡುವಂತೆ ಸಿಐಡಿಪರ ವಕೀಲರು (Advocate For CID) ಕೋರಿದರು.


ನ್ಯಾಯಾಲಯವು ಮೂರು ದಿನ ವಶಕ್ಕೆ ನೀಡಿ ಆದೇಶಿಸಿದೆ. ಜೊತೆಗೆ 30 ನಿಮಿಷಗಳ ಕಾಲ ಕುಟುಂಬದವರ ಭೇಟಿಗೂ ಅವಕಾಶ ನೀಡಲಾಗಿದೆ. ವೈದ್ಯಕೀಯ ತಪಾಸಣೆಗೂ ಅವಕಾಶ ಕಲ್ಪಿಸಿದ್ದು, ಆನ್​ಲೈನ್​ ಮೂಲಕ ವೈದ್ಯರ ಸಂಪರ್ಕ ಮಾಡಲು ಅವಕಾಶ ನೀಡಿದೆ.


ಅಮೃತ್ ಪೌಲ್ ಮೋಬೈಲ್​ ರಿಕವರಿ ಮಾಡ್ಬೇಕು

ಅಮೃತ್ ಪೌಲ್ ಅವರನ್ನು ಮತ್ತೆ ಸಿಐಡಿ ಕಸ್ಟಡಿಗೆ ನೀಡುವಂತೆ ಸಿಐಡಿ ಪರ ವಕೀಲರ ಮನವಿ ಮಾಡಿಕೊಂಡ್ರು. ಅಮೃತ್ ಪೌಲ್ ಮೊಬೈಲ್ ಜಪ್ತಿ ಮಾಡಲಾಗಿದೆ. ಅದ್ರೆ ಮೊಬೈಲ್ ಪಾರ್ಮೆಟ್ ಮಾಡಿದ್ದಾರೆ. ಅದನ್ನ ರಿಕವರಿ ಮಾಡಬೇಕಿದೆ. 10 ದಿನಗಳಲ್ಲಿ ಇವತ್ತು ಮೊಬೈಲ್ ಪಾಸ್ ವರ್ಡ್ ಹೇಳಿದ್ದಾರೆ. ಅದ್ರಿಂದ ಮೊಬೈಲ್ ಡೇಟಾ ರಿಕವರಿ ಮಾಡಬೇಕು. ಕ್ಲೌಡ್ ಮೂಲಕ ರಿಕವರಿ ಮಾಡಬೇಕು.


ಇದನ್ನೂ ಓದಿ: Siddaramotsava: ಸಭೆಗೆ ಬಾರದ ಡಿಕೆ ಶಿವಕುಮಾರ್​ಗೆ ಸಿದ್ದು ಆಪ್ತರ ಟಾಂಗ್; ವೇದಿಕೆ ಮೇಲೆಯೇ ತಿರುಗೇಟು ಕೊಟ್ರು ಡಿಕೆಶಿ ಬ್ರದರ್​

1.36 ಕೋಟಿ ಹಣ ವರ್ಗಾವಣೆ

ಶಾಂತಕುಮಾರ್​ ಹಾಗೂ ಅಮೃತ್​ ಪೌಲ್​ ನಡುವೆ ಹಣ ವರ್ಗಾವಣೆ. ಆರೋಪಿ ಶಾಂತಕುಮಾರ್ ಹಣ ಕೊಟ್ಟಿರೋ ಬಗ್ಗೆ ಹೇಳಿಕೆ ನೀಡಿದ್ದಾರೆ‌. ಅದನ್ನ ರಿಕವರಿ ಮಾಡಬೇಕು. ಅದ್ರಿಂದ ಇನ್ನೂ 3 ದಿನ ಅಮೃತ್ ಪಾಲ್ ಸಿಐಡಿ ವಶಕ್ಕೆ ನೀಡುವಂತೆ ಸಿಐಡಿ ಪರ ವಕೀಲರ ಕೋರ್ಟ್ ಬಳಿ ಮನವಿ ಮಾಡಿಕೊಂಡ್ರು.


ಅವರೂ ಎಲ್ಲೂ ಓಡಿ ಹೋಗಲ್ಲ-  ಪೌಲ್ ಪರ ವಕೀಲರು

ಇದಕ್ಕೆ ಅಮೃತ್ ಪೌಲ್ ಪರ ವಕೀಲರು ಅಕ್ಷೇಪ ವ್ಯಕ್ತಪಡಿಸಿದ್ರು. ಈ ಹಿಂದೆ ಕಸ್ಟಡಿಗೆ ಪಡೆಯುವ ಸಲುವಾಗಿ ನೀಡಿದ್ದ ಗ್ರೌಂಡ್ಸ್​ನನ್ನೇ ಬಾರಿಯೂ ಸಿಐಡಿ ನೀಡುತ್ತಿದೆ. ಅವರು ಎಲ್ಲೂ ಓಡಿ ಹೋಗಲ್ಲ. ಹೀಗಿರುವಾಗ ಅವರನ್ನ ಯಾಕಾಗಿ ಮತ್ತೆ ಕಸ್ಟಡಿಗೆ ನೀಡಬೇಕು.


ವಿಚಾರಣೆಗೆ ಅಗತ್ಯವಿದೆ- ಸಿಐಡಿ ಪರ ವಕೀಲರ ವಾದ

ಇವರ ಸುಪರ್ದಿಯಲ್ಲಿದ್ದ ಓಎಂಆರ್ ಶೀಟ್ ಹೇಗೆ ಹೊರಗೆ ಹೋಯ್ತು. ಸ್ಟ್ರಾಂಗ್ ರೂಂ ಕೀ ಇವರ ಹತ್ರ ಇರುತ್ತೆ. ಇವರ ಅನುಮತಿ ಇಲ್ಲದೆ ಹೇಗೆ ಹೊರಗೆ ಹೋಗುತ್ತೆ. ಅದರ ಬಗ್ಗೆ ಇನ್ನೂ ತನಿಖೆ ಆಗಬೇಕು. ಈಗಾಗಲೇ ತನಿಖೆ ನಡೆಯುತ್ತಲೆ ಇದೆ ಎಂದು ಸಿಐಡಿ ಪರ ವಕೀಲರ ವಾದ ಮಂಡಿಸಿದ್ರು.


ನಿಜಕ್ಕೂ ಕಸ್ಟಡಿ ಅವಶ್ಯಕತೆ ಇಲ್ಲ- ಅಮೃತ್ ಪೌಲ್ 

ಪೋನ್ ರಿಕವರಿಗೆ ಕಸ್ಟಡಿಗೆ ಬೇಕು ಎಂದರು. ಈಗ ಪೋನ್ ನಲ್ಲಿರುವ ಡಾಟಾ ತೆಗೆಯಲು ಬೇಕು ಅಂತಿದ್ದಾರೆ. ಇಲ್ಲಿ ನಿಜಕ್ಕೂ ಕಸ್ಟಡಿ ಅವಶ್ಯಕತೆ ಇಲ್ಲ ಎಂದು ಅಮೃತ್ ಪೌಲ್ ವಕೀಲರ ವಾದ ಮಂಡಿಸಿದ್ರು.


ಇದನ್ನೂ ಓದಿ: PSI Recruitment Scam: ವಿಧಾನಸೌಧ ವ್ಯಾಪಾರ ಸೌಧವಾಗಿದೆ; ಸರ್ಕಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರಶ್ನೆಗಳ ಸುರಿಮಳೆ

ಸಾಕ್ಷ್ಯಾಧಾರ ಸಂಗ್ರಹಿಸಿ ಬಂಧನ

2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಪ್ರಮೋಷನ್ ಪಡೆದಿದ್ದ ಅಮೃತ್ ಪಾಲ್. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದಿದ್ದು, ಅಮೃತ್ ಪಾಲ್ ವರ್ಗಾವಣೆಗೆ ವಿರೋಧ ಪಕ್ಷಗಳಿಂದ ಒತ್ತಾಯ ಮಾಡಿದ್ರು. ಸಿಐಡಿ ತನಿಖೆ ಬೆನ್ನಲ್ಲೇ ಎತ್ತಂಗಡಿ ಮಾಡಿದ್ದ ಸರ್ಕಾರ. ಏಪ್ರಿಲ್ 27 ರಂದು ನೇಮಕಾತಿ ವಿಭಾಗದಿಂದ ಅಮೃತ್ ಪೌಲ್​ರನ್ನು ಎತ್ತಂಗಡಿ ಮಾಡಲಾಗಿತ್ತು. ನೇಮಕಾತಿ ವಿಭಾಗದ ಹಲವು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರೋದು ಗೊತ್ತಾಗಿತ್ತು. ಈ ಸಂಬಂಧ ಕೆಲ ಅಧಿಕಾರಿಗಳನ್ನ ಬಂಧಿಸಿ ಸಿಐಡಿ ವಿಚಾರಣೆ ನಡೆಸಿದೆ. ಅಮೃತ್ ಪೌಲ್ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಸಿಐಡಿ ಅಧಿಕಾರಿಗಳು ಬಂಧಿಸಿತ್ತು
Published by:Pavana HS
First published: