• Home
  • »
  • News
  • »
  • state
  • »
  • PSI Recruitment Scam: ನೇಮಕಾತಿ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್‌ ಬಂದಿದ್ದ ಯುವತಿ ಅರೆಸ್ಟ್

PSI Recruitment Scam: ನೇಮಕಾತಿ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾಂಕ್‌ ಬಂದಿದ್ದ ಯುವತಿ ಅರೆಸ್ಟ್

ಸುಪ್ರಿಯಾ

ಸುಪ್ರಿಯಾ

ಈ ಸಂಬಂಧ ಸಿಐಡಿ ಕಲಬುರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪಿಎಸ್​ಐ ಅಕ್ರಮ ಪ್ರಕರಣದಲ್ಲಿ ಇದುವರೆಗೂ 52 ಜನರನ್ನು ಬಂಧಿಸಲಾಗಿದೆ.

  • News18 Kannada
  • Last Updated :
  • Gulbarga, India
  • Share this:

PSI Recruitment Scam: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದ ಅಭ್ಯರ್ಥಿ 26 ವರ್ಷದ ಸುಪ್ರಿಯಾ ಹುಂಡೇಕರ್ (First Ranker Supriya Hundekar) ಎಂಬ ಯುವತಿಯನ್ನು ಬಂಧಿಸಲಾಗಿದೆ. ಬಂಧಿತ ಸುಪ್ರಿಯಾ ಕಲ್ಯಾಣ ಕರ್ನಾಟಕ ಮಹಿಳಾ ಖೋಟಾದಲ್ಲಿ (Kalyana Karnataka Woman Reservation) ಮೊದಲ ಸ್ಥಾನ ಪಡೆದುಕೊಂಡಿದ್ದಳು. ಸಿಐಡಿ (CID) ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಿಎಸ್​ಐ ನೇಮಕಾತಿ ಅಕ್ರಮದ ಕಿಂಗ್​​​ಪಿನ್ ಆರ್.ಡಿ.ಪಾಟೀಲ್ ಮೂಲಕ ಸುಪ್ರಿಯಾ ಡೀಲ್ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಕಲಬುರಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ (Government PU College, Kalaburgi) ಪರೀಕ್ಷೆ ಬರೆದಿದ್ದ ಸುಪ್ರಿಯಾ ಎಕ್ಸಾಂ ವೇಳೆ ಬ್ಲೂಟೂತ್ ಡಿವೈಸ್ (Bluetooth Devise)​ ಸಾಧನ ಬಳಸಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.


ಈ ಸಂಬಂಧ ಸಿಐಡಿ ಕಲಬುರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪಿಎಸ್​ಐ ಅಕ್ರಮ ಪ್ರಕರಣದಲ್ಲಿ ಇದುವರೆಗೂ 52 ಜನರನ್ನು ಬಂಧಿಸಲಾಗಿದೆ.


ಪಿಎಸ್‌ಐ ಪರೀಕ್ಷೆ ನಡೆದಿದ್ದು ಯಾವಾಗ?


ಅಕ್ಟೋಬರ್ 2021 ರಲ್ಲಿ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಗಾಗಿ ರಾಜ್ಯಾದ್ಯಂತ ಹಲವು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸುಮಾರು 54,041 ವಿದ್ಯಾರ್ಥಿಗಳು ಹಾಜರಾಗಿದ್ದರು.  ಈ ಪರೀಕ್ಷೆಯಲ್ಲಿ ಕೋಟಿ ಕೋಟಿ ಪಡೆದು, ಕೆಲವೊಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಪರೀಕ್ಷಾ ಹಗರಣ ಬಯಲಾಗಿದ್ದು ಹೇಗೆ?


ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಪ್ರಾರಂಭದಿಂದಲೂ ಕೇಳಿ ಬಂದಿತ್ತು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಆರಂಭವಾಯಿತು.
ಕಲಬುರಗಿಯ ಪರೀಕ್ಷಾ ಕೇಂದ್ರದ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಇನ್ವಿಜಿಲೇಟರ್‌ಗಳನ್ನು ಮೊದಲು ಪೊಲೀಸರು ವಶಕ್ಕೆ ಪಡೆದರು. ಬಂಧಿತ ಅಭ್ಯರ್ಥಿಗಳಲ್ಲಿ ಕಲಬುರಗಿಯ ಸೇಡಂ ಪಟ್ಟಣದ ವೀರೇಶ್ ಎಂಬ ವಿದ್ಯಾರ್ಥಿಯನ್ನು ಏಪ್ರಿಲ್ 11 ರಂದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಬಹುಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.


ಇದನ್ನೂ ಓದಿ:  PSI Recruitment Scam: ಗೃಹ ಸಚಿವರು ಸುಳ್ಳು ಹೇಳಿದ್ದು ಅಪರಾಧ ಅಲ್ವಾ? ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ


ವೀರೇಶ್‌ನಿಂದಲೇ ಬಯಲಾಯ್ತು ಅಕ್ರಮ


ಖುದ್ದು ವೀರೇಶ್​ ಸ್ನೇಹಿತನಿಂದಲೇ ಅಕ್ರಮ ಬಯಲಾಗಿದ್ದು,  ಜ್ಞಾನ ಜ್ಯೋತಿ ಶಾಲೆ ಸೆಂಟರ್​​​​​​​​​ನಲ್ಲಿ ಪರೀಕ್ಷೆ ನಿಗದಿಯಾಗಿತ್ತು.  PSI ಎಕ್ಸಾಂನಲ್ಲಿ ಹಣ ಕೊಟ್ರೆ ನೌಕರಿ ಸಿಗುತ್ತೆ ಅಂತಾ ಸ್ನೇಹಿತ ಹೇಳಿದ್ದ. ಹಣ ಕೊಡ್ತೀನಿ ನನ್ನನ್ನೂ ಆಯ್ಕೆ ಮಾಡಿಸು ಅಂತ ವೀರೇಶ್​ ಹೇಳಿದ್ದ.


ಕಿಂಗ್​ಪಿನ್​​ ಜತೆ ಸೇರಿ 80 ಲಕ್ಷಕ್ಕೆ ಡೀಲ್​​ ಖುದುರಿಸಿದ್ದ ಮಾಹಿತಿ ಇದ್ದು,  ಪರೀಕ್ಷೆಗೂ ಮುನ್ನವೇ  ವೀರೇಶ್​ 35 ಲಕ್ಷ ಹಣ ಕೊಟ್ಟಿದ್ದ.  ಬಳಿಕ ಎಕ್ಸಾಂನಲ್ಲಿ ಕೇವಲ 20 ಮಾರ್ಕ್ಸ್​ ಗೆ ವೀರೇಶ್​ ಉತ್ತರ ಬರೆದಿದ್ದ.
20 ಮಾರ್ಕ್ಸ್‌ಗೆ ಉತ್ತರಿಸಿದವನಿಗೆ 121 ಅಂಕ!


2021ರಲ್ಲಿ ವಿರೇಶ್ ಜಿಡಿಎ ಲೇಔಟ್‌ನಲ್ಲಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿಎಸ್‌ಐ ಪರೀಕ್ಷೆ ಬರೆದಿದ್ದರು. ಕೇವಲ 20 ಪ್ರಶ್ನೆಗಳಿಗೆ ಉತ್ತರಿಸಿದ್ದ ಅವರು 121 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವಂಚನೆಯ ಮಾಸ್ಟರ್‌ಮೈಂಡ್‌ಗಳನ್ನು ಪರಿಚಯಿಸಿದ ವಿರೇಶ್ ತನ್ನ ಸ್ನೇಹಿತನಿಗೆ ಐದು ಲಕ್ಷ ರೂಪಾಯಿಯನ್ನು ಪಾವತಿಸಲು ನಿರಾಕರಿಸಿದಾಗ ವಿಷಯ ಬೆಳಕಿಗೆ ಬಂದಿತು.


ಇದನ್ನೂ ಓದಿ: PSI Recruitment Scam: 54 ಸಾವಿರ ಅಭ್ಯರ್ಥಿಗಳಿಗೆ ಪಿಎಸ್ಐ ಮರು ಪರೀಕ್ಷೆ: ಅಕ್ರಮ ನಡೆದಿರೋದನ್ನ ಒಪ್ಪಿಕೊಂಡ ಸರ್ಕಾರ


ಬಿಜೆಪಿ ನಾಯಕಿಯಿಂದಲೇ ಅಕ್ರಮ


ಈ ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಎಂಬಾಕೆ ಶಾಮೀಲಾಗಿರೋ ಆರೋಪ ಕೇಳಿ ಬಂದಿದೆ. ಈಕೆ ಕಲಬುರಗಿ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಒಡತಿ, ದಿವ್ಯಾ ಹಾಗರಗಿ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕಿಂಗ್‌ಪಿನ್ ಎಂಬುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಇದೀಗ ದಿವ್ಯಾ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಅವರ ಪತಿಯನ್ನು ಈಗಾಗಲೇ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

Published by:Mahmadrafik K
First published: