Basavaraj Dadesuguru: ಅಧಿವೇಶನ ವೇಳೆಯೇ ಕಾಂಗ್ರೆಸ್‌ನಿಂದ ವಿಡಿಯೋ ಬಾಂಬ್; ಯಾವಾಗ್ಲೋ ಮಾತಾಡಿದ್ದು ಅಂತ ದಡೇಸುಗೂರು ತಿರುಗೇಟು

ಎಲ್‌ಹೆಚ್‌ಗೆ ಅವರ ಕಾರಿನಲ್ಲೇ ಕರ್ಕೊಂಡು ಹೋಗಿದ್ದಾರೆ. ಶಾಸಕರ ಭವನದಲ್ಲೇ ಈ ಡೀಲ್ ಆಗಿರುತ್ತೆದೆ. ವಿಧಾನಸೌಧ ವ್ಯಾಪಾರಸೌಧ ಆಗಿರೋದಕ್ಕೆ ಇದು ಸಾಕ್ಷ್ಯ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಶಾಸಕ ಬಸವರಾಜ್ ದಡೇಸುಗೂರು

ಶಾಸಕ ಬಸವರಾಜ್ ದಡೇಸುಗೂರು

  • Share this:
ವಿಧಾನಮಂಡಲ ಅಧಿವೇಶನದ (Assembly Session) ಮೊದಲ ದಿನವೇ ಸರ್ಕಾರದ ವಿರುದ್ಧ ವಿಡಿಯೋ (Video) ಅಸ್ತ್ರವನ್ನು ಪ್ರಯೋಗಿಸಿದೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು (BJP MLA Basavaraj Dadesuguru) ಅವರ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ (MLA Audio Leak) ಆಗಿತ್ತು. ಈ ಆಡಿಯೋದಲ್ಲಿ ಪಿಎಸ್​​ಐ ಹುದ್ದೆಗಾಗಿ ಹಣಕ್ಕೆ ಬೇಡಿಕೆ ಇರಿಸಲಾಗಿದೆ. ಪಿಎಸ್‌ಐ ಹಗರಣ (PSI Scam) ಸಂಬಂಧ ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಡೀಲ್ ಮಾಡಿದ್ದಾರೆ ಅಂತ ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ಸಾಕ್ಷ್ಯ ಇದೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಶಿವರಾಜ್ ತಂಗಡಗಿ (Congress Leader Shivaraj Tangadagi), ಪ್ರಿಯಾಂಕ್ ಖರ್ಗೆ (Former Minister Priyank Kharge) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.  ಶಾಸಕರೇ ಆಡಿಯೋ ನನ್ನದೇ ಅಂತ ಒಪ್ಪಿಕೊಂಡಿದ್ದಾರೆ. ಇಷ್ಟಾದ್ರೂ ಸುಮೊಟೋ ಕೇಸ್ ಯಾಕೆ ಹಾಕಿಲ್ಲ? ಶಾಸಕರನ್ನು ಕರೆಯಿಸಿ ಯಾಕೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ನಾಯಕರು (Congress Leaders) ಸರ್ಕಾರವನ್ನು (BJP Government) ಪ್ರಶ್ನೆ ಮಾಡಿದ್ದಾರೆ.

PSI ಸ್ಕ್ಯಾಮ್, ವಿಡಿಯೋ ಸಾಕ್ಷ್ಯ

ಸೆ.5ರಂದು ಬಿಜೆಪಿ ಶಾಸಕ ಬಸವರಾಜು ದಡೇಸುಗೂರು ಆಡಿಯೋ ಔಟ್ ಆಗಿತ್ತು. ಈ ಆಡಿಯೋದಲ್ಲಿ ಶಾಸಕರು ಪರಸಪ್ಪ ಅನ್ನೋರ ಜೊತೆ ಡೀಲ್ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.6ರಂದು ಮತ್ತೊಂದು ಆಡಿಯೋ ರಿಲೀಸ್ ಆಯ್ತು. ಈ ಆಡಿಯೋ ನನ್ನದೇ ಅಂತ ಶಾಸಕರು ಸ್ಪಷ್ಟೀಕರಣ ಕೊಟ್ಟಿದ್ದರು. ಇಷ್ಟಾದ್ರೂ ಸರ್ಕಾರ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ. ಸೆ.6 ರಂದು ಒಂದು ಹಣದ ಚೀಲ ಕೊಟ್ಟಿದ್ದಾರೆ. ಈ ಬಗ್ಗೆ ಫೋಟೋ ಸಾಕ್ಷ್ಯ ನಮ್ಮ ಬಳಿ ಇದೆ ಎಂದು ತಂಗಡಗಿ ಹೇಳಿದ್ದಾರೆ.

PSI Recruitment Scam Congress release BJP MLA Basavaraj Dadesuguru Bribe video mrq
ಹಣ ಪಡೆದಿದ್ದಾರೆ ಎನ್ನಲಾದ ಚಿತ್ರ


ಇದನ್ನೂ ಓದಿ:  BJP vs Congress: ನಿಮ್ಮನ್ನು ಖೆಡ್ಡಾಕ್ಕೆ ಬೀಳಿಸಲು ತುದಿಗಾಲಲ್ಲಿ ನಿಂತಿದ್ದಾರೆ ಡಿಕೆಶಿ, ಖರ್ಗೆ, ಪರಮೇಶ್ವರ್‌: ಬಿಜೆಪಿ ಟ್ವೀಟ್

30 ಲಕ್ಷಕ್ಕೆ ಡೀಲ್ ಫಿಕ್ಸ್; ಖರ್ಗೆ ಆರೋಪ

ಪರಸಪ್ಪ ವಿಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಪಿಎಸ್‌ಐ ಪೋಸ್ಟ್‌ಗೆ ಒಂದು ಡೀಲ್ ಆಗುತ್ತೆ. 2020 ಆಗಸ್ಟ್‌ನಲ್ಲಿ ಹಣ ನೀಡಿದ್ದಾಗಿ ಹೇಳಿದ್ದಾರೆ. ಎಲ್‌ಹೆಚ್‌ಗೆ ಅವರ ಕಾರಿನಲ್ಲೇ ಕರ್ಕೊಂಡು ಹೋಗಿದ್ದಾರೆ. 30 ಲಕ್ಷಕ್ಕೆ ಡೀಲ್ ಫಿಕ್ಸ್ ಆಗಿದೆ ಅಂತ ಪರಸಪ್ಪ ಹೇಳಿದ್ದಾರೆ. ಫಸ್ಟ್ ಇನ್‌ಸ್ಟಾಲ್‌ಮೆಂಟ್‌ ಅಂತ ₹15 ಲಕ್ಷ ಕೊಟ್ಟಿದ್ದಾರೆ. ಶಾಸಕರ ಭವನದಲ್ಲೇ ಈ ಡೀಲ್ ಆಗಿರುತ್ತೆ. ವಿಧಾನಸೌಧ ವ್ಯಾಪಾರಸೌಧ ಆಗಿರೋದಕ್ಕೆ ಇದು ಸಾಕ್ಷ್ಯಗಳಿವೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ವಿಧಾನಸೌಧ ವ್ಯಾಪಾರಸೌಧ ಆಗಿರೋದಕ್ಕೆ ಇದು ಸಾಕ್ಷ್ಯ

ಪರಸಪ್ಪ ವಿಡಿಯೋದಲ್ಲಿ ಸ್ಪಷ್ಟವಾಗಿ ಪಿಎಸ್​ಐ ಪೋಸ್ಟ್​​ಗೆ ಡೀಲ್ ನಡೆದಿರೋದರ ಬಗ್ಗೆ ಹೇಳಿದ್ದಾರೆ. 2020 ಆಗಸ್ಟ್‌ನಲ್ಲಿ ಹಣ ನೀಡಿದ್ದಾಗಿ ಹೇಳಿದ್ದಾರೆ. ಎಲ್‌ಹೆಚ್‌ಗೆ ಅವರ ಕಾರಿನಲ್ಲೇ ಕರ್ಕೊಂಡು ಹೋಗಿದ್ದಾರೆ. ಶಾಸಕರ ಭವನದಲ್ಲೇ ಈ ಡೀಲ್ ಆಗಿರುತ್ತೆದೆ. ವಿಧಾನಸೌಧ ವ್ಯಾಪಾರಸೌಧ ಆಗಿರೋದಕ್ಕೆ ಇದು ಸಾಕ್ಷ್ಯ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.

ಇದನ್ನೂ ಓದಿ:  Rajakaluve: ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದ ಬಿಬಿಎಂಪಿ; ದಿಢೀರ್ ಹೇಳಿಕೆ ಬದಲಿಸಿದ ಆಯುಕ್ತರು

ಬಸವರಾಜ್ ದಡೇಸುಗೂರ್ ಸ್ಪಷ್ಟನೆ

ಯಾವಾಗ್ಲೋ ಮಾತನಾಡಿದ್ದನ್ನ ಲಿಂಕ್ ಮಾಡಿದ್ದಾರೆ. ಸಿಡಿ ರಿಲೀಸ್ ಮಾಡ್ತೀನಿ ಅನ್ನೋದು ಕುತಂತ್ರ. ಇದೆಲ್ಲಾ ರಾಜಕೀಯ ಅಷ್ಟೇ. ಸಿಡಿಯ ಆಡಿಯೋ ನೋಡಿದ್ರೆ ಗೊತ್ತಾಗುತ್ತದೆ. ರಾಜಕಾರಣಕ್ಕಾಗಿ ಬಣ್ಣ ಹಚ್ಚುವ ಕೆಲಸ ಮಾಡುತ್ತಿದೆ. ನಾನು ಮಾತನಾಡಿದ್ದು PSI ನೇಮಕಾತಿ ಬಗ್ಗೆ ಅಲ್ಲ ಎಂದು ಶಾಸಕ ಬಸವರಾಜ್ ದಡೇಸುಗೂರ್ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
Published by:Mahmadrafik K
First published: