PSI Recruitment Scam: ಕಿಂಗ್ ಪಿನ್ RD Patilಗೆ ಶಾಕ್; ಬಂಧಿತ CPI, DySPಗೆ ಕೈದಿ ನಂಬರ್; ಸರ್ಕಾರಕ್ಕೆ ಖರ್ಗೆ ಪಂಚ ಪ್ರಶ್ನೆ

ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಆಗಿರುವ ಮಂಜುನಾಥ್ ಮೇಳಕುಂದ 2021 ರ ಡಿಸೆಂಬರ್ 14 ರಂದು ನಡೆದ PWD ಜೆಇ ಪರೀಕ್ಷೆಯಲ್ಲಿಯೂ ಬ್ಲ್ಯೂಟೂತ್ ಮೂಲಕ ಅಕ್ರಮ ಮಾಡಿದ್ದನು. ಡಿಸೆಂಬರ್ 21 ರಿಂದ ಜನವರಿ 7 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದನು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
PSI Recruitment Scam: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ (CID Investigation) ಮತ್ತಷ್ಟು ಚುರುಕುಗೊಂಡಿದೆ. ಇಷ್ಟು ದಿನ ಆರೋಪಿಗಳನ್ನು ಜೈಲಿಗೆ ಕಳುಹಿಸಿ ನಂಬರ್ ಕೊಡುತ್ತಿದ್ದ ಸಿಪಿಐ ಮತ್ತು ಡಿವೈಎಸ್ ಪಿಗೆ ವಿಚಾರಣಧೀನ ಕೈದಿಯ ನಂಬರ್ ನೀಡಲಾಗಿದೆ. ಸದ್ಯ ಇಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇತ್ತ ಅಕ್ರಮದ ಕಿಂಗ್ ಪಿನ್ ಆಗಿರುವ ಆರ್.ಡಿ.ಪಾಟೀಲ್ (Kingpin RD Patil) ಗೆ ಸೇರಿದ ಎಲ್ಲ ಬ್ಯಾಂಕ್ ಖಾತೆಗಳ ವ್ಯವಹಾರವನ್ನು (Bank Transaction) ಸಿಐಡಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ. ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಇನ್ನಿತರ ಬ್ಯಾಂಕ್ ಗಳಿಗೆ ಆರೋಪಿ ಜೊತೆ ತೆರಳಿದ್ದ ಸಿಐಡಿ ಅಧಿಕಾರಿಗಳು ಬ್ಯಾಂಕ್ ಖಾತೆ (Bank Account) ಮತ್ತು ಲಾಕರ್ (Bank Locker) ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮದಲ್ಲಿ ಬಹುದೊಡ್ಡ ಪಾತ್ರ ಹೊಂದಿರುವ ಕಾರಣ, ಲಾಕರ್ ನಲ್ಲಿ ಬೇನಾಮಿ ಚಿನ್ನಾಭರಣ ಇರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಯಾವುದೇ ವಹಿವಾಟು ನಡೆಯದಂತೆ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.  

ಇಂಜಿನಿಯರ್ ಮಂಜುನಾಥ್ ಮೇಳಕುಂದನ ಮತ್ತೊಂದು ಮಹಾಮೋಸ

ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಆಗಿರುವ ಮಂಜುನಾಥ್ ಮೇಳಕುಂದ 2021 ರ ಡಿಸೆಂಬರ್ 14 ರಂದು ನಡೆದ PWD ಜೆಇ ಪರೀಕ್ಷೆಯಲ್ಲಿಯೂ ಬ್ಲ್ಯೂಟೂತ್ ಮೂಲಕ ಅಕ್ರಮ ಮಾಡಿದ್ದನು. ಬೆಂಗಳೂರಿನ ಸೆಂಟ್‌ಜಾನ್ ಶಾಲೆಯಲ್ಲಿ ನಡೆದ ಅಕ್ರಮದಲ್ಲಿ ಮಂಜುನಾಥ್ ಸಿಕ್ಕು  2021 ರ ಡಿಸೆಂಬರ್ 20 ರಂದು ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಡಿಸೆಂಬರ್ 21 ರಿಂದ ಜನವರಿ 7 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದನು.

ನಕಲಿ ವೈದ್ಯಕೀಯ ಪ್ರಮಾಣ ಪತ್ರ

ಈ ವಿಚಾರ ಇಲಾಖೆಗೆ ಮುಚ್ಚಿಟ್ಟು ಅನಾರೋಗ್ಯ ಕಾರಣ ಕರ್ತವ್ಯಕ್ಕೆ ಬರಲಾಗಿಲ್ಲ ಅಂತ  ಸುಳ್ಳು ಮೆಡಿಕಲ್ ಸರ್ಟಿಫಿಕೆಟ್ ನೀಡಿ ವೇತನ ಸಹ ಪಡೆದುಕೊಂಡಿದ್ದನು.

ಇದನ್ನೂ ಓದಿ:  BasanaGowda Patil Yatnal: ಸಿಎಂ ಸ್ಥಾನಕ್ಕೆ 2500 ಕೋಟಿ ಹೇಳಿಕೆ; ಯು ಟರ್ನ್ ಹೊಡೆದ ಶಾಸಕ ಯತ್ನಾಳ್, ಈಗ ಹೇಳಿದ್ದೇನು?

ಅಕ್ರಮದಲ್ಲಿ ಭಾಗಿಯಾಗಿ ಬಂಧನವಾಗಿರುವ ಸಿಪಿಐ ಆನಂದ‌ಮೇತ್ರಿ , ಡಿವೈಎಸ್ ಪಿ ‌ಮಲ್ಲಿಕಾರ್ಜುನ್ ಸಾಲಿ ಬಂಧಿತ ಆರೋಪಿಗಳಿಗೆ ವಿಚಾರಣಾಧಿನ ಕೈದಿ ನಂಬರ್ ನೀಡಲಾಗಿದೆ. ಇಷ್ಟು ದಿನ ಇಬ್ಬರು ಅಧಿಕಾರಿಗಳು ಆರೋಪಿಗಳಗೆ ಜೈಲಿಗೆ ಕಳುಹಿಸಿ ಕೈದಿ‌ ನಂಬರ್ ಕೊಡಿಸುತ್ತಿದ್ದರು. ಇದೀಗ ಅಕ್ರಮದಲ್ಲಿ ಭಾಗಿಯಾಗಿ ತಾವೇ ಕೈದಿ‌ ನಂಬರ್ ಪಡೆದುಕೊಂಡಿದ್ದಾರೆ.

ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಮಾನ್ಯ ಶ್ರೀ ಆರಗ ಜ್ಞಾನೇಂದ್ರ ಸದನದಲ್ಲಿ, ತಾವು MLC ಎಸ್ ರವಿಯವರು ದಿನಾಂಕ 10-03-22ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 1438ಗೆ ನೀಡಿದ್ದ ಅಧಿಕೃತ ಉತ್ತರದಲ್ಲಿ “PSI ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲಾ! ಹಿರಿಯ ಪೊಲೀಸ್ ಅಧಿಕಾರಿಗಳ ವರದಿ ನೀಡಿದ್ದಾರೆ” ಎಂದು ಸುಳ್ಳು ಹೇಳಿದ್ದು ಯಾಕೆ?  ಅಂದು ನೀವು ಉಲ್ಲೇಖಿಸಿದ್ದ ವರದಿ ಕುರಿತು ನನ್ನ ಪಂಚಪ್ರಶ್ನೆ:> ಆ ವರದಿಯಲ್ಲೇನಿದೆ?

> ಈ ವರದಿ ಕೊಟ್ಟ ಅಧಿಕಾರಿಗಳು ಯಾರು?

> ಆ ವರದಿಯನ್ನ ಈವರೆಗೂ CIDಗೆ ಸಲ್ಲಿಸದಿರುವುದೇಕೆ?

> ಆ ಅಧಿಕಾರಿಗಳ ರಕ್ಷಿಸಲು ಸರ್ಕಾರ ಪಡೆಯುತ್ತಿರುವ ಕಮಿಷನ್ ಎಷ್ಟು?

> ನಿಮಗೆ ಅಧಿಕಾರಿಗಳು ಸುಳ್ಳು ಹೇಳಿದರೇ? /ನೀವೇ ಸದನದಲ್ಲಿ ಸುಳ್ಳು ಹೇಳಿದಿರೇ?

ನನಗೆ ಮೂರು ಬಾರಿ ನೋಟಿಸ್ ನೀಡಿರುವ CID, ನನಗಿಂತ ಮುಂಚೆ PSI ಪರೀಕ್ಷೆಯಲ್ಲಿ ಹಗರಣ ನಡೆದಿದೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದ

- ಸಚಿವ ಪ್ರಭು ಚವ್ಹಾಣ್

- ಪರಿಷತ್ ಸದಸ್ಯ ಸಂಕನೂರು

- ಪರಿಷತ್ ಸದಸ್ಯ ಶಶಿಲ್ ನಮೋಷಿ ಯವರಿಗೆ

ಇದನ್ನೂ ಓದಿ:  PSI Recruitment ಅಕ್ರಮದ ಬೆನ್ನತ್ತಿದೆ ಸಿಐಡಿ ಸೈಬರ್ ಟೀಂ; 1000 ಮಂದಿಯ ಶಾರ್ಟ್ ಲಿಸ್ಟ್ ರೆಡಿ

ಇನ್ನೂ ನೋಟಿಸ್ ನೀಡಿಲ್ಲವೇಕೆ? ಇದು ಯಾವ ಸೀಮೆ ತನಿಖೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
Published by:Mahmadrafik K
First published: