PSI Recruitment Scam: ಆಡಿಯೋ ಲೀಕ್​ ಬಳಿಕ ಉಲ್ಟಾ ಹೊಡೆದ ಪರಸಪ್ಪ; ಬ್ಯಾಗ್​ನಲ್ಲಿ ಇದ್ದಿದ್ದು ದುಡ್ಡಲ್ಲ ಪೇರಳೆ ಹಣ್ಣಂತೆ!

ಹೊಸಪೇಟೆಯಲ್ಲಿ ಹೋಗುವ ದಾರಿಯಲ್ಲಿ ಪೇರಳೆ ಹಣ್ಣಿನ ತೋಟ ಇದೆ. ನಮ್ಮವರು ಅದನ್ನು ನನಗೆ ತಂದು ಕೊಟ್ರು ಅದನ್ನೇ ನಾವು ಹಿಡಿದುಕೊಂಡು ನಾವು ಫೋಟೋ ತಗೊಂಡ್ವಿ ಅದರಲ್ಲಿ ಇರೋದು ಪೇರಳೆ ಹಣ್ಣು, ಯಾವುದೇ ದುಡ್ಡು ಅಲ್ಲ  ಎಂದು ಪರಸಪ್ಪ ಹೇಳಿದ್ದಾರೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
PSI ಅಕ್ರಮ ನೇಮಕಾತಿ (PSI Recruitment Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸಪ್ಪ ಎಂಬುವವರು  ತಮ್ಮ ಮಗನಿಗೆ ಕೆಲಸ ಕೊಡಿಸುವಂತೆ ಬಿಜೆಪಿ ಶಾಸಕ (BJP MLA) ಬಸವರಾಜ ದಡೇಸುಗೂರ್‌ (Basavaraj Dadesugur) ಅವರಿಗೆ ಹಣ ನೀಡಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್​ ನಾಯಕರು (Congress Leaders) ಮಾಡಿದ್ರು. ಈ ಆರೋಪಕ್ಕೆ ಸಂಬಂಧಿಸಿದಂತೆ ಪರಸಪ್ಪ (Parasappa) ಅವ್ರೇ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರು ಮಾಡಿದ ಆರೋಪವನ್ನು ಅಲ್ಲಗೆಳೆದಿದ್ದಾರೆ. ಶಾಸಕ ಬಸವರಾಜ ದಡೇಸುಗೂರ್‌ ನಮ್ಮ ಕುಲಬಾಂಧದವರು, ಶಾಸಕರು ಅವರ ಸಂಬಂಧಿಕರಾದ ಆನಂದಪ್ಪ ಅವರ ಜೊತೆ ನಮಗೆ ಜಮೀನಿನ ವ್ಯವಹಾರವಿತ್ತು. ಇದರ ಬಗ್ಗೆ ಮಾತಾಡಲು ನಾವು ಶಾಸಕರ ಬಳಿ ಹೋಗಿದ್ವಿ ಅಷ್ಟೇ ಎಂದು ಪರಸಪ್ಪ ಹೇಳಿದ್ದಾರೆ. 

ಇದು ರಾಜಕೀಯ ಷಡ್ಯಂತ್ರ

ಜಮೀನಿನ ವಿಚಾರಕ್ಕೆ ದುಡ್ಡು ಸೆಟಲ್ ಮಾಡೋ ಬಗ್ಗೆ ಮಾತಾಡಿದ್ವಿ, ಅದರ ಆಡಿಯೋ ವಿಡಿಯೋ ತಿರುಚಿ ರಾಜಕೀಯ ಷಡ್ಯಂತ್ರ ಮಾಡಿದ್ದಾರೆ. ಇದರಲ್ಲಿ ಶಾಸಕ ಬಸವರಾಜ ದಡೇಸುಗೂರ್‌ ಪಾತ್ರ ಏನೂ ಇಲ್ಲ.  ಪಿಎಸ್ ಐ ಕೆಲಸದ ವಿಚಾರದ ಯಾವುದೇ ಮಾತುಕತೆ ನಡೆದಿಲ್ಲ. ಬಡವರಾದ ನಮ್ಮನ್ನ ಈ ಸ್ಥಿತಿಗೆ ತಂದಿದ್ದಾರೆ. ಇದು ರಾಜಕೀಯ ಷಡ್ಯಂತ್ರ ಎಂದು ಪರಸಪ್ಪ ಆರೋಪಿಸಿದ್ದಾರೆ.

PSI Recruitment Scam Congress release BJP MLA Basavaraj Dadesuguru Bribe video mrq
ಹಣ ಪಡೆದಿದ್ದಾರೆ ಎನ್ನಲಾದ ಚಿತ್ರ


ಬ್ಯಾಗ್​ನಲ್ಲಿ ಇದ್ದಿದ್ದು ದುಡ್ಡಲ್ಲ ಪೇರಳೆ ಹಣ್ಣು

ಬಸವರಾಜ ದಡೇಸುಗೂರ್ ಬಳಿ ಹಣ ಕೊಡಿಸಿ ಎಂದು ಹೋಗಿದ್ವಿ . ಅದು ನಾನು ಮಾತನಾಡಿರೋ ವಿಡಿಯೋ ಅಲ್ಲ. ಹೊಸಪೇಟೆಯಲ್ಲಿ ಹೋಗುವ ದಾರಿಯಲ್ಲಿ ಪೇರಳೆ ಹಣ್ಣಿನ ತೋಟ ಇದೆ. ನಮ್ಮವರು ಅದನ್ನು ನನಗೆ ತಂದು ಕೊಟ್ರು ಅದನ್ನೇ ನಾವು ಹಿಡಿದುಕೊಂಡು ನಾವು ಫೋಟೋ ತಗೊಂಡ್ವಿ ಅದರಲ್ಲಿ ಇರೋದು ಪೇರಳೆ ಹಣ್ಣು, ಯಾವುದೇ ದುಡ್ಡು ಅಲ್ಲ  ಎಂದು ಪರಸಪ್ಪ ಹೇಳಿದ್ದಾರೆ.

ಇದನ್ನೂ ಓದಿ:  Karnataka Politics: ನನ್ನನ್ನು ಲೂಟಿ ಅನ್ನೋ ಇವ್ರೇನು ಸತ್ಯಹರಿಶ್ಚಂದ್ರನ ಮಕ್ಕಳಾ? ಸಿಟಿ ರವಿ, ಸಿದ್ದು ನಡುವೆ ಟಾಕ್​ ವಾರ್!

ಸ್ಪಷ್ಟನೆ ನೀಡದೆ ಕಾಲ್ಕಿತ್ತ ಪರಸಪ್ಪ

ತಮಾಷೆಗಾಗಿ ಫೋಟೋ ತೆಗೆದುಕೊಂಡಿದ್ದಾರೆ ಅದನ್ನೇ ತಿರುಚ್ಚಿ ವೈರಲ್ ಮಾಡ್ತಿದ್ದಾರೆ. ಎಂದು ಸರಿಯಾದ ಸ್ಪಷ್ಟನೆ ನೀಡದೆ ಪರಸಪ್ಪ ಕಾಲ್ಕಿತ್ತಿದ್ದಾರೆ. ಮಾಧ್ಯಮಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದೆ ಶಾಸಕರ ಬೆಂಬಲಿಗರ ಜೊತೆ ಪರಸಪ್ಪ ಹೊರಟು ಹೋದ್ರು.

ಪರಸಪ್ಪ ಎಂದೋ ಯುಟರ್ನ್​ ಹೊಡೆದಿದ್ದಾರೆ

ಇನ್ನು ಪರಸಪ್ಪ ಹೇಳಿಕೆ ಬಗ್ಗೆ ಮಾತಾಡಿದ ಕನಕಗಿರಿ ಮಾಜಿ ಶಾಸಕ ಶಿವಾನಂದ್ ತಂಗಡಗಿ ಅವರು ಪರಸಪ್ಪ ಇಂದು ಯೂಟರ್ನ್ ಹೊಡೆದಿಲ್ಲ ಅವರು ಎಂದೋ ಯೂಟರ್ನ್ ಹೊಡೆದಿದ್ದಾರೆ ಎಂದು ಹೇಳಿದ್ರು. ತಾನು ತಪ್ಪೇ ಮಾಡಿಲ್ಲ ಅಂದ್ರೆ ಇವ್ರು ನ್ಯಾಯಾಲಯದ ಮೊರೆ ಯಾಕೆ ಹೋದ್ರು. ನಾನು ನಿಂತ ಜಾಗದಲ್ಲೇ ದಡೆಸುಗೂರು ಮಾತಾಡಿದ್ದಾರೆ. ಸೋಲಿನ ಭೀತಿ ನನಗೆ ಇಲ್ಲಾ 2023ರಲ್ಲಿ ಜನರು ನಿರ್ದಾರ ಮಾಡ್ತಾರೆ. ಸೋಲು ಕಂಡ್ರು ಸ್ವೀಕಾರ ಮಾಡ್ತಿನಿ. ನಾನು ಕೊಟ್ಟ ವಿಡಿಯೋ ತಪ್ಪಾಗಿದ್ರೆ ಶಿಕ್ಷೆ ಅನುಭವಿಸೋಕ್ಕೆ ನಾನು ಸಿದ್ದ ಎಂದು ಪರಸಪ್ಪ ಹೇಳಿದ್ದಾರೆ.

ಇದನ್ನೂ ಓದಿ: Illegal Building: ಎಷ್ಟೇ ದೊಡ್ಡವರಾದ್ರೂ ಬಿಡಲ್ಲ; ನೋಯ್ಡಾ ಮಾದರಿಯಲ್ಲಿ ಸ್ಫೋಟಕ ಇಟ್ಟು ನೆಲಸಮ ಮಾಡ್ತೀವಿ- ಆರ್ ಅಶೋಕ್

ಚೀಲದಲ್ಲಿ ಏನಿತ್ತು ಎನ್ನುವ ತನಿಖೆಯಾಗ್ಲಿ

ದಡೆಸುಗೂರು ಮಾತಾಡಿದ  ಆಡಿಯೋ ಲೀಕ್ ಅಗಿದೆ. ಪರಸಪ್ಪ ತಂದ ಚೀಲದಲ್ಲಿ ರಾಗಿ, ಅಕ್ಕಿ ಏನು  ಇತ್ತೋ ಎನ್ನುವ ಬಗ್ಗೆ ತನಿಖೆ ಮಾಡಲಿ ಕ್ಷೇತ್ರದಲ್ಲಿ ಅವರ ವಿಡಿಯೋ ವೈರಲ್​ ಆಗಿದೆ. ಸಿಎಎಲ್ ಪಿ ನಾಯಕರ ಮುಂದೆ 200 ಮಂದಿ ಪಿಎಸ್ ಐ ಪರೀಕ್ಷೆ ಬರೆದ ಯುವಕರ ಬಂದಿದ್ರು. ಆಡಿಯೋ ನನ್ನದು ಅಂತ ಒಪ್ಪಿಕೊಂಡಿದ್ರು ಅರೆಸ್ಟ್ ಮಾಡೋಕೆ ಭಯ ಯಾಕೆ ಎಂದು ಶಿವಾನಂದ್ ತಂಗಡಗಿ ಪ್ರಶ್ನಿಸಿದ್ರು.
Published by:ಪಾವನ ಎಚ್ ಎಸ್
First published: