• Home
 • »
 • News
 • »
 • state
 • »
 • PSI Recruitment Scam: ಪ್ರಕರಣದ ಪ್ರಮುಖ ಆರೋಪಿ ಬಂಧನ; ಪೊಲೀಸರಿಗೆ ಧಮ್ಕಿ ಹಾಕಿದ ಆರ್ ಡಿ ಪಾಟೀಲ್

PSI Recruitment Scam: ಪ್ರಕರಣದ ಪ್ರಮುಖ ಆರೋಪಿ ಬಂಧನ; ಪೊಲೀಸರಿಗೆ ಧಮ್ಕಿ ಹಾಕಿದ ಆರ್ ಡಿ ಪಾಟೀಲ್

ಪ್ರಿಯತಮ ಮಂಜು ಜೊತೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪ್ರಾಪ್ತೆ ಮನೆಯನ್ನು ಸಹ ತೊರೆದಿದ್ದಳು. ಹಾಗಾಗಿ ಇಬ್ಬರ ಕಥೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. (ಸಾಂದರ್ಭಿಕ ಚಿತ್ರ)

ಪ್ರಿಯತಮ ಮಂಜು ಜೊತೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪ್ರಾಪ್ತೆ ಮನೆಯನ್ನು ಸಹ ತೊರೆದಿದ್ದಳು. ಹಾಗಾಗಿ ಇಬ್ಬರ ಕಥೆ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. (ಸಾಂದರ್ಭಿಕ ಚಿತ್ರ)

ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಸಂಪೂರ್ಣ ರೂವಾರಿ ಈ ಆರ್​ಡಿ ಪಾಟೀಲ್​​. ಅಭ್ಯರ್ಥಿಗಳಿಗೆ ಈತ ಬ್ಲೂಟೂತ್​​​​ ಡಿವೈಸ್ ನೀಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಾಯ ಮಾಡಿದ್ದಾನೆ ಎನ್ನಲಾಗಿದೆ

 • Share this:

  ಕಲಬುರಗಿ (ಏ.23):  ಪಿಎಸ್ಐ ನೇಮಕಾತಿ ಪರೀಕ್ಷೆಯ (PSI Recruitment Scam) ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಕಡೆಗೂ ಪೊಲೀಸರ ಕೈಗೆ ಸೆರೆ ಸಿಕ್ಕಿದ್ದಾನೆ. ಮಹಾರಾಷ್ಟ್ರದಲ್ಲಿ ಆರೋಪಿ ಆರ್. ಡಿ. ಪಾಟೀಲ್​ನನ್ನು (RD Patil) ಸಿಐಡಿ ವಶಕ್ಕೆ ಪಡೆದಿದೆ. ಈತನ ಪತ್ತೆಗೆ ಮುಂದಾಗಿದ್ದ ಸಿಐಡಿ ಅಧಿಕಾರಿಗಳು ಈತ ಇರುವ ಮಾಹಿತಿ ಅರಿತು ಮಹಾರಾಷ್ಟ್ರಕ್ಕೆ (Maharashtra) ತೆರಳಿದ್ದರು. ಅಲ್ಲಿಯೇ ಬೀಡು ಬಿಟ್ಟಿದ್ದ ಅಧಿಕಾರಿಗಳು ಕಡೆಗೂ ಆತನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಆತನನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿಯನ್ನು ಕಲಬುರಗಿಗೆ ಸಿಐಡಿ ಆರೋಪಿಗಳು ಕರೆತರಲು ಮುಂದಾಗಿದ್ದಾರೆ.


  ಪ್ರಕರಣದ ಆರೋಪಿ ಮಹಾಂತೇಶ್​ ನನ್ನು ನಿನ್ನೆ ಸಿಐಡಿ ತಂಡ ಬಂಧಿಸಿತು. ಈ ವೇಳೆ ಮಹಾಂತೇಶ್ ಪಾಟೀಲ್ ಗೆ ಆರ್ ಡಿ ಪಾಟೀಲ್ ಕಾಲ್ ಮಾಡಿದ್ದ. ಮಹಾರಾಷ್ಟ್ರದ ಸೋಲಾಪುರದಲ್ಲಿ ಇದ್ದು ಫೋನ್ ಮಾಡಿದ್ದ ಆರ್ ಡಿ ಪಾಟೀಲ್​ ಕಾಲ್​ ಮಾಡಿದ್ದ. ಸಹೋದರ ಮೊಬೈಲ್ ಗೆ ಕಾಲ್ ಮಾಡಿ ಸಿಐಡಿ ಡಿವೈಎಸ್ ಪಿ ಗೆ ಆರ್​ಡಿ ಪಾಟೀಲ್​ ಧಮ್ಕಿ ಹಾಕಿದ್ದ ಎನ್ನಲಾಗಿದೆ.


  ಆರ್ ಡಿ ಪಾಟೀಲ್ ಲೊಕೇಶನ್ ಮಹಾರಾಷ್ಟ್ರ ದಲ್ಲಿ ಇದೆ ಅನ್ನೋ ಮಾಹಿತಿ ಮೇರೆಗೆ ರಾತ್ರಿ ಸಿಐಡಿ ತಂಡ ಮಹಾರಾಷ್ಟ್ರಕ್ಕೆ ತೆರಳಿತ್ತು. ಈ ವೇಳೆ ಆತನ ಲೊಕೇಶನ್ ಆಧಾರದ ಬಂಧಿಸಲಾಗಿದೆ.


  ಹಗರಣದ ರೂವಾರಿ ಆರ್ ಡಿ ಪಾಟೀಲ್
  ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮದ ಸಂಪೂರ್ಣ ರೂವಾರಿ ಈ ಆರ್​ಡಿ ಪಾಟೀಲ್​​. ಅಭ್ಯರ್ಥಿಗಳನ್ನ ಕಾಂಟ್ಯಾಕ್ಟ್ ಮಾಡಿ ಬ್ಲೂಟೂತ್​​ ಡಿವೈಸ್ ನೀಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಲು ಸಹಾಯ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.


  ಇದನ್ನು ಓದಿ:  2nd PU Exams: ಇಂದು ಸಹ ಪರೀಕ್ಷೆಗೆ ಗೈರಾದ ಹಿಜಾಬ್ ಪರ ಹೋರಾಟಗಾರ್ತಿಯರು


  ಮಹಾಂತೇಶ ಪಾಟೀಲ್​ ನ್ಯಾಯಾಲಯಕ್ಕೆ ಹಾಜರು
  ಇನ್ನು ನಿನ್ನೆ ಬಂಧನಕ್ಕೆ ಒಳಗಾಗಿರುವ ಮಹಾಂತೇಶ ಪಾಟೀಲ್​ನನ್ನು ಇಂದು ಸಿಐಡಿ ತಂಡ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ಅಫಜಲಪುರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿರುವ ಮಹಾಂತೇಶ್​ರನ್ನು ಕಲಬುರಗಿ ಜಿಲ್ಲಾ ಕೋರ್ಟ್​ ಎದುರು ಹಾಜರು ಪಡಿಸಿದ್ದಾರೆ.


  ತಪಿತಸ್ಥರ ವಿರುದ್ಧ ಕ್ರಮ ಎಂದ ಸಿಎಂ
  ಪಿಎಸ್ ಐ ನೇಮಕಾತಿಯ ಯಾವುದೇ ಬ್ಯಾಚ್ ನಲ್ಲಿ ಅಕ್ರಮವಾಗಿದ್ದರೂ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಾಸಕ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಆಡಿಯೋ ನಾನು ಕೇಳಿಲ್ಲ.ಯಾವ ಮೆಟೀರಿಯಲ್ ಇದ್ದರೂ ತನಿಖೆಯಾಗುತ್ತದೆ. ಇಬ್ಬರ ನಡುವೆ ಮಾತುಕತೆಯಾಗಿದೆ. ಅವರಿಬ್ಬರು ಯಾರು, ಅವರ ಅರ್ಹತೆ ಏನು ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ. ಆಡಿಯೋವನ್ನು ಸಹ ತನಿಖೆಗೆ ಒಳಪಡಿಸಿ ಯಾರೇ ತಪ್ಪಿತಸ್ಥರಿದ್ದರೂ, ಯಾವುದೇ ಬ್ಯಾಚ್ ಆಗಿದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.


  ಇದನ್ನು ಓದಿ: Hubballi Riots: ಜಿನ್ನಾ ಮಾನಸಿಕತೆಯನ್ನು ನಾವು ಸಾವರ್ಕರ್ ಮಾನಸಿಕತೆಯಲ್ಲಿ ಎದುರಿಸಬೇಕು: CT Ravi


  13 ಅಭ್ಯರ್ಥಿಗಳು ಸೇರಿ ಅನೇಕರು ವಶಕ್ಕೆ 
  2021ನೇ ಸಾಲಿನ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ. ಪ್ರಕರಣ ಆರೋಪ ಸಂಬಂಧ ಒಟ್ಟು 13 ಅಭ್ಯರ್ಥಿಗಳನ್ನು ಬಂಧಿಸಲಾಗಿದೆ. ವೀರೇಶ್ , ಪ್ರವೀಣ್, ಚೇತನ್ ನಂದಗಾಂವ್, ಅರುಣ್ ಬಂಧನ ಮಾಡಲಾಗಿದೆ. ಡಿಎಆರ್ ಹೆಡ್ ಕಾನ್ಸಟೇಬಲ್​ ಹಯ್ಯಾಳಿ ದೇಸಾಯಿ , ಸಿಎಆರ್ ಕಾನ್ಸಟೇಬಲ್ ರುದ್ರಗೌಡ ಪಾಟೀಲ್ , ಶರಣ ಬಸ್ಸಪ್ಪ ವಿಶಾಲ್ , ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರಾಜೇಶ್ ಹಾಗರಗಿ ಅಕ್ರಮಕ್ಕೆ ಸಾಥ್ ಕೊಟ್ಟವರಾಗಿದ್ದಾರೆ. ಜೊತೆಗೆ ಮೇಲ್ವಿಚಾರಕರಾದ ಸುಮಾ, ಸಾವಿತ್ರಿ, ಸಿದ್ದಮ್ಮ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನು ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನೂ ನಾಪತ್ತೆ ಆಗಿದ್ದಾರೆ.

  Published by:Seema R
  First published: