PSI Recruitment Scam: ಆಟೋದಲ್ಲಿ ಬಂದು ಶರಣಾದ ಕಿಂಗ್ ಪಿನ್; ಕೆಮ್ಮಿದ್ರೆ ಉತ್ತರ ರಿಸೀವ್ ಎಂದರ್ಥ

ಅಭ್ಯರ್ಥಿ ಕೆಮ್ಮಿದರೆ ಉತ್ತರ ರಿಸೀವ್ ಎಂಬ ಸನ್ನೆ ಪಾಸ್ ಮಾಡಲಾಗುತ್ತಿತ್ತು. ಕೆಮ್ಮಿದ ನಂತರ ಮತ್ತೊಂದು ಉತ್ತರವನ್ನು ಹೇಳಲಾಗುತ್ತಿತ್ತು. ಇದಕ್ಕಾಗಿ ಎಲ್ಲರಿಗೂ ಹೊಸ ಸಿಮ್ ನೀಡಲಾಗಿತ್ತು. ಪರೀಕ್ಷೆ ಬಳಿಕ ಬ್ಲ್ಯೂ ಟೂಥ್ ಡಿವೈಸ್ ವಾಪಸ್ ಪಡೆದುಕೊಂಡಿದ್ದಾರೆ. ಜೊತೆಗೆ ಬಳಸಲಾದ ಸಿಮ್ ಕಾರ್ಡ್ ಸಹ ನಾಶಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಸಂಬಂಧ ಪ್ರಕರಣದ ಮತ್ತೋರ್ವ ಕಿಂಗ್ ಪಿನ್ ಇಂಜಿನಿಯರ್ ಮಂಜುನಾಥ್​ ಮೇಳಕುಂದ (Manjunath Melakunda)  ಸಿಐಡಿ ಪೊಲೀಸರ (CID Police) ಮುಂದೆ ಶರಣಾಗಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕೊಂಡು, ಕೈಯಲ್ಲಿ ಬ್ಯಾಗ್ ಹಿಡಿದು ಆಟೋದಲ್ಲಿ ಕಲಬುರಗಿಯ (Kalaburagi) ಸಿಐಡಿ ಕಚೇರಿಗೆ ಬಂದ ಮಂಜುನಾಥ್ ಮೇಳಕುಂದ ಶರಣಾಗಿದ್ದು, ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಮಂಜುನಾಥ್ ಮೇಳಕುಂದ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಪಿಎಸ್ಐ ಅಕ್ರಮ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ 21 ದಿನಗಳಿಂದ ಮಂಜುನಾಥ್ ಮೇಳಕುಂದ ನಾಪತ್ತೆಯಾಗಿದ್ದನು. ಅಕ್ರಮ ಪ್ರಕರಣದ ಪ್ರಮುಖ ಆರೋಪಿ, ಮುಖ್ಯ ಶಿಕ್ಷಕ ಕಾಶಿನಾಥ್ ಇನ್ನೂ ತಲೆ ಮರೆಸಿಕೊಂಡಿದ್ದಾನೆ.

ನನಗೆ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ಮಂಜುನಾಥ್ ಮೇಳಕುಂದ ಶರಣಾಗುವ ಮುನ್ನ ಹೇಳಿಕೆ ನೀಡಿದ್ದಾನೆ. ಈ ಅಕ್ರಮದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಇದರಲ್ಲಿ ನನ್ನ ಪಾತ್ರ ಇಲ್ಲ. ನನಗೆ ತಿಳಿದಿರುವ ಮಾಹಿತಿಯನ್ನು ಸಿಐಡಿ ಪೊಲೀಸರ ಮುಂದೆ ಹೇಳುವೆ ಎಂದು ಮೇಳಕುಂದ ಹೇಳಿದ್ದಾನೆ.

ಆದ್ರೆ ಪ್ರಕರಣದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಕೀಲರ ಸಲಹೆ ಮೇರೆಗೆ ಮಂಜುನಾಥ್ ಮೇಳಕುಂದ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಇನ್ನೂ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ನ್ಯಾಯಾಲಯದಲ್ಲಿದೆ.

ಕೆಮ್ಮಿದ್ರೆ ಉತ್ತರ ರಿಸೀವ್ ಎಂದರ್ಥ

ಆರೋಪಿಗಳು ಪಿಎಸ್ಐ ಪರೀಕ್ಷೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಅಕ್ರಮ ಎಸಗಿದ್ದಾರೆ. ಒಳ ಉಡುಪಿನಲ್ಲಿ ಬ್ಲ್ಯೂ ಟೂಥ್ ಡಿವೈಸ್ ಇರಿಸಿಕೊಂಡಿದ್ದ ಅಭ್ಯರ್ಥಿಗಳು ಕಿವಿಯಲ್ಲಿ ಚಿಕ್ಕದಾದ ಟ್ರಾನ್ಸಮೀಟರ್ ಇರಿಸಿಕೊಂಡಿದ್ದರು ಎಂದು ವಿಜಯವಾಣಿ ವರದಿ ಮಾಡಿದೆ.

ಇದನ್ನೂ ಓದಿ:  PSI Recruitment Scam: ಸಿಐಡಿ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ: ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದ್ದು ಹೀಗೆ?

ಪರೀಕ್ಷೆ ಬಳಿಕ ಸಿಮ್ ಕಾರ್ಡ್ ನಾಶ

ಇನ್ನೂ ನಿಗೂಢ ಸ್ಥಳದಲ್ಲಿ ಕುಳಿತಿದ್ದವರು ಬ್ಲ್ಯೂಟೂಥ್ ಮೂಲಕ ಉತ್ತರ ಹೇಳುತ್ತಿದ್ರು. ಅಭ್ಯರ್ಥಿ ಕೆಮ್ಮಿದರೆ ಉತ್ತರ ರಿಸೀವ್ ಎಂಬ ಸನ್ನೆ ಪಾಸ್ ಮಾಡಲಾಗುತ್ತಿತ್ತು. ಕೆಮ್ಮಿದ ನಂತರ ಮತ್ತೊಂದು ಉತ್ತರವನ್ನು ಹೇಳಲಾಗುತ್ತಿತ್ತು. ಇದಕ್ಕಾಗಿ ಎಲ್ಲರಿಗೂ ಹೊಸ ಸಿಮ್ ನೀಡಲಾಗಿತ್ತು. ಪರೀಕ್ಷೆ ಬಳಿಕ ಬ್ಲ್ಯೂ ಟೂಥ್ ಡಿವೈಸ್ ವಾಪಸ್ ಪಡೆದುಕೊಂಡಿದ್ದಾರೆ. ಜೊತೆಗೆ ಬಳಸಲಾದ ಸಿಮ್ ಕಾರ್ಡ್ ಸಹ ನಾಶಪಡಿಸಿದ್ದಾರೆ.

PSI recruitment scam Accused Manjunath Melakunda Surrender mrq
ಮಂಜುನಾಥ್ ಮೇಳಕುಂದ


ಸತ್ತವರ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿ

ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಗಳು ಎನ್ನಲಾದ ಸೋದರರಾದ ರುದ್ರಗೌಡ ಮತ್ತು ಮಹಾಂತೇಶ ಗೌಡ  ಇಬ್ಬರು ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದರು  ಈ ಸಿಮ್ ಕಾರ್ಡ್ ಬಳಸಿ ಅಭ್ಯರ್ಥಿಗಳಿಗೆ ಉತ್ತರ ನೀಡುತ್ತಿದ್ದಾರೆ. ಇದೇ ನಂಬರ್ ನಿಂದಲೇ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದು ಎಂಬ ಮಾಹಿತಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ

ಉಳಿದ ಆರೋಪಿಗಳಿಗಾಗಿ ತಲಾಶ್

ಇನ್ನು ಪ್ರಕರಣದ ಇನ್ನುಳಿದ ಆರೋಪಿಗಳಾದ ಶಾಂತಾಬಾಯಿ, ಕಾಶಿನಾಥ್ ಮತ್ತು ಮಂಜುನಾಥ್ ಸೋದರ ರವೀಂದ್ರ ಮೇಳಕುಂದ ಇನ್ನು ಪತ್ತೆಯಾಗಿಲ್ಲ. ಆರೋಪಿಗಳ ಬಂಧನಕ್ಕೆ ಸಿಐಡಿ ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ಶೋಧ ಕಾರ್ಯದಲ್ಲಿ ತೊಡಗಿಕೊಂಡಿದೆ.

ಇದನ್ನೂ ಓದಿ:  PSI Recruitment Scam: ಮೃತ ವ್ಯಕ್ತಿಯ ಸಿಮ್ ಕಾರ್ಡ್ ಬಳಸುತ್ತಿದ್ದ ಆರೋಪಿಗಳು: ಸಿಐಡಿ ತನಿಖೆಯಲ್ಲಿ ಸ್ಪೋಟಕ ವಿಷಯ ಬೆಳಕಿಗೆ

ಆಯ್ಕೆಯಾದ ಅಭ್ಯರ್ಥಿಗಳಿಂದ ಉಪವಾಸ ಪ್ರತಿಭಟನೆ

ಪಿಎಸ್ಐ ನೇಮಕಾತಿ ಅಕ್ರಮ ಬೆನ್ನಲ್ಲೇ ಸರ್ಕಾರ ಮರು ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಂಡಿದೆ. ಸರ್ಕಾರದ ನಿರ್ಧಾರವನ್ನು ಖಂಡಿಸಿರುವ ಆಯ್ಕೆಯಾದ ಅಭ್ಯರ್ಥಿಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಒಂಭತ್ತು ಗಂಟೆಗೆ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸಲು ಅಭ್ಯರ್ಥಿಗಳು ನಿರ್ಧರಿಸಿದ್ದಾರೆ. ಸರ್ಕಾರ ಪಿಎಸ್ಐ ಮರು ಪರೀಕ್ಷೆ ರದ್ದುಗೊಳಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಈ ನಡುವೆ ಇಂದು ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಲಿದ್ದಾರೆ
Published by:Mahmadrafik K
First published: