PSI Scam: ಜೈಲಿನಲ್ಲಿ ಮುಖಾಮುಖಿಯಾದ ದಿವ್ಯಾ ಹಾಗರಗಿ & ಪತಿ ರಾಜೇಶ್; ಗಳಗಳನೇ ಕಣ್ಣೀರಿಟ್ಟ ದಂಪತಿ

ಸಿಂಗಲ್ ಸೆಲ್ ನಲ್ಲಿ ಹಾಕಲು ಮುಂದಾದಾಗ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ತನ್ನನ್ನು ಹಾಕುವಂತೆ ಪಟ್ಟು ಹಿಡಿದಿದ್ದಳು. ಆದ್ರೆ ಪೊಲೀಸರು ದಿವ್ಯಾ ಹಾಗರಗಿ ಮನವಿ ಒಪ್ಪದೇ ಸಿಂಗಲ್ ಸೆಲ್ ನಲ್ಲಿ ಹಾಕಿದ್ದಾರೆ.  ಇಲ್ಲಿ 24 ಗಂಟೆಗೂ ಜೈಲಿನ ಕೋಣೆಯಲ್ಲಿ ಬಂಧಿಯಾಗಿರಬೇಕಿದೆ.

ದಿವ್ಯಾ ಹಾಗರಗಿ ಮತ್ತು ರಾಜೇಶ್

ದಿವ್ಯಾ ಹಾಗರಗಿ ಮತ್ತು ರಾಜೇಶ್

  • Share this:
PSI Recruitment Scam: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ (Divya Hagaragi) ಸಿಐಡಿ ಕಸ್ಟಡಿ (CID Custody) ಅಂತ್ಯವಾದ ಹಿನ್ನೆಲೆ ಕಲಬುರಗಿಯ ಕೇಂದ್ರ ಕಾರಾಗೃಹಕ್ಕೆ (Kalaburgi Central Prison) ಶಿಫ್ಟ್ ಮಾಡಲಾಗಿದೆ. ದಿವ್ಯಾ ಹಾಗರಗಿ ಬಂಧನಕ್ಕೂ ಮೊದಲು ಪತಿ ರಾಜೇಶ್ (Divya Hagaragi Husband) ನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ರಾಜೇಶ್ ನನ್ನು ಸಹ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಜೈಲಿನಲ್ಲಿ ಕಂಬಿಗಳ ಹಿಂದೆ ಪತಿ ರಾಜೇಶ್ ನನ್ನು ನೋಡಿ ದಿವ್ಯಾ ಹಾಗರಗಿ ಗಳಗಳನೇ ಕಣ್ಣೀರು ಹಾಕಿದ್ದಾಳೆ ಎಂದು ತಿಳಿದು ಬಂದಿದೆ. ಇತ್ತ ರಾಜೇಶ್ ಸಹ ಪತ್ನಿಯನ್ನು ಕಣ್ಣೀರು ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ದಂಪತಿ ಕಣ್ಣೀರು ಹಾಕಿದ್ದು, ನಂತರ ದಿವ್ಯಾ ಹಾಗರಗಿಯನ್ನು ಮಹಿಳೆಯರ ಸೆಲ್ ನಲ್ಲಿರಿಸಲಾಗಿದೆ.

ಸಿಂಗಲ್ ಸೆಲ್ ನಲ್ಲಿ ಹಾಕಲು ಮುಂದಾದಾಗ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕರ ಮಹಿಳಾ ಬ್ಯಾರಕ್ ನಲ್ಲಿ ತನ್ನನ್ನು ಹಾಕುವಂತೆ ಪಟ್ಟು ಹಿಡಿದಿದ್ದಳು. ಆದ್ರೆ ಪೊಲೀಸರು ದಿವ್ಯಾ ಹಾಗರಗಿ ಮನವಿ ಒಪ್ಪದೇ ಸಿಂಗಲ್ ಸೆಲ್ ನಲ್ಲಿ ಹಾಕಿದ್ದಾರೆ.  ಇಲ್ಲಿ 24 ಗಂಟೆಗೂ ಜೈಲಿನ ಕೋಣೆಯಲ್ಲಿ ಬಂಧಿಯಾಗಿರಬೇಕಿದೆ.

ಜೈಲಿನಲ್ಲಿರುವ ಎಲ್ಲ ಕೈದಿಗಳಿಗೆ ಸಿಗುವ ಸವಲತ್ತುಗಳು ಮಾತ್ರ ಸಿಗಲಿದೆ. ಅದಕ್ಕಿಂತ ಹೆಚ್ಚಾಗಿ ಯಾವುದೇ ಸೌಲಭ್ಯ ನೀಡಲು ಆಗಲ್ಲ ಎಂದು ಜೈಲಿನ ಸಿಬ್ಬಂದಿ ದಿವ್ಯಾ ಹಾಗರಗಿಗೆ ಖಡಕ್ ಆಗಿ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  Belagavi Politics: ಅಪೆಕ್ಸ್ ಬ್ಯಾಂಕ್ ನಲ್ಲಿ 6 ಸಾವಿರ ಕೋಟಿ ಸಾಲ: ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಇಲ್ಲವೇ?

ಭದ್ರತೆಗೆ ಇದ್ದವನೇ ಪ್ರಕರಣದ ಪ್ರಮುಖ ಆರೋಪಿ

ಸಿಐಡಿ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಂ ಭದ್ರತೆಗೆ ನಿಯೋಜನೆಯಾಗಿದ್ದ ಆರ್ ಎಸ್ಐ ಶ್ರೀನಿವಾಸ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಶ್ರೀನಿವಾಸ್ ಸ್ಟ್ರಾಂಗ್ ರೂಂಗೆ ಬರುವ ಉತ್ತರ ಪತ್ರಿಕೆ, ಡಾಟಾ ನೋಡಿಕೊಳ್ಳುತ್ತಿದ್ದನು. ಪಿಎಸ್ಐ ಪರೀಕ್ಷೆಯ ಓಎಂಆರ್ ಶೀಟ್ ಗಳನ್ನು ಸಹ ಇದೇ ಸ್ಟ್ರಾಂಗ್ ರೂಮಿನಲ್ಲಿ ಇರಿಸಲಾಗಿತ್ತು. ಇದರ ಮೇಲುಸ್ತುವಾರಿಯನ್ನು ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದನು.

ಶ್ರೀನಿವಾಸ್ ಸುಪರ್ದಿಯಲ್ಲೆ ಓಎಂಆರ್ ಶೀಟ್ ಗಳಿಗೆ ಕಣ್ಗಾವಲು ಇತ್ತು. ಸ್ಟ್ರಾಂಗ್ ರೂಂ ಭದ್ರತೆಗೆ ಇದ್ದುಕೊಂಡು ಓಎಂಆರ್ ಶೀಟ್ ತಿದ್ದಿದ ಆರೋಪ ಇವರ ಮೇಲಿದೆ. ಆರ್ ಎಸ್ಐ ಆಗಿದ್ದ ಶ್ರೀನಿವಾಸ್ ಬಡ್ತಿ ಪಡೆದ್ರೂ ನೇಮಕಾತಿ ವಿಭಾಗದಲ್ಲೇ ಮುಂದುವರಿದಿದ್ದನು.

ಒಂದೆರಡು ಅಂಕಗಳಿಂದ ವಂಚಿತರಾದವರೇ ಇವರ  ಟಾರ್ಗೆಟ್

ಈ ಹಿಂದೆ ಪಿಎಸ್ಐ ಪರೀಕ್ಷೆ ಬರೆದು ಒಂದೆರಡು ಅಂಕಗಳಿಂದ ವಂಚಿತರಾಗಿ ನೇಮಕಾತಿ ಆಗದ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡುತ್ತಿದ್ರು. ಜಸ್ಟ್ ಮಿಸ್ ಅಭ್ಯರ್ಥಿಗಳನ್ನ ಸಂಪರ್ಕಿಸಿ ಕೆಲಸ ಕೊಡಿಸೋ ಆಮಿಷ ನೀಡುತ್ತಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ನಂತರ ಎಲ್ಲರಿಗೂ ತರಬೇತಿ ಕೊಡಿಸಿ ಎಲ್ಲರ ನಂಬರ್ ಒಂದೇ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ಮಾಡುತ್ತಿದ್ದರು.ನಾಲ್ವರ ಮೊಬೈಲ್ ವಶಕ್ಕೆ

ಬಂಧಿತ ನಾಲ್ವರ ಜೊತೆ ಸಂಪರ್ಕದಲ್ಲಿದ್ದ ಇತರ ಅಧಿಕಾರಿಗಳನ್ನು ವಿಚಾರನೆ ನಡೆಸುವ ಸಾಧ್ಯತೆಗಳಿವೆ. ಈಗಾಗಲೇ ಇಬ್ಬರು ಮಧ್ಯವರ್ತಿಗಳು ಹಾಗೂ ನೇಮಕಾತಿ ವಿಭಾಗದ ನಾಲ್ವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:  Ashwath Narayan: ವಿವಾದದ ಸುಳಿಯಿಂದ ರಕ್ಷಿಸಿಕೊಳ್ಳಲು ‘ಕೈ’ ನಾಯಕರ ಮೊರೆ ಹೋದ್ರಾ ಸಚಿವ ಅಶ್ವತ್ಥ್ ನಾರಾಯಣ?

ಶಿಕ್ಷಕರ ಹುದ್ದೆ ಪರೀಕ್ಷೆಗೆ ಬಿಗಿ ಬಂದೋಬಸ್ತ್

‘ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಒಂದು ತಾಸು ಮೊದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಭ್ಯರ್ಥಿಗಳನ್ನು ಎರಡು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಒಂದು ಹಂತದಲ್ಲಿ ಪೊಲೀಸರು ಹಾಗೂ ಮತ್ತೊಂದು ಹಂತದಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ ತಪಾಸಣೆ ಮಾಡುತ್ತಾರೆ. ಮೊಬೈಲ್ ಫೋನ್, ಬ್ಲೂಟೂತ್, ಕೈ ಗಡಿಯಾರ, ಸ್ಮಾರ್ಟ್ ವಾಚ್, ಸ್ಮಾರ್ಟ್ ಬ್ಯಾಂಡ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಅಭ್ಯರ್ಥಿಗಳು ಸಮಯವನ್ನು ನೋಡಿಕೊಳ್ಳಲು ಎಲ್ಲ ಕೊಠಡಿಗಳಲ್ಲಿ ‘ಗೋಡೆ ಗಡಿಯಾರ’ ಹಾಕಲಾಗುತ್ತದೆ’
Published by:Mahmadrafik K
First published: