PSI Recruitment Scam: ಎಡಿಜಿಪಿ ಅಮೃತ್ ಪೌಲ್​ಗೆ ನ್ಯಾಯಾಂಗ ಬಂಧನ

PSI ನೇಮಕಾತಿ ಪ್ರಕರಣದಲ್ಲಿ ಬಂಧಿತರಾಗಿರೋ ನೇಮಕಾತಿ ಇಲಾಖೆ ಎಡಿಜಿಪಿ ಆಗಿದ್ದ ಅಮೃತ್​ ಪೌಲ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೋರ್ಟ್​ ವಿಚಾರಣೆ ವೇಳೆ ಅಮೃತ್ ಪೌಲ್​ ಅವರಿಗೆ ಮಂಪರು ಪರೀಕ್ಷೆಗೆ ನಡೆಸಲು ಸಿಐಡಿ ಪರ ವಕೀಲರು ಅನುಮತಿ ಕೇಳಿದ್ರು.

ಅಮೃತ್​ ಪೌಲ್​

ಅಮೃತ್​ ಪೌಲ್​

  • Share this:
ಬೆಂಗಳೂರು (ಜು. 15): PSI ನೇಮಕಾತಿ ಪ್ರಕರಣದಲ್ಲಿ (PSI Recruitment Scam) ಬಂಧಿತರಾಗಿರೋ ನೇಮಕಾತಿ ಇಲಾಖೆ ಎಡಿಜಿಪಿ ಆಗಿದ್ದ ಅಮೃತ್ ​ ಪೌಲ್​ (Amrit Paul) ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಐಡಿ ಕಸ್ಟಡಿ (Custody of CID) ಅಂತ್ಯ ಹಿನ್ನೆಲೆ ಇಂದು ಎಡಿಜಿಪಿ ಅಮೃತ್​ ಪೌಲ್​ ಅವರನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಬಳಿಕ ನ್ಯಾಯಾಲಯ ಅಮೃತ್ ಪೌಲ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ನಾಳೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಲಯ (Court) ಸೂಚನೆ ನೀಡಿದೆ. 

ಅಮೃತ್​ ಪೌಲ್​ಗೆ​ ನ್ಯಾಯಾಂಗ ಬಂಧನ

ಸಿಐಡಿ ಕಸ್ಟಡಿ ಅಂತ್ಯ ಹಿನ್ನಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಒಂದನೇ ಎಸಿಎಂಎಂ ಕೋರ್ಟ್ ಗೆ ಆರೋಪಿ ಹಾಜರು ಪಡಿಸಲಾಗಿತ್ತು. ಅಮೃತ್​ ಪೌಲ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ನ್ಯಾಯಾಲಯದ ಸೂಚನೆಯಂತೆ ಕುಟುಂಬಸ್ಥರ ಭೇಟಿಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಅಮೃತ್​ ಪೌಲ್​ ಕುಟುಂಬಸ್ಥರನ್ನು ಭೇಟಿಯಾಗಿ ಕೆಲ ಕಾಲ ಮಾತುಕತೆ ನಡೆಸಿದ್ರು.

ಮಂಪರು ಪರೀಕ್ಷೆಗೆ ಅನುಮತಿ ಕೇಳಿದ ಸಿಐಡಿ

ಕೋರ್ಟ್​ ವಿಚಾರಣೆ ವೇಳೆ ಅಮೃತ್ ಪೌಲ್​ ಅವರಿಗೆ ಮಂಪರು ಪರೀಕ್ಷೆ  ನಡೆಸಲು ಸಿಐಡಿ ಪರ ವಕೀಲರು ಅನುಮತಿ ಕೇಳಿದ್ರು. ಜೊತೆಗೆ ಫಾಲಿಗ್ರಾಪ್ ಟೆಸ್ಟ್ ಮಾಡಿಸಲು ನ್ಯಾಯಾಲಯದ ಅನುಮತಿ ಕೇಳಲಾಗಿದೆ. ನಾಳೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಲಯ ಸೂಚನೆ ನೀಡಿದೆ. ಪಿಎಸ್ಐ ಪ್ರಕರಣದ ಸ್ಪೆಷಲ್ ಪಿಪಿಯಾಗಿ ಪ್ರಸನ್ನ ಕುಮಾರ್ ನೇಮಕ ಅವರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ: Student Protest: ಮಹಾರಾಣಿ ಕ್ಲಸ್ಟರ್ ವಿವಿಯಲ್ಲಿ ಪರೀಕ್ಷಾ ಶುಲ್ಕ ಹೆಚ್ಚಳ, ಪ್ರತಿಭಟನೆ ಮಾಡಿದ್ರೆ ಮಾರ್ಕ್ಸ್ ಕಟ್!

ಕಂಬಿ ಹಿಂದೆ ಅಮೃತ್ ಪೌಲ್​

ಕೋರ್ಟ್​ ಎಡಿಜಿಪಿ ಅಮೃತ್ ಪಾಲ್ ಅವರನ್ನು ನ್ಯಾಯಾಂಗ ಬಂಧನ ಬಂಧನಕ್ಕೆ ಒಪ್ಪಿಸಿದ್ದು, ಎಡಿಜಿಪಿಯ ಸೆರೆ ಮನೆವಾಸ ಶುರುವಾಗಲಿದೆ. ಅಮೃತ್​ ಪೌಲ್​ ಅವರಿಗೆ ಜೈಲಿನಲ್ಲಿ ಪ್ರತಿದಿನ ಅರ್ಧ ಗಂಟೆ ಕುಟುಂಬದವರ ಭೇಟಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಜೈಲಿನ ನಿಯಮಾವಳಿ ಪ್ರಕಾರ ವೈದ್ಯಕೀಯ ನೆರವು ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಲಾಗಿದೆ.

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ (PSI Scam) ರಾಜ್ಯ ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಅಮೃತ್ ಪೌಲ್ (Amrit Paul) ಅವರನ್ನು ಸಿಐಡಿ‌ ಪೊಲೀಸರು (CID Police) ಬಂಧಿಸಿದ್ದರು. ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಗೃಹ ಇಲಾಖೆ ವರ್ಗಾವಣೆ ಮಾಡಿತ್ತು. ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಹಾಗೂ ಅಭ್ಯರ್ಥಿಗಳು ಸೇರಿದಂತೆ ಸಿಐಡಿ ಬೆಂಗಳೂರು ವಿಭಾಗದ ಅಧಿಕಾರಿಗಳು 20ಕ್ಕಿಂತ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: BBMP Ward: ಬದಲಾಗಿದೆ ಬಿಬಿಎಂಪಿಯ 24 ವಾರ್ಡ್​ಗಳ ಹೆಸರು; ಈ ಲಿಸ್ಟ್​ನಲ್ಲಿದ್ಯಾ ನಿಮ್ಮ ಏರಿಯಾ?

ಸಾಕ್ಷ್ಯಧಾರ ಸಂಗ್ರಹಿಸಿ ಬಂಧನ

2019ರಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿ ಪ್ರಮೋಷನ್ ಪಡೆದಿದ್ದ ಅಮೃತ್ ಪಾಲ್. ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದಿದ್ದು, ಅಮೃತ್ ಪಾಲ್ ವರ್ಗಾವಣೆಗೆ ವಿರೋಧ ಪಕ್ಷಗಳಿಂದ ಒತ್ತಾಯ ಮಾಡಿದ್ರು. ಸಿಐಡಿ ತನಿಖೆ ಬೆನ್ನಲ್ಲೇ ಎತ್ತಂಗಡಿ ಮಾಡಿದ್ದ ಸರ್ಕಾರ. ಏಪ್ರಿಲ್ 27 ರಂದು ನೇಮಕಾತಿ ವಿಭಾಗದಿಂದ ಅಮೃತ್ ಪೌಲ್​ರನ್ನು ಎತ್ತಂಗಡಿ ಮಾಡಲಾಗಿತ್ತು. ನೇಮಕಾತಿ ವಿಭಾಗದ ಹಲವು ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರೋದು ಗೊತ್ತಾಗಿತ್ತು. ಈ ಸಂಬಂಧ ಕೆಲ ಅಧಿಕಾರಿಗಳನ್ನ ಬಂಧಿಸಿ ಸಿಐಡಿ ವಿಚಾರಣೆ ನಡೆಸಿದೆ. ಅಮೃತ್ ಪೌಲ್ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು
Published by:Pavana HS
First published: