• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Araga Jnanendra: ಪ್ರಿಯಾಂಕ್ ಖರ್ಗೆ ಅಲ್ಲ ಪ್ರಚಾರ ಖರ್ಗೆ; PSI ಕೇಸ್​ನಲ್ಲಿ ವಿಜಯೇಂದ್ರ ಕೈವಾಡವಿಲ್ಲ

Araga Jnanendra: ಪ್ರಿಯಾಂಕ್ ಖರ್ಗೆ ಅಲ್ಲ ಪ್ರಚಾರ ಖರ್ಗೆ; PSI ಕೇಸ್​ನಲ್ಲಿ ವಿಜಯೇಂದ್ರ ಕೈವಾಡವಿಲ್ಲ

ಗೃಹ ಸಚಿವ ಅರಗ ಜ್ಞಾನೇಂದ್ರ

ಗೃಹ ಸಚಿವ ಅರಗ ಜ್ಞಾನೇಂದ್ರ

CID ಪ್ರಿಯಾಂಕ್​ ಖರ್ಗೆ ಅವರಿಗೆ ಪತ್ರ ಬರೆದು ದಾಖಲೆ ಕೇಳಿದ್ರು ಅವರು ಸಾಕ್ಷಿ ಕೊಡಲಿಲ್ಲ. ವಿಜಯೇಂದ್ರ ಬಗ್ಗೆ ಕಾಂಗ್ರೆಸ್​ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾತಾಡಿದ್ದ ಅವ್ರು ಯಾರ ಪುತ್ರ, ಯಾರ ಪುತ್ರಿ ಅಂತ ಬರೋದಿಲ್ಲ, ಸಾಕ್ಷಿ ಕೊಡದೆ ಸುಮ್ಮನೆ ವಿಜಯೇಂದ್ರ ಮೇಲೆ ಆರೋಪ ಮಾಡಲಾಗ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ಮುಂದೆ ಓದಿ ...
  • Share this:

ಬೆಂಗಳೂರು (ಜು.5): PSI ನೇಮಕಾತಿ ಅಕ್ರಮಕ್ಕೆ (PSI Recruitment Case) ಸಂಬಂಧಿಸಿದಂತೆ ಕಾಂಗ್ರೆಸ್​, ಬಿಜೆಪಿ ಸರ್ಕಾರದ ವಿರುದ್ಧ ಒಂದಾದ ಮೇಲೊಂದು ಆರೋಪ ಮಾಡುತ್ತಿದೆ. ಅಕ್ರಮ ನೇಮಕಾತಿ ಪ್ರಕರಣದಲ್ಲಿ ಪಿಎಸ್ ಹಗರಣದಲ್ಲಿ ಸರ್ಕಾರದ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮಗ ಭಾಗಿಯಾದ ಆರೋಪ ಕೇಳಿಬರುತ್ತಿದ್ದೆ ಎಂದು ಸಿದ್ದರಾಮಯ್ಯ (Siddaramaiah) ಆರೋಪಿಸಿದ್ದಾರೆ. ಕಾಂಗ್ರೆಸ್​  ಆರೋಪಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ನಾವು ತನಿಖೆ ಮಾಡಲು ಸಿದ್ದ ದಾಖಲೆ ಕೊಡಿ ಎಂದ್ರು. CID ಪ್ರಿಯಾಂಕ್​ ಖರ್ಗೆ (Priyank Kharge) ಅವರಿಗೆ ಪತ್ರ ಬರೆದು ದಾಖಲೆ ಕೇಳಿದ್ರು ಅವರು ಸಾಕ್ಷಿ ಕೊಡಲಿಲ್ಲ. ವಿಜಯೇಂದ್ರ (Vijayendra) ಬಗ್ಗೆ ಕಾಂಗ್ರೆಸ್​ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾತಾಡಿದ್ದ ಅವ್ರು ಯಾರ ಪುತ್ರ, ಯಾರ ಪುತ್ರಿ ಅಂತ ಬರೋದಿಲ್ಲ, ಸಾಕ್ಷಿ ಕೊಡದೆ ಸುಮ್ಮನೆ ವಿಜಯೇಂದ್ರ ಮೇಲೆ ಆರೋಪ ಮಾಡಲಾಗ್ತಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.


ವಿಜಯೇಂದ್ರ, ಅಶ್ವತ್ಥ ನಾರಾಯಣ ಭಾಗಿಯಾಗಿಲ್ಲ


ಕಾಂಗ್ರೆಸ್​ ಕಾಲದಲ್ಲಿ ಹಗರಣ ಆಗಿದ್ದ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ. ನಮ್ಮ ಕಾಲದಲ್ಲಿ ಮುಚ್ಚಿ ಹಾಕುವ ಕೆಲಸ ಆಗಿಲ್ಲ. ಸಿಐಡಿ ತನ್ನ ಕೆಲಸ ಮಾಡ್ತಿದೆ ಇನ್ನೂ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ವಿಜಯೇಂದ್ರ, ಅಶ್ವತ್ಥ ನಾರಾಯಣ ಭಾಗಿಯಾಗಿಲ್ಲ. ತನಿಖೆ ನಡೆಯುತ್ತಿದೆ, ಮುಂದುವರೆಯಲಿದೆ. ಯಾರೇ ತಪ್ಪಿತಸ್ಥರು ಕ್ರಮ ಕೈಗೊಳ್ತೀವಿ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.


ಪ್ರಿಯಾಂಕ್ ಖರ್ಗೆ ಅಲ್ಲ ಅವರು ಪ್ರಚಾರ ಖರ್ಗೆ


ಪ್ರಿಯಾಂಕ್ ಖರ್ಗೆ ಅಲ್ಲ ಅವರು ಪ್ರಚಾರ ಖರ್ಗೆ ಎಂದು ಸಚಿವ ಆರಗ ಜ್ಞಾನೇಂದ್ರ ವ್ಯಂಗ್ಯ ಮಾಡಿದ್ರು. ದಿಡೀರ್ ಅಂತ ಪ್ರಚಾರಕ್ಕೆ ಬರ್ತಾರೆ. ಏನ್ ಬೇಕಾದ್ರೂ ಹೇಳಿ ಪ್ರಚಾರ ಪಡೆಯೋಕೆ ಮುಂದಾಗ್ತಾರೆ. ACB ಸಾಕ್ಷಿ ಕೊಡಿ ಎಂದ್ರು ಕೊಟ್ಟಿಲ್ಲ ಮಾಹಿತಿ ಇಲ್ಲದೆ ಪ್ರಚಾರ ಪಡೆಯೋಕೆ ಪ್ರತ್ಯಕ್ಷವಾಗ್ತಾರೆ ಎಂದು ಪ್ರಿಯಾಂಕ್​ ಖರ್ಗೆ ವಿರುದ್ಧ ಆರಗ ಜ್ಞಾನೇಂದ್ರ ಕಿಡಿಕಾರಿದ್ರು.


ಇದನ್ನೂ ಓದಿ: Suspend: ಕಳಂಕಿತ ಅಧಿಕಾರಿಗಳಿಗೆ ಅಮಾನತು ಶಿಕ್ಷೆ; ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್


ನ್ಯಾಯಾಧೀಶರು ಯಾವುದೇ ದೂರು ನೀಡಿಲ್ಲ


ಜಡ್ಜ್‌ಗೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಗೃಹ ಸಚಿವರು, ಧಮ್ಕಿ ವಿಚಾರದ ಬಗ್ಗೆ ಮಾಹಿತಿ ಪಡೆಯುತ್ತೇನೆ. ಯಾರಾದ್ರೂ ಆ ರೀತಿ ಹೇಳಿದ್ರೆ ಅವರ ಮೇಲೆ ಕ್ರಮ ಕೈಗೊಳ್ತೀವಿ. ಈ ಬಗ್ಗೆ ನ್ಯಾಯಾಧೀಶರು ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ರು.


ಸರ್ಕಾರದ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮಗ ಭಾಗಿ


ಪಿಎಸ್‌ಐ ಹಗರಣ ಮತ್ತು ಎಸಿಬಿ ದಾಳಿ ವಿಚಾರ ಪ್ರಸ್ತಾಪಿಸಿ ಟ್ವೀಟ್‌ ಮಾಡಿರುವ ಅವರು, ‘ಪಿಎಸ್‌ಐ ಹಗರಣದಲ್ಲಿ ಸರ್ಕಾರದ ಸಚಿವರು, ಮಾಜಿ ಮುಖ್ಯಮಂತ್ರಿಗಳ ಮಗ ಭಾಗಿಯಾದ ಆರೋಪ ಕೇಳಿಬರುತ್ತಿದ್ದು, ಜನರ ಗಮನ ಬೇರೆಡೆಗೆ ಸೆಳೆಯಲು ನಮ್ಮ‌ ಪಕ್ಷದ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಮನೆ, ಕಚೇರಿಗಳ ಮೇಲೆ ಎಸಿಬಿ ಮೂಲಕ ದಾಳಿ ಮಾಡಿಸಲಾಗಿದೆ. ಇಂತಹ ರಾಜಕೀಯ ಪ್ರೇರಿತ ಎಸಿಬಿ ದಾಳಿಯನ್ನು ನಾನು ಖಂಡಿಸುತ್ತೇನೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: CM Bommai: ಗೃಹ ಸಚಿವರ ರಾಜೀನಾಮೆ ಕೇಳಲು ಕಾಂಗ್ರೆಸ್​​ಗೆ ನೈತಿಕ ಹಕ್ಕಿಲ್ಲ: ಸಿಎಂ ಬೊಮ್ಮಾಯಿ ಕಿಡಿ


ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಮಂಗಳವಾರ ನಸುಕಿನಲ್ಲಿ 5 ಸ್ಥಳಗಳ ಮೇಲೆ ದಾಳಿ ಮಾಡಿ, ಶೋಧ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ನೀಡಿರುವ ವರದಿ ಆಧರಿಸಿ ಜಮೀರ್‌ ವಿರುದ್ಧ ಎಸಿಬಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿದೆ

Published by:Pavana HS
First published: