Ashwath Narayan: 'ನಮ್ಮ ಕುಟುಂಬ ಏನು ಡಿಕೆಶಿ ಕುಟುಂಬದ ತರ ಅಲ್ಲ, ಅವನ ಒಂದೊಂದೇ ಬಂಡವಾಳ ಬಿಚ್ಚಿಡುತ್ತೇನೆ'

ನನ್ನಂತ ವ್ಯಕ್ತಿ ಮೇಲೆ ಆರೋಪ ಮಾಡ್ತಾರೆ ಅಂದರೆ ಇವರನ್ನು ಸುಮ್ಮನೆ ಬಿಡೋಕೆ ಆಗುತ್ತಾ?, ಡಿ.ಕೆ ಶಿವಕುಮಾರ್​ ಬಂಡವಾಳವನ್ನು ಒಂದೊಂದಾಗಿಯೇ ಬಿಚ್ಚಿಡುತ್ತೇನೆ  ಎಂದು ಡಿಕೆಶಿ ವಿರುದ್ದ ಮತ್ತೊಮ್ಮೆ ಸಚಿವ ಅಶ್ವತ್ಥ​ ನಾರಾಯಣ್ ತೊಡೆತಟ್ಟಿದ್ದಾರೆ.

ಸಚಿವ ಅಶ್ವತ್ಥ​ ನಾರಾಯಣ್

ಸಚಿವ ಅಶ್ವತ್ಥ​ ನಾರಾಯಣ್

  • Share this:
ಬೆಂಗಳೂರು (ಮೇ 2): ಪಿಎಸ್​ಐ ನೇಮಕಾತಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಕಾಂಗ್ರೆಸ್ (Congress) ಮಾಡಿದ ಆರೋಪಕ್ಕೆ ಸಚಿವ ಅಶ್ವತ್ಥ ನಾರಾಯಣ್ (Minister Ashwath Narayan) ಕೆಂಡಾಮಂಡಲರಾಗಿದ್ದು,  ಕಾಂಗ್ರೆಸ್​ ನಾಯಕರ (Congress Leaders) ಬಂಡವಾಳವನ್ನು ನಾನೇ ಬಿಚ್ಚಿಡುತ್ತೇನೆ ಎಂದು ಕಿಡಿಕಾರಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ನಾವು ಒಬ್ಬೇ  ಒಬ್ಬ ವ್ಯಕ್ತಿಗೂ ಸಹಾಯ ಮಾಡುವಂತ ಕೆಲಸ ಮಾಡಿಲ್ಲ, ಆಪಾದನೆ (Accusation) ಮಾಡ್ತಿರುವವರು ಸ್ಪಷ್ಟವಾಗಿ ಮಾತಾಡುವ ಪ್ರಯತ್ನ ಮಾಡಿಲ್ಲ, ಸಹಾಯ ಮಾಡಿರಬಹುದು, ಹೋಗಿರಬಹುದು ಎಂದು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಯಾರೋ ಒಬ್ಬ ವ್ಯಕ್ತಿ ಉತ್ತಮನಾಗಿದ್ದಾನೆ, ಅವನಿಗೆ ಕಪ್ಪು ಮಸಿ ಬಳಿಯಬೇಕು ಎಂದು ಆರೋಪ ಮಾಡ್ತಿದ್ದಾರೆ. ಒಬ್ಬ ನಾಯಕನಾಗಿ ಬೆಳೆಯುತ್ತಿರೋದನ್ನು ಸಹಿಸಲಾಗೇ ಈ ರೀತಿ ದುರುದ್ದೇಶದಿಂದ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದ್ರು.

ಉಪ್ಪು ತಿಂದವರು ನೀರು ಕುಡಿಬೇಕು

ಅಕ್ರಮದಲ್ಲಿ ಭಾಗಿಯಾದವರಿಗೆ ಶಿಕ್ಷೆ ಆಗುತ್ತೆ, ಉಪ್ಪು ತಿಂದವರು ನೀರು ಕುಡಿಯಲೇಬೇಕು ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಸಚಿವ ಅಶ್ವತ್ಥ್​ ನಾರಾಯಣ್​ ಹೇಳಿದ್ದಾರೆ. ಆಧಾರ ಸಹಿತವಾಗಿ ಒಂದೇ ಒಂದು ಹೇಳಿಕೆಯನ್ನು ಅವ್ರು ಕೊಟ್ಟಿಲ್ಲ, ಅವನು ಯಾವ ವ್ಯಕ್ತಿ ಎಂಬುದೇ ನನಗೆ ಗೊತ್ತಿಲ್ಲ. ನನ್ನ ರಾಜಕೀಯ ಜೀವನ ಪಾರದರ್ಶಕವಾಗಿದೆ ಎಂದು ಸಚಿವ ಆಶ್ವತ್ಥ ನಾರಾಯಣ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್​ ವಿರುದ್ಧ ಕಿಡಿ

ರಾಮನಗರ ಜಿಲ್ಲೆ ಇವರನ್ನು ಸಂಪೂರ್ಣವಾಗಿ ಯಾರು ಒಪ್ಪಿಲ್ಲ, ಅವರು ಬರೀ ಕನಕಪುರಕ್ಕೆ ಮಾತ್ರ ಸೀಮಿತ ಆಗಿದ್ದಾರೆ. ಆಧಾರ ಇಲ್ಲದೇ ಯಾರಾದರೂ ಆರೋಪ ಮಾಡ್ತಾರಾ ಎಂದು ಪ್ರಶ್ನೆ ಮಾಡಿದ್ರು. ಒಬ್ಬ ಮುಖ್ಯಮಂತ್ರಿ ಆಗ್ತಿದ್ದಾರೆ ಅಂತ ಅವ್ರೇ ಅಂದುಕೊಂಡು ಆರೋಪ ಮಾಡ್ತಾರೆ ಅಂದರೆ, ನನ್ನ ಕಂಡರೆ ಅವರಿಗೆ ಎಷ್ಟು ಭಯ ಇರಬಹುದು ಎಂದು ನೀವೇ ನೋಡಿ.

Coal Crisis: ರಾಜ್ಯದಲ್ಲಿ ಕಲ್ಲಿದ್ದಲ ಅಭಾವ ಇಲ್ಲ; ಸಿದ್ದರಾಮಯ್ಯಗೆ ಸುನೀಲ್​ ಕುಮಾರ್​ ತಿರುಗೇಟು

ಡಿಕೆಶಿ ಬಂಡವಾಳ ಬಿಚ್ಚಿಡುತ್ತೇನೆ

ನನ್ನಂತ ವ್ಯಕ್ತಿ ಮೇಲೆ ಆರೋಪ ಮಾಡ್ತಾರೆ ಅಂದರೆ ಇವರನ್ನು ಸುಮ್ಮನೆ ಬಿಡೋಕೆ ಆಗುತ್ತಾ?, ಡಿ.ಕೆ ಶಿವಕುಮಾರ್​ ಬಂಡವಾಳವನ್ನು ಒಂದೊಂದಾಗಿಯೇ ಬಿಚ್ಚಿಡುತ್ತೇನೆ  ಎಂದು ಡಿಕೆಶಿ ವಿರುದ್ದ ಮತ್ತೊಮ್ಮೆ ಸಚಿವ ಅಶ್ವಥ್ ನಾರಾಯಣ್ ತೊಡೆತಟ್ಟಿದ್ದಾರೆ. ಡಿಕೆಶಿ ಒಬ್ಬ ಕಡು ಭ್ರಷ್ಟ ಅಂತಾ ಇದೇ ಉಗ್ರಪ್ಪ ಹೇಳಿದ್ದ. ಇವನಿಗೆ ನಾಚಿಕೆ ಆಗೋಲ್ವಾ?, ನಮ್ಮ ಕುಟುಂಬ ಏನು ಡಿಕೆಶಿ ಕುಟುಂಬ ತರ ಅಲ್ಲ, ಕೆಲ ರಾಜಕಾರಣಿಗಳು ಎಲ್ಲವನ್ನೂ ಬಿಟ್ಟಿರ್ತಾರೆ. ಅಶ್ವತ್ಥ ನಾರಾಯಣ್ ಮೇಲೆ ಇಂತಹ ನೂರು ಜನರು ಮಸಿ ಬಳಿಯುವ ಪ್ರಯತ್ನ ಮಾಡಿದ್ರು ಅದಕ್ಕೆ ನಾನು ಹೆದರುವುದಿಲ್ಲ.ನಮ್ಮಣ್ಣನಿಗೂ ಅಕ್ರಮಕ್ಕೂ ಯಾವುದೇ ಸಂಬಂಧವಿಲ್ಲ

ಕಾಂಗ್ರೆಸ್ ನವ್ರು ಆಧಾರ ಸಹಿತವಾಗಿ ಮಾತಾಡ್ತಿಲ್ಲ, ನನಗೆ ಯಾರ ಜತೆಗೂ ಸಂಬಂಧ ಇಲ್ಲ, ನಾನು ದರ್ಶನ್ ಗೌಡ ಎಂಬುವರ ಹೆಸರು ಈಗಲೇ ಕೇಳ್ತಿರೋದು, ನಾನು ಭ್ರಷ್ಟಾಚಾರ ಮಾಡಲು ಬಂದವನಲ್ಲ, ಭ್ರಷ್ಟಾಚಾರ‌ ಮಾಡಲು ಬಂದವರೇ ಬೇರೆ ಇದ್ದಾರೆ ಎಂದ್ರು, ನಮ್ಮಣ್ಣ ಸತೀಶ್ ಅವರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ, ನೂರಕ್ಕೆ ನೂರು‌ ರಷ್ಟು ಯಾವುದೇ ಸಂಬಂಧ ಇಲ್ಲ, ಎಂದು ಸ್ಪಷ್ಟನೆ ನೀಡಿದ್ರು.

ಇದನ್ನೂ ಓದಿ: Corona Virus: ರಾಜ್ಯದಲ್ಲಿ ರೂಪಾಂತರಿ BA.2.12 ಪತ್ತೆ, ಕೊರೊನಾ 4ನೇ ಅಲೆ ಆತಂಕ

ಡಿಕೆಶಿ ಕೊಳಕಿನ ಜಾಲ ಬಿಡಿಸ್ತೀನಿ

ಇಂಥ ಸಾವಿರ ಜನ ಪ್ರಯತ್ನ ಮಾಡಿದ್ರೂ ಅಶ್ವತ್ಥ್​​ ನಾರಾಯಣಗೆ ಮಸಿ ಬಳಿಯಲು ಆಗಲ್ಲ, ಆರ್ಗನೈಸ್ಡ್ ಕ್ರೈಂ ಇದು, ಇವತ್ತಿಂದ ನಾನು ಡಿ.ಕೆ ಶಿವಕುಮಾರ್ ಅವರ ಕೊಳಕಿನ ಜಾಲ ಬಿಡಿಸ್ತೀನಿ, ಅವ್ರ  ಬಂಡವಾಳವನ್ನು ಒಂದೊಂದಾಗಿ ಬಿಚ್ಚಿಡೋದಾಗಿ ಸಚಿವ ಅಶ್ವತ್ಥ್​ ನಾರಾಯಣ್​ ಹೇಳಿದ್ದಾರೆ.
Published by:Pavana HS
First published: