Araga Jnanendra: PSI ಮರು ಪರೀಕ್ಷೆಯ ದಿನಾಂಕ ಶೀಘ್ರದಲ್ಲೇ ಪ್ರಕಟ; ಪ್ರಿಯಾಂಕ್ ಖರ್ಗೆಗೆ ಗೃಹ ಸಚಿವರ ತಿರುಗೇಟು

ಅಕ್ರಮ ಆಗಿರುವುದರಿಂದ ನಮ್ಮ ಕಣ್ಣು ತೆರೆದಂತೆ ಆಗಿದೆ. ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದರು.

 ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

  • Share this:
ಶಿವಮೊಗ್ಗ(ಏ.30) :  ಪಿಎಸ್​ಐ ಅಕ್ರಮದ ಕುರಿತು ಮಾತಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಶೀಘ್ರದಲ್ಲಿಯೇ PSI ಮರು ಪರೀಕ್ಷೆಯ ದಿನಾಂಕ (Re-Examination Date) ಪ್ರಕಟ ಮಾಡುವುದಾಗಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, ಪಿಎಸ್ಐ ಪರೀಕ್ಷೆಯ ಅಕ್ರಮದ ಕುರಿತು ಒಂದೂಂದೇ ಅಂಶ ಹೊರಗೆ ಬರ್ತಾ ಇದೆ.‌ ಈಗಾಗಲೇ ಪ್ರಕರಣ ಸಂಬಂಧ ಅನೇಕರನ್ನು ಬಂಧಿಸಲಾಗಿದೆ.‌ ಪರೀಕ್ಷೆಯಲ್ಲಿ ಹೊಸ ಹೊಸ ಟೆಕ್ನಾಲಜಿ (New Technology) ಬಳಸಿ ಅಕ್ರಮ ಎಸಗಿದ್ದಾರೆ. ಈಗ ಮರು ಪರೀಕ್ಷೆ ಮಾಡುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ನಾವು ನೋಟಿಫಿಕೇಷನ್ ರದ್ದು ಮಾಡಿಲ್ಲ, ಪರೀಕ್ಷೆ ರದ್ದು ಮಾಡಿದ್ದೇವೆ. ಈಗಾಗಲೇ ಪರೀಕ್ಷೆ ಬರೆದಿದ್ದವರಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಾವಂತರಿಗೆ ಅವಕಾಶ ಸಿಗಬೇಕು

ಅಕ್ರಮ ಆಗಿರುವುದರಿಂದ ನಮ್ಮ ಕಣ್ಣು ತೆರೆದಂತೆ ಆಗಿದೆ. ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಎಂಬ ಕಾರಣದಿಂದ ಸರಿಯಾದ ರೀತಿಯಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದರು. ಈ ರೀತಿ ಪರೀಕ್ಷೆಯಲ್ಲಿ ವಂಚನೆ ಆಗುವುದನ್ನು ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರಬೇಕು ಎನ್ನುವ ಚಿಂತನೆ ಇದೆ.‌

ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಬಾರದು

ತಪ್ಪಿತಸ್ಥರು ಜೈಲಿನಿಂದ ಹೊರಗೆ ಬರಬಾರದು. ಕಷ್ಟಪಟ್ಟು ಓದಿದವರಿಗೆ ಅನ್ಯಾಯವಾಗಬಾರದು.‌ ಹಣ ಕೊಟ್ಟು ಓದಿದವರಿಗೆ ನ್ಯಾಯಸಿಗಬೇಕು. ಹಣಕೊಟ್ಟು ಕೊಂಡುಕೊಳ್ಳುತ್ತೇನೆ ಎನ್ನುವವರು ತೊಲಗಬೇಕು. ಮರು ಪರೀಕ್ಷೆಯಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಇರುವುದಿಲ್ಲ ಎಂದು ತಿಳಿಸಿದರು.

ಇದನ್ನು ಓದಿ: PSI Recruitment Scam: 54 ಸಾವಿರ ಅಭ್ಯರ್ಥಿಗಳಿಗೆ ಪಿಎಸ್ಐ ಮರು ಪರೀಕ್ಷೆ: ಅಕ್ರಮ ನಡೆದಿರೋದನ್ನ ಒಪ್ಪಿಕೊಂಡ ಸರ್ಕಾರ

ಸಾಕ್ಷಿಗಳನ್ಜು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ

ಪ್ರಿಯಾಂಕ ಖರ್ಗೆ ಅವರು ಮಾಧ್ಯಮದವರ ಮುಂದೆ ಬಂದು ಮಾತನಾಡುತ್ತಿದ್ದಾರೆ. ಅದನ್ನು ಸಿಐಡಿ ಮುಂದೆ ಬಂದು ಹೇಳಬೇಕು. ಅವರು ತಮ್ಮ ದಾಖಲಾತಿಗಳನ್ನು ಸಿಐಡಿ ಮುಂದೆ ಬಂದು ನೀಡಲಿ. ಸಾಕ್ಷಿಗಳನ್ಜು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಅಂದ್ರೆ, ಬೆನ್ನು ತೋರಿಸಿ‌ ಪಲಾಯನ ಮಾಡುತ್ತಿದ್ದಾರೆ ಎಂದರು. ಅಕ್ರಮ ಹಿನ್ನೆಲೆಯಲ್ಲಿ ಪಿಎಸ್​ಐ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ. ಮರು ಪರೀಕ್ಷೆಯ ನಿರ್ಧಾರಕ್ಕೆ ಪಿಎಸ್​ಐ ಆಗಿ ಆಯ್ಕೆ ಆದವರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.

ಪಿಎಸ್‌ಐ ಮರು ಪರೀಕ್ಷೆ ನಿರ್ಧಾರ ಸ್ವಾಗತ!

ಪಿಎಸ್‌ಐ ಮರು ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಇದೆ. ಪರಿಕ್ಷೆಯಲ್ಲಿ ಯಾರು ಅಕ್ರಮ ಮಾಡಿದ್ದಾರೆ, ಯಾರು ಸರಿಯಾಗಿ ಬರೆದಿದ್ದಾರೆ ಗೊತ್ತಾಗಲ್ಲ. ತನಿಖೆ ಮುಂದುವರಿದು 20 ಜನರ ಬಂಧನ ಆಗಿದೆ. ಹೀಗಾಗಿ ಮರು ಪರೀಕ್ಷೆ ಮಾಡುವುದು ಸರಿ ಇದೆ ಎಂದ ಸಿದ್ದರಾಮಯ್ಯ, ಈಗ ಪರೀಕ್ಷೆ ಬರೆದಿರುವ ಯಾರ ಬಳಿಯೂ ಪರಿಕ್ಷಾ ಶುಲ್ಕ ಪಡೆಯಬಾರದು. ಬಿಜೆಪಿ ದುರಾಡಳಿತದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಒಂದು ಕ್ಷಣವೂ ಪದವಿಯಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದರು.

ಪಿಎಸ್​ಐ ಪರೀಕ್ಷೆಗೆ ವಿರೋಧ

ಸರ್ಕಾರ ಪಿಎಸ್‌ಐ ಪರೀಕ್ಷೆಯನ್ನು ಮತ್ತೆ ಮಾಡುವುದಾಗಿ ಘೋಷಿಸಿದೆ. ಈ ಹಿನ್ನೆಲೆ ಪಿಎಸ್‌ಐ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಗರದ ಹಲವೆಡೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ವೈಮನಸ್ಸು ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, 'ಕಾನೂನು ಪ್ರಕಾರ ನೂರು ಜನಕ್ಕೆ ಶಿಕ್ಷೆ ಆಗದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾದರು' ಎನ್ನುತ್ತದೆ. ಆದರೆ, ಇಲ್ಲಿ ಬುಹುತೇಕ ನಿರಪರಾಧಿಗಳಿಗೆ ಶಿಕ್ಷೆ ಆಗುತ್ತಿದೆ. ಈ ರೀತಿಯ ಸರ್ಕಾರದ ನೀತಿ ಸರಿ ಅಲ್ಲ.


ಇದನ್ನು ಓದಿ: Amit Shah ಹೇಳಿಕೆ ತಿರುಚಲಾಗಿದೆ, ಇಂಗ್ಲಿಷ್ ಗುಲಾಮಿತನದ ಭಾಷೆ: ಮತ್ತೆ Hindi ಪರ ಒಲವು ತೋರಿಸಿದ CT Ravi

ಪ್ರಾಮಾಣಿಕವಾಗಿ ಬರೆದವರಿಗೂ ಅನ್ಯಾಯ

ಇದರಿಂದ ಪ್ರಾಮಾಣಿಕವಾಗಿ ಬರೆದವರಿಗೂ ಅನ್ಯಾಯವಾಗುತ್ತದೆ. ಅದರೊಂದಿಗೆ ನಮ್ಮಲ್ಲಿ ಅನೇಕರು ವಯೋಮಿತಿ ಗಡಿಯಲ್ಲಿ ಇದ್ದಾರೆ. ಅವರ ಕನಸು ಮತ್ತು ಪರಿಶ್ರಮ ಎರಡೂ ವ್ಯರ್ಥವಾಗುತ್ತದೆ ಎಂದರು. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದು, ಶನಿವಾರ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

Published by:Pavana HS
First published: