• Home
  • »
  • News
  • »
  • state
  • »
  • PSI Riot: ನಾನೇ ಈ ಅಪಾರ್ಟ್​ಮೆಂಟ್​ ಬಾಸ್, ನಂದೇ ರೂಲ್ಸ್​​! ಅಕ್ಕಪಕ್ಕದ ನಿವಾಸಿಗಳ ಮೇಲೆ ಪಿಎಸ್ಐ ಹಲ್ಲೆ!

PSI Riot: ನಾನೇ ಈ ಅಪಾರ್ಟ್​ಮೆಂಟ್​ ಬಾಸ್, ನಂದೇ ರೂಲ್ಸ್​​! ಅಕ್ಕಪಕ್ಕದ ನಿವಾಸಿಗಳ ಮೇಲೆ ಪಿಎಸ್ಐ ಹಲ್ಲೆ!

PSI ಗೂಂಡಾವರ್ತನೆ

PSI ಗೂಂಡಾವರ್ತನೆ

ನೀರು ಮತ್ತು ಎಲೆಕ್ಟ್ರಿಸಿಟಿ ಬಂದ್ ವಿಚಾರಕ್ಕೆ ಪಿಎಸ್ಐ, ಅಪಾರ್ಟ್​ಮೆಂಟ್ ಪ್ರೆಸಿಡೆಂಟ್ ಹಾಗೂ ನಿವಾಸಿಗಳ ನಡುವೆ ಮಾರಾಮಾರಿ ನಡೆದಿದ್ದು, ಪಿಎಸ್ಐ ವಿರುದ್ಧ ದೂರು ನೀಡಲಾಗಿದೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.05): ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ, ಪೊಲೀಸರೇ ಗೂಂಡಾಗಿರಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನಡು ರಸ್ತೆಯಲ್ಲೇ ಅಪಾರ್ಟ್​ಮೆಂಟ್​ ನಿವಾಸಿಗಳ ಮೇಲೆ ಸಬ್​ ಇನ್ಸ್​ಪೆಕ್ಟರ್ (Sub Inspector) ಹಲ್ಲೆ ಮಾಡಿದ್ದಾರೆ. ಪರಪ್ಪನ ಅಗ್ರಹಾರ ಠಾಣೆ PSI ಗಂಗಾಧರ್​ ರಸ್ತೆಯಲ್ಲಿ ಗೂಂಡಾವರ್ತನೆ ತೋರಿದ್ದು, ಸಬ್​ ಇನ್ಸ್​ಪೆಕ್ಟರ್​ ವಿರುದ್ಧ  ಅಪಾರ್ಟ್‌ಮೆಂಟ್​ ನಿವಾಸಿಗಳು (Apartment Resident) ಆಕ್ರೋಶ ಹೊರ ಹಾಕಿದ್ದಾರೆ. ನೀರಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್ (Mahaveer Arcade Apartment) ನಿವಾಸಿ ಮೇಲೆ PSI ಗಂಗಾಧರ್ ಹಲ್ಲೆ  ಮಾಡಿದ್ದಾರೆ. ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್​ ಆಗಿದ್ದು, ಪೊಲೀಸ್ ಅಧಿಕಾರಿ (Police Officer) ವರ್ತನೆ ಬಗ್ಗೆ ಸಾರ್ವಜನಿಕರು ಸಹ ಕಿಡಿಕಾರಿದ್ದಾರೆ.


ಈ ಅಪಾರ್ಟ್​ಮೆಂಟ್​ಗೆ PSI ಬಾಸ್​ ಅಂತೆ!


ಹೊಸ ರೋಡ್  ಚೂಡಸಂದ್ರದ ಬಳಿ ಇರುವ ಮಹಾವೀರ್ ಆರ್ಕೇಡ್ ಅಪಾರ್ಟ್​ಮೆಂಟ್ ನಲ್ಲೇ ವಾಸವಿರುವ ಗಂಗಾಧರ್​, ನೀರು ಬಿಡುವ ವಿಚಾರಕ್ಕೆ ಜಗಳ ತೆಗೆದಿದ್ದಾರೆ. PSIನನ್ನು ಅಪಾರ್ಟ್​ಮೆಂಟ್​ ಜನರು ಬಾಸ್​ ರೀತಿ ನೋಡ್ಬೇಕಂತೆ, ಏನೇ ಫೆಸಿಲಿಟಿ ಇದ್ರು ಅದನ್ನು ಪಿಎಸ್​ಐಗೆ ಉಚಿತವಾಗಿ ಕೊಡ್ಬೇಕಂತೆ, ಏನೇ ಡಿಸೈಡ್ ಮಾಡಿದ್ರೂ ನಾನೇ ಮಾಡ್ಬೇಕು ಎಂದು ಪಿಎಸ್​ಐ ಗಂಗಾಧರ್ ಅಪಾರ್ಟ್​ಮೆಂಟ್​ ನಿವಾಸಿಗಳ ಮೇಲೆ ಒತ್ತಡ  ಹೇರುತ್ತಿದ್ರು ಎನ್ನುವ ಆರೋಪ ಕೇಳಿಬಂದಿದೆ.
ಅಪಾರ್ಟ್​ಮೆಂಟ್​ ನಿವಾಸಿ ಮೇಲೆ ಹಲ್ಲೆ


ಅಪಾರ್ಟ್​ಮೆಂಟ್​ನಲ್ಲಿ ನಿತ್ಯ ಪಿಎಸ್​ಐ ಕಾಟಕ್ಕೆ ಬೇಸತ್ತ ನಿವಾಸಿಗಳು, ಪಿಎಸ್​ಐ ವಿರುದ್ಧ ಧ್ವನಿ ಎತ್ತಿದ್ದಾರೆ. ಇದಕ್ಕೆ ಸಿಟ್ಟಾದ ಪಿಎಸ್​ಐ ಗಂಗಾಧರ್​ ನಡು ರಸ್ತೆಯಲ್ಲೇ ಅಪಾರ್ಟ್​ಮೆಂಟ್​ ನಿವಾಸಿ ಮೇಲೆ ಹಲ್ಲೆ ನಡೆಸಿ, ಗೂಂಡಾವರ್ತನೆ ತೋರಿದ್ದಾರೆ. ಬಳಿಕ ನಿವಾಸಿಗಳು ವಿಡಿಯೋವನ್ನು ಬೆಂಗಳೂರು ಸಿಟಿ ಪೊಲೀಸ್​ಗೆ ಟ್ವೀಟ್​ ಮಾಡಿ ದೂರು ನೀಡಿದ್ದಾರೆ.


ಇದನ್ನೂ ಓದಿ: JDS Party: ವಿಧಾನಸಭೆ ಚುನಾವಣೆಗೆ ಜೆಡಿಎಸ್​ ರಣತಂತ್ರ, ಅಭ್ಯರ್ಥಿಗಳಿಗೆ ರಹಸ್ಯ ಸ್ಥಳದಲ್ಲಿ ತರಬೇತಿ!ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು


ನೀರು ಮತ್ತು ಎಲೆಕ್ಟ್ರಿಸಿಟಿ ಬಂದ್ ವಿಚಾರಕ್ಕೆ ಪಿಎಸ್ಐ ಮತ್ತು ಅಪಾರ್ಟ್‌ಮೆಂಟ್ ಪ್ರೆಸಿಡೆಂಟ್ ಹಾಗೂ ನಿವಾಸಿಗಳ ನಡುವೆ ಮಾರಾಮಾರಿ ನಡೆದಿದ್ದು, ಅಪಾರ್ಟ್​ಮೆಂಟ್​ ನಿವಾಸಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿ ಸಹ ನಿವಾಸಿಗಳ ದೂರು ಆಧರಿಸಿ ಪಿಎಸ್ಐ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.


PSI ಸ್ಥಳಾಂತರಕ್ಕೆ ಮನವಿ


ಹಿಂದೆ ಸಹ PSI ಗಂಗಾದರ್​ ಸಾಕಷ್ಟು ಬಾರಿ ಗಲಾಟೆ ಮಾಡಿದ್ದರಂತೆ. ಹೀಗಾಗಿ ಪಿಎಸ್ಐ ನನ್ನು ಅಪಾರ್ಟ್​ಮೆಂಟ್‌ನಿಂದ ಬೇರೆಡೆಗೆ ಸ್ಥಳಾಂತರ ಮಾಡಲು ನಿವಾಸಿಗಳು ಮನವಿ ಮಾಡಿದ್ದಾರೆ. ಅಧಿಕಾರಿಗಳು ಸಹ ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ.


ಇದನ್ನೂ ಓದಿ: Janardhana Reddy: ಕಾಂಗ್ರೆಸ್‌ನಿಂದ ರಾಜಕೀಯ ಅಖಾಡಕ್ಕೆ ಇಳಿತಾರಾ ಗಣಿಧಣಿ? ಹುಲಿ ಬೇಟೆಗೆ ನಿಂತ್ರೆ ಆಡದೇ ಬಿಡಲ್ಲ ಅಂದ್ರು ಜನಾರ್ದನ ರೆಡ್ಡಿ!


PSI ಗಂಗಾಧರ್ ವಿರುದ್ಧ ನಿವಾಸಿಗಳ ಆಕ್ರೋಶ


ಅಲ್ಲದೆ PSI ಗಂಗಾಧರ್​ ಕಳೆದ ಹಲವು ತಿಂಗಳಿನಿಂದ ಫ್ಲಾಟ್​ Maintenance ಚಾರ್ಜ್ ಪಾವತಿ ಮಾಡಿಲ್ಲ. ಹೀಗಾಗಿ ಅವರ ಮನೆಗೆ ಇಂದು ನೀರಿನ ಸಂಪರ್ಕ ಮತ್ತು ಎಲೆಕ್ಟ್ರಿಸಿಟಿ ಸಂಪರ್ಕ ಕಟ್ ಆಗಿದೆ. ಇದನ್ನು ಪಿಎಸ್​ಐ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರು ನಿವಾಸಿಗಳನ್ನು ಠಾಣೆಗೆ ಕರೆದೊಯ್ಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಇತರೆ ಅಪಾರ್ಟ್​ಮೆಂಟ್ ನಿವಾಸಿಗಳು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನಾ ಸ್ಥಳಕ್ಕೆ ಅಲ್ಲಿನ ನಿವಾಸಿ ಪಿಎಸ್ಐ ಗಂಗಾಧರ್ ಸಹ ಬಂದಿದ್ದರು. ಈ ವೇಳೆ ಅಪಾರ್ಟ್ ಮೆಂಟ್ ನಿವಾಸಿಗಳು ಮತ್ತು ಪಿಎಸ್ ನಡುವೆ ಮಾರಾಮಾರಿ ನಡೆದಿದೆ.

Published by:ಪಾವನ ಎಚ್ ಎಸ್
First published: