ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದ (PSI Exam Scam) ತನಿಖೆ (Enquiry) ಚುರುಕುಗೊಂಡಿದೆ. ಈಗಾಗಲೇ ತನಿಖೆ ಚುರುಕುಗೊಳಿಸಿರುವ ಸಿಐಡಿ ತಂಡ (CID Team), ಪರೀಕ್ಷೆಯಲ್ಲಿ (Exam) ಪಾಸ್ (Pass) ಆಗಿದ್ದ ಅಭ್ಯರ್ಥಿಗಳ (Candidates) ವಿಚಾರಣೆ ಇದೀಗ ಮುಂದುವರೆಸಿದೆ. ಒಟ್ಟು 545 ಅಭ್ಯರ್ಥಿಗಳನ್ನೂ ವಿಚಾರಣೆ ನಡೆಸಲು ಸಿಐಡಿ ತಂಡ ತೀರ್ಮಾನಿಸಿದೆ. ಸಿಆರ್ಪಿಸಿ (CRPC) ಕಾಲಂ 91ರ ಅಡಿ ಈಗಾಗಲೇ ಅಭ್ಯರ್ಥಿಗಳಿಗೆ ನೊಟೀಸ್ (Notice) ನೀಡಲಾಗಿದೆ. 545 ಅಭ್ಯರ್ಥಿಗಳನ್ನು ಹಂತ ಹಂತವಾಗಿ ವಿಚಾರಣೆ ನಡೆಸಲಿರುವ ಸಿಐಡಿ ಅಧಿಕಾರಿಗಳು, ಎಲ್ಲರನ್ನೂ ಹಂತ ಹಂತವಾಗಿ ವಿಚಾರಣೆ ನಡೆಸಲು ನಿರ್ಧರಿಸಿದೆ. ಒಟ್ಟು ಹತ್ತು ದಿನಗಳ ಕಾಲ ನಿರಂತರವಾಗಿ ಅಭ್ಯರ್ಥಿಗಳ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ 10 ಅಭ್ಯರ್ಥಿಗಳ ವಿಚಾರಣೆ
ನಿನ್ನ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಒಟ್ಟು 50 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದರು. ಈ ಪೈಕಿ 45 ಜನ ಅಭ್ಯರ್ಥಿಗಳು ಮಾತ್ರ ವಿಚಾರಣೆಗೆ ಹಾಜರಾಗಿದ್ದರು. ಇವರಲ್ಲಿ 10 ಜನರ ಒಂದು ಬ್ಯಾಚ್ ಮಾಡಿ, 10 ಮಂದಿಯನ್ನು ವಿಚಾರಣೆ ನಡೆಸಲಾಗಿದೆ. ಸತತ 3 ಗಂಟೆಗೂ ಅಧಿಕ ಕಾಲ ನಿನ್ನೆ ವಿಚಾರಣೆ ನಡೆಸಲಾಗಿದೆ. ಎಲ್ಲಾ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿರಿಸಿ ವಿಚಾರಣೆ ನಡೆಸಿದ ಸಿಐಡಿ ಟೀಂ, ಅವರಿಂದ ಮಹತ್ವದ ಮಾಹಿತಿ ಪಡೆದಿದೆ.
ಇಂದು 50 ಅಭ್ಯರ್ಥಿಗಳಿಗೆ ನೋಟಿಸ್
ಇಂದು ಲಿಸ್ಟ್ ನಲ್ಲಿ ಮುಂದುವರೆದ ಬೇರೆ 50 ಮಂದಿ ಅಭ್ಯರ್ಥಿಗಳ ವಿಚಾರಣೆ ನಡೆಸಲಾಗುತ್ತದೆ. ಈಗಾಗಲೆ ವಿಚಾರಣೆಗೆ ಹಾಜರಾಗುವಂತೆ ಅಭ್ಯರ್ಥಿಗಳಿಗೆ ಸಿಐಡಿ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಇನ್ನು ನಾಳೆ ಕೂಡ ವಿಚಾರಣೆಗೆ ಹಾಜರಾಗುವಂತೆ 50 ಜನ ಅಭ್ಯರ್ಥಿಗಳಿಗೆ ನೊಟೀಸ್ ನೀಡಲಾಗಿದೆ. ಸಿಐಡಿ ತನಿಖಾಧಿಕಾರಿ ನರಸಿಂಹ ಮೂರ್ತಿ ನೇತೃತ್ವದಲ್ಲಿ ಅಭ್ಯರ್ಥಿಗಳ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: PSI Exams Scam: ಮೂರು ಬಾರಿ ಪರೀಕ್ಷೆಯಲ್ಲಿ ಫೇಲ್, 4ನೇ ಬಾರಿ 20 ಪ್ರಶ್ನೆಗೆ ಉತ್ತರಿಸಿ 121 ಅಂಕ ಪಡೆದ!
ವಿವಿಧ ಆಯಾಮಗಳಲ್ಲಿ ವಿಚಾರಣೆ
ವಿಚಾರಣೆಗೆ ಹಾಜರಾದ ಅಭ್ಯರ್ಥಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅವರ ಒರಜಿನಲ್ ದಾಖಲೆ, ಓಎಂಆರ್ ಕಾರ್ಬನ್ ಶೀಟ್ಗಳನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು, ಅಭ್ಯರ್ಥಿಗಳ ಆರ್ಥಿಕ ಪರಿಸ್ಥಿತಿ, ಆಸ್ತಿ, ಆದಾಯ ಮೂಲದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಪರೀಕ್ಷೆ ಬರೆಯುವ ಕೋಚಿಂಗ್ ವ್ಯವಸ್ಥೆ, ಎಕ್ಸಾಂನಲ್ಲಿ ಬರೆದಿರುವ ಬಗ್ಗೆ ವಿಚಾರಣೆಯಲ್ಲಿ ಪ್ರಶ್ನೆ ಹಾಕಲಾಗಿದ್ದು, ಪರೀಕ್ಷೆ ವೇಳೆ ಹಾಜರಿದ್ದ ಮೇಲ್ವಿಚಾರಕರು ಮತ್ತು ಪರೀಕ್ಷಾ ಕೇಂದ್ರದ ಕುರಿತಾಗಿ ಪ್ರಶ್ನೆಗಳನ್ನ ಕೇಳಲಾಗಿದೆ.
ಇನ್ನೂ ಪತ್ತೆಯಾಗದ ಬಿಜೆಪಿ ನಾಯಕಿ
ಇನ್ನು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಲಬುರಗಿ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಒಡತಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಕಳೆದ ಏಳು ದಿನಗಳಿಂದ ಸಿಐಡಿ ಪೋಲಿಸರು ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಸುತ್ತಿದ್ದರು ಸಹ ಈವರೆಗೂ ದಿವ್ಯಾ ಪತ್ತೆ ಹಚ್ಚುವಲ್ಲಿ ಸಾಧ್ಯವಾಗಿಲ್ಲ. ದಿವ್ಯಾ ಪತಿ ರಾಜೇಶ್ ಹಾಗರಗಿಯ ಮಾಹಿತಿ ಮೇರೆಗೆ ವಿಜಯಪುರಕ್ಕೂ ಕೂಡ ಸಿಐಡಿ ತಂಡ ಹೋಗಿ ಬರಿಗೈನಲ್ಲಿ ವಾಪಸ್ಸಾಗಿದ್ದಾರೆ.
ಇದನ್ನೂ ಓದಿ: Kalaburagi: PSI ನೇಮಕಾತಿ ಅಕ್ರಮ ಪ್ರಕರಣ: ಬಿಜೆಪಿ ನಾಯಕಿಯ ಪತಿ ಅರೆಸ್ಟ್
ತೆರೆಮರೆಯಿಂದಲೇ ಜಾಮೀನಿಗಾಗಿ ದಿವ್ಯಾ ಅರ್ಜಿ
ಇನ್ನು ಸಿಐಡಿ ಕೆೈಗೆ ಸಿಗದೇ ನಾಪತ್ತೆಯಾಗಿರುವ ದಿವ್ಯಾ ಹಾಗರಗಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ದಿವ್ಯಾ ಹಾಗರಗಿ ಅಲ್ಲದೆ, ಮುಖ್ಯೋಪಾಧ್ಯಾಯರಾದ ಕಾಶಿನಾಥ್ ಹಾಗೂ ಸಹ ಶಿಕ್ಷಕಿ ಅರ್ಚನಾ ಎಂಬುವರಿ ಇಲ್ಲಿನ ಜೆಎಫ್ಎಂಎ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ