PSI Exam Scam: ಎಕ್ಸಾಂ ಮುಗಿದ ಮೇಲೆ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ! ಆಯ್ಕೆಯಾದ ಅಣ್ಣ-ತಮ್ಮನಿಗೂ ಈಗ ಸಂಕಷ್ಟ

ದಿವ್ಯಾ ಹಾಗರಗಿ ಸೇರಿದಂತೆ ಆರೋಪಿಗಳ ಬಣ್ಣ ಬಣ್ಣದ ಬದುಕಿನ ವಿಚಾರಗಳು ಒಂದೊಂದಾಗೇ ಹೊರಕ್ಕೆ ಬರುತ್ತಿವೆ. ಪಿಎಸ್ಐ ಪರೀಕ್ಷೆ ಮುಗಿದ ಮೇಲೆ ಆರೋಪಿಗಳು ಕಿಂಗ್ ಪಿನ್ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ (Group Photo) ತೆಗೆಸಿಕೊಂಡಿದ್ದಾರೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದ (PSI Exam Scam) ತನಿಖೆ (Enquiry) ಮುಂದುವರೆದಿದೆ. ಪ್ರಕರಣದ ಕಿಂಗ್ ಪಿನ್ (King Pin) ದಿವ್ಯಾ ಹಾಗರಗಿ (Divya Hagaragi) ಬಂಧನದ ಬಳಿಕ ಆಕೆಯ ವಿಚಾರಣೆ ತೀವ್ರ ಗೊಂಡಿದೆ. ಈ ನಡುವೆ ಕೆಲವೊಂದು ಸುಳಿವಿನ ಆಧಾರದ ಮೇಲೆ ಅನೇಕ ಆರೋಪಿಗಳನ್ನು (Accused) ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ದಿವ್ಯಾ ಹಾಗರಗಿ ಸೇರಿದಂತೆ ಆರೋಪಿಗಳ ಬಣ್ಣ ಬಣ್ಣದ ಬದುಕಿನ ವಿಚಾರಗಳು ಒಂದೊಂದಾಗೇ ಹೊರಕ್ಕೆ ಬರುತ್ತಿವೆ. ಪಿಎಸ್ಐ ಪರೀಕ್ಷೆ ಮುಗಿದ ಮೇಲೆ ಆರೋಪಿಗಳು ಕಿಂಗ್ ಪಿನ್ ದಿವ್ಯಾ ಹಾಗರಗಿ ಜೊತೆ ಗ್ರೂಪ್ ಫೋಟೋ (Group Photo) ತೆಗೆಸಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಈ ಸಂಬಂಧ ಫೋಟೋ ಒಂದು ಓಡಾಡುತ್ತಿದ್ದು, ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಎಕ್ಸಾಂ ಮುಗಿದ ಮೇಲೆ ಗ್ರೂಪ್ ಫೋಟೋಗೆ ಪೋಸ್!

ಹೌದು, ಈ ಸಂಬಂಧ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಎಸ್ಐ ಕಿಂಗ್ ಪಿನ್ ದಿವ್ಯಾ ಹಾಗರಗಿ ಜೊತೆ ಅಧಿಕಾರಿಗಳ ಗ್ರೂಪ್ ಫೋಟೋ ಇದು ಎನ್ನಲಾಗುತ್ತಿದೆ. ಪಿಎಸ್ಐ ಪರೀಕ್ಷೆಗೆ ದಿವ್ಯಾ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ನಿಯೋಜನೆಗೊಂಡಿದ್ದ ಅಧಿಕಾರಿ, ಸಿಬ್ಬಂದಿ ವರ್ಗದ ಗ್ರೂಪ್ ಫೋಟೋ ಇದಾಗಿದ್ದು, ಎಕ್ಸಾಂ ಮುಗಿದ್ಮೇಲೆ ಪಿಎಸ್ಐ ಡೀಲರ್ಸ್ ಗ್ರೂಪ್ ಫೋಟೋ ತೆಗೆಸಿದ್ರಾ ಎಂಬ ಅನುಮಾನ ಕಾಡುತ್ತಿದೆ.

ಫೋಟೋದಲ್ಲಿ ಯಾರೆಲ್ಲ ಇದ್ದಾರೆ?

ವೈರಲ್ ಆಗಿರುವ ಫೋಟೋದಲ್ಲಿ ದಿವ್ಯಾ ಹಾಗರಗಿ, ಆಕೆಯ ಪತಿ ರಾಜೇಶ್, ಎಸಿಪಿ ಹೊಸಮನಿ, ಇನ್ಸ್‌ಪೆಕ್ಟರ್ ದಿಲೀಪ್ ಸಾಗರ್, ಪರೀಕ್ಷಾ ಕೇಂದ್ರದ ಇನ್ವಿಜಿಲೇಟರ್ ಗಳು ಹಾಗೂ ಸಿಬ್ಬಂದಿ ಇದ್ದಾರೆ. ಪಿಎಸ್ಐ ಪರೀಕ್ಷೆ ಮುಗಿದ ನಂತರ ತೆಗೆದಿದ್ದಾರೆ ಎನ್ನಲಾದ ಫೋಟೋ ಇದಾಗಿದ್ದು, ಇದರಲ್ಲಿರುವ ಬಹುತೇಕರನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಇನ್ನು ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ: Kannadada Kotyadhipatiಯಲ್ಲಿ ಭಾಗವಹಿಸಿದ್ದ ಪ್ರತಿಭಾವಂತ ಯುವಕ ಸೂಸೈಡ್! ಗೃಹಪ್ರವೇಶಕ್ಕೂ ಮುನ್ನವೇ ಸಾವಿಗೆ ಶರಣು

ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಅಣ್ಣ-ತಮ್ಮ

ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಅಣ್ಣ-ತಮ್ಮ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ಈ ಇಬ್ಬರ ಮೇಲೂ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನಲ್ಲಿ ನಡೆದ ಅಕ್ರಮದಲ್ಲಿ ಸಹೋದರರಾದ ನಾರಾಯಣ ಹಾಗೂ ನಾಗರಾಜ ಎಂಬುವರು ಭಾಗಿಯಾಗಿದ್ದಾರೆ.

ಓಎಂಆರ್‌ ಶೀಟ್, ಕಾರ್ಬನ್ ಶೀಟ್‌ನಲ್ಲಿ ವ್ಯತ್ಯಾಸ

ನಾರಾಯಣ ಸಿ ಎಂ, ಪಿಎಸ್ಐ ನೇಮಕಾತಿಯಲ್ಲಿ 9ನೇ ರ್ಯಾಂಕ್ ಪಡೆದು ಆಯ್ಕೆ ಆಗಿದ್ದ. ಈತ ಬರೆದ ಮೊದಲ ಪತ್ರಿಕೆಯಲ್ಲಿ 24, ಎರಡನೇ ಪತ್ರಿಕೆಯಲ್ಲಿ 133.5 ಹೀಗೆ  ಒಟ್ಟು 157.5 ಅಂಕ ಗಳಿಸಿದ್ದ. ಆದರೆ ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಓಎಂಆರ್ ಶೀಟ್ ಮತ್ತು ಕಾರ್ಬನ್ ಶೀಟ್ ನಲ್ಲಿ ವ್ಯತ್ಯಾಸ ಬೆಳಕಿಗೆ ಬಂದಿದೆ. ಹೀಗಾಗಿ ಸಿಐಡಿ ಅಧಿಕಾರಿಗಳು ಈತನ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ನಲ್ಲಿ ನಾರಾಯಣ ಸಿ.ಎಂ ಎ12 ಆರೋಪಿಯಾಗಿದ್ದಾನೆ.

ಇದನ್ನೂ ಓದಿ: Love Jihad: ದಲಿತ ಬಾಲಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್, ಲವ್ ಜಿಹಾದ್‌ಗಾಗಿ ನಡೆದಿತ್ತಾ ವಾಮಾಚಾರ?

ಸಹೋದರನ ಮೇಲೂ ಕೇಸ್ ದಾಖಲು

ಅದೇ ರೀತಿ ನಾರಾಯಣನ ಸಹೋದರ ನಾಗರಾಜ ಸಿ ಎಂ ಮೇಲೂ ಕೇಸ್ ದಾಖಲಾಗಿದೆ. ಪಿಎಸ್ಐ ಪರೀಕ್ಷೆಯಲ್ಲಿ 11ನೇ ರ್ಯಾಂಕ್ ಪಡೆದಿದ್ದ ನಾಗರಾಜ ಸಿ ಎಂಗೆ ಮೊದಲ ಪತ್ರಿಕೆಯಲ್ಲಿ 31, ಎರಡನೇ ಪತ್ರಿಕೆಯಲ್ಲಿ 126, ಒಟ್ಟು-157 ಅಂಕ ಬಂದಿದ್ದವು. ನಾಗರಾಜನ ಮೇಲೂ ಓಎಂಆರ್ ಶೀಟ್ ತಿದ್ದಿದ ಆರೋಪ ಕೇಳಿ ಬಂದಿದ್ದು, ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ನಾಗರಾಜ ಎ21 ಆರೋಪಿಯಾಗಿದ್ದಾನೆ.
Published by:Annappa Achari
First published: