PSI Recruitment Scam: ತನಿಖಾ ವರದಿಗೂ ಮುನ್ನವೇ ಪರೀಕ್ಷೆ ರದ್ದು ಮಾಡಿದ್ದು ತಪ್ಪು; ಡಿ.ಕೆ ಶಿವಕುಮಾರ್​

ಸಿಎಂ ಏನು ಆಗಿಲ್ಲ ಅಂತಾರೆ ಮುಖ್ಯ ಅರೋಪಿಯನ್ನ ಬಂಧಿಸಿದ್ದಾರೆ. ಅವರನ್ನ ಬಿಜೆಪಿ ನಾಯಕರೇ ಗೌಪ್ಯ ಸ್ಥಳದಲ್ಲಿಇಟ್ಟಿದ್ರು. ತನಿಖಾ ವರದಿ ಬರುವ ಮೊದಲೇ ಪಿಎಸ್ ಐ ಪರೀಕ್ಷೆ ರದ್ದು ಮಾಡಿದ್ದು ತಪ್ಪು ಎಂದು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಬೆಂಗಳೂರು (ಏ.30): ತನಿಖೆ ನಡೆಯುತ್ತಿರುವಾಗಲೇ PSI ನೇಮಕಾತಿಯನ್ನೇ (PSI Recruitment) ರದ್ದು ಮಾಡಿದ್ದು ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ. ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ (Injustice) ಎಂದು ರಾಜ್ಯ ಸರ್ಕಾರದ (State Government) ವಿರುದ್ಧ ಡಿ.ಕೆ ಶಿವಕುಮಾರ್​ ವಾಗ್ದಾಳಿ ನಡೆಸಿದ್ರು. ಕರ್ನಾಟಕದಲ್ಲಿ ಯುವಕರ ಭವಿಷ್ಯಕ್ಕಾಗಿ ಸರ್ಕಾರ ರೂಪಿಸುತ್ತಿರುವ ಎಲ್ಲಾ ಉದ್ಯೋಗಗಳಲ್ಲಿ ಭ್ರಷ್ಟಾಚಾರ, (Corruption) ಹಗರಣದ ಸುರಿಮಳೆ ಆಗಿದೆ. ಲೋಕೋಪಯೋಗಿ ಶಿಕ್ಷಣ ಸೇರಿದಂತೆ ಅನೇಕ ಕಡೆ ಹಗರಣ (Scam) ಆಗಿರೋದು ಮಾಧ್ಯಮಗಳೇ ಬಯಲಿಗೆ ಎಂದು ಡಿ.ಕೆ ಶಿವಕುಮಾರ್​ ಕಿಡಿಕಾರಿದ್ರು.  

ಕಾಂಗ್ರೆಸ್​ ಮೇಲೆ ಗೂಬೆ ಕೂರಿಸೋ ಕೆಲಸ

ನಿನ್ನೆ ತಾನೇ PSI ಹಗರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದೆ, 20 ದಿನಗಳ ಬಳಿಕ  ದಿವ್ಯಾ ಹಾಗರಗಿ ಅವರನ್ನು ಅರೆಸ್ಟ್ ಮಾಡಿದ್ದಾರೆ. ಪೊಲೀಸರಿಗೆ ಅಭಿನಂದನೆ ಎಂದ್ರು. ಬಿಜೆಪಿ ಅವರು  ಕಾಂಗ್ರೆಸ್ ನಾಯಕರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ. ಹಣ್ಣು ತಿಂದು ನಮ್ಮ‌ ಮೂತಿಗೆ ಒರೆಸಲು ಯತ್ನಿಸುತ್ತಿದ್ದಾರೆ. ಆದ್ರಿಂದ ಏನು ಆಗೊಲ್ಲ, ನಮ್ಮ ಶಾಸಕರಿಗೆ ನೋಟಿಸ್ ಕೊಡ್ತಾರೆ ಕಾಂಗ್ರೆಸ್ ಪಕ್ಷ ಇದಕ್ಕೆಲ್ಲ‌ ಹೆದರೋದಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

BJP ನಾಯಕರೇ ಗೌಪ್ಯ ಸ್ಥಳದಲ್ಲಿ ಇಟ್ಟಿದ್ದಾರೆ

ಸಿಎಂ ಏನು ಆಗಿಲ್ಲ ಅಂತಾರೆ ಮುಖ್ಯ ಅರೋಪಿಯನ್ನ ಬಂಧಿಸಿದ್ದಾರೆ. ಅವರನ್ನ ಬಿಜೆಪಿ ನಾಯಕರೇ ಗೌಪ್ಯ ಸ್ಥಳದಲ್ಲಿಇಟ್ಟಿದ್ರು. ತನಿಖಾ ವರದಿ ಬರುವ ಮೊದಲೇ ಪಿಎಸ್ ಐ ಪರೀಕ್ಷೆ ರದ್ದು ಮಾಡಿದ್ದಾರೆ. ಅಲ್ಲೊಬ್ಬ ದಲಿತ ಅಧಿಕಾರಿ ಇದ್ದ, ಆತನನ್ನ ವರ್ಗಾವಣೆ ಮಾಡಿದ್ದಾರೆ, ನಿಮಗೆ ದಲಿತರ ಮೇಲೆ ನಂಬಿಕೆ ಇಲ್ಲ. ಈಗ ಅವರಿಗೆ ಉತ್ತಮ ಸ್ಥಾನ ಕೊಟ್ಟಿದ್ದೀರಿ, ಅದು ನಿಮ್ಮ‌ಸರ್ಕಾರದ ವಿವೇಚನೆ ಇಷ್ಟು ದೊಡ್ಡ  ಹಗರಣ ಆಗಿದೆ.

ಇದನ್ನು ಓದಿ: PSI Recruitment Scam: 54 ಸಾವಿರ ಅಭ್ಯರ್ಥಿಗಳಿಗೆ ಪಿಎಸ್ಐ ಮರು ಪರೀಕ್ಷೆ: ಅಕ್ರಮ ನಡೆದಿರೋದನ್ನ ಒಪ್ಪಿಕೊಂಡ ಸರ್ಕಾರ

ನಿಮ್ಮ‌ ಮುತ್ತು-ರತ್ನ ಎಲ್ಲ ಆಚೆಗೆ ಬರಬೇಕಲ್ಲ

ಯಾರು ಜವಾಬ್ದಾರರು ಎಂಬುದನ್ನ ನೀವು ಹೇಳಿಲ್ಲ. ಹಗರಣದಲ್ಲಿ ನಿಮ್ಮ‌ ಮುಖಂಡರು, ಕಾರ್ಯಕರ್ತರು ಯಾರಿದ್ದಾರೆ ಎಂಬುದನ್ನ ಹೇಳಿಲ್ಲ, ನಿಮ್ಮ‌ ಮುತ್ತು-ರತ್ನ ಎಲ್ಲ ಆಚೆಗೆ ಬರಬೇಕಲ್ಲ. ನಿಯೋಗದಲ್ಲಿ ಅಕೆ ಬಂದರೆ ನನ್ನ ಫೋಟೋ ಕಟ್ ಮಾಡಿ ಏನ್ ಟ್ರೋಲ್ ಮಾಡ್ತೀರಾ. ನಾನೇನು ದ್ರಾಕ್ಚಿ ಗೋಡಂಬಿ ತಿನ್ನಲು ಎಲ್ಲೂ ಹೋಗಿಲ್ಲ, ತನಿಖಾ ವರದಿ ಬರುವ ಮೊದಲೇ ಹೇಗೆ ಪರೀಕ್ಷೆ ರದ್ದು ಮಾಡಲು ಸಾಧ್ಯ.

ಆಹಾರದ ಕಿಟ್ ವಿತರಣೆಗೂ, ಕಾಂಗ್ರೆಸ್‌ಗೂ ಸಂಬಂಧವಿಲ್ಲ

ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಕುಟುಂಬಗಳಿಗೆ ಧನ ಸಹಾಯ ಮತ್ತು ಆಹಾರದ ಕಿಟ್ ವಿತರಣೆ ವಿಚಾರಕ್ಕೂ, ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ ಆಹಾರದ ಕಿಟ್ ವಿತರಣೆ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಹುಬ್ಬಳ್ಳಿ ಗಲಭೆಯಲ್ಲಿ ಬಿಜೆಪಿ, ಪಿಎಫ್‌ಐ ಷಡ್ಯಂತ್ರವಿದೆ. ಸಮಾಜದ ಶಾಂತಿ ಕೆಡಿಸುತ್ತಿರುವ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಎಸ್‌ಡಿಪಿಐನಂತಹ ಯಾವುದೇ ಸಂಘಟನೆಗಳನ್ನು ಕಾಂಗ್ರೆಸ್ ಬೆಂಬಲಿಸುವುದಿಲ್ಲ’ ಎಂದು ತಿಳಿಸಿದ್ದಾರೆ.

‘ಕಾಂಗ್ರೆಸ್ ಪಕ್ಷ ಸಂವಿಧಾನ, ಕಾನೂನಿಗೆ ಬದ್ಧವಾಗಿದೆ’

‘ಹು‌ಬ್ಬಳ್ಳಿಯಲ್ಲಿ ಯಾರೇ ಆಹಾರ ಕಿಟ್ ವಿತರಿಸಿದ್ದರೂ ಅದು ಅವರ ವೈಯಕ್ತಿಕ ವಿಚಾರ. ಅದಕ್ಕೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷ ಸಂವಿಧಾನ, ಕಾನೂನಿಗೆ ಬದ್ಧವಾಗಿದೆ’ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನು ಓದಿ: Amit Shah ಹೇಳಿಕೆ ತಿರುಚಲಾಗಿದೆ, ಇಂಗ್ಲಿಷ್ ಗುಲಾಮಿತನದ ಭಾಷೆ: ಮತ್ತೆ Hindi ಪರ ಒಲವು ತೋರಿಸಿದ CT Ravi

ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಕುಟುಂಬಕ್ಕೆ ಶಾಸಕ ಜಮೀರ್‌ ಅಹಮ್ಮದ್‌ ಅವರ ನೆರವಿನಿಂದ ಧನ ಸಹಾಯ ಮತ್ತು ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡರು ಹಾಗೂ ಜಮೀರ್‌ ಬೆಂಬಲಿಗರು ಕಾರ್ಯಕ್ರಮ ರದ್ದು ಪಡಿಸಿದ್ದಾರೆ.
Published by:Pavana HS
First published: