ಬೆಂಗಳೂರು(ಮಾ.07): ಪವರ್ (Electricity)) ಜೊತೆ ʼಪವರ್ ಪಾಲಿಟಿಕ್ಸ್ʼ (Power Politics) ಬಳಸದೆ ವಸ್ತವಾಂಶದ ಮೇಲೆ ನಿರ್ಣಯಗಳನ್ನು ಇಂಧನ ಇಲಾಖೆ (Energy Department) ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು. ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎನ್ನುವ ಹುಸಿ ಭರವಸೆಯನ್ನು ನೀಡಿ ಅವರನ್ನು ಮೋಸಗೊಳಿಸುವ ಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅಭಿಪ್ರಾಯಪಟ್ಟರು.
ಸೋಮವಾರ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವೈಜ್ಞಾನಿಕ ವಿದ್ಯುತ್ ನೀತಿಗಳಿಂದಾಗಿ ಈಗಾಗಲೇ ಇಂಧನ ಇಲಾಖೆ ನಷ್ಟದಲ್ಲಿದೆ. ಯಾರಿಗೋ ಲಾಭ ಮಾಡುವ ಉದ್ದೇಶದಿಂದ ವಿದ್ಯುತ್ ಇಲಾಖೆಯಲ್ಲಿ ರಾಜಕೀಯ ಪವರ್ ಬಳಸಿರುವುದನ್ನು ನಾವು ನೋಡಿದ್ದೇವೆ. ಇದರ ದುರುಪಯೋಗ ತಡೆಯಲು ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
40 ಯೂನಿಟ್ ವಿದ್ಯುತ್ ಉಚಿತ
“ಈಗಾಗಲೇ ನಾವು ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಲ್ಲಿ 40 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತಿದ್ದೇವೆ. ಗೃಹ ಬಳಕೆಯ ವಿದ್ಯುತ್ ಪ್ರಮಾಣ 50 ರಿಂದ 70 ಯೂನಿಟ್ ಮಾತ್ರ ಇರುತ್ತದೆ. ಇದರಲ್ಲಿ ಬಹುತೇಕ ಉಚಿತ ವಿದ್ಯುತ್ನ್ನು ನಾವು ಈಗಾಗಲೇ ನೀಡುತ್ತಿದ್ದೇವೆ. 200 ಅಥವಾ 300 ಯೂನಿಟ್ ವಿದ್ಯುತ್ ಎಲ್ಲಿಯೂ ಕೂಡ ಬಳಕೆ ಆಗಲ್ಲ. ನಾವು 200 ಯೂನಿಟ್ ಉಚಿತ ನೀಡುತ್ತೇವೆ ಎನ್ನುವುದೇ ದೊಡ್ಡ ಮೋಸ ಎಂದು ಮುಖ್ಯಮಂತ್ರಿ ವಿವರಿಸಿದರು. 200 ಯೂನಿಟ್ ಫ್ರೀ ಕೊಡುತ್ತೇವೆ ಎಂದರೆ ಅರ್ಥ ಏನು? ಇದು ಜನರನ್ನು ಮೋಸಗೊಳಿಸುವ ಯತ್ನ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: CM Bommai: ಸಿಎಂ ಬೊಮ್ಮಾಯಿ ಸನ್ಮಾನ ತಿರಸ್ಕರಿಸಿದ ಖ್ಯಾತ ಟೆನಿಸ್ ಆಟಗಾರ
ಪವರ್ ಪಾಲಿಟಿಕ್ಸ್ ಬೇಡ
“ಪವರ್ ಜೊತೆಗೆ ಪವರ್ ಪಾಲಿಟಿಕ್ಸ್ ಬಳಸಬಾರದು. ವಾಸ್ತವ ಅಂಶದ ಮೇಲೆ ಮತ್ತು ಇಲಾಖೆಯ ದಕ್ಷತೆಯ ಹಿತದೃಷ್ಟಿಯಿಂದ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು” ಎಂದು ಮುಖ್ಯಮಂತ್ರಿ ಸಲಹೆ ನೀಡಿದರು. 200 ಯೂನಿಟ್ ಒಂದು ಮನೆಗೆ ಖರ್ಚಾಗುವುದಿಲ್ಲ. ಈ ಅಂಶಗಳು ಜನರ ಮಧ್ಯೆ ಚರ್ಚೆ ಆಗಬೇಕು. ವಿದ್ಯುತ್ ಇಲಾಖೆಯಲ್ಲಿ ಏಕೆ ಕೊರತೆ ಆಗುತ್ತಿದೆ, ಎಷ್ಟು ಸಹಾಯಧನವನ್ನು ರಾಜ್ಯ ಸರಕಾರ ಕೊಡಬಹುದು ಹಾಗೂ ಎಷ್ಟನ್ನು ನಾವು ನಿಭಾಯಿಸಬಹುದು ಎಂಬುವ ಆಧಾರದ ಮೇಲೆ ನಾವು ಕೆಲಸ ಮಾಡಬೇಕಾಗಿದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Basavaraj Bommai: ಪತ್ರಕರ್ತರು ಮತ್ತು ರಾಜಕಾರಣಿಗಳದ್ದು ಗಂಡ ಹೆಂಡತಿಯ ಸಂಬಂಧ ಇದ್ದ ಹಾಗೆ: ಬಸವರಾಜ ಬೊಮ್ಮಾಯಿ
ರಾಜ್ಯದಿಂದ 16,000 ಕೋಟಿ ರೂ. ಸಬ್ಸಿಡಿ
ಅಲ್ಲದೇ ರಾಜ್ಯ ಸರಕಾರ ಸುಮಾರು 16,000 ಕೋಟಿ ರೂ. ಸಬ್ಸಿಡಿಯನ್ನು ನೀಡುತ್ತಿದೆ. ಆದಾಗ್ಯೂ ಕೂಡ ಎಸ್ಕಾಂಗಳು ಸಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾದ ಪರಿಸ್ಥಿತಿ ಉದ್ಬವಿಸಿದೆ. ಕೆಲವು ಗ್ರಾಹಕರಿಂದ ವಿದ್ಯುತ್ ಸರಬರಾಜು ಶುಲ್ಕದ ಬಾಕಿ ಪಾವತಿ ಆಗದ ಕಾರಣದಿಂದಾಗಿ ಉತ್ಪಾದನೆ ಮತ್ತು ಆದಾಯದಲ್ಲಿ ಅಂತರ ಉಂಟಾಗಿದೆ. ಇದನ್ನು ಸರಿದೂಗಿಸಲು ರಾಜ್ಯ ಸರಕಾರ 9000 ಕೋಟಿ ರೂ. ವಿಶೇಷ ಅನುದಾನವನ್ನು ಇಂಧನ ಇಲಾಖೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 9000 ಸಾವಿರ ಕೋಟಿ ಜೊತೆಗೆ ಇನ್ನಷ್ಟು ಹಣವನ್ನು ನಮ್ಮ ಸರಕಾರ ಇಂಧನ ಇಲಾಖೆಗೆ ನೀಡಲಿದೆ ಎಂದು ಭರವಸೆ ನೀಡಿದರು.
ಬೇಸಿಗೆಯಲ್ಲಿ ವಿದ್ಯುಚ್ಚಕ್ತಿ ನಿರ್ವಹಣೆ
ಬೇಸಿಗೆಯಲ್ಲಿ ವಿದ್ಯುಚ್ಚಕ್ತಿ ನಿರ್ವಹಣೆ , ಅದಕ್ಕೆ ಬೇಕಾದ ಯೋಜನೆ ಮಾಡಲಾಗುತ್ತಿದೆ. ವಿದ್ಯುಚ್ಚಕ್ತಿ ಉತ್ಪಾದನೆ ಜೊತೆಗೆ ಹೆಚ್ಚುವರಿ ಉತ್ಪಾದನೆಯನ್ನು ಮಾರಾಟ ಮಾಡಿ ರಾಜ್ಯ ಸರಕಾರ 2000 ಕೋಟಿ ರೂ. ವಹಿವಾಟು ಮಾಡಿದೆ ಎಂದು ತಿಳಿಸಿದರು. ಈ ಹಿಂದೆ ಕಲ್ಲಿದ್ದಲ್ಲುನ್ನು ಆಮದು ಮಾಡಲಾಗುತ್ತಿತ್ತು. ಆದರೆ ಅದನ್ನು ನಮ್ಮ ಕಲ್ಲಿದ್ದಲು ಜೊತೆ ಮಿಕ್ಸ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚು ಧಾರಣೆಯ ಕಲ್ಲಿದ್ದಲು ಖರೀದಿಸಿರುವುದರಿಂದಾಗಿ ನಷ್ಟ ಉಂಟಾಗುತ್ತಿತ್ತು. ಹಾಗೆಯೇ ಕಲ್ಲಿದ್ದಲು ತೊಳೆಯಲು ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯ ನಷ್ಥದ ಲೆಕ್ಕಾಚಾರ ಕೂಡ ಆಗಬೇಕಾಗಿದೆ. ಇದನ್ನು ವೈಜ್ಞಾನಿಕವಾಗಿ ಮಾಡಬೇಕಾದ ಅವಕಶ್ಯತೆ ಇದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ವರದಿ: ಶರಣ ವೈ. ಎಂ, ನ್ಯೂಸ್ 18 ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ