HOME » NEWS » State » PROVIDE LAND FOR THE FUNERAL OF THE DECEASED BY COVID CM YEDDYURAPPA PASS THE ORDER MAK

BS Yeddyurappa: ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಜಮೀನು ಒದಗಿಸಿ; ಯಡಿಯೂರಪ್ಪ ಆದೇಶ!

ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಮೃತರ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಅಂತ್ಯ ಸಂಸ್ಕಾರಕ್ಕೆ ತಾತ್ಕಾಲಿಕ ಸರ್ಕಾರಿ ಜಮೀನನ್ನು ಒದಗಿಸಬೇಕು ಎಂದು ಯಡಿಯೂರಪ್ಪ ಆದೇಶಿಸಿದ್ದಾರೆ.

news18-kannada
Updated:April 20, 2021, 8:52 PM IST
BS Yeddyurappa: ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಜಮೀನು ಒದಗಿಸಿ; ಯಡಿಯೂರಪ್ಪ ಆದೇಶ!
ಸಿಎಂ ಬಿಎಸ್​ ಯಡಿಯೂರಪ್ಪ.
  • Share this:
ಬೆಂಗಳೂರು (ಏಪ್ರಿಲ್ 20); ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಪರಿಣಾಮ ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಇದೀಗ ಸರ್ಕಾರ ಮತ್ತು ಎಲ್ಲಾ ಜಿಲ್ಲಾಡಳಿತಕ್ಕೂ ತಲೆನೋವಿನ ಸಂಗತಿಯಾಗಿದೆ. ಪರಿಣಾಮ ಇಂದು ಹೊಸ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, "ರಾಜ್ಯದಲ್ಲಿ ಕೊರೋನಾ ಸಾವು ಅಧಿಕವಾಗುತ್ತಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಮೃತರ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಅಂತ್ಯ ಸಂಸ್ಕಾರಕ್ಕೆ ತಾತ್ಕಾಲಿಕ ಸರ್ಕಾರಿ ಜಮೀನನ್ನು ಒದಗಿಸಬೇಕು" ಎಂದು ಆದೇಶಿಸಿದ್ದಾರೆ. ಈ ಮೂಲಕ ಕೊರೋನಾದಿಂದಾಗಿ ಮೃತಪಟ್ಟವರ ಅಂತ್ಯಾ ಸಂಸ್ಕಾರಕ್ಕೆ ಇಷ್ಟು ದಿನ ಇದ್ದ ಅಡೆತಡೆಗಳನ್ನು ನೀಗಿಸಲು ಮುಂದಾಗಿದ್ದಾರೆ.

letter2
ಸಿಎಂ ಯಡಿಯೂರಪ್ಪ ಹೊರಡಿಸಿರುವ ಆದೇಶ.


ಕೊರೋನಾ ನಿಯಂತ್ರಣಕ್ಕೆ ಸರ್ವಪಕ್ಷ ಸಭೆ:

ಈ ನಡುವೆ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಇಂದು ಸರ್ವಪಕ್ಷ ಸಭೆ ಕರೆದಿತ್ತು. ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೊರೋನಾ ಸೋಂಕಿಗೆ ಒಳಗಾಗಿರುವ ಸಿಎಂ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಬೇಗ ಗುಣವಾಗಲಿ ಎಂದು ಆರೈಸಿದರು. ಮುಂದುವರೆದು, ರಾಜ್ಯಪಾಲರು ಈ ಸಭೆ ಕರೆದಿದ್ದು ಸಂವಿಧಾನಬಾಹಿರ. ಆಡಳಿತಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ರಾಜ್ಯಪಾಲರು ಈ ಸಭೆ ಕರೆದಿದ್ದು ಸರಿಯಲ್ಲ ಅನ್ನುವ ಭಾವನೆ ನನ್ನದು ಎಂದು ಹೇಳಿದರು.

ತಾಂತ್ರಿಕ ಸಲಹಾ ಸಮಿತಿ ಕೊಟ್ಟ ಶಿಫಾರಸ್ಸನ್ನು ಸರ್ಕಾರ ಪರಿಗಣಿಸಿಲ್ಲ. ತಜ್ಞರು ಸಲಹೆ ಕೊಟ್ಟ ಮೇಲೆ ಸರ್ವಪಕ್ಷ ಸಭೆ ಕರಿಬೇಕಿತ್ತು. ಸರ್ಕಾರವೇ ತಜ್ಞರ ಸಮಿತಿ ‌ಮಾಡಿದೆ. ತಜ್ಞರು ಕೊಟ್ಟ ವರದಿ ತೆಗೆದುಕೊಳ್ಳದೆ ಇರುವುದು ದೊಡ್ಡ ಅಪರಾಧ. ತಜ್ಞರ ವರದಿ ಬಂದ ತಕ್ಷಣ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಆದರೆ ಆಗಲಿಲ್ಲ. ಇವತ್ತು ಬೆಡ್, ವೆಂಟಿಲೇಶನ್, ಆಕ್ಸಿಜನ್ ಸಿಗ್ತಾ ಇಲ್ಲ. ಇದು ವಾಸ್ತವದ ಸಂಗತಿ. ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ಆಕ್ಸಿಜನ್ ಇಲ್ಲದೆ ತೀರಿಕೊಂಡರು. ಇದಕ್ಕಿಂತ ಉದಾಹರಣೆ ಬೇಕಾ? ಸರ್ಕಾರ ಏನೇ ಹೇಳಿದರೂ ಸದ್ಯ ಕೊರೋನಾ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ತನ್ನ ವಿಫಲತೆ ಒಪ್ಪಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಮೋದಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಪ್ರಚಾರ ಮಾಡ್ತಾರೆ. ಲಕ್ಷಾಂತರ ಜನ ಸೇರಿದ್ದಾರೆ ಅಂತ ಭಾಷಣದಲ್ಲಿ ಹೇಳ್ತಾರೆ. ಕರ್ನಾಟಕದಲ್ಲಿ‌ ಕೂಡ ಉಪ ಚುನಾವಣೆ ನಡೆಸಿದರು. ನಾವು ಕೂಡ ಉಪ ಚುನಾವಣೆಯಲ್ಲಿ ಭಾಗವಹಿಸಿದ್ದೆವು. ಈ ಚುನಾವಣೆ ನಡೆಯದಿದ್ದರೆ ಸಂವಿಧಾನದ ಬಿಕ್ಕಟ್ಟು ಉಂಟಾಗುತ್ತಿರಲಿಲ್ಲ ಎಂದು ಹೇಳಿದರು.

ಈಗ ಕಠಿಣ ನಿರ್ಬಂಧ ಹಾಕಬೇಕು. ಕರ್ಫ್ಯೂಯಿಂದ ಏನೂ ಪ್ರಯೋಜನ ಇಲ್ಲ. 144 ಸೆಕ್ಷನ್ ಹಾಕಿದರೆ ಒಳ್ಳೆಯದು. ಕಾಯಿಲೆ ತಡೆಗಟ್ಟಲು ಸಾಧ್ಯ. ಆರೋಗ್ಯ ಮಂತ್ರಿ ನಿರ್ಣಯಗಳನ್ನು ಸಿಎಂ ಕೇಳ್ತಾ ಇಲ್ಲ. ಹೀಗಾಗಿ ಸಿಎಂದು ಒಂದು ದಾರಿ, ಸಚಿವರದು ಒಂದು ದಾರಿಯಾಗಿದೆ. ಆದ್ದರಿಂದ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ‌ಬಗೆಹರಿಸುವುದು ಸಿಎಂ ಮತ್ತು ಆರೋಗ್ಯ ‌ಮಂತ್ರಿಗಳಿಗೆ ಮಾತ್ರ ಕೆಲಸವಲ್ಲ.ಇದನ್ನೂ ಓದಿ: ಇದೊಂದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿ; ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಸಲಹೆ

ಇವತ್ತು ಜಿಲ್ಲಾ ಉಸ್ತುವಾರಿ ಮಂತ್ರಿಗಳು‌ ಕೆಲಸ ಮಾಡುತ್ತಿಲ್ಲ. ಯಾರು‌ ಕೂಡ ಅವರ ಜಿಲ್ಲೆಗಳಲ್ಲಿ ಸಭೆ ಕೂಡ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಅಲ್ಲಿಯೇ ಇದ್ರೆ ರೋಗ ‌ನಿಯಂತ್ರಿಸಬಹುದು. ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಬಹುದು ಎಂದು ಜಿಲ್ಲಾ ಉಸ್ತುವಾರಿಗಳನ್ನು ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು.

ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡಿ. ಚುನಾವಣಾ ಆಯೋಗದ ಜತೆ ಚರ್ಚೆ ಮಾಡಿ, ಎಲೆಕ್ಷನ್ ಮುಂದೂಡಿ. ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಟೆಸ್ಟ್ ಕಡ್ಡಾಯ ಮಾಡಿ. ತಜ್ಞರ ಶಿಫಾರಸ್ಸಿನಂತೆ ಲಾಕ್ ಡೌನ್ ಮಾಡಿ ಅನ್ನಲ್ಲ. ಆದರೆ ನೀವು ತಜ್ಞರ ಸಮಿತಿ ಹೇಳಿದ ಹಾಗೆ ಕೆಲವೊಂದು ಮಾಡಿ. ಬೇರೆ ದೇಶಗಳಿಂದ ಬರುವ ವಿಮಾನ ರದ್ದು ಮಾಡಿ. ಹೆಲ್ತ್ ತುರ್ತು ಪರಿಸ್ಥಿತಿ ಅಂತ ಡಿಕ್ಲೇರ್ ಮಾಡಿ. ಇದೊಂದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿ ಎಂದು ಸಲಹೆ ನೀಡಿದರು.
Published by: MAshok Kumar
First published: April 20, 2021, 8:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories