ಶ್ರೀರಾಮುಲು ಕಡೆಗಣನೆ ವಿರೋಧಿಸಿ ಹಲವೆಡೆ ಪ್ರತಿಭಟನೆ; ನಾಯಕ ಸಮುದಾಯದಿಂದ ಹೋರಾಟದ ಎಚ್ಚರಿಕೆ

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ  ಶ್ರೀರಾಮುಲು ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದರು. ಆದರೆ, ಅವರಿಗೆ ಡಿಸಿಎಂ ನೀಡುತ್ತೇವೆ ಎಂದು ಹೇಳಿ ಸಚಿವ ಸ್ಥಾನವನ್ನು ನೀಡಿ, ಕೊಟ್ಟ ಮಾತು ತಪ್ಪಿದೆ ಎಂದು ಸುದ್ದಿಗೋಷ್ಠಿಯ ನೇತೃತ್ವ ವಹಿಸಿದ್ದ ಎಸ್​​ಟಿ ಮುಖಂಡ ಎಚ್.ಜಿ. ಕೃಷ್ಣಮೂರ್ತಿ ಬಿಜೆಪಿ ವಿರುದ್ದ ಗುಡುಗಿದರು.

G Hareeshkumar | news18
Updated:August 27, 2019, 3:44 PM IST
ಶ್ರೀರಾಮುಲು ಕಡೆಗಣನೆ ವಿರೋಧಿಸಿ ಹಲವೆಡೆ ಪ್ರತಿಭಟನೆ; ನಾಯಕ ಸಮುದಾಯದಿಂದ ಹೋರಾಟದ ಎಚ್ಚರಿಕೆ
ಸಚಿವ ಬಿ ಶ್ರೀರಾಮುಲು
  • News18
  • Last Updated: August 27, 2019, 3:44 PM IST
  • Share this:
ಬೆಂಗಳೂರು(ಆ. 27): ಬಿಜೆಪಿ ಗೆಲುವಿಗೆ ಶ್ರಮಿಸಿರುವ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ತಪ್ಪಿರುವುದಕ್ಕೆ ನಾಯಕ ಸಮುದಾಯದವರು ಅತೀವ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ ಮೊದಲಾದ ಜಿಲ್ಲೆಗಳಲ್ಲಿ ನಾಯಕ ಸಮುದಾಯದವರು ಹಾಗೂ ಶ್ರೀರಾಮುಲು ಬೆಂಬಲಿಗರು ಇಂದು ತೀವ್ರ ಪ್ರತಿಭಟನೆ ನಡೆಸಿದರು. ಚಿತ್ರದುರ್ಗದಲ್ಲಿ ಇಂದು ಸುದ್ದಿಗೋಷ್ಠಿ ಕರೆದ ನಾಯಕ ಸಮುದಾಯದ ಮುಖಂಡರು, ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಬಿಜೆಪಿ ವರಿಷ್ಠರಿಗೆ ಎಚ್ಚರಿಕೆ ನೀಡಿದರು.

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ  ಶ್ರೀರಾಮುಲು ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದರು. ಆದರೆ, ಅವರಿಗೆ ಡಿಸಿಎಂ ನೀಡುತ್ತೇವೆ ಎಂದು ಹೇಳಿ ಸಚಿವ ಸ್ಥಾನವನ್ನು ನೀಡಿ, ಕೊಟ್ಟ ಮಾತು ತಪ್ಪಿದೆ ಎಂದು ಸುದ್ದಿಗೋಷ್ಠಿಯ ನೇತೃತ್ವ ವಹಿಸಿದ್ದ ಎಸ್​​ಟಿ ಮುಖಂಡ ಎಚ್.ಜಿ. ಕೃಷ್ಣಮೂರ್ತಿ ಬಿಜೆಪಿ ವಿರುದ್ದ ಗುಡುಗಿದರು.

ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಎದುರು ಬಾದಾಮಿಯಲ್ಲಿ ಬಿಜೆಪಿಯಿಂದ ಯಾರೂ ಸ್ಪರ್ಧೆ ಮಾಡಲಿಲ್ಲ. ಆ ಸಮಯದಲ್ಲಿ  ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿ ಅಲ್ಪ ಮತಗಳಲ್ಲಿ ಸೋತರು. ಆಗ ಶ್ರೀರಾಮುಲು ಅವರನ್ನು ಬಳಸಿಕೊಂಡು ಈಗ ಕೈ ಬಿಟ್ಟಿದ್ದಾರೆ. ಆದರೆ  ಡಿಸಿಎಂ ಮಾಡುತ್ತೇವೆ ಎಂದು ರಾಯಚೂರು, ಮೊಳಕಾಲ್ಮೂರುನಲ್ಲಿ ಬಿಜೆಪಿ ನಾಯಕರು ಹೇಳಿದ್ದರು. ಆದರೆ ಈಗ ಕೊಟ್ಟ ಮಾತು ತಪ್ಪಿದ್ದಾರೆ ಎಂದು ನಾಯಕ ಸಮುದಾಯದ ಮುಖಂಡರು ಟೀಕಿಸಿದರು.

ಇದನ್ನೂ ಓದಿ : ದಲಿತ ಮಹಿಳೆಯರ ಜೊತೆ ಊಟ ಮಾಡಿ ಕೈ ತುತ್ತು ಸವಿದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​​

ಸಚಿವ  ಬಿ. ಶ್ರೀರಾಮುಲು ಅವರನ್ನ ಎರಡನೇ ಹಂತದ ನಾಯಕನನ್ನಾಗಿ ಮಾಡಿದ್ದಾರೆ. ಶ್ರೀರಾಮುಲು ಅವರು ರಾಜ್ಯದ ನಾಯಕ ಸಮುದಾಯದ ಪ್ರಭಾವಿ ನಾಯಕರು. ಪ್ರಸ್ತುತ ವಿಧಾನ ಸಭಾ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನದ ಜತೆಗೆ ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಕೊಡದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.

ರಾಜ್ಯಾದ್ಯಂತ ಹೋರಾಟ:

ಇದಕ್ಕೂ ಮುನ್ನ, ಚಿತ್ರದುರ್ಗದ ಹಿರೇಹಳ್ಳಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬಿ. ಶ್ರೀರಾಮುಲು ಪರವಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ರಸ್ತೆ ತಡೆದು ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಹಾಗೆಯೇ ರಾಜ್ಯದ ಕೆಲವೆಡೆ ಶ್ರೀರಾಮುಲು ಪರವಾಗಿ ಪ್ರತಿಭಟನೆಗಳು ನಡೆದ ವರದಿಯಾಗಿದೆ.ಕೊಪ್ಪಳದಲ್ಲಿ ವಾಲ್ಮೀಕಿ ಸಮಾಜದ ನಾಯಕರು ಸರ್ಕಾರದ ಕ್ರಮವನ್ನು ಖಂಡಿಸಿದರು. ಮೀಸಲಾತಿ ಹೆಚ್ಚಳ ಮಾಡಲಿಲ್ಲ. ಈಗ ಡಿಸಿಎಂ ಸ್ಥಾನವನ್ನೂ ನೀಡಿಲ್ಲ. ಈಗಲಾದರೂ ಬಿಜೆಪಿ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಒಂದೊಮ್ಮೆ ಮಾತಿಗೆ ತಪ್ಪಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಾಲ್ಮೀಕಿ ಮಹಾಸಭಾದ ಮುಖಂಡ ಶರಣಪ್ಪ ನಾಯಕ ಎಚ್ಚರಿಕೆ ನಿಡಿದರು

ಇದನ್ನೂ ಓದಿ : ಸಿದ್ದರಾಮಯ್ಯ ಬಗ್ಗೆ ದೇವೇಗೌಡರು ಮಾಡಿದ ಆರೋಪಗಳು ಸತ್ಯಕ್ಕೆ ದೂರ: ಮಾಜಿ ಸ್ಪೀಕರ್​ ರಮೇಶ್ ಕುಮಾರ್

ಶ್ರೀರಾಮಲು ಅವರಿಗೆ ಡಿಸಿಎಂ ಸ್ಥಾನ ತಪ್ಪಿದ ಹಿನ್ನೆಲೆ, ಕೊಪ್ಪಳದ ಕನಕಗಿರಿಯಲ್ಲಿ ವಾಲ್ಮೀಕಿ ಸಮುದಾಯದವರಿಂದ ಬಿಜೆಪಿ ನಾಯಕರ ವಿರುದ್ದ ದಿಕ್ಕಾರ ಕೂಗಿ ಟಯರ್​​​ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ಬಳ್ಳಾರಿಯಲ್ಲಿ ಶ್ರೀರಾಮುಲು ಅಭಿಮಾನಿಗಳು ತಮ್ಮ ನಾಯಕರಿಗೆ ಡಿಸಿಎಂ ಸ್ಥಾನ ನೀಡುವಂತೆ  ಆಗ್ರಹಿಸಿ ಇಲ್ಲಿಯ ಎಪಿಎಂಸಿ ಸರ್ಕಲ್ ಬಳಿ ಟೈರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಳ್ಳಾರಿ-ಬೆಂಗಳೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:August 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ