• Home
  • »
  • News
  • »
  • state
  • »
  • ಮೊಗೇರ ಸಮುದಾಯದ ಯುವಕರಿಂದ ಪಕೋಡ ಮಾರಿ Protest! ಅದ್ಯಾಕೆ ಅಂತ ನೀವೇ ನೋಡಿ

ಮೊಗೇರ ಸಮುದಾಯದ ಯುವಕರಿಂದ ಪಕೋಡ ಮಾರಿ Protest! ಅದ್ಯಾಕೆ ಅಂತ ನೀವೇ ನೋಡಿ

ಪಕೋಡ ಮಾರಿ ಪ್ರತಿಭಟನೆ

ಪಕೋಡ ಮಾರಿ ಪ್ರತಿಭಟನೆ

ತಮ್ಮ ಅಳಲನ್ನು ಸರ್ಕಾರ ಕೇಳಲೇ ಬೇಕು ಅಂತ ಪ್ರತಿಭಟನಾ ನಿರತ ಯುವಕರು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿದದೇ ಹೋದರೆ ಸಾಮೂಹಿಕ ಆತ್ಮಹತ್ಯೆಯಂಥ ನಿರ್ಧಾರಕ್ಕೂ ಹಿಂಜರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

  • Share this:

ಉತ್ತರ ಕನ್ನಡ: ಜಿಲ್ಲೆಯಲ್ಲಿ ಮೊಗೇರ ಜನಾಂಗದವರ (Moger Community) ಆಕ್ರೋಶ ಮುಗಿಲು ಮುಟ್ಟಿದೆ. ಕಳೆದ 12 ದಿನಗಳಿಂದ ಧರಣಿ ಸತ್ಯಾಗ್ರಹ (Satyagraha) ಮಾಡುತ್ತಿದ್ದರೂ ಸರ್ಕಾರ (Government) ಮಾತ್ರ ಕಣ್ಣೆತ್ತಿ ನೋಡುತ್ತಿಲ್ಲ. ಹೀಗಾಗಿ ಸಮುದಾಯದ ನೀರುದ್ಯೋಗಿ ಪದವಿಧರ (Unemployed Graduates) ಯುವಕರು ಪಕೋಡಾ (Pakoda) ಮಾಡಿ ಮಾರುವ ಮೂಲಕ (Sale) ಅಣುಕು ಪ್ರತಿಭಟನೆ (Protets) ನಡೆಸಿದ್ದಾರೆ. ಉತ್ತರಕನ್ನಡ (Uttara Kannada) ಜಿಲ್ಲೆಯ ಮೊಗೇರ ಜನಾಂಗದವರು ತಮ್ಮಬೇಡಿಕೆ ಇಟ್ಟು ಭಟ್ಕಳದಲ್ಲಿ (Bhatkal)ತಮ್ಮ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ. ಇಂದಿಗೆ ಸತ್ಯಾಗ್ರಹ 12 ದಿನಕ್ಕೆ ಕಾಲಿಟ್ಟರೂ ಕೂಡ ಸರ್ಕಾರ ಮಾತ್ರ ಇವರನ್ನ ಮಾತನಾಡಿಸೋ ಗೋಜಿಗೆ ಹೋಗಿಲ್ಲ. ಹೀಗಾಗಿ ತಮ್ಮ ಪ್ರತಿಭಟನೆಯನ್ನ ತೀವ್ರಗೊಳಿಸಿದ್ದಾರೆ. 


ಸಚಿವ ಗೋವಿಂದ ಕಾರಜೋಳರಿಂದ ಸಿಗದ ಉತ್ತರ


ಸ್ಥಳೀಯ ಶಾಸಕ ಸುನೀಲ ನಾಯ್ಕ ಮೊಗೇರರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದು ಸಚಿವ ಗೋವಿಂದ ಕಾರಜೋಳ ಹಾರಿಕೆ ಉತ್ತರ ನೀಡಿರೋದು ಇವರ ಆಕ್ರೋಶವನ್ನ ಹೆಚ್ಚು ಮಾಡಿದೆ. ಈ ಹಿಂದೆ ಮೊಗೇರರಿಗೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಸೌಲಭ್ಯವನ್ನ ಕಳೆದ 14 ವರ್ಷಗಳಿಂದ  ಸ್ಥಗಿತಗೊಳಿಸಲಾಗಿದೆ. ಹೈಕೋರ್ಟ್ ಆದೇಶವನ್ನ ಕೂಡ ಸರ್ಕಾರ ಪಾಲನೆ ಮಾಡುತ್ತಿಲ್ಲ. ಸಾಕಷ್ಟು ಬಾರೀ ಮನವಿ ಮಾಡಿದರೂ ತಮಗೆ ನ್ಯಾಯ ನೀಡುತ್ತಿಲ್ಲ. ಹೀಗಾಗಿ ನೊಂದ ಮೊಗೇರ ಜನಾಂಗದ ಪದವಿಧರ ಯುವಕರು ಪಕೋಡಾ ಮಾಡಿ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.


ಸೌಲಭ್ಯ ನಿಲ್ಲಿಸಿದ ಬಳಿಕ ಸಮುದಾಯಕ್ಕೆ ತೊಂದರೆ


ರಾಜ್ಯದ ಬೇರೆಬೇರೆ  ಜಿಲ್ಲೆಗಳಲ್ಲಿ ಮೊಗೇರ ಜನಾಂಗವಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ನೆಲೆಸಿರುವ ಮೊಗೇರ ಜನಾಂಗದವರು ಹೆಚ್ಚಾಗಿ ಮೀನುಗಾರಿಕೆಯನ್ನ ಮಾಡ್ತಿದ್ದಾರೆ. ಈ ಹಿಂದೆ ಸರ್ಕಾರ  ಪರಿಶಿಷ್ಟರೆಂದು ಸೌಲಭ್ಯಗಳನ್ನ ನೀಡುತಿತ್ತು. ಆದ್ರೆ ಮೀನುಗಾರಿಕೆ ಮಾಡುತ್ತಿದ್ದಾರೆಂಬ ಕಾರಣಕ್ಕೆ ಸೌಲಭ್ಯ ನಿಲ್ಲಿಸಲಾಗಿದೆ.  ಹೀಗಾಗಿ ಪದವಿ ಮುಗಿಸಿದ  ಯುವಕರು ಅನಿವಾರ್ಯವಾಗಿ ಮೀನುಗಾರಿಕೆ, ಕೂಲಿನಾಲಿ ಮಾಡುತ್ತಿದ್ದಾರೆ.


ಇದನ್ನೂ ಓದಿ: Koppala: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಬಲಿ, ಸಂಬಂಧಿಕರಿಂದ ಆಸ್ಪತ್ರೆಯ ಕಿಟಕಿ, ಬಾಗಿಲು ಪುಡಿ ಪುಡಿ


ಕಳೆದ 14 ವರ್ಷಗಳಿಂದ ತೊಂದರೆ


ಕೆಲವರಿಗೆ ಸರ್ಕಾರಿ ಉದ್ಯೋಗ ಲಭಿಸಿದ್ರೂ ಕೂಡ ಸಿಂಧುತ್ವ ಪ್ರಮಾಣ ಪತ್ರ ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಮೊಗೇರರಿಗೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಸೌಲಭ್ಯವನ್ನ ಕಳೆದ 14 ವರ್ಷಗಳಿಂದ  ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮೊಗೇರರು ಕಳೆದ 14 ವರ್ಷಗಳಿಂದ  ಇಕ್ಕಟ್ಟಿಗೆ ಸಿಲುಕಿದ್ದಾರೆ.


ಹೈಕೋರ್ಟ್‌‌ ಆದೇಶಕ್ಕೂ ಬೆಲೆ ನೀಡದ ಸರ್ಕಾರ


ಹೈಕೋರ್ಟ್ ತಮ್ಮನ್ನ ಪರಿಶಿಷ್ಟರೆಂದು ಹೇಳಿದರೂ ಕೂಡ ಸರ್ಕಾರ ಪಟ್ಟಭದ್ರರ  ಮಾತು ಕೇಳಿ ನಮ್ಮನ್ನ ತೊಂದರೆಗೆ ಸಿಲುಕಿದೆ.  ತಾವು ಧರಣಿ ಕುಳಿತರೂ ಕೂಡ ನಾವು ಮೀನುಗಾರರು,  ಮೇಲ್ವರ್ಗಕ್ಕೆ ಸೇರಿದವರು ಎಂದು ಅಧಿಕಾರಿಗಳಿಗೆ ತಪ್ಪು ಮಾಹಿತಿಯನ್ನ ನೀಡುತ್ತಿದ್ದಾರೆ. ಹೀಗಾಗಿ ಬೇರೆ ದಾರಿಯಿಲ್ಲದೇ ನಾವು ಪ್ರತಿಭಟನೆಯನ್ನ ಮುಂದುವರಿಸಬೇಕಾಗಿದೆ ಎಂದು ಯುವಕರು ಅಳಲು ತೋಡಿಕೊಂಡಿದ್ದಾರೆ.


ಸಾಮೂಹಿಕ ಆತ್ಮಹತ್ಯೆಯ ಬೆದರಿಕೆ


ತಮ್ಮ ಅಳಲನ್ನು ಸರ್ಕಾರ ಕೇಳಲೇ ಬೇಕು ಅಂತ ಪ್ರತಿಭಟನಾ ನಿರತ ಯುವಕರು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿದದೇ ಹೋದರೆ ಸಾಮೂಹಿಕ ಆತ್ಮಹತ್ಯೆಯಂಥ ನಿರ್ಧಾರಕ್ಕೂ ಹಿಂಜರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Congress Leaders: ಮೋದಿ ವಿರುದ್ಧ ಸಿಡಿದೆದ್ದ 'ಕೈ' ನಾಯಕರು; ಬೆಲೆ ಏರಿಕೆ ವಿರುದ್ಧ ಸಮರ ಸಾರಿದ ಸಿದ್ದು-ಡಿಕೆಶಿ


ಮೊಗೇರರ ವಿಚಾರದಲ್ಲಿ ಸರ್ಕಾರ ಈವರೆಗೂ ಯಾವುದೇ ತೀರ್ಮಾಣ ತೆಗೆದುಕೊಳ್ಳದೇ ಅವರ ಸಹನೆ ಪರೀಕ್ಷಿಸಿದಂತಿದೆ. ತಮ್ಮ ನ್ಯಾಯಯುತ ಬೇಡಿಕೆ ಇಟ್ಟು  ಜನಾಂಗ ನಾಗರಿಕರು ಧರಣಿ ಸತ್ಯಾಗ್ರಹ ಮುಂದುವರಿಸಿದ್ದು, ಇನ್ನು ಮುಂದಾದರೂ ಮುಖ್ಯಮಂತ್ರಿಗಳು ಇವರ ಪರಿಸ್ಥಿತಿ ಅವಲೋಕಿಸಿ  ನ್ಯಾಯ ನೀಡಲು ಮುಂದಾಗಬೇಕಿದೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು