• Home
  • »
  • News
  • »
  • state
  • »
  • Mangalore University: ಫಲಿತಾಂಶ ವಿಳಂಬದ ವಿರುದ್ಧ ಸಮರ; ಭಾವುಕರಾದ ಪರೀಕ್ಷಾಂಗ ಕುಲಸಚಿವ

Mangalore University: ಫಲಿತಾಂಶ ವಿಳಂಬದ ವಿರುದ್ಧ ಸಮರ; ಭಾವುಕರಾದ ಪರೀಕ್ಷಾಂಗ ಕುಲಸಚಿವ

ಪ್ರತಿಭಟನೆ

ಪ್ರತಿಭಟನೆ

ವಿವಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೇ ಸತಾಯಿಸಲಾಗುತ್ತಿದೆ. ಅಂಕಪಟ್ಟಿ ಇಲ್ಲದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಶಿಷ್ಯ ವೇತನಕ್ಕೆ ಅರ್ಜಿ ಹಾಕಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳಿದರು.

ಮುಂದೆ ಓದಿ ...
  • Share this:

    ಮಂಗಳೂರು ವಿಶ್ವವಿದ್ಯಾಯಲದ (Mangalore University) ಫಲಿತಾಂಶ ವಿಳಂಬದ ವಿರುದ್ಧ ಎಬಿವಿಪಿ ಕಾರ್ಯಕರ್ತರು  (ABVP Activist) ಸಿಡಿದೆದ್ದಿದ್ದಾರೆ. ವಿವಿ ಸಿಂಡಿಕೇಟ್ ಸಭೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು (Police) ಹಾಗೂ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದಿದೆ. 500ಕ್ಕೂ ಹೆಚ್ಚು ಎಬಿವಿಪಿ ಕಾರ್ಯಕರ್ತರು ಮಂಗಳೂರಿನ ಕೊಣಾಜೆಯಲ್ಲಿರುವ ವಿ.ವಿ ಆಡಳಿತ ಸೌಧದ ಆವರಣಕ್ಕೆ ಬಂದಾಗ ಪೊಲೀಸರು ತಡೆದರು. ಈ ವೇಳೆ ಎಬಿವಿಪಿ ಕಾರ್ಯಕರ್ತರು ಬ್ಯಾರಿಕೇಡ್ ತಳ್ಳಿ ನುಗ್ಗಲು ಯತ್ನಿಸಿದ್ದರಿಂದ ಗಲಾಟೆ ಏರ್ಪಟ್ಟಿತ್ತು. ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್ ಧರ್ಮ ಮತ್ತು ಕುಲಪತಿ ಪಿ.ಎಸ್ ಯಡಪಡಿತ್ತಾಯ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.


    ವಿವಿ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೇ ಸತಾಯಿಸಲಾಗುತ್ತಿದೆ. ಅಂಕಪಟ್ಟಿ ಇಲ್ಲದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಶಿಷ್ಯ ವೇತನಕ್ಕೆ ಅರ್ಜಿ ಹಾಕಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳಿದರು.


    ಸಮಯಕ್ಕೆ ಸರಿಯಾಗಿ ನಡೆಯದ ಮೌಲ್ಯಮಾಪನ


    ವಿವಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಬಳಿಕ ಸರಿಯಾದ ಸಮಯಕ್ಕೆ ಮೌಲ್ಯಮಾಪನಗಳು ನಡೆದಿಲ್ಲ. ಈ ಕಾರಣದಿಂದ ಅಂಕಪಟ್ಟಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಸಮಸ್ಯೆ ಒಂದು ಕಡೆಯಾದ್ರೆ ಎನ್​ಇಪಿ ಜಾರಿಯಾದ ಬಳಿಕ ಮೊದಲ ವರ್ಷಕ್ಕೆ ದಾಖಲಾದ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್​ಗೆ ಬಂದರೂ ಮೌಲ್ಯಮಾಪನ ನಡೆಸಿ ಫಲಿತಾಂಶ ನೀಡಿಲ್ಲ.


    ಸರಿಯಾದ ಸಮಯಕ್ಕೆ ಫಲಿತಾಂಶ ನೀಡದೇ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಮಂಗಳೂರು ವಿವಿ ಚೆಲ್ಲಾಟ ಆಡುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕುಲಪತಿಗಳು ಮತ್ತು ಪರೀಕ್ಷಾಂಗ ಕುಲಸಚಿವರೇ ಕಾರಣ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಆರೋಪಿಸಿದರು.


    ಭಾವುಕರಾದ ಪರೀಕ್ಷಾಂಗ ಕುಲಸಚಿವ


    ಇನ್ನು ವಿದ್ಯಾರ್ಥಿಗಳ ಆರೋಪಕ್ಕೆ ಭಾವುಕರಾದ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್​.ಧರ್ಮ, ಪರೀಕ್ಷಾ ಫಲಿತಾಂಶ ವಿಳಂಬಕ್ಕೆ ಕುಲಸಚಿವರು ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ವೇಳೆ ನನ್ನಿಂದ ಸಮಸ್ಯೆ ಉಂಟಾಗಿದ್ರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದರು. ಈಗ ರಾಜೀನಾಮೆ ಪತ್ರ ಬರೆದುಕೊಂಡು ಇಲ್ಲಿಗೆ ಬಂದಿದ್ದೇನೆ ಎಂದು ಭಾವುಕರಾದರು.


    ಇದನ್ನೂ ಓದಿ: Mangaluru: ಅಪಘಾತದಿಂದ ಮೆದುಳು ನಿಷ್ಕ್ರಿಯ, ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ರೈತ!


    ಶೀಘ್ರದಲ್ಲಿಯೇ ಫಲಿತಾಂಶ ಪ್ರಕಟಿಸುವ ಭರವಸೆ


    ವಿದ್ಯಾರ್ಥಿಗಳು ವಾಸ್ತವವನ್ನು ಅರ್ಥ ಮಾಡಿಕೊಳ್ಳದೇ ಪ್ರತಿಭಟನೆ ಮಾಡುತ್ತಿದ್ದಾರೆ. ನಮ್ಮ ಸಿಬ್ಬಂದಿ ಒಂದು ದಿನವೂ ರಜೆ ಹಾಕದೇ ಕೆಲಸ ಮಾಡುತ್ತಿದ್ದಾರೆ. ಯುಸಿಎಂಎಸ್​​ನದ್ದೇ ನಮಗೆ ಸಮಸ್ಯೆ ಆಗಿದೆ. ಸರ್ವರ್ ಸರಿಯಾಗಿ ಕೆಲಸ ಮಾಡದ ಕಾರಣ ಎಲ್ಲಾ ಕೆಲಸಗಳು ವಿಳಂಬವಾಗುತ್ತಿವೆ ಎಂದು ವಿವರಿಸಿದರು.


    ಜನವರಿ 25ರೊಳಗೆ ಫಲಿತಾಂಶ !


    ನಾನು ಸರ್ಕಾರದ ವಿರುದ್ಧ ಮಾತನಾಡುತ್ತಿಲ್ಲ. ನಮ್ಮ  ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆ ಮಾತನಾಡುತ್ತಿದ್ದೇನೆ. ಜನವರಿ 25ರೊಳಗೆ ಫಲಿತಾಂಶ  ಪ್ರಕಟಿಸಲು ಪ್ರಯತ್ನಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಫಲಿತಾಂಶ ನೀಡುತ್ತೇವೆ ಎಂದು ಭರವಸೆ ನೀಡಿದರು. ಭರವಸೆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.


    ಶ್ರೀರಂಗಪಟ್ಟಣದಲ್ಲಿ ಮತ್ತೆ ಧರ್ಮ ದಂಗಲ್‌


    ಶ್ರೀರಂಗಪಟ್ಟಣದಲ್ಲಿ ಮತ್ತೆ ಧರ್ಮ ದಂಗಲ್‌ಗೆ ಸಿದ್ಧತೆ ಆರಂಭವಾಗಿದೆ. ಜಾಮಿಯಾ ಮಸೀದಿಯಲ್ಲಿನ ಅಕ್ರಮ ಮದರಸಾ ತೆರವಿಗೆ ಪಟ್ಟು ಹಿಡಿದಿರೋ ಹಿಂದೂ ಜಾಗರಣಾ ವೇದಿಕೆ, ಪ್ರಾಚ್ಯವಸ್ತು ಮತ್ತು ಭಾರತೀಯ ಪರಿವೀಕ್ಷಣಾ ಇಲಾಖೆಗೆ ಮನವಿ ಮಾಡಿದೆ.


    ಮುಂದಿನ 10 ದಿನಗಳ ಒಳಗೆ ಅಕ್ರಮ ಮದರಸಾ ಖಾಲಿ ಮಾಡಿಸಿ. ಇಲ್ಲವೇ ನಮಗೂ ಹನುಮಾನ್ ಚಾಲೀಸ, ಭಜನೆಗೆ ಅವಕಾಶ ಕೊಡಿ. ಒಂದ್ವೇಳೆ ಮಸೀದಿಯಲ್ಲಿನ ಅಕ್ರಮ ಮದರಸಾ ತೆರವುಗೊಳಿಸದಿದ್ದರೆ ಇಲಾಖೆ ಮುಂದೆ ಉಗ್ರ ಪ್ರತಿಭಟನೆ ನಡೆಸೋದಾಗಿ ಹಿಂದೂ ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ.

    Published by:Mahmadrafik K
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು