Mahalingapura: ಮಹಾಲಿಂಗಪುರ ತಾಲೂಕೂ ಘೋಷಣೆ ಮಾಡಲು ಪ್ರತಿಭಟನೆ

ಮಹಾಲಿಂಗಪುರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ಜಾತಿ ಮತ ಭೇದ ಎನ್ನದೇ ಎಲ್ಲರೂ ಸೇರಿ ನೂತನ ತಾಲೂಕು ರಚನೆಗೆ ಪಟ್ಟು ಹಿಡಿದು ನಿರಂತರ 140 ದಿನಗಳಿಂದಲೂ ಹೋರಾಟ ನಡೆಸುತ್ತಿದ್ದು, ಇನ್ನೂ ಸಹ ಮುಂದುವರೆದಿದೆ.

ಪ್ರತಿಭಟನೆ

ಪ್ರತಿಭಟನೆ

  • Share this:
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ (Malalingapur, Bagalkot) ಪಟ್ಟಣವನ್ನ ತಾಲೂಕು (Taluku) ರಚನೆ ಮಾಡುವಂತೆ ಆಗ್ರಹಿಸಿ ಕಳೆದ 32 ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಆದ್ರೆ ಇದೀಗ ಮತ್ತೇ ಅದಕ್ಕೆ ಪುಷ್ಠಿ ನೀಡಿರೋ ಮಹಾಲಿಂಗಪುರದ ಜನತೆ, ಪಕ್ಷಾತೀತವಾಗಿ ನಡೆಸುತ್ತಿರೋ ಪ್ರತಿಭಟನಾ (Protest) ಹೋರಾಟ ಈಗ 140ನೇ ದಿನಕ್ಕೆ ಕಾಲಿಟ್ಟಿದೆ. ನಗರದ ಬಸ್ ನಿಲ್ದಾಣದ ಬಳಿ ಇರುವ ವೃತ್ತದಲ್ಲಿ ಟೆಂಟ್ ಹಾಕಿ ಜಾತಿ, ಮತ ಮೀರಿ ಪಕ್ಷಾತೀತವಾಗಿ ಎಲ್ಲ ಮುಖಂಡರು ಒಂದಾಗಿ ಈ ಹೋರಾಟವನ್ನ ಆರಂಭಿಸಿದ್ದಾರೆ. 1 ಲಕ್ಷ 40 ಸಾವಿರ ಜನಸಂಖ್ಯೆಯನ್ನ ಹೊಂದಿರೋ ಮಹಾಲಿಂಗಪುರಕ್ಕೆ ತಾಲೂಕು ರಚನೆ ಮಾಡಲು ಎಲ್ಲ ಅರ್ಹತೆಗಳಿದ್ದು, ನಿತ್ಯವೂ ಲಕ್ಷಾಂತರ ಜನರಿಂದ ವ್ಯಾಪಾರ ವಹಿವಾಟ ಸಹ ನಡೆಯುತ್ತಿದ್ದು, ಇದಕ್ಕಾಗಿ ಮಹಾಲಿಂಗಪುರನ್ನ ತಾಲೂಕನ್ನಾಗಿ ಘೋಷಣೆ ಮಾಡುವಂತೆ ಕಳೆದ 129 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ ಅಂತಾರೆ ಮಹಾಲಿಂಗಪುರ ತಾಲೂಕು ರಚನೆ ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ.

ಇನ್ನು ನೂತನವಾಗಿ ಮಹಾಲಿಂಗಪುರ ತಾಲೂಕು ರಚನೆ ಮಾಡುವುದಾದರೆ ಅದರಲ್ಲಿ ಮಹಾಲಿಂಗಪುರ ಪುರಸಭೆ, ರನ್ನ ಬೆಳಗಲಿ ಪಟ್ಟಣ ಪಂಚಾಯತಿ, 15 ಗ್ರಾಮ ಪಂಚಾಯಿತಿ, 9 ಹಳ್ಳಿಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡು ತಾಲೂಕು ರಚನೆ ಮಾಡಲು ಅತ್ಯಂತ ಯೋಗ್ಯವಾಗಿದೆ ಅನ್ನೋದು ಇದೀಗ ಹೋರಾಟಗಾರರ ನಿಲುವಾಗಿದೆ.

ರಾಜಕೀಯ ಇಚ್ಛಾಶಕ್ತಿಯ ಕೊರತೆ

ಕಳೆದ ಬಾರಿಯೂ ನೂತನ ತಾಲೂಕುಗಳ ರಚನೆ ಮಾಡುವಂತಹ ಸಂದರ್ಭದಲ್ಲಿಯೂ ಸಹ ಮಹಾಲಿಂಗಪುರ ಹೋರಾಟಗಾರರು ಸಹ ನಿರಂತರ ಹೋರಾಟ ಮಾಡಿದ್ರು, ಆದ್ರೆ ರಾಜಕೀಯ ಇಚ್ಛಾಶಕ್ತಿಯಿಂದ ಅಕ್ಕಪಕ್ಕದ ಊರುಗಳು ತಾಲೂಕು ರಚನೆಯಾಗುವಲ್ಲಿ ಯಶಸ್ವಿಯಾದವೇ ಹೊರತು ಮಹಾಲಿಂಗಪುರ ನೂತನ ತಾಲೂಕು ಆಗಲಿಲ್ಲ.

140 ದಿನಗಳಿಂದ ನಡೆಯುತ್ತಿರುವ ಹೋರಾಟ

ಆದರೆ ಇದೀಗ ಮಹಾಲಿಂಗಪುರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ಜಾತಿ ಮತ ಭೇದ ಎನ್ನದೇ ಎಲ್ಲರೂ ಸೇರಿ ನೂತನ ತಾಲೂಕು ರಚನೆಗೆ ಪಟ್ಟು ಹಿಡಿದು ನಿರಂತರ 140 ದಿನಗಳಿಂದಲೂ ಹೋರಾಟ ನಡೆಸುತ್ತಿದ್ದು, ಇನ್ನೂ ಸಹ ಮುಂದುವರೆದಿದೆ.

ಪ್ರತಿಭಟನೆ


ಇದನ್ನೂ ಓದಿ: Murugha Shri Case: ಮುರುಘಾ ಶರಣರ ಕೇಸ್ ತನಿಖೆಯಲ್ಲಿ ಸಾಲು ಸಾಲು ವೈಫಲ್ಯಗಳು!

ಹೋರಾಟಕ್ಕೆ ಶಾಸಕ ಸಿದ್ದು ಸವದಿ ಬೆಂಬಲ

ಇನ್ನು ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ತೇರದಾಳ ಶಾಸಕ ಸಿದ್ದು ಸವದಿ, ಹೋರಾಟಕ್ಕೆ ನನ್ನ ಬೆಂಬಲ ಇದೆ. ಎರಡು ಬಾರಿ ಹೋರಾಟಗಾರನ್ನು ಕರೆದುಕೊಂಡು ಹೋಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಆದ್ರೆ ಸದ್ಯ ಹೊಸ ತಾಲೂಕಾ ರಚನೆ ವಿಚಾರ ಸರ್ಕಾರದ ಮುಂದೆ ಇಲ್ಲ . ಮುಂದೆ ಮಾಡುವಾಗ ಮೊದಲ ಆದ್ಯತೆ ಮೇರೆಗೆ ಮಹಾಲಿಂಗಪುರ ತಾಲೂಕು ಮಾಡುತ್ತೇವೆ ಎಂದಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಮಹಾಲಿಂಗಪೂರ ನೂತನ ತಾಲೂಕು ರಚನೆಗಾಗಿ ನಿತ್ಯ ಒಂದಿಲ್ಲೊಂದು ಹೋರಾಟಗಳು ನಡೆಯುತ್ತಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು ಸ್ಪಂದನೆ ನೀಡದೇ ಹೋದಲ್ಲಿ ಉಗ್ರ ಹೋರಾಟದ ಎಚ್ಚರಕೆಯನ್ನ ಹೋರಾಟಗಾರರು ನೀಡಿದ್ದಾರೆ.

ಇದನ್ನೂ ಓದಿ:  Fake Baba: ಸಾಯಿಯಲ್ಲ, ಈತ ಪ್ರೇಮಸಾಯಿಯಂತೆ; ಮಹಿಳೆಗೆ ಕಿರುಕುಳ, ಒಂದೂವರೆ ಕೋಟಿ ವಂಚಿಸಿದ ನಕಲಿ ಬಾಬಾ!

ಹೋಟೆಲ್​​ನಲ್ಲಿ 21 ವಯಸ್ಸಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

21 ವರ್ಷದ ಯುವತಿಯ (Lady) ಅನುಮಾನಾಸ್ಪದ ಸಾವಿಗೆ ಮೈಸೂರು (Mysuru) ಬೆಚ್ಚಿಬಿದ್ದಿದೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಹೋಟೆಲ್​ನಲ್ಲಿ (Hotel) ವಾಸ್ತವ್ಯ ಹೂಡಿದ್ದ 21 ವರ್ಷ ಯುವತಿ ಅನುಮಾನಾಸ್ಪದವಾಗಿ (Suspect Death) ಸಾವನ್ನಪ್ಪಿದ್ದಾರೆ. ಅಪೂರ್ವ ಶೆಟ್ಟಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಯುವತಿ. ಇನ್ನು ಯುವತಿ ಜೊತೆಯಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ. ಈತನೇ ಕೊಲೆಗೈದಿರುವ ಶಂಕೆ (Boy escape) ವ್ಯಕ್ತವಾಗಿದೆ.

ಮೈಸೂರಿನ ವಿಜಯನಗರದ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ (Engineering Student)ಅಪೂರ್ವ ಶೆಟ್ಟಿ ವ್ಯಾಸಂಗ ಮಾಡುತ್ತಿದ್ದರು. ಮೈಸೂರು-ಹುಣಸೂರು ರಸ್ತೆಯಲ್ಲಿರುವ ಹೋಟೆಲ್ ಘಟನೆ ನಡೆದಿದೆ. ಈ ಹೋಟೆಲ್ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲೇ ಇದೆ. ಇತ್ತೀಚೆಗೆ ಖ್ಯಾತ ತೆಲುಗು ನಟ ನರೇಶ್ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಇದೇ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರು.
Published by:Mahmadrafik K
First published: