ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಪಟ್ಟು: ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ


Updated:January 14, 2018, 7:48 AM IST
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಪಟ್ಟು: ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

Updated: January 14, 2018, 7:48 AM IST
-ಪುಟ್ಟರಾಜು, ನ್ಯೂಸ್​ 18 ಕನ್ನಡ 

ಬೆಂಗಳೂರು(ಜ.14): ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ.ಸರ್ಕಾರಕ್ಕೂ ಹೋರಾಟದ ಬಿಸಿ ತಟ್ಟುತ್ತಿದೆ. ಮಹದಾಯಿ, ಕಾವೇರಿ ಸಮಸ್ಯೆ ಜೊತೆ ಸದಾಶಿವ ಆಯೋಗದ ವರದಿ ಜಾರಿಗೂ ಕೂಗು ಕೇಳಿ ಬರುತ್ತಿದೆ. ಇದಕ್ಕೆಲ್ಲಾ ತಿಲಾಂಜಲಿ ಹಾಡ್ತೀವಿ ಅಂತ ಸರ್ಕಾರ ಇವತ್ತು ಸಭೆ ಕರೆದಿದೆ. ಜೊತೆಗೆ ಹೋರಾಟಗಳು ನಡೀತಿವೆ.

ಎ.ಜೆ.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ವಿಚಾರವಾಗಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಲು ಇಂದು ಮಹತ್ವದ ಸಭೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪರಿಶಿಷ್ಠ ಜಾತಿ ಹಾಗು ಪರಿಶಿಷ್ಠ ಪಂಗಡದ ಸರ್ಪಪಕ್ಷ ಶಾಸಕರು ಸಂಸದರು ಭಾಗವಹಿಸ್ತಿದ್ದಾರೆ. ಎಡಗೈ ಹಾಗು ಬಲಗೈ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ಕುರಿತಂತೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.

ಇನ್ನು ಪರಿಶಿಷ್ಠ ಜಾತಿ ಹಾಗು ಪಂಗಡಗಳ 15 ರಷ್ಟು ಮೀಸಲಾತಿಯಲ್ಲಿ ಎಡಗೈಗೆ 6, ಬಲಗೈಗೆ 5 ಹಾಗು ಭೋವಿ, ಲಂಬಾಣಿ ಸೇರಿದಂತೆ ಹಲವು ಉಪ ಪಂಗಡಗಳಿಗೆ 3, ಹಾಗು ಇನ್ನಿತರ ಪಂಗಡಗಳಿಗೆ 1 ರಷ್ಟು ಮೀಸಲಾತಿ ಕೊಡಬೇಕೆಂದು ನ್ಯಾಯಮೂರ್ತಿ ಸದಾಶಿವ ಆಯೋಗ ಶಿಫಾರಸ್ಸು ಮಾಡಿದೆ. ಹೀಗಾಗಿ ವರದಿಯನ್ನು ತಕ್ಷಣವೇ ಜಾರಿಗೊಳಿಸುವಂತೆ ಎಡಗೈ ಸಮುದಾಯದವರು ಅಹೋರಾತ್ರಿ ಧರಣಿ ನಡೆಸ್ತಿದ್ದಾರೆ..

ಮತ್ತೊಂದು ಕಡೆ ಬಲಗೈ ಸಮುದಾಯ ನ್ಯಾಯಮೂರ್ತಿ ಸದಾಶಿವ ಆಯೋಗ ಅವೈಜ್ಞಾನಿಕವಾಗಿದೆ ಎಂದು ಪ್ರತಿ ಹೋರಾಟಕ್ಕೆ ಮುಂದಾಗಿದೆ.. ಎರಡು ಸಮುದಾಯಗಳ ಒಳ ಮೀಸಲಾತಿ ಜಗಳ ಸಿದ್ದರಾಮಯ್ಯಗೆ ತಲೆ ನೋವಾಗಿ ಪರಿಣಮಿಸಿದ್ದು, ಇಂದಿನ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
First published:January 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ