ಕೊಲ್ಲೋದಾಗಿ ಯಾರಾದ್ರೂ ಪತ್ರ ಬರೀತಾರಾ - ಮಾರುತಿ ಮಾನ್ಪಡೆ ಪ್ರಶ್ನೆ

news18
Updated:August 30, 2018, 8:46 PM IST
ಕೊಲ್ಲೋದಾಗಿ ಯಾರಾದ್ರೂ ಪತ್ರ ಬರೀತಾರಾ - ಮಾರುತಿ ಮಾನ್ಪಡೆ ಪ್ರಶ್ನೆ
news18
Updated: August 30, 2018, 8:46 PM IST
- ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ ( ಆಗಸ್ಟ್ 30) :  ಯಾರನ್ನಾದ್ರೂ ಕೊಲ್ಲೋದಿದ್ರೆ ಸೈಲೆಂಟಾಗಿ ಕೊಂದು ಹಾಕುತ್ತಾರೆ. ಅದನ್ನು ಬಿಟ್ಟು ಇಂಥವರನ್ನು ಕೊಲ್ಲೋದಾಗಿ ಯಾರಾದ್ರೂ ಪತ್ರ ಬರೀತಾರಾ. ಈ ಪತ್ರ, ಪ್ರಧಾನಿಯನ್ನು ಕೊಲ್ಲುವ ವಿಚಾರ ಎಲ್ಲವೂ ಬೋಗಸ್. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಬೇಕೆಂದು ಈ ರೀತಿ ಪತ್ರದ ಪಿತೂರಿ ನಡೆಸಿ, ವಿಚಾರವಾದಿಗಳನ್ನು ಬಂಧಿಸಲಾಗುತ್ತಿದೆ ಎಂದು ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.

ವಿಚಾರವಾದಿಗಳನ್ನು, ಪ್ರಗತಿಪರ ಚಿಂತಕರನ್ನು ಉದ್ದೇಶಪೂರ್ವಕವಾಗಿಯೇ ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಸಿಪಿಐಎಂ, ಸಿಪಿಐ ಮತ್ತಿತರ ಸಂಘಟನೆಗಳ ನೇತೃತ್ವದಲ್ಲಿ ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯ ನೇತೃತ್ವದ ವಹಿಸಿದ ಮಾರುತಿ ಮಾನ್ಪಡೆ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜನಪ್ರಿಯತೆ ಕಳೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಈ ರಿತೀಯ ಪಿತೂರಿಗಳನ್ನು ಮಾಡುತ್ತಿದ್ದಾರೆ. ಯಾರನ್ನಾದರೂ ಕೊಲ್ಲುವ ಸಂಚು ರೂಪಿಸುವವರು ಪತ್ರ ಬರೆಯುವುದಿಲ್ಲ. ಸುಳ್ಳು ಆರೋಪ ಹೊರಿಸಿ ಪ್ರಗತಿಪರ ಚಿಂತಕರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬೇಷರತ್ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಮಾರುತಿ ಮಾನ್ಪಡೆ ಎಚ್ಚರಿಸಿದರು.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ