• Home
  • »
  • News
  • »
  • state
  • »
  • ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; ಯುವತಿಯರನ್ನು ಅಕ್ರಮ ಕಳ್ಳ ಸಾಗಾಟ ಮಾಡಿದ ಪಿಂಪ್ ಬಂಧನ

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ; ಯುವತಿಯರನ್ನು ಅಕ್ರಮ ಕಳ್ಳ ಸಾಗಾಟ ಮಾಡಿದ ಪಿಂಪ್ ಬಂಧನ

ಬಂಧಿತ ಆರೋಪಿ ಸ್ವಾತಿ.

ಬಂಧಿತ ಆರೋಪಿ ಸ್ವಾತಿ.

ನಗರದಲ್ಲಿ ಸ್ವಾತಿ ಎಂಬ ಮಹಿಳೆ ವಿವಿಧೆಡೆ ಮಸಾಜ್‌ ಸ್ಪಾಗಳನ್ನು ತೆರೆದು ಈ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹಲವು ಬಾರಿ ಈಕೆಯನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಮತ್ತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ಅಲ್ಲದೆ, ವೇಶ್ಯಾವಾಟಿಕೆಗಾಗಿ ಯುವತಿಯರನ್ನ ಆಕ್ರಮ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಮುಂದೆ ಓದಿ ...
  • Share this:

    ಬೆಂಗಳೂರು (ಜುಲೈ 22); ನಗರದಲ್ಲಿ ವೇಶ್ಯಾವಾಟಿಕೆ ನಡೆಸುವ ಸಲುವಾಗಿ ಯುವತಿಯರನ್ನು ಅಕ್ರಮವಾಗಿ ಕಳ್ಳ ಸಾಗಾಣೆ ನಡೆಸುತ್ತಿದ್ದ ಪಿಂಪ್‌ ಸ್ವಾತಿ ಎಂಬ ಮಹಿಳೆಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಮೊದಲ ಬಾರಿಗೆ KPIT (Karnataka prevention of illegal trafficking act) ಕಾಯ್ದೆಯ ಅಡಿ ಬಂಧಿಸಿದ್ದಾರೆ.


    ನಗರದಲ್ಲಿ ಸ್ವಾತಿ ಎಂಬ ಮಹಿಳೆ ವಿವಿಧೆಡೆ ಮಸಾಜ್‌ ಸ್ಪಾಗಳನ್ನು ತೆರೆದು ಈ ಸ್ಪಾಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು. ಹಲವು ಬಾರಿ ಈಕೆಯನ್ನು ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ಮತ್ತೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದರು. ಅಲ್ಲದೆ, ವೇಶ್ಯಾವಾಟಿಕೆಗಾಗಿ ಯುವತಿಯರನ್ನ ಆಕ್ರಮ ಕಳ್ಳ ಸಾಗಾಣಿಕೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.


    ಇದನ್ನೂ ಓದಿ : ನಕ್ಸಲ್ ನಿಗ್ರಹ ಪಡೆಗೂ ವಕ್ಕರಿಸಿದ ಕೊರೋನಾ; ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಆತಂಕ


    ಹೀಗಾಗಿ ಇಂದು ಸ್ವಾತಿ ಎಂಬ ಪಿಂಪ್ ಅನ್ನು ಮತ್ತೆ ಬಂಧಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು, ಆಕೆಯನ್ನು KPIT ಕಾಯ್ದೆಯ ಅಡಿಯಲ್ಲಿ ಬಂಧಿಸಿದ್ದಾರೆ. ಈ ಕಾಯ್ದೆಯಡಿನ್ವಯ ಒಂದು ವರ್ಷ ಆರೋಪಿಗೆ ಜಾಮೀನು ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು