ಬೆಂಗಳೂರು: ಕೆಲಸ ಅರಸಿ ಬೆಂಗಳೂರಿಗೆ (Bengaluru) ಬರುವ ಕೆಲ ಮಂದಿ ಸಮಾಜಘಾತುಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ದೇಶವನ್ನು ಬಿಟ್ಟು ಬಂದ ನಂತರ ಹೊಟ್ಟೆ, ಬಟ್ಟೆ ಹಾಗೂ ಹಣಕ್ಕಾಗಿ ಯುವತಿಯರು (Young Womens) ಅನಿವಾರ್ಯವಾಗಿ ವೇಶ್ಯಾವಾಟಿಕೆ ದಂಧೆಗೆ ಇಳಿಯುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ 8 ಮಂದಿಯನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ. ಅಲ್ಲದೇ ಪೊಲೀಸರ ಕೈಗೆ ಸಿಕ್ಕಿಹಾಕಿ ಕೊಂಡಿರುವ ಆರೋಪಿಗಳು ಕೇವಲ 2 ರಿಂದ 3 ಸಾವಿರ ರೂ.ಗಳಿಗೆ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯವಾಟಿಕೆ (Prostitution)ನಡೆಸುತ್ತಿದ್ದರು ಎಂಬ ತಿಳಿದುಬಂದಿದೆ. ಸದ್ಯ ದಾಳಿಯ ವೇಳೆ ಆರೋಪಿಗಳು ತಂಗಿದ್ದ ಸ್ಥಳದಲ್ಲಿದ್ದ ನಾಲ್ಕು ಮೊಬೈಲ್‌ಗಳು, ಬಾಂಗ್ಲಾದ (Bangla Citizens) ಕರೆನ್ಸಿ ನೋಟುಗಳು, ಭಾರತೀಯ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೆಂಗೇರಿ, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂದು ಮಾಹಿತಿ ದೊರೆತ ಹಿನ್ನೆಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ತನ್ವೀರ್ ಮಂಡಲ್, ಅಖ್ತರ್ ಮಂಡಲ್, ಇಲಾಹಿ,ಬಿಸ್ತ್ವಿ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದಿಂದ ಅತಿಕ್ರಮವಾಗಿ ಬಂದು ನೆಲೆಸಿದ್ದ ಆರೋಪಿಗಳು
ಬಾಂಗ್ಲಾದಿಂದ ಅತಿಕ್ರಮವಾಗಿ ಬಂದು ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಕೆಂಗೇರಿಯ ವಿನಾಯಕನಗರ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ಬಾಡಿಗೆ ಮನೆಮಾಡಿಕೊಂಡದ್ದ ಆರೋಪಿಗಳು, ಯುವತಿಯರನ್ನು ಅಕ್ರಮವಾಗಿ ಬೆಂಗಳೂರಿಗೆ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಸದ್ಯ ಕೆಂಗೇರಿ ಹಾಗೂ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಾಥಮಿಕ ತನಿಖೆ ವೇಳೆ ಭಾರತದ ನಿವಾಸಿಗಳು ಅಂತಿರೋ ಆರೋಪಿಗಳು
ಈ ಘಟನೆ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು, ನಮಗೆ ಕೆಂಗೇರಿ ಮತ್ತು ಸೊಲದೇವನಹಳ್ಳಿಯಲ್ಲಿ ವಿದೇಶಿಯರು ಇದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಪ್ರಾಥಮಿಕ ವಿಚಾರಣೆ ಮಾಡಿದ ವೇಳೆ ಆರೋಪಿಗಳು ಭಾರತದ ನಿವಾಸಿಗಳು ಅಂತ ಹೇಳುತ್ತಿದ್ದಾರೆ. ಆದರೆ ನಮಗೆ ಬಾಂಗ್ಲಾ ದೇಶದವರು ಎಂಬ ಅನುಮಾನವಿದೆ. ಹೀಗಾಗಿ ತನಿಖೆ ನಡೆಸಲಾಗುತ್ತಿದೆ. ಸಂಪೂರ್ಣ ತನಿಖೆ ಬಳಿಕ ಈ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗಲಿದೆ.
ಇದನ್ನೂ ಓದಿ: Supreme Court: ವೇಶ್ಯಾವಾಟಿಕೆ ಕಾನೂನುಬದ್ಧ ವೃತ್ತಿ; ಲೈಂಗಿಕ ಕಾರ್ಯಕರ್ತರನ್ನು ಬಂಧಿಸಬೇಡಿ: ಸುಪ್ರೀಂಕೋರ್ಟ್ ಆದೇಶ
ಆರೋಪಿಗಳ ಪಶ್ಚಿಮ ಬಂಗಾಳ, ತ್ರಿಪುರದ ಆಧಾರ್ ಕಾರ್ಡ್ ಪತ್ತೆ
ಆರೋಪಿಗಳ ಬಳಿ ಪಶ್ಚಿಮ ಬಂಗಾಳ ಹಾಗೂ ತ್ರಿಪುರದ ಆಧಾರ್ ಕಾರ್ಡ್ ಮತ್ತು ದಾಖಲೆ ಸಿಕ್ಕಿದೆ. ಆ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಬಾಂಗ್ಲಾ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಸಿಕ್ಕಿದೆ. ಈ ಬಗ್ಗೆ ಕೂಡ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಈ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿ ಪುರುಷರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ರೀತಿ ಕಳೆದ ವಾರ ನಡೆದಿದ್ದ ಮತ್ತೊಂದು ಪ್ರಕರಣ
ಇದೇ ರೀತಿ ಕಳೆದ ವಾರವಷ್ಟೇ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನು ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಉಳ್ಳಾಲ ಪೊಲೀಸರು, ದಂಪತಿ ಸಹಿತ ನಾಲ್ವರನ್ನು ಬಂಧಿಸಿದ್ದರು.
ಇದನ್ನೂ ಓದಿ: Breaking News: ವೇಶ್ಯಾವಾಟಿಕೆ ಪ್ರಕರಣದಲ್ಲಿ ಪ್ರಖ್ಯಾತ ನಟ ಪೊಲೀಸ್ ವಶಕ್ಕೆ
ಇನ್ನೂ ಆರೋಪಿಗಳನ್ನು ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್, ಇರ್ಷಾದ್ ಅಡ್ಯನಡ್ಕ ಎಂದು ಗುರುತಿಸಲಾಗಿತ್ತು. ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದ ಮೊಹಮ್ಮದ್ ಇಕ್ಬಾಲ್ ಈತ ಈ ಹಿಂದೆ ಪಿಲಾರು, ಕಾಪಿಕಾಡ್ ಪ್ರದೇಶಗಳಲ್ಲೂ ಬಾಡಿಗೆ ಮನೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಅಲ್ಲದೇ ತಾನೊಬ್ಬ ಶಾಸಕರೊಬ್ಬರ ಸಂಬಂಧಿ ಎಂದು ಹೇಳಿಕೊಳ್ಳುತ್ತಿದ್ದ. ಶರ್ಫುದ್ದೀನ್ ಎಂಬಾತ ನೆರವಾಗುತ್ತಿದ್ದ ಎಂದು ಹೇಳಲಾಗಿತ್ತು.
ನಂತರ ಈ ಬಗ್ಗೆ ಖಚಿತ ಮಾಹಿತಿ ದೊರೆತ ಉಳ್ಳಾಲ ಪೊಲೀಸರು ದಾಳಿ ನಡೆಸಿ ನೊಂದ ಯುವತಿಯರನ್ನು ರಕ್ಷಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ