ಶಿವಮೊಗ್ಗ: ಹೆತ್ತ ತಂದೆಯನ್ನೇ ಮಕ್ಕಳು ಸುಪಾಯಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಜಿಲ್ಲೆಯ ಶಿಕಾರಿಪುರದ (Shikaripura) ಶಿರಾಳಕೊಪ್ಪದಲ್ಲಿ ಬೆಳಕಿಗೆ ಬಂದಿದೆ. ತಂದೆ (Father)ಯನ್ನು ಕೊಲೆ ಮಾಡಿದ್ದ ಮಕ್ಕಳು ಸದ್ಯ ಜೈಲು ಸೇರಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು(Property Dispute) ತಮ್ಮ ಹೆಸರಿಗೆ ಅಪ್ಪ ನೀಡಲಿಲ್ಲ ಎಂಬ ಕೋಪಕ್ಕೆ ಮಕ್ಕಳು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಪೊಲೀಸರು ಆರೋಪಿಗಳಾದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಗೆ ಮೃತರ ಮಗ ಮಂಜುನಾಥ್ ಸುಪಾರಿ ನೀಡಿದ್ದ ಎಂಬ ಸತ್ಯಾಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ನವೆಂಬರ್ 29ರಂದು ಜಿಲ್ಲೆಯ ಶಿರಾಳಕೊಪ್ಪದ ಬೋವಿ ಗ್ರಾಮದ ನಿವಾಸಿಯಾಗಿದ್ದ ನಾಗೇಂದ್ರಪ್ಪ ಅವರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಮಾಹಿತಿ ಪಡೆದುಕೊಂಡಿದ್ದ ಶಿರಾಳಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನಿಸಿದ್ದರು. ಆ ಬಳಿಕ ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ತನಿಖೆ ವೇಳೆ ಶಾಕಿಂಗ್ ಅಂಶಗಳು ಕಂಡು ಬಂದಿದೆ.
ನವೆಂಬರ್ 9ರಂದೇ ನಾಗೇಂದ್ರಪ್ಪ ಕೊಲೆ ಯತ್ನ
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಕೆಲ ದಿನಗಳ ಹಿಂದೆ ನಾಗೇಂದ್ರಪ್ಪ ಅವರಿಗೆ ಅಪಘಾತ ಸಂಭವಿಸಿದ್ದ ತಿಳಿದು ಬಂದಿತ್ತು. ಈ ಕುರಿತು ಸಂಶಯಗೊಂಡಿದ್ದ ಪೊಲೀಸರು ಆ ಸುಳಿದು ಆಧರಿಸಿ ತನಿಖೆ ಮುಂದುವರಿಸಿದ್ದರು. ಈ ವೇಳೆ ನವೆಂಬರ್ 09ರಂದು ಲಗೇಟ್ ಆಟೋವೊಂದು ನಾಗೇಂದ್ರಪ್ಪ ತೆರಳುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಆದರೆ ಆ ವೇಳೆ ಅವರಿಗೆ ಏನು ಆಗಿರಲಿಲ್ಲ. ಸಣ್ಣ ಪುಟ್ಟ ಗಾಯಗಳೊಂದಿಗೆ ಅವರು ಅವಘಡದಿಂದ ಪರಾಗಿದ್ದರು ಎಂಬುವುದು ತಿಳಿದು ಬಂದಿತ್ತು. ಅಂದು ಭದ್ರಾವತಿ ಕೋರ್ಟಿಗೆ ಕೆಲಸ ಮೇಲೆ ತೆರಳಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಮಾಡಲಾಗಿತ್ತು. ಆದರೆ ಈ ಬಗ್ಗೆ ನಾಗೇಂದ್ರಪ್ಪ ಅವರು ಯಾವುದೇ ಪೊಲೀಸ್ ದೂರು ನೀಡಿರಿಲಿಲ್ಲವಂತೆ.
ಇದನ್ನೂ ಓದಿ: Mandya: ಮಂಡ್ಯ ನಗರ ಬಂದ್; ಮತ್ತೊಂದು ಸುತ್ತಿನ ಹೋರಾಟಕ್ಕೆ ರೈತರ ಕರೆ
ಕೊಲೆಯಾದ ದಿನವೂ ಕೋರ್ಟಿಗೆ ಹೋಗಿದ್ದ ನಾಗೇಂದ್ರಪ್ಪ
ಅಪಘಾತ ನಡೆದ 20 ದಿನಗಳ ಬಳಿಕ ನಾಗೇಂದ್ರಪ್ಪ ಅವರು ಕೋರ್ಟ್ ಕೆಲಸ ನಿಮಿತ್ತ ತೆರಳಿದ್ದವರು ವಾಪಸ್ ಆಗಿರಲಿಲ್ಲ. ಅಂದು ನಾಗೇಂದ್ರಪ್ಪ ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದ ಆರೋಪಿಗಳು, ಪುಣೇದಹಳ್ಳಿ ಗ್ರಾಮದ ಬಳಿ ಕರೆದೊಯ್ದ ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದರಂತೆ. ಆ ಬಳಿಕ ಅವರನ್ನು ಉಸಿರುಗಟ್ಟಿಸಿ ಕೊಲೆಗೈದು ಆಟೋದಲ್ಲಿ ಶವ ಸಾಗಾಟ ಮಾಡುತ್ತಿದ್ದರಂತೆ. ಉಡುಗಣಿ ಗ್ರಾಮದಿಂದ ಕುಸೂರು ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆ ಪಕ್ಕದ ಚರಂಡಿಗೆ ನಾಗೇಂದ್ರಪ್ಪ ಅವರ ಶವ ಎಸೆದು ಆರೋಪಿಗಳು ಎಸ್ಕೇಪ್ ಆಗಿದ್ದರಂತೆ.
ಮಕ್ಕಳೇ ನಿಂತು ಅಪ್ಪನಿಗೆ 2ನೇ ಮದ್ವೆ ಮಾಡಿಸಿದ್ದರಂತೆ
ಕೊಲೆಯಾದ ನಾಗೇಂದ್ರಪ್ಪ ಅವರು ಕೆಎಸ್ಆರ್ಪಿ ನಿವೃತ್ತ ಎಸ್ಐ ಆಗಿದ್ದರು. ಐವರು ಮಕ್ಕಳನ್ನು ಹೊಂದಿದ್ದ ನಾಗೇಂದ್ರಪ್ಪ ಅವರ ಪತ್ನಿ ನಿಧನರಾಗಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮಕ್ಕಳೇ ಮುಂದೆ ನಿಂತು ಅಪ್ಪನಿಗೆ ವಿಧವೆಯಾಗಿದ್ದ ಮಹಿಳೆಯೊಂದಿಗೆ ಮದುವೆ ಮಾಡಿಸಿದ್ದರಂತೆ. ವರ್ಷದ ಬಳಿಕ ನಾಗೇಂದ್ರಪ್ಪ ಅವರಿಗೆ 2ನೇ ಪತ್ನಿಯಿಂದ ಗಂಡು ಮಗು ಜನಿಸಿತ್ತು. ಈ ನಡುವೆ ತಂದೆ ಬಳಿ ಇದ್ದ ಐದೂವರೆ ಎಕರೆ ಭೂಮಿಯಲ್ಲಿ ತೋಟವಿದ್ದ ಕಾರಣ ಉತ್ತಮ ಆದಾಯ ಬರುತ್ತಿತಂತೆ. ತೋ ದಲ್ಲಿ ಉತ್ತಮ ಫಸಲು ಬರುತ್ತಿದ್ದರಿಂದ ಆದಾಯ ಕೂಡ ಹೆಚ್ಚಳವಾಗಿತಂತೆ.
ಆಸ್ತಿ ಕೊಟ್ಟಿಲ್ಲ ಅಂತ ಅಪ್ಪನ ವಿರುದ್ಧ ಸಿಟ್ಟಾಗಿದ್ದ ಮಕ್ಕಳು
ಅಪ್ಪನ ಬಳಿ ಉತ್ತಮ ಆದಾಯ ಬರುತ್ತಿದ್ದ ಆಸ್ತಿ ಇತ್ತು. ಅಲ್ಲದೇ ತೋಟದಿಂದ ಉತ್ತಮವಾಗಿ ಹಣ ಕೂಡ ಸಿಗುತ್ತಿತ್ತು. ಇದರಿಂದ ತಂದೆ ಹಾಗೂ ಮಕ್ಕಳ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಪರಿಣಾಮ ಆಸ್ತಿ ಕೊಡದ ಅಪ್ಪನ ವಿರುದ್ಧ ಮಕ್ಕಳು ಕೋಪಗೊಂಡಿದ್ದಂತೆ.
ಇದನ್ನೂ ಓದಿ: Best Trekking Plan: ಕಾಡಿನ ನಡುವೆ ಮಿಲಿಟರಿ ಕ್ಯಾಂಪ್, ಇವರೇ ನೋಡಿ ಒನ್ ಮ್ಯಾನ್ ಆರ್ಮಿ!
ಹೇಗಾದ್ರು ಮಾಡಿ ಅಪ್ಪ ಇಲ್ಲ ಎಂದರೇ ಆಸ್ತಿ ಸಿಗುತ್ತೆ ಎಂಬ ದುರುದ್ದೇಶದಿಂದ ಅಪ್ಪನನ್ನು ಮುಗಿಸಲು ಮಕ್ಕಳೇ ಬೋವಿ ಗ್ರಾಮದ ಮೂವರಿಗೆ ಐದು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದರಂತೆ. ಇದರಿಂದಲೇ ಬಂಧಿತ ದುಷ್ಕರ್ಮಿಗಳು ನಾಗೇಂದ್ರಪ್ಪರನ್ನು ಕೊಲೆಗೈದಿದ್ದಾರೆ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿರುವ ಶಿರಾಳಕೊಪ್ಪ ಪೊಲೀಸರು, ಆರೋಪಿಗಳ ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ