• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಅಮಾನ್ಯಗೊಂಡ ಹಳೆ ನೋಟುಗಳ ವಿನಿಮಯಕ್ಕೆ ಯತ್ನ ; ಆರ್​ಟಿ ನಗರ ಪೊಲೀಸರಿಂದ ಇಬ್ಬರ ಬಂಧನ

ಅಮಾನ್ಯಗೊಂಡ ಹಳೆ ನೋಟುಗಳ ವಿನಿಮಯಕ್ಕೆ ಯತ್ನ ; ಆರ್​ಟಿ ನಗರ ಪೊಲೀಸರಿಂದ ಇಬ್ಬರ ಬಂಧನ

ಬಂಧಿತ ಇಬ್ಬರು ಆರೋಪಿಗಳು

ಬಂಧಿತ ಇಬ್ಬರು ಆರೋಪಿಗಳು

ಬಂಧಿತ ಇಬ್ಬರು ಆರೋಪಿಗಳಾದ ಮುದಾಸೀರ್ ಬಳಿ 80 ಲಕ್ಷ ರೂಪಾಯಿ ಹಾಗೂ ಶೇಕ್ ತುಪೇಲ್ ಬಳಿ 20 ಲಕ್ಷ ರೂಪಾಯಿ ನಿಷೇಧಿತ ಹಳೆಯ ನೋಟುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

  • Share this:

ಬೆಂಗಳೂರು(ಅಕ್ಟೋಬರ್​. 04): ಅಮಾನ್ಯಗೊಂಡ ಹಳೆಯ ನೋಟುಗಳ ವಿನಿಮಯ ಮಾಡಲು ಮುಂದಾಗಿದ್ದ ಇಬ್ಬರು ವ್ಯಕ್ತಿಗಳನ್ನ ಬೆಂಗಳೂರಿನ ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. ಸುಲ್ತಾನ್ ಪಾಳ್ಯ ನಿವಾಸಿ ಮುದಾಸೀರ್ ಮತ್ತು ಒಡಿಶಾ ಮೂಲದ ಶೇಕ್ ತುಪೇಲ್ ಅಲಿ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಅಮಾನ್ಯಗೊಂಡ ಸುಮಾರು ಒಂದು ಕೋಟಿ ಮೌಲ್ಯದ ಹಳೆಯ ನೋಟುಗಳನ್ನ ವಿನಿಮಯ ಮಾಡಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಆರ್ ಟಿ ನಗರ ಪೊಲೀಸರು ಮುದಾಸೀರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಒಂದು ಸಾವಿರ ಮುಖಬೆಲೆಯ  80 ಲಕ್ಷ ರೂಪಾಯಿ ಹಳೆಯ ನೋಟು ಪತ್ತೆಯಾಗಿದೆ. ಪೊಲೀಸರು ಮುದಾಸೀರ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶೇಕ್ ತುಪೇಲ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ಶೇಕ್ ತುಪೇಲ್ ಒಡಿಶಾ ಮೂಲದ ವ್ಯಕ್ತಿಯಾಗಿದ್ದು, ವೀರಣ್ಣಪಾಳ್ಯದಲ್ಲಿ ನೆಲೆಸಿದ್ದ. ಈತ ಸುಮಾರು 2.5 ಲಕ್ಷ ಹೊಸ ನೋಟು ಕೊಟ್ಟು ನಿಷೇಧಿತ ಹಳೆಯ ನೋಟುಗಳನ್ನ ಪಡೆದಿದ್ದನು.


ಹಳೆಯ ನೋಟುಗಳನ್ನ ಮುದಾಸೀರ್ ಗೆ ಕೊಟ್ಟ ವಿನಿಮಯ ಮಾಡಲು ಮುಂದಾಗಿದ್ದಾರೆ. ಆರೋಪಿ ಮುದಾಸೀರ್ ಹಳೆಯ ನೋಟುಗಳನ್ನ ನೇಪಾಳಕ್ಕೆ ರವಾನಿಸಿ ಅಲ್ಲಿ ವಿನಿಮಯ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.


ಇದನ್ನೂ ಓದಿ : ಮಹಿಳೆಯರ ಮತ್ತು ಮಕ್ಕಳ ಪೋಷಣೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ; ಬಿ.ವೈ.ರಾಘವೇಂದ್ರ


ಇನ್ನೂ ಪ್ರಕರಣದಲ್ಲಿ ಮತ್ತೊರ್ವ ಆರೋಪಿ ತಲೆಮರೆಸಿಕೊಂಡಿದ್ದು ಆರ್ ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಅಲ್ಲದೇ ಬಂಧಿತ ಇಬ್ಬರು ಆರೋಪಿಗಳಾದ ಮುದಾಸೀರ್ ಬಳಿ 80 ಲಕ್ಷ ರೂಪಾಯಿ ಹಾಗೂ ಶೇಕ್ ತುಪೇಲ್ ಬಳಿ 20 ಲಕ್ಷ ರೂಪಾಯಿ ನಿಷೇಧಿತ ಹಳೆಯ ನೋಟುಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.

Published by:G Hareeshkumar
First published: