ತರಗತಿಯಲ್ಲಿ ವಿದ್ಯಾರ್ಥಿಯನ್ನು ಟೆರರಿಸ್ಟ್ (Terrorist) ಎಂದು ಕರೆದಿದ್ದ ಪ್ರಾಧ್ಯಾಪಕರನ್ನು (Professor) ಅಮಾನತು ಮಾಡಲಾಗಿದೆ. ಮಾಹೆ ವಿಶ್ವವಿದ್ಯಾಲಯದ (MAHE Manipal University) ಎಂಐಟಿ ಕಾಲೇಜಿನ (MIT College) ಎಂಜಿನಿಯರಿಂಗ್ ವಿಭಾಗದಲ್ಲಿ ನವೆಂಬರ್ 26ರಂದು ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral Video) ಆಗಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿಯನ್ನು (Muslim Student) ಟೆರರಿಸ್ಟ್ ಎಂದು ಪ್ರೊಫೆಸರ್ ನಿಂದನೆ ಮಾಡಿದ್ದಾರೆ. ಈ ಮಾತಿನಿಂದ ಕೋಪಗೊಂಡ ವಿದ್ಯಾರ್ಥಿ, ಒಬ್ಬ ಪ್ರೊಫೆಸರ್ ಆಗಿ ಈ ರೀತಿ ಹೇಳೋದು ತಪ್ಪು ಎಂದು ಬೇಸರ ಹೊರ ಹಾಕಿದ್ದಾನೆ. ವಿದ್ಯಾರ್ಥಿ ಮತ್ತು ಪ್ರೊಫೆಸರ್ (Student And Professor) ನಡುವಿನ ವಾಗ್ವಾದವನ್ನು ತರಗತಿಯಲ್ಲಿದ್ದ ಕೆಲವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಕಾಲೇಜು ಮಂಡಳಿ, ವಿದ್ಯಾರ್ಥಿಯನ್ನು ನಿಂದಿಸಿದ ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿ, ಆಂತರಿಕ ತನಿಖೆಗೆ (Internal Investigation) ಆದೇಶ ನೀಡಿದೆ.
ತರಗತಿ ವೇಳೆ ಪ್ರೊಫೆಸರ್ ರವೀಂದ್ರನಾಥ್ ಎಂಬವರು ವಿದ್ಯಾರ್ಥಿ ಹಂಝಾ ಎಂಬಾತನನ್ನು ಉಗ್ರ ಕಸಬ್ಗೆ ಹೋಲಿಕೆ ಮಾಡಿ ನಿಂದಿಸಲಾಗಿದೆ ವಾರ್ತಾ ಭಾರತಿ ವರದಿ ಮಾಡಿದೆ. ಪ್ರೊಫೆಸರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ವಿದ್ಯಾರ್ಥಿ ಅವರನ್ನು ಪ್ರಶ್ನೆ ಮಾಡುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ನೀವು ನನ್ನನ್ನು ಹೇಗೆ ಹಾಗೆ ಕರೆಯುತ್ತೀರಿ. ಇದು ಹಾಸ್ಯ ಮಾಡುವ ವಿಷಯವಲ್ಲ ಎಂದು ವಿದ್ಯಾರ್ಥಿ ಪ್ರಾಧ್ಯಾಪಕರನ್ನು ಪ್ರಶ್ನೆ ಮಾಡಿದ್ದಾನೆ. ಅನಗತ್ಯವಾಗಿ ಕರೆಯಬೇಡಿ ಎಂದು ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾನೆ. ನೀನು ನನ್ನ ಮಗನ ಸಮಾನ. ನಾನು ಈ ಹೇಳಿಕೆಯನ್ನು ಹಾಸ್ಯವಾಗಿ ಹೇಳಿದ್ದೇನೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.
ನೀವು ನಿಮ್ಮ ಮಗನನ್ನು ಭಯೋತ್ಪಾದಕ ಎಂದು ಕರೆಯುತ್ತೀರಾ? ಮಗನ ಜೊತೆಯಲ್ಲಿಯೂ ಹೀಗೆ ಮಾತನಾಡುತ್ತೀರಾ? ಇಷ್ಟು ಜನರ ಮುಂದೆ ನನ್ನನ್ನು ಆ ಪದ ಬಳಕೆ ಹೇಗೆ ಕರೆಯುತ್ತೀರಿ ಎಂದು ವಿದ್ಯಾರ್ಥಿ ಪ್ರಶ್ನಿಸಿದ್ದಾನೆ.
ಇದನ್ನೂ ಓದಿ: Mangaluru Cooker Bomb: ಈ 6 ಸ್ಥಳಗಳನ್ನು ಟಾರ್ಗೆಟ್ ಮಾಡಿದ್ನಾ ರಾಕ್ಷಸ ಶಾರೀಕ್?
ನೀವು ವೃತ್ತಿಪರರಾಗಿ ಪಾಠ ಮಾಡುತ್ತಿರೋದನ್ನು ಮರೆಯಬೇಡಿ. ನೀವು ನನ್ನನ್ನು ಹಾಗೆ ಕರೆಯುವಂತಿಲ್ಲ. ಓರ್ವ ಮುಸ್ಲಿಂ ಸಮುದಾಯದವನಾಗಿ ಇಂತಹ ಘಟನೆಗಳನ್ನು ಪ್ರತಿದಿನ ಎದುರಿಸೋದು ಸಾಮಾನ್ಯ ವಿಷಯ ಅಲ್ಲ ಎಂದು ವಿದ್ಯಾರ್ಥಿ ಹಂಝಾ ಹೇಳಿದ್ದಾನೆ. ವಿದ್ಯಾರ್ಥಿಯಿಂದ ಆಕ್ರೋಶ ವ್ಯಕ್ತವಾಗುತ್ತಲೇ ಎಚ್ಚೆತ್ತ ಪ್ರಾಧ್ಯಾಪಕರು ಅಲ್ಲಿಯೇ ಕ್ಷಮೆ ಕೇಳಿದ್ದಾರೆ.
This incident happened in one of the college in Manipal University in Udupi India and A professor called a muslim student as a terrorist student opposed it.... hats off to the student who made the teacher accepted his wrong idiology Hats off#stoptargettingmuslim #stopcommunalism pic.twitter.com/ZUXaqNOVKS
— Ashik Haleangadi (ಆಶಿಕ್ ಹಳೆಯಂಗಡಿ) (@kalandarash) November 28, 2022
ವೈರಲ್ ವಿಡಿಯೋ ಬಗ್ಗೆ ವಿವಿ ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕ ಎಸ್.ಪಿ.ಕರ್, ವಸುದೈವ ಕುಟುಂಬ ಎಂಬ ಪರಿಕಲ್ಪನೆಯಲ್ಲಿರುವ ನಾವು ಈ ಘಟನೆಯನ್ನು ಖಂಡಿಸುತ್ತೇವೆ. ಎಲ್ಲಾ ಧರ್ಮಗಳಿಗೆ ಸಮಾನ ಗೌರವ ಕೊಡಲಾಗುತ್ತದೆ. ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡು ಪ್ರಾಧ್ಯಾಪಕರನ್ನ ಅಮಾನತುಗೊಳಿಸಲಾಗಿದೆ. ಈ ಎಲ್ಲಾ ಘಟನೆ ಬಳಿಕ ವಿದ್ಯಾರ್ಥಿ ಆತಂಕಕ್ಕೆ ಒಳಗಾಗಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Moral Policing: ಮಂಗಳೂರು ಬಸ್ನಲ್ಲಿ ನೈತಿಕ ಪೊಲೀಸ್ಗಿರಿ; ಹಿಂದೂ ಯುವತಿ ಜೊತೆ ಕುಳಿತಿದ್ದಕ್ಕೆ ಹಲ್ಲೆ
ಎಂಐಟಿ ಆಡಳಿತ ಮಂಡಳಿಯ ಸ್ಪಷ್ಟನೆ
ನಮ್ಮ ಕ್ಯಾಂಪಸ್ನಲ್ಲಿಯ ವೈವಿದ್ಯತೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಇಂತಹ ನಿಂದನೆಯ ವರ್ತನೆಯನ್ನು ಸಹಿಸುವುದಿಲ್ಲ. ತರಗತಿಯ ಒಳಗಿನ ವಿದ್ಯಾರ್ಥಿಗಳೇ ಚಿತ್ರೀಕರಣ ಮಾಡಿರುವ ಸಾಧ್ಯತೆ ಇದೆ. ಈ ಘಟನೆಯ ಬಗ್ಗೆ ಮಾಹೆ ವಿವಿ ಆಂತರಿಕ ತನಿಖೆ ನಡೆಸುತ್ತದೆ. ಸದ್ಯ ಪ್ರೊಫೆಸರ್ ಅವರನ್ನು ಅಮಾನತ್ತಿನಲ್ಲಿ ಇಡಲಾಗಿದೆ.
ಈ ರೀತಿಯ ಬೆಳವಣಿಗೆಯನ್ನು ನಮ್ಮ ವಿವಿ ಸಹಿಸುವುದಿಲ್ಲ. ಧರ್ಮ ಪಂಥ ಮತ ಲಿಂಗಭೇದಕ್ಕೆ ನಮ್ಮ ವಿವಿಯಲ್ಲಿ ಆಸ್ಪದ ಇಲ್ಲ, ವಿವಿ ಸಂವಿಧಾನವನ್ನು ಎತ್ತಿ ಹಿಡಿಯುತ್ತದೆ ಎಂದು ಆಡಳಿತ ಮಂಡಳಿ ಸ್ಪಷ್ಟನೆಯನ್ನು ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ