HOME » NEWS » State » PROF NARASIMHAPPA DEFENDS RELIANCE AGAINST ALLEGATIONS OF CONTRACT FARMING SNVS

ರಿಲಾಯನ್ಸ್​ಗೆ ಮಾಡೋಕೆ ಬೇರೆ ಕೆಲಸಗಳಿವೆ; ಕಾಂಟ್ರಾಕ್ಟ್ ಫಾರ್ಮಿಂಗ್ ವಿಚಾರ ಸುಳ್ಳು: ಪ್ರೊ| ನರಸಿಂಹಪ್ಪ

ರಿಲಾಯನ್ಸ್ ಸಂಸ್ಥೆ ಕಾಂಟ್ರಾಕ್ಟ್ ಫಾರ್ಮಿಂಗ್​ಗೆ ಇಳಿದು ರೈತರ ಕೃಷಿ ಭೂಮಿ ಲಪಟಾಯಿಸುತ್ತಾರೆ ಎಂಬ ಆರೋಪಗಳೆಲ್ಲವೂ ಬೋಗಸ್. ರಿಲಾಯನ್ಸ್​ಗೆ ಬೇರೆ ಲಾಭದಾಯಕ ವ್ಯವಹಾರ ಬಹಳ ಇವೆ ಎಂದು ನೀರಾವರಿ ತಜ್ಞ ಪ್ರೊ| ನರಸಿಂಹಪ್ಪ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:January 4, 2021, 12:40 PM IST
ರಿಲಾಯನ್ಸ್​ಗೆ ಮಾಡೋಕೆ ಬೇರೆ ಕೆಲಸಗಳಿವೆ; ಕಾಂಟ್ರಾಕ್ಟ್ ಫಾರ್ಮಿಂಗ್ ವಿಚಾರ ಸುಳ್ಳು: ಪ್ರೊ| ನರಸಿಂಹಪ್ಪ
ರಿಲಾಯನ್ಸ್ ಇಂಡಸ್ಟ್ರೀಸ್
  • Share this:
ಬೆಂಗಳೂರು(ಜ. 04): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ವೇಳೆ ಕೆಲ ಗುಂಪುಗಳು ರಿಲಾಯನ್ಸ್ ಸಂಸ್ಥೆಯ ವಿರುದ್ಧ ಸಿಡಿದೆದ್ದು ಆಸ್ತಿಪಾಸ್ತಿಗೆ ಧಕ್ಕೆ ಮಾಡುತ್ತಿವೆ. ರೈತರನ್ನ ರಿಲಾಯನ್ಸ್​ನಂತಹ ಖಾಸಗಿ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿಸುತ್ತಾರೆಂದು ಗಂಭೀರ ಆರೋಪ ಮಾಡಲಾಗುತ್ತಿದೆ. ಆದರೆ, ರಿಲಾಯನ್ಸ್ ಸಂಸ್ಥೆ ತಾನು ಗುತ್ತಿಗೆ ಕೃಷಿ (ಕಾಂಟ್ರಾಕ್ಟ್ ಫಾರ್ಮಿಂಗ್) ಅಥವಾ ಕಾರ್ಪೊರೇಟ್ ಫಾರ್ಮಿಂಗ್ ಆಗಲಿ ಮಾಡುವ ಉದ್ದೇಶವಿಲ್ಲ. ಅದಕ್ಕಾಗಿ ರೈತರ ಕೃಷಿ ಭೂಮಿಯನ್ನೂ ಕೊಳ್ಳುವುದಿಲ್ಲ ಎಂದು ಹೇಳಿದೆ. ರಿಲಾಯನ್ಸ್ ಸಂಸ್ಥೆಯ ಈ ಮಾತಿಗೆ ರಾಜ್ಯದ ಖ್ಯಾತ ನೀರಾವರಿ ತಜ್ಞ ಪ್ರೊ| ಸಿ ನರಸಿಂಹಪ್ಪ ಕೂಡ ಧ್ವನಿಗೂಡಿಸಿದ್ದಾರೆ. ನ್ಯೂಸ್18 ಜೊತೆ ಮಾತನಾಡುತ್ತಿದ್ದ ಅವರು, ರಿಲಾಯನ್ಸ್ ವಿರುದ್ಧ ಬಂದಿರುವ ಆರೋಪಗಳೆಲ್ಲವೂ ಕಪೋಲಕಲ್ಪಿತ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಿಲಾಯನ್ಸ್ ಸಂಸ್ಥೆ ಬಗ್ಗೆ ಈ ಕೆಲ ರೈತರು ಸುಮ್ಮನೆ ಮಾತನಾಡುತ್ತಿದ್ದಾರೆ. ಪಂಜಾಬ್ ಮತ್ತು ಹರಿಯಾಣದಲ್ಲಿ ರಿಲಾಯನ್ಸ್​ನವರು ಕೃಷಿ ಭೂಮಿ ಖರೀದಿಸಿ ಹೊಲ ಉಳೋಕೆ ಹೋಗುತ್ತಾರೆ. ಅವರಿಗೆ ಮಾಡೋಕೆ ಬೇರೆ ಹಲವು ಕೆಲಸಗಳಿವೆ. ಲಾಭ ತರುವ ಬೇರೆ ಕೆಲಸಗಳಿವೆ ಎಂದು ಪ್ರೊ| ನರಸಿಂಹಪ್ಪ ಹೇಳಿದ್ದಾರೆ.

ಇದನ್ನೂ ಓದಿ: RIL - ಕೃಷಿ ಗುತ್ತಿಗೆ ಇಲ್ಲ, ಕೃಷಿಭೂಮಿ ಖರೀದಿ ಇಲ್ಲ, ರೈತರಿಂದ ನೇರ ಖರೀದಿಯೂ ಇಲ್ಲ: ರಿಲಾಯನ್ಸ್ ಸ್ಪಷ್ಟನೆ

ರಿಲಾಯನ್ಸ್​ನವರು ಕಾಂಟ್ರಾಕ್ಟ್ ಫಾರ್ಮಿಂಗ್​ಗೆ ಬರುತ್ತಾರೆ ಎನ್ನೋದೆಲ್ಲಾ ಸುಳ್ಳು. ಅವರು ಕಾಂಟ್ರಾಕ್ಟ್ ಫಾರ್ಮಿಂಗ್ ಮಾಡಿದರೂ ಭೂಮಿ ನೀಡಲು ರೈತರು ಮುಂದೆ ಬರಬೇಕಲ್ಲ. ಈಗ ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗೆ ಎಲ್ಲವೂ ಮೆಕ್ಯಾನೈಸ್ಡ್ ಆಗಿದೆ. ಪಂಜಾಬ್, ಹರಿಯಾಣದ ರೈತರು ಹೊಲದಲ್ಲಿಳಿದು ಮಾಡುವುದೇನಿಲ್ಲ. ಎಲ್ಲದವನ್ನೂ ಟ್ರಾಕ್ಟರ್​ಗಳೇ ಮಾಡುತ್ತಾರೆ. ಕೊಯ್ಲಿಗೆ ಬಿಹಾರದಿಂದ ಕಾರ್ಮಿಕರು ಬಂದು ಕೂಲಿ ಪಡೆದು ಕೊಯ್ಲು ಮಾಡಿ ಹೋಗುತ್ತಾರೆ ಅಷ್ಟೇ ಎಂದು ಕರ್ನಾಟಕದ ಅನುಭವಿ ನೀರಾವರಿ ತಜ್ಞರಾದ ಅವರು ತಿಳಿಸಿದ್ದಾರೆ.

ರಿಲಾಯನ್ಸ್ ಸಂಸ್ಥೆ ನೇರವಾಗಿ ರೈತರಿಂದ ಬೆಳೆ ಕೊಳ್ಳುವುದಿಲ್ಲ. ಸಂಸ್ಥೆಗೆ ಪೂರೈಕೆ ಮಾಡುವವರು ರೈತರಿಂದ ಎಂಎಸ್​ಪಿ ಬೆಲೆಯಲ್ಲೇ ಕೊಳ್ಳುತ್ತಾರೆ. ಸುಮ್ಮನೆ ರಿಲಾಯನ್ಸ್ ಮೇಲೆ ಸುಳ್ಳು ಆರೋಪ ಮಾಡುತ್ತಾರೆ. ಅದೆಲ್ಲಾ ಬರೀ ಬೋಗಸ್ ಎಂದು ಪ್ರೊ| ನರಸಿಂಹಪ್ಪ ನೇರವಾಗಿ ಹೇಳಿದ್ದಾರೆ.
Published by: Vijayasarthy SN
First published: January 4, 2021, 12:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories